Home Useful Information ಹೆಣ್ಣು ಮಕ್ಕಳ ಪೋಷಕರಿಗೆ ಮಹತ್ವದ ಸುದ್ದಿ, ಮಾರ್ಚ್ 31ರ ಒಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಮಗಳ ಸುಕನ್ಯಾ ಸಮೃದ್ಧಿ ಯೋಜನೆ ಅಕೌಂಟ್ ರದ್ದಾಗುತ್ತದೆ.!

ಹೆಣ್ಣು ಮಕ್ಕಳ ಪೋಷಕರಿಗೆ ಮಹತ್ವದ ಸುದ್ದಿ, ಮಾರ್ಚ್ 31ರ ಒಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಮಗಳ ಸುಕನ್ಯಾ ಸಮೃದ್ಧಿ ಯೋಜನೆ ಅಕೌಂಟ್ ರದ್ದಾಗುತ್ತದೆ.!

0
ಹೆಣ್ಣು ಮಕ್ಕಳ ಪೋಷಕರಿಗೆ ಮಹತ್ವದ ಸುದ್ದಿ, ಮಾರ್ಚ್ 31ರ ಒಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಮಗಳ ಸುಕನ್ಯಾ ಸಮೃದ್ಧಿ ಯೋಜನೆ ಅಕೌಂಟ್ ರದ್ದಾಗುತ್ತದೆ.!

 

2015ರಲ್ಲಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು (Narendra Modi) ಭೇಟಿ ಪಡಾವೋ ಭೇಟಿ ಬಚಾವೋ ಎನ್ನುವ ಧ್ಯೇಯದೊಂದಿಗೆ ಸುಕನ್ಯ ಸಮೃದ್ಧಿ ಯೋಜನೆ ಎನ್ನುವ ಹೊಸ ಯೋಜನೆಯನ್ನು ಪರಿಚಯಿಸಿದರು. ಯಾವುದೇ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಅಥವಾ ಅಂಚೆ ಕಚೇರಿಯಲ್ಲಿ 10 ವರ್ಷದ ಒಳಗಿನ ವಯಸ್ಸಿನ ಹೆಣ್ಣು ಮಕ್ಕಳ ಪೋಷಕರು ಆ ಹೆಣ್ಣು ಮಕ್ಕಳ ಹೆಸರಿನಲ್ಲಿ (Girl Child) ಸುಕನ್ಯ ಸಮೃದ್ಧಿ ಯೋಜನೆ (Sukanya Samruddi Yojane) ಖಾತೆ ತೆರೆದು ತಮ್ಮ ಮಗಳ ಭವಿಷ್ಯಕ್ಕಾಗಿ ಹಣ ಹೂಡಿಕೆ ಮಾಡಬಹುದಾಗಿದೆ.

ಈ ಯೋಜನೆ ಮೆಚುರಿಟಿ ಅವಧಿ 15 ವರ್ಷಗಳಿದ್ದು 15 ವರ್ಷಗಳವರೆಗೆ ಪೋಷಕರು ಗರಿಷ್ಠ 1.50 ಲಕ್ಷದವರೆಗೆ ಹಣ ಹೂಡಿಕೆ ಮಾಡಿ ತಮ್ಮ ಮಗುವಿಗೆ 18 ವರ್ಷ ತುಂಬಿದಾಗ ಅದರಲ್ಲಿ ಭಾಗಶಃ ಅಥವಾ 21 ವರ್ಷ ತುಂಬಿದಾಗ ಪೂರ್ತಿ ಹಣವನ್ನು ಹಿಂಪಡೆಯುವ ಅವಕಾಶ ಇತ್ತು ಉಳಿದ ಎಲ್ಲಾ ಯೋಜನೆಗಳಿಗೂ ಹೋಲಿಸಿದರೆ ದೇಶದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಗೆ ಅತಿ ಹೆಚ್ಚು ಬಡ್ಡಿದರ ಅನ್ವಯವಾಗುತ್ತಿದೆ. ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳ ಭವಿಷ್ಯದ ಭದ್ರತೆಯ ಉದ್ದೇಶದಿಂದ ಆರಂಭಿಸಿರುವ ಈ ಯೋಜನೆಗೆ 8.2% ಬಡ್ಡಿದರ ನೀಡುತ್ತಿದೆ.

ಈ ಸುದ್ದಿ ಓದಿ:- ಗೃಹಲಕ್ಷ್ಮೀ ಈ ತಿಂಗಳ ಕ್ಯಾನ್ಸಲ್ ಆದವರ ಲಿಸ್ಟ್ ಬಿಡುಗಡೆ | ಗೃಹಲಕ್ಷ್ಮೀಯಲ್ಲಿ ಮತ್ತೊಂದು ಶಾ-ಕ್..

ಹೆಣ್ಣು ಮಕ್ಕಳ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ಅವರ ಉನ್ನತ ವಿದ್ಯಾಭ್ಯಾಸದ ಖರ್ಚಿಗಾಗಿ ಅಥವಾ ಮದುವೆ ಖರ್ಚಿಗಾಗಿ ಸುಕನ್ಯಾ ಸಮೃದ್ಧಿ ಖಾತೆ ತೆರೆದು ಹಣ ಹೂಡಿಕೆ ಮಾಡಬಹುದು. ಒಂದು ಕುಟುಂಬದಲ್ಲಿ ಮೊದಲ ಇಬ್ಬರು ಹೆಣ್ಣು ಮಕ್ಕಳಿಗಷ್ಟೇ ಖಾತೆ ತೆರೆಯಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

ಈ ಯೋಜನೆಗಿರುವ ಅತಿ ದೊಡ್ಡ ಲಾಭ ಏನೆಂದರೆ ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವ ಹಣಕ್ಕೆ ಆಗಲಿ ಅಥವಾ ಮೆಚ್ಯುರಿಟಿ ನಂತರ ನೀವು ಹಿಂಪಡೆಯುವ ಹಣಕ್ಕೆ ಆಗಲಿ ಅಥವಾ ನಿಮ್ಮ ಹೂಡಿಕೆಯ ಹಣದ ಮೇಲಿನ ಲಾಭದ ಮೇಲೆ ಆಗಲಿ ಯಾವುದೇ ರೀತಿಯ ತೆರಿಗೆ ಇರುವುದಿಲ್ಲ. ಆದಾಯ ತೆರಿಗೆ ನೀತಿ 80C ನಡಿ ಆದಾಯ ತೆರಿಗೆ ವಿನಾಯಿತಿ ಹೊಂದಿರುತ್ತಾರೆ.

ಈ ಸುದ್ದಿ ಓದಿ:- ಯಾವ ರಾಶಿಯವರಿಗೆ ಮ‌ನೆ ಕಟ್ಟುವ ಯೋಗ ಫಲ ಹೇಗಿದೆ……..?

ಇಷ್ಟೆಲ್ಲ ಅನುಕೂಲತೆ ಇರುವ ಈ ಯೋಜನೆ ಪ್ರಯೋಜನ ಬಡ ಹಾಗೂ ಸಾಮಾನ್ಯ ಕುಟುಂಬದ ವರ್ಗದವರಿಗೂ ಕೂಡ ಕೈಗೆಟಕುವಂತಿದೆ. ದೇಶದ ಎಲ್ಲಾ ಹೆಣ್ಣು ಮಕ್ಕಳಿಗೂ ಕೂಡ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಬಹಳ ವಿಶೇಷವಾಗಿ ರೂಪಿಸಿರುವ ಯೋಜನೆ ಇದಾಗಿದ್ದು ಈ ಯೋಜನೆ ಕುರಿತಾದ ಒಂದು ಬಿಗ್ ಅಪ್ಡೇಟ್ ಇದೆ ಅದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಅದೇನೆಂದರೆ, ಸುಕನ್ಯ ಸಮೃದ್ಧಿ ಯೋಜನೆಯಡಿ ಹೂಡಿಕೆ ಮಾಡುವುದಕ್ಕೆ ಇಂತಿಷ್ಟೇ ಮೊತ್ತದ ಪ್ರೀಮಿಯಂ ಕಟ್ಟಬೇಕು ಎನ್ನುವ ನಿಯಮ ಇಲ. ಲ ಪೋಷಕರು ತಮಗೆ ಅನುಕೂಲವಾದಾಗ ವಾರ್ಷಿಕವಾಗಿ ಗರಿಷ್ಟ 1.50 ಲಕ್ಷದವರೆಗೆ ಹಣ ಹೂಡಿಕೆ ಮಾಡಬಹುದು.

ಈ ಸುದ್ದಿ ಓದಿ:- ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ 2 ಲಕ್ಷ ಸಿಗುತ್ತೆ…|

ಆದರೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ ಹೂಡಿಕೆಯನ್ನು ಮಾಡದೆ ಇದ್ದಾಗ ಆ ಖಾತೆ ರದ್ದಾಗುತ್ತದೆ. ಪುನಃ ಅದನ್ನು ಸಕ್ರಿಯಗೊಳಿಸಿ ಮುಂದುವರಿಸಲು ದಂಡ ಕಟ್ಟಬೇಕಾಗುತ್ತದೆ. ಒಂದು ಆರ್ಥಿಕ ವರ್ಷದಲ್ಲಿ ಒಂದು ಬಾರಿಯಾದರೂ ಪೋಷಕರು ತಮ್ಮ ಮಕ್ಕಳ ಸುಕನ್ಯ ಸಮೃದ್ಧಿ ಯೋಜನೆ ಖಾತೆಗೆ ರೂ.250 ಪಾವತಿಸುವ ಮೂಲಕ ಅಕೌಂಟ್ ಚಾಲ್ತಿಯಲ್ಲಿ ಇಟ್ಟುಕೊಳ್ಳಬೇಕು.

ಒಂದು ವೇಳೆ ಒಂದು ಆರ್ಥಿಕ ವರ್ಷದಲ್ಲಿ ಈ ಕನಿಷ್ಠ ಮೊತ್ತದ ಹಣವನ್ನು ಕಟ್ಟದೆ ಇದ್ದಾಗ ಖಾತೆ ರದ್ದಾಗುತ್ತದೆ ನಂತರ ಅದನ್ನು ತೆರವು ಗೊಳಿಸಲು ರೂ.50 ದಂಡ ಕಟ್ಟಬೇಕಿರುತ್ತದೆ. ನೀವೇನಾದರೂ ನಿಮ್ಮ ಮಗಳ ಹೆಸರಿನಲ್ಲಿ ಈ ಯೋಜನೆ ಖಾತೆ ತೆರೆದಿದ್ದು ಏಪ್ರಿಲ್ 01, 2023 ರಿಂದ ಮಾರ್ಚ್ 31, 2024ರವರೆಗೆ ಒಂದು ಬಾರಿಯೂ ಕೂಡ ಖಾತೆಗೆ ಹಣ ಹಾಕಿಲ್ಲ ಎಂದರೆ ತಪ್ಪದೇ ಈಗಲೇ ಪಾವತಿ ಮಾಡಿ ಖಾತೆ ಚಾಲ್ತಿಯಲ್ಲಿರಿಸಿ.

LEAVE A REPLY

Please enter your comment!
Please enter your name here