ನಮ್ಮ ದೇಶದ ಪವಿತ್ರ ಗ್ರಂಥ ರಾಮಾಯಣ ಹಾಗೂ ಮಹಾಭಾರತ. ರಾಮಾಯಣ ನಡೆದು ಯುಗ ಯುಗಗಳೇ ಕಳೆದಿದ್ದರೂ ರಾಮಾಯಣದಲ್ಲಿ ಬರುವ ಪಾತ್ರಗಳು ಹಾಗೂ ಸಾರಾಂಶ ಸೂರ್ಯ ಚಂದ್ರ ಇರುವವರೆಗೂ ಕೂಡ ಮನುಷ್ಯನಿಗೆ ಆದರ್ಶ ಪ್ರಾಯವಾದದ್ದು.
ಇಂತಹ ರಾಮಾಯಣದಲ್ಲಿ ಒಂದು ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸಿದ ನಮ್ಮ ವಾಯುಪುತ್ರ ಹನುಮಂತ ಹುಟ್ಟಿದ್ದು ಕರ್ನಾಟಕದ ಅಂಜನಾದ್ರಿ ಬೆಟ್ಟ ದಲ್ಲಿ ಎನ್ನುವುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ಸಂಗತಿ. ಹಾಗೆಯೇ, ಪುರಾಣಗಳು ಗ್ರಂಥಗಳು ಹಿರಿಯರು ಹೇಳಿರುವ ಪ್ರಕಾರವಾಗಿ ಮನುಷ್ಯನ ಜೀವನದ ಯಾವುದೇ ಕಷ್ಟಗಳಿದ್ದರೂ ಮೊದಲು ಸ್ಪಂದಿಸುವ ಭಗವಂತ ಆಂಜನೇಯನೇ ಆಗಿದ್ದಾನೆ.
ಶಕ್ತಿ, ತಾಳ್ಮೆ, ದೈರ್ಯ, ಸ್ಥೈರ್ಯ ಸಾಹಸ ಎಲ್ಲದಕ್ಕೂ ಹೆಸರುವಾಸಿಯಾಗಿರುವ ಶ್ರೀ ಆಂಜನೇಯನನ್ನು ಸ್ಮರಿಸುವುದರಿಂದ ಜೀವನದ ಬಹುತೇಕ ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳಿಗೂ ಪರಿಹಾರ ದೊರೆತಂತೆ. ಆಂಜನೇಯನ ಗುಡಿ ಇಲ್ಲದ ಊರೇ ಇಲ್ಲ ಎನ್ನಬಹುದು ಮತ್ತು ಪ್ರತಿ ಮನೆಯಲ್ಲೂ ಕೂಡ ಹನುಮನ ಭಕ್ತರು ಇದ್ದೇ ಇರುತ್ತಾರೆ. ಹೀಗೆ ಕೆಲವು ವಿಶೇಷ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ಆಂಜನೇಯನ ದೇವಸ್ಥಾನದಲ್ಲಿ ಈ ಸ್ವಾಮಿಯ ಪ್ರಭಾವ ಇದ್ದೇ ಇರುತ್ತದೆ.
ಈ ಸುದ್ದಿ ಓದಿ:- PM ಕಿಸಾನ್ ಸಮ್ಮಾನ್ ಪಡೆಯುತ್ತಿದ್ದ ರೈತರಿಗೆ ಬಿಗ್ ಶಾ.ಕ್.! ಇನ್ನು ಮುಂದೆ ರೈತರಿಗೆ ಈ ಕೆಲಸ ಕಡ್ಡಾಯ, ಇಲ್ಲದಿದ್ದರೆ ಹಣ ಬರಲ್ಲ.!
ಇಂತಹ ನಾಡಿನ ಹಲವಾರು ಕ್ಷೇತ್ರಗಳಲ್ಲಿ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಬಿದನಗೆರೆ ಬಳಿ ಇರುವ ಪಂಚಮುಖಿ ಆಂಜನೇಯನು ದೇವಸ್ಥಾನ ಕೂಡ ಒಂದು. ಈ ದೇವಸ್ಥಾನಕ್ಕೆ ಹೋದರೆ ನೀವು ಹೋದ ದಿನವೇ ಅನುಭವವಾಗುವ ವೈಬ್ರೇಶನ್ ನಿಂದಲೇ ಇಲ್ಲಿರುವ ಶಕ್ತಿ ನಿಮ್ಮ ಸುಪ್ತ ಮನಸ್ಸಿಗೆ ಗೋಚರವಾಗುತ್ತದೆ.
ಸುಮಾರು 161 ಅಡಿ ಎತ್ತರವಾದ ಕಂಚಿನ ಈ ಆಂಜನೇಯನ ಮೂರ್ತಿಯು ಕರ್ನಾಟಕದ ಕೀರ್ತಿ ಕಳಶವಾಗಿದೆ. ಈ ಸನ್ನಿಧಾನದಲ್ಲಿ ಆಂಜನೇಯ ಸ್ವಾಮಿಯ ಜೊತೆಗೆ ಸಪ್ತ ಶನೇಶ್ವರ ಸ್ವಾಮೀಜಿ ಕೂಡ ನಡೆಸಿದ್ದಾರೆ ಇದನ್ನು ಸತ್ಯ ಶನೇಶ್ವರ ಸ್ವಾಮಿ ಎಂದು ಕೂಡ ಕರೆಯುತ್ತಾರೆ.
ದೇವಸ್ಥಾನಕ್ಕೆ ಒಮ್ಮೆ ಭೇಟಿ ಕೊಟ್ಟರೆ ಪದೇ ಪದೇ ಹೋಗ ಬೇಕೆನ್ನುವ ಸೆಳೆತ ಎಲ್ಲರನ್ನೂ ಕಾಡುತ್ತದೆ. ಮೊದಲಿಗೆ ದೇವಸ್ಥಾನಕ್ಕೆ ಹೋದ ತಕ್ಷಣ ಇಲ್ಲಿರುವ ನಾಗ ಹುತ್ತಕ್ಕೆ ಪೂಜೆ ಸಲ್ಲಿಸಿ ಹರಕೆ ಕಟ್ಟಿಕೊಳ್ಳಬೇಕು. ಬಳಿಕ ಶನೇಶ್ವರ ಸ್ವಾಮಿಯ ಬಳಿ ಬಂದು ನಿಮ್ಮನ್ನು ಕಾಡುತ್ತಿರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು.
ಈ ಸುದ್ದಿ ಓದಿ:- ಮೊಬೈಲ್ ಮೂಲಕ ಬುಕ್ ಮಾಡಿದ್ರೆ ಸಾಕು ಉಚಿತವಾಗಿ ನಿಮ್ಮ ಮನೆಗೆ ಬರುತ್ತದೆ 10Kg ಭಾರತ್ ಅಕ್ಕಿ, ಗೋಧಿ ಹಿಟ್ಟು ಹಾಗೂ ಕಡಲೇಬೇಳೆ, ಬುಕ್ ಮಾಡುವ ವಿಧಾನ ಹೇಗೆ ನೋಡಿ.!
ಈ ಸತ್ಯ ಶನೇಶ್ವರ ಸ್ವಾಮಿಯ ಬಳಿ ಪ್ರಾಮಾಣಿಕವಾಗಿ ಮನಸ್ಸನ್ನಲ್ಲಿರುವ ಎಲ್ಲಾ ಕಷ್ಟ, ನಷ್ಟ, ನೋವು, ನಿಂದನೆ, ಅವಮಾನ, ದುಃಖ, ಸಮಸ್ಯೆ, ಗೊಂದಲ ಮನಸಾರೆಯಾಗಿ ಹೇಳಿಕೊಂಡು ಮನಸ್ಸಿನ ಭಾರ ಇಳಿಸಿ ನಂತರ ಆಂಜನೇಯ ಸ್ವಾಮಿಯ ಬಳಿ ರಕ್ಷೆಗಾಗಿ ಬೇಡಿ ಪ್ರಾರ್ಥಿಸಬೇಕು. ವಾರದಲ್ಲಿ ಮೂರು ದಿನಗಳ ಕಾಲ ಅಂದರೆ ಗುರುವಾರ ಶನಿವಾರ ಹಾಗೂ ಭಾನುವಾರ ಇಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ.
ದೂರದ ಊರುಗಳಿಂದ ಬರುವ ಭಕ್ತಾದಿಗಳ ಸಂಖ್ಯೆಯು ಹೆಚ್ಚಿಗೆ ಇದೆ. ಹಾಗಾಗಿ ಆಹಾರದ ವ್ಯವಸ್ಥೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ, ಸ್ನಾನಕ್ಕೆ ನೀರಿನ ವ್ಯವಸ್ಥೆ ಹೀಗೆ ಪ್ರತಿಯೊಂದು ಸೌಲಭ್ಯವನ್ನು ಕಲ್ಪಿಸಿ ಕೊಡಲಾಗಿದೆ.
ಆರೋಗ್ಯ, ಹಣಕಾಸು ಉದ್ಯೋಗ, ವಿದ್ಯಾಭ್ಯಾಸ, ಕುಟುಂಬದಲ್ಲಿ ಶಾಂತಿ ನೆಮ್ಮದಿ ಕೊರತೆ, ಜೀವನದಲ್ಲಿ ಯಶಸ್ಸು, ದುಷ್ಟ ಶಕ್ತಿಗಳ ಪ್ರಭಾವ, ನರ ದೃಷ್ಟಿ ದೋಷದಿಂದ ಸಮಸ್ಯೆ ಗಲ್ಲದಕ್ಕೂ ಕೂಡ ಪರಿಹಾರ ಇಲ್ಲಿ ನಡೆಯುವ ಗಂಡಭೇರುಂಡ ಹೋಮದಲ್ಲಿ ಪರಿಹಾರ ಸಿಗುತ್ತದೆ.
ಈ ಸುದ್ದಿ ಓದಿ:- ತುಂಬಾ ಸಾಲ ಮಾಡಿ ಕೊರಗುತ್ತಿದ್ದೀರಾ.? ಈ 2 ಕೆಲಸ ಮಾಡಿ ಖಂಡಿತ ಕೋಟ್ಯಾಧಿಪತಿಗಳಾಗುತ್ತೀರಿ.!
ಇದಲ್ಲದೆ ಶನಿದೋಷ ಪರಿಹಾರ, ರಾಹು ದೋಷ ಪರಿಹಾರ, ಕೇತು ದೋಷ ಪರಿಹಾರ ಕೂಡ ಮಾಡಿಕೊಡಲಾಗುತ್ತದೆ. ಒಮ್ಮೆ ಕುಟುಂಬ ಸಮೇತರಾಗಿ ನೀವು ಕೂಡ ಈ ಕ್ಷೇತ್ರಕ್ಕೆ ಭೇಟಿ ಕೊಟ್ಟು ಸ್ವಾಮಿಯ ದರ್ಶನವನ್ನು ಪಡೆದು ಧನ್ಯರಾಗಿ.