LIC ಸಂಸ್ಥೆಯು ಜೀವನ್ ಶಾಂತಿ ಯೋಜನೆ 850 ಎನ್ನುವ ಪ್ಲಾನ್ ಅನ್ನು ಪರಿಚಯಿಸಿತ್ತು, ಇದು ಯಶಸ್ವಿಯಾಗಿ ಉತ್ತಮ ಪ್ರತಿಕ್ರಿಯೆ ಪಡೆದ ನಂತರ ಇದೇ ಹೆಸರಿನ ಮತ್ತೊಂದು ಯೋಜನೆ ಯನ್ನು ಅಪ್ಡೇಟ್ ವರ್ಷನ್ ಆಗಿ ಜಾರಿಗೆ ತಂದಿದೆ.
ಈ ಹೊಸ ಪಾಲಿಸಿ ಹೆಸರು LIC ಜೀವನ್ ಶಾಂತಿ ಯೋಜನೆ 858. LIC ಈಗಾಗಲೇ ಸಾಕಷ್ಟು ಯೋಜನೆಗಳನ್ನು ತನ್ನ ಗ್ರಾಹಕರಿಗಾಗಿ ನೀಡಿದೆ ಪ್ರತಿಯೊಂದು ಪ್ಲಾನ್ ಕೂಡ ಒಂದೊಂದು ವೈಶಿಷ್ಟತೆಗಳಿಂದ ಹಿಡಿದು ಬಡ ಮಧ್ಯಮ ಹಾಗೂ ಶ್ರೀಮಂತ ಎಲ್ಲಾ ವರ್ಗದವರನ್ನೂ ಒಳಗೊಂಡ ಯೋಜನೆಗಳಾಗಿ ಹೆಸರು ಪಡೆದಿದೆ.
ಗ್ರಾಹಕರು ಸಹ ತಮ್ಮ ಅನುಕೂಲಕ್ಕೆ ತಕ್ಕ ಯೋಜನೆಗಳಲ್ಲಿ ಹೂಡಿಕೆ ಮಾಡಿ ಪ್ರಯೋಜನ ಪಡೆದುಕೊಳ್ಳಬಹುದು. ಬಹಳ ಉಪಯುಕ್ತವಾದ ಈ ಯೋಜನೆಯ ಕುರಿತು ಕೆಲವು ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
* LIC ಜೀವನ್ ಶಾಂತಿ 850 ಯೋಜನೆ ಖರೀದಿಸುವುದಾದರೆ ನೀವು ಒಂದೇ ಬಾರಿ ಹೂಡಿಕೆ ಮಾಡಬೇಕು, ಪ್ರೀಮಿಯಂ ಮಾದರಿಯಲ್ಲಿ ಹೂಡಿಕೆ ಮಾಡಲು ಅವಕಾಶ ಇರುವುದಿಲ್ಲ.
* Single premium deferred annuilty plan ಎಂದು ಕರೆಯುತ್ತಾರೆ ಇದರರ್ಥ ಒಮ್ಮೆ ಮಾಡಿದ ಹೂಡಿಕೆಗೆ ವರ್ಷಪೂರ್ತಿ ಲಾಭ ಬರುತ್ತದೆ.
* ಈ ಹಣವನ್ನು ನೀವು ವರ್ಷಕ್ಕೆ ಒಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ಅಥವಾ ಪ್ರತಿ ತಿಂಗಳು ಕೂಡ ಪಡೆದುಕೊಳ್ಳಬಹುದು. ಯೋಜನೆ ಆರಂಭಿಸಿದ ಸಮಯದಲ್ಲಿಯೇ ಇದನ್ನು ನಿರ್ಧರಿಸಬೇಕು.
* differed annuilty for Single life, differed annuilty for joint life ಎನ್ನುವ ಎರಡು ಆಪ್ಷನ್ ಇರುತ್ತದೆ.
1. differed annuilty for Single life ಆಪ್ಷನ್ ಸೆಲೆಕ್ಟ್ ಮಾಡಿದವರಿಗೆ ಅವರು ಹೂಡಿಕೆ ಮಾಡಿದ ಹಣಕ್ಕೆ ತಕ್ಕ ಬಡ್ಡಿ ರೂಪದ ಪಿಂಚಣಿಯು ಅವರು ಬದುಕಿರುವ ತನಕ ಹೋಗುತ್ತದೆ, ಅವರ ಮ’ರ’ಣ’ದ ಅವರ ನಂತರ ನಾಮಿನಿಗೆ ಹೂಡಿಕೆಯ ಹಣ ಹೋಗುತ್ತದೆ, ಪಾಲಿಸಿ ಕ್ಯಾನ್ಸಲ್ ಆಗುತ್ತದೆ.
2. differed annuilty for joint life ಆಪ್ಷನ್ ಸೆಲೆಕ್ಟ್ ಮಾಡಿದವರಿಗೆ ಅವರ ಮ’ರ’ಣ’ದ ನಂತರ ಅವರು ಪಡೆಯುತ್ತಿದ್ದ ಪಿಂಚಣಿಯನ್ನು ಅವರ ಪತಿ ಅಥವಾ ಪತ್ನಿ ಪಡೆಯುತ್ತಾರೆ. ಅವರ ಮರಣದ ನಂತರ ನಾಮಿನಿಗೆ ಹೂಡಿಕೆಯ ಹಣ ಹೋಗುತ್ತದೆ, ಪಾಲಿಸಿ ಕ್ಯಾನ್ಸಲ್ ಆಗುತ್ತದೆ.
* 30 ವರ್ಷ ಮೇಲ್ಪಟ್ಟ 79 ವರ್ಷ ವಯಸ್ಸಿನ ಒಳಗಿನವರು ಮಾತ್ರ ಈ ಯೋಜನೆಯನ್ನು ಖರೀದಿಸಲು ಅರ್ಹರು.
* deferment year ಕನಿಷ್ಠ ಒಂದು ವರ್ಷದಿಂದ ಗರಿಷ್ಠ 12 ವರ್ಷಗಳು ಇರುತ್ತವೆ. deferment year ಎಂದರೆ ನೀವು ಈ ಯೋಚನೆಯನ್ನು ಖರೀದಿಸಿದ ನಂತರ ನೀವು ಸೆಲೆಕ್ಟ್ ಮಾಡುವ deferment year ಆದ ನಂತರ ಪೆನ್ಷನ್ ಬರಲು ಶುರು ಆಗುತ್ತದೆ.
* Minimum Vesting age 31 ವರ್ಷ, Maximum Vesting age 80 ವರ್ಷಗಳು. Vesting age ಎಂದರೆ ಪೆನ್ಷನ್ ಬರಲು ಶುರು ಆಗುವ ವಯಸ್ಸು ಎಂದು ಅರ್ಥ ಮಾಡಿಕೊಳ್ಳಬಹುದು.
* ಈ ಯೋಜನೆಯಡಿ ಹೂಡಿಕೆ ಮಾಡಬೇಕಾದ ಕನಿಷ್ಠ ಮೊತ್ತ 1.5ಲಕ್ಷ, ಗರಿಷ್ಠ ಯಾವುದೇ ಮಿತಿ ಇಲ್ಲ. ಅಂಗವಿಕಲರಿಗೆ ಕನಿಷ್ಠ ಹೂಡಿಕೆ ಮೊತ್ತ 50,000 ಗಳು.
* ನೀವು ಯೋಜನೆ ಆರಂಭಿಸಿದ ಒಂದು ವರ್ಷದ ನಂತರ ನಿಮ್ಮ ಹೂಡಿಕೆ ಆಧಾರದ ಮೇಲೆ ಸಾಲ ಸೌಲಭ್ಯ ಕೂಡ ಪಡೆದುಕೊಳ್ಳಬಹುದು.
* ಈ ಯೋಜನೆಯಡಿ ನೀವು ಪಡೆಯಬಹುದಾದ ಕನಿಷ್ಠ ಪೆನ್ಷನ್ ಅಂದರೆ ತಿಂಗಳಿಗೆ ರೂ.1,000 ದಿಂದ ವರ್ಷಕ್ಕೆ ರೂ.12,000 ದವರೆಗೆ ಖಚಿತವಾಗಿ ಮಿನಿಮಮ್ ಪಿಂಚಣಿ ಸಿಗುತ್ತದೆ.
* ಈ ಯೋಜನೆಯನ್ನು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಕೂಡ ನೀವು ಖರೀದಿಸಬಹುದು
* ಆನ್ಲೈನಲ್ಲಿ ಖರೀದಿಸಿದವರಿಗೆ 30 ದಿನಗಳವರೆಗೆ, ಆಫ್ಲೈನ್ ನಲ್ಲಿ ಖರೀದಿಸಿದವರಿಗೆ 15 ದಿನಗಳವರೆಗೆ ಯೋಜನೆಯನ್ನು ರದ್ದು ಮಾಡಲು ಕಾಲಾವಕಾಶಗಳು ಇರುತ್ತದೆ.
* ಹೂಡಿಕೆ ಆಧಾರದ ಮೇಲೆ ಪಡೆಯುವ ಲಾಭವೂ ಆದಾಯ ತೆರಿಗೆ ನಿಯಮಕ್ಕೆ ಒಳಪಟ್ಟಿರುತ್ತದೆ, death claim ವಿನಾಯಿತಿಗೆ ಒಳಪಟ್ಟಿರುತ್ತದೆ.
* ಉದಾಹರಣೆಯೊಂದಿಗೆ ಹೇಳುವುದಾದರೆ 35 ವರ್ಷದ ಒಬ್ಬ ವ್ಯಕ್ತಿಯು ರೂ.1,50,000 ಹಣಕ್ಕೆ ಈ ಯೋಜನೆಯನ್ನು ಖರೀದಿಸಿ deferment year 12 ವರ್ಷ ಎಂದು ಸೆಲೆಕ್ಟ್ ಮಾಡಿದ್ದರೆ 47ನೇ ವಯಸ್ಸು ಅವರ Vesting age ಆಗಿರುತ್ತದೆ. ಆಗಿನಿಂದ ಅವರು ಪಿಂಚಣಿ ಪಡೆಯುತ್ತಾರೆ.
ಅವರು ವಾರ್ಷಿಕವಾಗಿ ಪಿಂಚಣಿ ಪಡೆಯುವುದಾದರೆ ರೂ.13,905, ಆರು ತಿಂಗಳಿಗೊಮ್ಮೆ ಪಡೆಯುವುದಾದರೆ ರೂ.6,813, ಮೂರು ತಿಂಗಳಿಗೊಮ್ಮೆ ಪಡೆಯುವುದಾದರೆ ರೂ.3,372 ಮತ್ತು ಪ್ರತಿ ತಿಂಗಳು ಪಡೆಯುವುದಾದರೆ ರೂ.1112 ಪಡೆಯುತ್ತಾರೆ.