ಸಾಮಾನ್ಯವಾಗಿ ಹಳ್ಳಿ ಕಡೆಗಳಲ್ಲಿ ಈ ಒಂದು ಇಲಿಗಳ ಕಾಟ ಅಂದರೆ ಹೆಗ್ಗಣಗಳ ಕಾಟ ಇದ್ದೇ ಇರುತ್ತದೆ. ಏಕೆಂದರೆ ಸಾಮಾನ್ಯವಾಗಿ ಅವರ ಮನೆಯಲ್ಲಿ ಹೊಲಗದ್ದೆಗಳಲ್ಲಿ ಬೆಳೆದಂತಹ ಪದಾರ್ಥಗಳನ್ನು ಅಧಿಕ ಪ್ರಮಾಣದಲ್ಲಿ ಇಟ್ಟುಕೊಂಡಿರುತ್ತಾರೆ. ಇದರಿಂದ ಅವರ ಮನೆಗಳಲ್ಲಿ ಇಲಿಗಳು ಕಾಣಿಸಿಕೊಳ್ಳುವುದು ಸರ್ವೇಸಾಮಾನ್ಯ ಹಾಗೂ ಅಕ್ಕಪಕ್ಕದ ಜಾಗಗಳಲ್ಲಿ ಹೆಚ್ಚಾಗಿ ಮರಗಿಡಗಳು ಪೊದೆಗಳು ಇರುವುದರಿಂದ ಅಂತಹ ಸ್ಥಳಗಳಲ್ಲಿ ಇಲಿಗಳು ಕಾಣಿಸಿಕೊಳ್ಳುವುದು ಸರ್ವೇಸಾಮಾನ್ಯ.
ಹಾಗೂ ಯಾರ ಮನೆಯಲ್ಲಿ ಅತಿ ಹೆಚ್ಚಾಗಿ ದಿನಸಿ ಸಾಮಾನುಗಳು ಅಥವಾ ಬೇಡದೆ ಇರುವಂತಹ ಪದಾರ್ಥಗಳನ್ನು ಒಂದು ಕಡೆ ಇಟ್ಟಿದ್ದರೆ ಅಂತಹ ಸ್ಥಳಗಳಲ್ಲಿ ಇಲಿಗಳು ಕಾಣಿಸಿಕೊಳ್ಳುವುದು ಸರ್ವೇಸಾಮಾನ್ಯ ಅದರಲ್ಲೂ ಬಹಳ ಮುಖ್ಯವಾಗಿ ಹೇಳಬೇಕು ಎಂದರೆ ದಿನಸಿ ಅಂಗಡಿಗಳಲ್ಲಿ ಇಲಿಗಳು ಕಡ್ಡಾಯವಾಗಿ ಇದ್ದೇ ಇರುತ್ತದೆ. ಏಕೆಂದರೆ ಅಲ್ಲಿ ಎಲ್ಲಾ ರೀತಿಯ ಆಹಾರ ಪದಾರ್ಥಗಳು ಇರುತ್ತದೆ.
ಅವುಗಳನ್ನು ತಿನ್ನುವ ಉದ್ದೇಶದಿಂದ ಇಲಿಗಳು ಅಲ್ಲಿ ಸೇರಿಕೊಂಡಿರುತ್ತದೆ ಆದರೆ ಅವುಗಳನ್ನು ಅಂತಹ ಸ್ಥಳಗಳಲ್ಲಿ ಯಾವುದೇ ರೀತಿಯ ಕೆಮಿಕಲ್ ಪದಾರ್ಥವನ್ನು ಹಾಕಿ ಅವುಗಳನ್ನು ನಾಶ ಮಾಡಲು ಸಾಧ್ಯವಿಲ್ಲ. ಏಕೆoದರೆ ಅಲ್ಲಿ ಎಲ್ಲಾ ಆಹಾರ ಪದಾರ್ಥಗಳು ಇರುವುದರಿಂದ ಅಂತಹ ಸ್ಥಳದಲ್ಲಿ ಈ ಕೆಮಿಕಲ್ ಪದಾರ್ಥವನ್ನು ಇಡುವುದರಿಂದ ಅದೆಲ್ಲ ಅವುಗಳಿಗೆ ತಾಕಬಹುದು ಎನ್ನುವ ಉದ್ದೇಶದಿಂದ ಯಾರು ಕೂಡ ಇಂತಹ ಒಂದು ವಿಧಾನವನ್ನು ಅನುಸರಿಸುವುದು ಸೂಕ್ತವಲ್ಲ.
ಬದಲಿಗೆ ಯಾವುದಾ ದರೂ ಒಳ್ಳೆಯ ವಿಧಾನವನ್ನು ಅಂದರೆ ಯಾವುದೇ ರೀತಿಯ ತೊಂದರೆ ಆಗದಂತೆ ಆಹಾರ ಪದಾರ್ಥಗಳು ವಿಷಪೂರಿತವಾಗದಂತೆ ಅವುಗಳನ್ನು ನಾಶಪಡಿಸುವ ವಿಧಾನ ಅನುಸರಿಸುವುದು ಉತ್ತಮ. ಹೌದು ಈ ರೀತಿ ಮಾಡುವುದರಿಂದ ನಿಮ್ಮ ಯಾವುದೇ ಆಹಾರ ಪದಾರ್ಥಗಳು ಇದ್ದರೂ ಅವುಗಳು ಹಾಳಾಗುವುದಿಲ್ಲ ಹಾಗೂ ಹೆಗ್ಗಣ ಗಳು ಇಲಿಗಳು ಕೂಡ ನಾಶವಾಗುತ್ತದೆ.
ಹಾಗಾದರೆ ಅವುಗಳನ್ನು ನಾಶ ಮಾಡುವುದಕ್ಕೆ ಯಾವ ಕೆಲವು ಟಿಪ್ಸ್ ಗಳನ್ನು ನಾವು ಅನುಸರಿಸ ಬಹುದು ಹಾಗೂ ಅದನ್ನು ಮಾಡುವುದಕ್ಕೆ ಯಾವ ಪದಾರ್ಥಗಳು ಬೇಕಾಗುತ್ತದೆ. ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
• ಮೊದಲನೆಯ ವಿಧಾನವನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಸ್ವಲ್ಪ ತೆಂಗಿನಕಾಯಿ ಇರುವಂತಹ ಕಂಟೆಯನ್ನು ತೆಗೆದುಕೊಂಡು ಅದರ ಒಳಗಡೆ ಒಂದು ಚಮಚ ವೈಟ್ ಸಿಮೆಂಟ್ ಹಾಗೂ ಒಂದರಿಂದ ಎರಡು ಬಿಸ್ಕೆಟ್ ಅನ್ನು ಪುಡಿ ಮಾಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ಈ ಒಂದು ಮಿಶ್ರಣವನ್ನು ಎಲ್ಲಿ ಇಲಿಗಳು ಓಡಾಡುತ್ತವೆಯೋ.
ಆ ಸ್ಥಳಕ್ಕೆ ಇಡುವುದರಿಂದ ಅದನ್ನು ಇಲಿಗಳು ತಿಂದು ಸಾಯುತ್ತದೆ. ಹೌದು ಬಿಸ್ಕೆಟ್ ನಲ್ಲಿ ಬಿಳಿ ಸಿಮೆಂಟ್ ಇರುವುದರಿಂದ ಅದು ಇಲ್ಲಿಗಳ ಹೊಟ್ಟೆಗೆ ಹೋದ ತಕ್ಷಣ ಗಟ್ಟಿಯಾಗುತ್ತದೆ ಇದರಿಂದ ಇಲಿಗಳು ಸಾಯುತ್ತದೆ.
• ಇನ್ನು ಎರಡನೆಯ ವಿಧಾನ ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು 50 ಗ್ರಾಂ ಶೇಂಗಾ ಬೀಜವನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಹುರಿದಿಟ್ಟುಕೊಳ್ಳಬೇಕು ನಂತರ 6 ಪ್ಯಾರೆಸ್ಟಮೋಲ್ ಮಾತ್ರೆ 500mg ದು ಬೇಕಾಗುತ್ತದೆ. ಇವೆರಡನ್ನೂ ಸಹ ನುಣ್ಣನೆ ಪುಡಿ ಮಾಡಿಕೊಂಡು ಇದನ್ನು ಮೊದಲು ಹೇಳಿದಂತೆ ಸ್ವಲ್ಪ ಕಾಯಿ ಇರುವಂತಹ ಕಂಟೆ ಒಳಗಡೆ ಹಾಕಿ ಇಲಿಗಳು ಬರುವ ಜಾಗಕ್ಕೆ ಇಟ್ಟರೆ ಇದನ್ನು ತಿಂದು ಇಲಿಗಳು ಸಾವನ್ನಪ್ಪುತ್ತದೆ.
• ಇನ್ನು ಮೂರನೆಯ ವಿಧಾನ ಯಾವುದು ಎಂದರೆ ಇಲಿಗಳು ಓಡಾಡು ವಂತಹ ಸ್ಥಳದಲ್ಲಿ ಸ್ಪ್ರೇ ಮಾಡುವುದು ಹೌದು ಇದನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು 5 ರಿಂದ 6 ಬೆಳ್ಳುಳ್ಳಿ ಎಸಳುಗಳು ಇದನ್ನು ಚೆನ್ನಾಗಿ ಜಜ್ಜಿ ಒಂದು ಪಾತ್ರೆಯಲ್ಲಿ ಹಾಕಿ ನಂತರ ಒಂದು ಚಮಚ ಪುಡಿ ಉಪ್ಪು ಹಾಗೆ ಒಂದು ಚಿಕ್ಕ ಲೋಟದಲ್ಲಿ ನೀರು ಇಷ್ಟನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು.
ನಂತರ ಇದನ್ನು ಶೋಧಿಸಿಕೊಂಡು ಈ ನೀರನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿ ಅದನ್ನು ನಿಮ್ಮ ಮನೆಯ ಸುತ್ತ ಹಾಕುವುದ ರಿಂದ ಹಾಗೂ ನಿಮ್ಮ ಕಿಟಕಿಯ ಹೊರಭಾಗದಲ್ಲಿ ಹಾಕುವುದರಿಂದ ಯಾವುದೇ ರೀತಿಯ ನೊಣ ಸೊಳ್ಳೆ ಇಲಿಗಳು ಯಾವುದು ಕೂಡ ಬರುವುದಿಲ್ಲ. ಅದರಲ್ಲಿ ಇರುವಂತಹ ವಾಸನೆಗೆ ನಿಮ್ಮ ಮನೆಯ ಹತ್ತಿರ ಯಾವುದೇ ಕ್ರಿಮಿ ಕೀಟಗಳು ಕೂಡ ಒಳ ಬರುವುದಿಲ್ಲ.