ಮಂತ್ರಾಲಯಕ್ಕೆ ಹೋದ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಇಂಥ ತಪ್ಪು ಮಾಡಬೇಡಿ.!

 

ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಮಂತ್ರಾಲಯಕ್ಕೆ ಹೋದವರು ಕೆಲವೊಂದು ಹರಕೆಗಳನ್ನು ತೀರಿಸುವ ಉದ್ದೇಶದಿಂದ ಹೋಗಿರುತ್ತಾರೆ. ಹಾಗೂ ಇನ್ನೂ ಕೆಲವೊಂದಷ್ಟು ಜನ ರಾಯರ ದರ್ಶನವನ್ನು ಮಾಡಲು ಹೋಗಿರುತ್ತಾರೆ. ಆದರೆ ಎಲ್ಲರಿಗೂ ಕೂಡ ಮಂತ್ರಾಲಯದಲ್ಲಿ ಯಾವ ಕೆಲವು ನಿಯಮಗಳನ್ನು ಅನುಸರಿಸಬೇಕು ನಾವೇನಾದರೂ ಹರಕೆ ಯನ್ನು ಮಾಡಿದರೆ ಅದನ್ನು ಹೇಗೆ ತೀರಿಸುವುದು ಎನ್ನುವಂತಹ ವಿಧಾನ ಗೊತ್ತಿರುವುದಿಲ್ಲ.

ಬದಲಿಗೆ ಯಾರೋ ಒಂದು ರೀತಿ ಮಾಡಿದರು ಎಂದು ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಮಾಡುತ್ತಿರುತ್ತಾರೆ ಆದರೆ ಆ ರೀತಿ ಮಾಡುವುದು ತಪ್ಪು. ನೀವು ಯಾವುದೇ ಹರಕೆಯನ್ನು ಮಾಡಿ ಕೊಂಡರು ಅದನ್ನು ಹೇಗೆ ಸರಿಯಾದ ಮಾರ್ಗದಲ್ಲಿ ಮಾಡುವುದು ಎನ್ನುವುದನ್ನು ತಿಳಿದವರಿಂದ ತಿಳಿದು ಆ ಹರಕೆಯನ್ನು ಒಪ್ಪಿಸುವುದು ಒಳ್ಳೆಯದು ಮತ್ತು ಅದು ಶ್ರೇಷ್ಠ ಎಂದೇ ಹೇಳಬಹುದು.

ಯಾರೋ ಒಂದು ಹರಕೆಯನ್ನು ಮಾಡಿಕೊಂಡರು ಅದರಿಂದ ಅವರಿಗೆ ಒಳ್ಳೆಯದಾಯಿತು ನಾನು ಅದೇ ರೀತಿಯಾಗಿ ಹರಕೆಯನ್ನು ಮಾಡಿ ಕೊಳ್ಳುತ್ತೇನೆ ಎನ್ನುವುದು ತಪ್ಪು. ನಿಮ್ಮ ಮನಸ್ಸಿನಲ್ಲಿ ರಾಘವೇಂದ್ರರ ಆರಾಧನೆಯನ್ನು ಮಾಡಬೇಕು ಎನ್ನುವ ಮನಸ್ಸು ಬರಬೇಕು ಹಾಗೂ ರಾಯರ ಮೇಲೆ ಹೆಚ್ಚು ಭಕ್ತಿ ನಂಬಿಕೆ ಬರಬೇಕು. ಆಗ ಮಾತ್ರ ನೀವು ರಾಯರಲ್ಲಿ ಹರಕೆಯನ್ನು ಮಾಡುವುದು ಹಾಗೂ ಅವರ ದರ್ಶನವನ್ನು ಮಾಡುವುದು ಒಳ್ಳೆಯದು.

ಅದರಲ್ಲೂ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೊಂದಷ್ಟು ಜನ ರಾಘವೇಂದ್ರ ಸ್ವಾಮಿಯ ಸನ್ನಿಧಾನಕ್ಕೆ ಹೋದಂತಹ ಸಮಯದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುತ್ತಿರುತ್ತಾರೆ. ಅದೇನಂದರೆ ರಾಯರ ಸನ್ನಿಧಾನದಲ್ಲಿ ಹೋದಂತಹ ಪ್ರತಿಯೊಬ್ಬರಿಗೂ ಕೂಡ ಮಂತ್ರಾಕ್ಷತೆಯನ್ನು ಕೊಡುತ್ತಾರೆ ಅದನ್ನು ಪ್ರತಿಯೊಬ್ಬರೂ ಕೂಡ ತಮ್ಮ ತಲೆಯ ಮೇಲೆ ಹಾಕಿಕೊಳ್ಳುವುದು ಪದ್ಧತಿ ಇದೆ.

ಆದರೆ ಕೆಲವೊಂದಷ್ಟು ಜನ ಅದನ್ನು ಪಡೆದು ಬೃಂದಾವನದಲ್ಲಿಯೇ ಹಾಕಿ ಹೊರಗಡೆ ಬರುತ್ತಾರೆ. ಆದರೆ ಯಾವತ್ತಿಗೂ ಕೂಡ ಆ ರೀತಿಯ ತಪ್ಪನ್ನು ಮಾಡಬಾರದು ಮಂತ್ರಾಕ್ಷತೆ ಎಂದರೆ ರಾಯರ ಸಂಪೂರ್ಣ ವಾದಂತಹ ಅನುಗ್ರಹ ಅದರಲ್ಲಿ ಇರುತ್ತದೆ ಅದು ನಿಮ್ಮ ಜೊತೆ ಇದ್ದರೆ ಯಾವುದೇ ರೀತಿಯ ಅಪಾಯಗಳು ತೊಂದರೆಗಳು ಸಂಭವಿಸುವುದಿಲ್ಲ ಅವರ ಆಶೀರ್ವಾದ ನಿಮ್ಮ ಜೊತೆ ಸದಾ ಕಾಲ ಇರುತ್ತದೆ.

ಎನ್ನುವುದರ ಉದ್ದೇಶಕ್ಕಾಗಿ ಪ್ರತಿಯೊಬ್ಬರಿಗೂ ಕೂಡ ಮಂತ್ರಾಲಯದಲ್ಲಿ ಪ್ರತಿಯೊಂದು ದೇವಸ್ಥಾನಗಳಲ್ಲಿಯೂ ಮಂತ್ರಾಕ್ಷತೆಯನ್ನು ಕೊಡುತ್ತಾರೆ. ಆದ್ದರಿಂದ ಯಾರೂ ಕೂಡ ಅದನ್ನು ಪಡೆದು ಅಲ್ಲಿಯೇ ಹಾಕುವುದು ತಪ್ಪು ಅದನ್ನು ನಿಮ್ಮ ಜೊತೆ ಸದಾ ಕಾಲ ಇಟ್ಟುಕೊಳ್ಳುವುದು ಒಳ್ಳೆಯದು. ಹಾಗೂ ಪ್ರತಿಯೊಬ್ಬರೂ ಮಂತ್ರಾಲಯದಲ್ಲಿ ಮಾಡುವಂತಹ ಕೆಲವೊಂದು ತಪ್ಪುಗಳು ಯಾವುದು ಎಂದರೆ.

• ಮಂತ್ರಾಲಯ ದೇವಸ್ಥಾನದಲ್ಲಿ ಹೆಂಗಸರು ಯಾವತ್ತಿಗೂ ಸಾಷ್ಟಾಂಗ ನಮಸ್ಕಾರವನ್ನು ಹಾಕಬಾರದು ಅಂದರೆ ಎದೆಯ ಭಾಗ ಹಾಗೂ ಸೊಂಟದ ಭಾಗ ರಾಯರ ಸನ್ನಿಧಾನದಲ್ಲಿ ಸೋಕ ಬಾರದು. ಅಂದರೆ ಕೇವಲ ತಲೆ ಮತ್ತು ಕಾಲು ಮಾತ್ರ ನೆಲದ ಮೇಲೆ ತಾಕಬೇಕು ಆ ರೀತಿಯಾಗಿ ನಮಸ್ಕಾರವನ್ನು ಮಾಡಬೇಕು.

• ಯಾವುದಾದರೂ ಹರಕೆಯನ್ನು ತಿಳಿಸುವುದಕ್ಕೆ ಅಂದರೆ ಅದರಲ್ಲೂ ಅಜ್ಜೆ ನಮಸ್ಕಾರವನ್ನು ಮಾಡಬೇಕು ಎಂದರೆ ಒಂದು ಹೆಜ್ಜೆ ಇಟ್ಟು ನಂತರ ಬಗ್ಗಿ ನಮಸ್ಕರಿಸಬೇಕು ಆದರೆ ಕೆಲವೊಂದಷ್ಟು ಜನ ಆ ರೀತಿ ಮಾಡುವುದಿಲ್ಲ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆದು ಹೋಗುತ್ತಿರುತ್ತಾರೆ ಆದರೆ ಅದು ತಪ್ಪು. ಹೆಜ್ಜೆ ನಮಸ್ಕಾರ ಎಂದರೆ ಪ್ರತಿ ಹೆಜ್ಜೆಗೂ ಬಗ್ಗಿ ನಮಸ್ಕಾರ ಮಾಡಬೇಕು.

• ನೀವು ಹರಕೆಯನ್ನು ತೀರಿಸುವಂತಹ ಸಮಯದಲ್ಲಿ ಯಾವತ್ತಿಗೂ ಕೂಡ ಸಂಪೂರ್ಣವಾದಂತಹ ಒದ್ದೆ ಬಟ್ಟೆಯನ್ನು ಧರಿಸಿ ಹರಕೆಯನ್ನು ತೀರಿಸಬಾರದು, ಎಲ್ಲಿಯೂ ಉಪಯೋಗಿಸದೆ ಇರುವಂತಹ ಶುದ್ಧವಾದ ಬಟ್ಟೆಯನ್ನು ಧರಿಸಿ ಹರಕೆಯನ್ನು ತೀರಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment