ತೋಟಗಾರಿಕೆ ಇಲಾಖೆಯಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ…

ಕೃಷಿ ಚಟುವಟಿಕೆ ಎನ್ನುವುದು ಒಂದು ಆದಾಯದ ಮೂಲ ಮಾತ್ರವಲ್ಲದೇ ಅದು ಮನುಷ್ಯನ ಬದುಕಿನ ಜೀವಾಳವಾಗಿದೆ. ಮನುಷ್ಯ ಕೈಗಾರಿಕೆಗಳಲ್ಲಿ ಏನಾದರೂ ತಯಾರಿಸಬಹುದು ಆದರೆ ಮನುಷ್ಯನಿಗೆ ಬಹು ಮುಖ್ಯವಾಗಿ ಬೇಕಾದ ಆಹಾರವನ್ನು ಮಣ್ಣಿಂದಲೇ ಬೆಳೆಯಬೇಕು. ಆದರೆ ಇತ್ತೀಚಿಗೆ ಯುವಜನತೆ ಕೃಷಿಯತ್ತ ಒಲವು ತೋರಿಸುತ್ತಿಲ್ಲ, ಇಲ್ಲಿ ಆದಾಯ ಕಡಿಮೆ ಎನ್ನುವುದೇ ಅವರ ಮೊದಲ ದೂರು.

ಆದರೆ ಕೃಷಿಯಲ್ಲೂ ಕೂಡ ಆಧುನಿಕ ಪದ್ಧತಿ ಅನುಸರಿಸಿ, ಯಂತ್ರೋಪಕರಣಗಳನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಕೊಡುವಂತೆ ತೋಟಗಾರಿಕೆ ಕೃಷಿ ಮಾಡಿ ಲಾಭವನ್ನು ಪಡೆಯಬಹುದು. ಯಾವ ಉದ್ಯಮಕ್ಕೂ ಕಡಿಮೆ ಇಲ್ಲದಂತಹ ಆದಾಯವನ್ನು ಕೂಡ ಗಳಿಸಿ ಮಾದರಿಯಾಗಿ ಬದುಕಬಹುದು.

ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗುವವರೆಗೂ ಧರ್ಮಸ್ಥಳದ ಮಂಜುನಾಥನ ದರ್ಶನ ಮಾಡುವುದಿಲ್ಲ ಎಂದ ನಟ ದುನಿಯಾ ವಿಜಯ್.

ಆದರೆ ಆಧುನಿಕ ಕೃಷಿ ಮಾಡುವ ಬಗ್ಗೆ, ತೋಟಗಾರಿಕೆ ಕೃಷಿ ಬಗ್ಗೆ, ಯಾವ ರೀತಿ ಮಣ್ಣಿಗೆ ಯಾವ ರೀತಿ ಬೆಳೆ ಬೆಳೆಯಬೇಕು ಹಾಗೂ ಯಾವ ಬೆಳೆಯನ್ನು ಹೇಗೆ ತೆಗೆಯಬೇಕು ಎನ್ನುವ ಕುರಿತು ಮಾಹಿತಿ ಇರಬೇಕು. ಇದರೊಂದಿಗೆ ಕೃಷಿ ಜೊತೆಗೆ ಮಾಡಬಹುದಾದ ಕಸಬುಗಳಾದ ಹಸು ಸಾಕಾಣಿಕೆ ಕುರಿ – ಕೋಳಿ ಸಾಕಾಣಿಕೆ ಇವುಗಳನ್ನು ಕೂಡ ಅಳವಡಿಸಿಕೊಂಡರೆ ಕೃಷಿಯನ್ನು ಕೂಡ ಅಪಾರ ಹಣ ಗಳಿಕೆ ಮಾಡಬಹುದು.

ಸರ್ಕಾರಗಳು ಕೂಡ ಈ ರೀತಿ ಕೃಷಿ ಚಟುವಟಿಕೆಗಳ ಕಡೆ ಯುವಕರು ಆಕರ್ಷಿತರಾಗಲಿ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಫ್ರತಿ ಬಜೆಟ್ ನಲ್ಲಿಯೂ ಕೃಷಿ ಕುರಿತಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತವೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಸಹಾಯಧನ, ಫಸಲ್ ಭೀಮಾ ಯೋಜನೆ ಮೂಲಕ.

ಇನ್ನೊಬ್ಬರ ಖಾತೆಗೆ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣ ಡೆಪಾಸಿಟ್ ಮಾಡುವವರಿಗೆ RBI ಮಹತ್ವದ ಸೂಚನೆ.!

ಬೆಳೆವಿಮೆ ಮತ್ತು ಯಂತ್ರೋಪಕರಣ, ರಸಗೊಬ್ಬರ, ಬಿತ್ತನೆ ಬೀಜಗಳ ಖರೀದಿಗೆ ಸಬ್ಸಿಡಿ ರೂಪದ ಸಾಲ ಹಾಗೂ ಕಡಿಮೆ ದರದಲ್ಲಿ ಮತ್ತು ಬಡ್ಡಿ ರಹಿತವಾಗಿ ಸೊಸೈಟಿಗಳಲ್ಲಿ ಸಾಲ ಇನ್ನು ಮುಂತಾದ ಅನುಕೂಲತೆ ಮಾಡಿಕೊಟ್ಟು ರೈತರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿವೆ. ಇದರ ಜೊತೆಗೆ ಮತ್ತೊಂದು ಹೆಜ್ಜೆಯನ್ನು ಇಟ್ಟಿರುವ ಸರ್ಕಾರವು ಕೃಷಿ ಚಟುವಟಿಕೆ ಕಡೆ ಆಸಕಕ ತೋರುವ ಯುವ ಜನತೆಗೆ ತರಬೇತಿ ಕೇಂದ್ರ ತೆರೆದು ನುರಿತ ತಜ್ಞರಿಂದ ತರಬೇತಿ ಕೂಡ ಕೊಡಿಸುತ್ತಿದೆ.

ಪ್ರತಿ ಜಿಲ್ಲೆಯಲ್ಲೂ ಕೂಡ ಈ ರೀತಿ ಉಚಿತ ತರಬೇತಿ ಕೇಂದ್ರಗಳು ಇದ್ದು. ಸದ್ಯಕ್ಕೆ ಈಗ ಕಲ್ಬರ್ಗಿ ಜಿಲ್ಲೆಯ ಭಾಗದ ಯುವ ಜನತೆಗೆ ಸರ್ಕಾರದ ವತಿಯಿಂದ 10 ತಿಂಗಳ ಕಾಲ ಉಚಿತ ವಸತಿ ಮತ್ತು ಊಟ ಸೌಲಭ್ಯದೊಂದಿಗೆ ಕೃಷಿ ಬಗ್ಗೆ ತರಬೇತಿ ನೀಡುವ ಕಾರ್ಯಕಾರ ನಡೆಯುತ್ತಿದೆ. ಇದಕ್ಕಾಗಿ ಅರ್ಜಿ ಕೂಡ ಆಹ್ವಾನ ಮಾಡಲಾಗಿದ್ದು ಕಡೆ ದಿನಾಂಕದೊಳಗೆ ಅರ್ಜಿ ಸಲ್ಲಿಸಿದವರಿಗೆ ಈ ತರಬೇತಿ ಪಡೆಯುವ ಅವಕಾಶ ಸಿಗಲಿದೆ.

ತರಬೇತಿ ನೀಡುತ್ತಿರುವ ಸಂಸ್ಥೆ:– ತೋಟಗಾರಿಕಾ ಇಲಾಖೆ.

ಸ್ಥಳ:- ಕಲ್ಬುರ್ಗಿಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದ್ಕಪಳ್ಳಿ ಕೃಷಿ ತೋಟಗಾರಿಕೆ ತರಬೇತಿ ಕೇಂದ್ರ.
ತರಬೇತಿಯ ವಿಷಯ:- ಹೈನುಗಾರಿಕೆ ಮತ್ತು ತೋಟಗಾರಿಕೆ ಬೆಳೆಗಳು.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:-

● ಕಡ್ಡಾಯವಾಗಿ 10ನೇ ತರಗತಿ ಉತ್ತೀರ್ಣರಾಗಿರಬೇಕು.
● ಯುವಕರ ಹೆಸರಿನಲ್ಲಿ ಜಮೀನು ಇರಬೇಕು ಮತ್ತು ಅವರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರಬೇಕು.
● ಜಮೀನಿನ ಪಹಣಿ ಪತ್ರವನ್ನು ಅಗತ್ಯ ದಾಖಲೆಯಾಗಿ ನೀಡಲೇಬೇಕು.
● ಕಲ್ಬುರ್ಗಿ ಜಿಲ್ಲೆಯ ಯುವ ರೈತರಿಗೆ ಮೊದಲ ಆದ್ಯತೆ.

ಅರ್ಜಿ ಸಲ್ಲಿಸುವ ವಿಧಾನ:-

● ಜಿಲ್ಲೆಯ ತೋಟಗಾರಿಕೆ ಇಲಾಖೆಯಿಂದ ಅರ್ಜಿ ಫಾರಂ ಪಡೆದು ಭರ್ತಿ ಮಾಡಿ ಹೇಳಲಾಗುವ ಅಗತ್ಯ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಬೇಕು.
● ಅರ್ಜಿ ಫಾರಂ ಅನ್ನು ತೋಟಗಾರಿಕೆ ಇಲಾಖೆಯ ಅಧಿಕೃತ ವೆಬ್ಸೈಟ್ ಆದ https://horticulturedir.karnataka.gov.in/
ವೆಬ್ ಸೈಟ್ ಅಲ್ಲಿ ಡೌನ್ಲೋಡ್ ಮಾಡಿಕೊಂಡು ಪಡೆದುಕೊಳ್ಳಬಹುದು

Leave a Comment