ಫಿಕ್ಸೆಟ್ ಡಿಪೋಸಿಟ್ ಯೋಜನೆಗಳ (Fixed deposite Scheme) ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿರುತ್ತದೆ. ಸಾಮಾನ್ಯವಾಗಿ ನಾವು ಬ್ಯಾಂಕ್ ಗಳಲ್ಲಿ ಈ ರೀತಿ ಒಂದು ಮೊತ್ತದ ಹಣವನ್ನು ನಿರ್ದಿಷ್ಟ ಸಮಯವರೆಗೆ ಠೇವಣಿ ಇಡುತ್ತೇವೆ. ಪ್ರತಿ ಬ್ಯಾಂಕ್ ನಿಂದ ಬ್ಯಾಂಕ್ ಗೆ ಇದರ ಬಡ್ಡಿದರ ಬೇರೆ ಬೇರೆ ಇರುತ್ತದೆ, ಆದರೆ ಈ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಹಣಕ್ಕೆ ಹೆಚ್ಚಿನ ಭದ್ರತೆ ಇರುತ್ತದೆ ಮತ್ತು ಉತ್ತಮ ಲಾಭವನ್ನು ಕೂಡ ಪಡೆಯಬಹುದು.
ಬ್ಯಾಂಕ್ ಗಳು ಮಾತ್ರವಲ್ಲದೆ ಈಗ ಅಂಚೆಕಛೇರಿಯಲ್ಲಿ ಕೂಡ ಹಣವನ್ನು ನಿಶ್ಚಿತ ಠೇವಣಿ ಇಡಬಹುದು. ಇದನ್ನು ಟೈಮ್ ಫಿಕ್ಸೆಡ್ ಡೆಪೋಸಿಟ್ ಸ್ಕೀಮ್ (Time Fixed Deopsite Scheme) ಎಂದು ಕರೆಯುತ್ತಾರೆ ಇದರ ಕುರಿತು ಕೆಲ ಪ್ರಮುಖ ಮಾಹಿತಿ ಹೀಗಿದೆ ನೋಡಿ.
ಯೋಜನೆಯ ಹೆಸರು:- ಟೈಮ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್
ಪೋಸ್ಟ್ ಆಫೀಸ್ ನಲ್ಲಿ ಸಿಗುವ ಬಡ್ಡಿದರ (Intrest rate)
* 1 ವರ್ಷಕ್ಕೆ 6.80%
* 2 ವರ್ಷಕ್ಕೆ 6.90%
* 3 ವರ್ಷಕ್ಕೆ 7.00%
* 5 ವರ್ಷಕ್ಕೆ 7.50%
ಯೋಜನೆಯ ಕುರಿತು ಕೆಲವು ಪ್ರಮುಖ ಮಾಹಿತಿಗಳು:-
* ಭಾರತೀಯ ನಾಗರಿಕರಾದ ಯಾರು ಬೇಕಾದರೂ ಈ ಅಂಚೆ ಕಚೇರಿಯ ಟೈಮ್ ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
* ಈ ಯೋಜನೆಯಲ್ಲಿ ಖಾತೆ ತೆರೆದು ಹೂಡಿಕೆ ಮಾಡಲು ವಯಸ್ಸಿನ ಮಿತಿ ಇರುವುದಿಲ್ಲ
* ಕನಿಷ್ಟ ರೂ.1000 ನಿಂದ ಗರಿಷ್ಟ ಯಾವುದೇ ಮಿತಿ ಇಲ್ಲ, ಎಷ್ಟು ಬೇಕಾದರೂ ಡೆಪಾಸಿಟ್ ಇಡಬಹುದು
* ಈ ಯೋಜನೆಯ ಮೆಚುರಿಟಿ ಅವಧಿ ಕನಿಷ್ಠ 1 ವರ್ಷ ಕನಿಷ್ಠ, ಗರಿಷ್ಠ ಅವಧಿ 5 ವರ್ಷ ಆದರೆ ನೀವು ಖಾತೆ ತೆರೆಯುವಾಗಲೇ ಇದನ್ನು ನಿರ್ಧರಿಸಬೇಕು.
* ನಾಮಿನಿ ಫೆಸಿಲಿಟಿ ಕೂಡ ಲಭ್ಯವಿದೆ. ಒಂದು ವೇಳೆ ನೀವು ಯೋಜನೆಯ ಮೆಚುರಿಟಿ ಅವಧಿಗೂ ಮುನ್ನ ಮೃ’ತ ಪಟ್ಟರೆ ಕಾನೂನು ಪ್ರಕಾರ ಸೇರಬೇಕಾದ ಹಣ ನೀವು ಸೂಚಿಸುವ ನಾಮಿನಿಗೆ ಹೋಗುತ್ತದೆ
* ಒಂದು ಅಂಚೆ ಕಛೇರಿಯಿಂದ ಮತ್ತೊಂದು ಅಂಚೆ ಕಛೇರಿಗೆ ಇದನ್ನು ವರ್ಗಾಯಿಸಬಹುದು
* ಒಬ್ಬರುಶಎಷ್ಟು ಬೇಕಾದರೂ ಟೈಮ್ ಫಿಕ್ಸೆಡ್ ಡೆಪೋಸಿಟ್ ಸ್ಕೀಮ್ ಖಾತೆ ತೆರೆಯಬಹುದು.
* ಜಂಟಿಯಾಗಿ ಖಾತೆ ತೆರೆಯಲು ಕೂಡ ಅವಕಾಶವಿದೆ, ಖಾತೆ ತೆರೆದ ನಂತರವೂ ಕೂಡ ಜಾಯಿಂಟ್ ಅಕೌಂಟ್ ಮಾಡಲು ಅವಕಾಶವಿದೆ
* ನಿಮಗೆ ಬರುವ ಲಾಭದ ಲೆಕ್ಕಾಚಾರ ಹಾಕುವುದಾದರೆ ಉದಾಹರಣೆಗೆ ನೀವು ಈಗ 1 ಲಕ್ಷ ಹಣವನ್ನು ಅಂಚೆ ಕಚೇರಿಯಲ್ಲಿ ಟೈಮ್ ಫಿಕ್ಸ್ಡ್ ಡೆಪಾಸಿಟ್ ಸ್ಕೀಮ್ ಅಕೌಂಟ್ ತೆರೆದು ಹೂಡಿಕೆ ಮಾಡಿದ್ದೀರಿ ಎಂದುಕೊಳ್ಳೋಣ
ಒಂದು ವರ್ಷದ ಅವಧಿಗಾದರೆ 6.80% ಅನ್ವಯ 1,06,975,
ಎರಡು ವರ್ಷದ ಅವಧಿಗೆ ಆರಿಸುವುದಾದರೆ 6.90% ಅನ್ವಯ 1,14,162, ಮೂರು ವರ್ಷದ ಅವಧಿಗೆ ಆರಿಸುವುದಾದರೆ 7.0% ಅನ್ವಯ 1,21,558, ಐದು ವರ್ಷದ ಅವಧಿಗೆ ಡೆಪಾಸಿಟ್ ಇಡುವುದಾದರೆ 7.50% ಅನ್ವಯ 1,38,570 ರಿಟರ್ನ್ ಸಿಗುತ್ತದೆ.
* ಬೇಕಾಗುವ ದಾಖಲೆಗಳು
1. ಪ್ಯಾನ್ ಕಾರ್ಡ್
2. ಆಧಾರ್ ಕಾರ್ಡ್
3. ಮೊಬೈಲ್ ಸಂಖ್ಯೆ
* ಹೂಡಿಕೆ ಮಾಡುವ ಹಣವು ನಗದು ರೂಪದಲ್ಲಿ ಅಥವಾ ಚೆಕ್ ರೂಪದಲ್ಲಿ.
* ಯೋಜನೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಹತ್ತಿರದ ಅಂಚೆ ಕಛೇರಿಯಲ್ಲಿ ವಿಚಾರಿಸಿ.