Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ವಾಹನ ಮಾಲೀಕರುಗಳಿಗೆ ಪ್ರಮುಖ ಸುದ್ದಿ, HSRP ನೋಂದಣಿಗೆ ಪಾವತಿಸಬೇಕಾದ ಶುಲ್ಕದ ವಿವರ ಇಲ್ಲಿದೆ.! ಕಾರ್, ಬೈಕ್, ಆಟೋ, ಇನ್ನಿತರ ವಾಹನಗಳಿಗೆ ಎಷ್ಟು ಚಾರ್ಜಸ್ ಬೀಳಲಿದೆ ನೋಡಿ.!

Posted on February 20, 2024 By Kannada Trend News No Comments on ವಾಹನ ಮಾಲೀಕರುಗಳಿಗೆ ಪ್ರಮುಖ ಸುದ್ದಿ, HSRP ನೋಂದಣಿಗೆ ಪಾವತಿಸಬೇಕಾದ ಶುಲ್ಕದ ವಿವರ ಇಲ್ಲಿದೆ.! ಕಾರ್, ಬೈಕ್, ಆಟೋ, ಇನ್ನಿತರ ವಾಹನಗಳಿಗೆ ಎಷ್ಟು ಚಾರ್ಜಸ್ ಬೀಳಲಿದೆ ನೋಡಿ.!

 

ಸದ್ಯಕ್ಕೆ ರಾಜ್ಯದಲ್ಲಿ ಹೆಚ್ಚು ಚರ್ಚೆಯಲ್ಲಿರುವ ವಿಷಯ ಎಂದರೆ ಅದು HSRP (High Security Number Plate) ನಂಬರ್ ಪ್ಲೇಟ್ ವಿಚಾರ. ಕೇಂದ್ರ ಸರ್ಕಾರವು ದೇಶದ ಭದ್ರತೆ ಉದ್ದೇಶದಿಂದ ಮತ್ತು ಅಪರಾಧಿ ಚಟುವಟಿಕೆಗಳಲ್ಲಿ ಅನಧಿಕೃತ ವಾಹನಗಳು ಭಾಗಿಯಾಗುವುದನ್ನು ತಪ್ಪಿಸಲು HSRP ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದೆ.

2019 ಏಪ್ರಿಲ್ ಒಂದರ ನಂತರ ಬಂದ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆಯಾಗಿದೆ, ಆದರೆ ಅದಕ್ಕೂ ಮುನ್ನ ಖರೀದಿಸಿರುವ ವಾಹನಗಳಿಗೆ ಮಾಲೀಕರು ಬುಕಿಂಗ್ ಮಾಡಿ ತಮ್ಮ ಹತ್ತಿರದ ಡೀಲರ್ ಗಳನ್ನು ಸಂಪರ್ಕಿಸಿ ಈ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು. ನೂತನ HSRP ವಿಶೇಷತೆ ಏನೆಂದರೆ ಮೇಲೆ ಬರುವ ಅಶೋಕ ಚಕ್ರದ ಸಂಕೇತವು ನೀಲಿ ಬಣ್ಣದ ಹೊಲೋಗ್ರಾಮ್‌ನಲ್ಲಿ ಅಳವಡಿಸಲಾಗಿದೆ. ಇದು ರಾಷ್ಟ್ರೀಯ ಗೌರವವನ್ನು ಸೂಚಿಸುತ್ತದೆ.

ಫಲಕವು ಸ್ಪಷ್ಟ ಮತ್ತು ಓದಲು ಸುಲಭವಾಗಿದ್ದು ಅಂತಾರಾಷ್ಟ್ರೀಯ ನೋಂದಣಿ ಗುರುತನ್ನು ಒಳಗೊಂಡಿರುತ್ತದೆ. HSRP ಪ್ಲೇಟ್‌ಗೆ ರಾಜ್ಯ ಕೋಡ್‌, ಜಿಲ್ಲಾಕೋಡ್‌ ಮತ್ತು ಏಕಮಾತ್ರ ಆಲ್ಫಾ ನ್ಯೂಮರಿಕ್‌ ಗುರುತಿನ ಸಂಖ್ಯೆ ವಾಹನ ಗುರುತಿಸುವಿಕೆ ಸಂಖ್ಯೆ (VIN) ನೀಡಲಾಗಿದ್ದು, ಟ್ಯಾಂಪರ್‌-ಪ್ರೂಫ್‌ ಫಲಕಗಳಾಗಿವೆ.

ಈ ಸುದ್ದಿ ಓದಿ:- ಆಂಜನೇಯ ಸ್ವಾಮಿಗೆ ಇಷ್ಟ ಈ 8 ವಸ್ತು ಅರ್ಪಿಸಿ ಸಾಕು.! ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ ಖಂಡಿತ ಒಲಿಯುತ್ತಾನೆ ಮಾರುತಿ.!

ಇವುಗಳನ್ನು ಬದಲಾಯಿಸಲು ಅಥವಾ ತಿದ್ದಲು ಸಾಧ್ಯವಾಗುವುದಿಲ್ಲ. ಹೀಗಾಗಿ ವಾಹನ ನಿಯಮ ಉಲ್ಲಂಘನೆಗಳನ್ನು ಪತ್ತೆ ಹಚ್ಚಲು ಮತ್ತು ದಂಡ ವಿಧಿಸಲು ಈ ಫಲಕಗಳು ಕಾನೂನು ಜಾರಿ ಸಂಸ್ಥೆಗಳಿಗೆ ಸಹಾಯ ಮಾಡುತ್ತವೆ. ವಾಹನ ಅಪಘಾತಗಳ ಸಂದರ್ಭದಲ್ಲಿ ತನಿಖೆಗೆ ಫಲಕಗಳಲ್ಲಿನ ಮಾಹಿತಿಯನ್ನು ಬಳಸಬಹುದು, ಇದರ ಮುಖ್ಯ ಲಾಭವೇನೆಂದರೆ ಕಾನನ ಬಾಹಿರ ಚಟುವಟಿಕೆಗಳಿಗೆ ವಾಹನ ಬಳಕೆಯಾಗದಂತೆ ತಡೆಯಬಹುದು.

ಕರ್ನಾಟಕ ರಾಜ್ಯದಲ್ಲೂ ಕೂಡ ಆಗಸ್ಟ್ 17, 2023ರಿಂದ ವಾಹನ ಮಾಲೀಕರುಗಳಿಗೆ HSRP ಅಳವಡಿಕೆಗೆ ಮೂರು ತಿಂಗಳ ಕಾಲಾವಕಾಶವನ್ನು ನೀಡಿ ಮತ್ತೊಮ್ಮೆ ಈ ಗಡುವನ್ನು ಫೆಬ್ರವರಿ 17ರ ವರೆಗೆ ವಿಸ್ತರಿಸಲಾಗಿತ್ತು. ಆದರೆ ನಿನ್ನೆ ಮತ್ತೊಮ್ಮೆ ವಿಧಾನಸಭೆ ಕಲಾಪದಲ್ಲಿ ಇದೇ ವಿಷಯವು ಚರ್ಚೆಯಾಗಿ ಸಚಿವರೊಬ್ಬರು ಹಳ್ಳಿಗಳಲ್ಲಿ ಅನೇಕರಿಗೆ ಮಾಹಿತಿ ಕೊರತೆ ಇದೆ.

ಮತ್ತು ರಾಜ್ಯದಲ್ಲಿ ಎರಡು ಕೋಟಿಗೂ ಹೆಚ್ಚು ವಾಹನಗಳಿವೆ ಇವುಗಳಿಗೆ ಇಷ್ಟು ಕಡಿಮೆ ಅವಧಿಯಲ್ಲಿ ನಂಬರ್ ಪ್ಲೇಟ್ ಅಳವಡಿಕೆಗೆ ಸರ್ವರ್ ಸಮಸ್ಯೆ ಹಾಗೂ ಇನ್ನಿತರ ತಾಂತ್ರಿಕ ಸಮಸ್ಯೆಗಳು ಕೂಡ ಎದುರಾಗಿವೆ ಹಾಗಾಗಿ ಮತ್ತಷ್ಟು ಕಾಲಾವಕಾಶ ನೀಡಬೇಕು ಎನ್ನುವ ಮನವಿಯನ್ನು ಸಚಿವರು ಸಲ್ಲಿಸಿದ್ದಕ್ಕೆ ಒಪ್ಪಿಕೊಂಡ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರು ಮತ್ತೆ ಮೂರು ತಿಂಗಳವರೆಗೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ಕಾಲಾವಕಾಶ ನೀಡಿದ್ದಾರೆ.

ಈ ಸುದ್ದಿ ಓದಿ:- ನೊಂದು ಬಂದವರಿಗೆ ಪರಿಹಾರ ಕೊಡುವ ಹಾಸನದ ಈ ಪುರದಮ್ಮ.!

ಒಂದು ವೇಳೆ ಈ ಅವಧಿ ಒಳಗೆ ನಂಬರ್ ಅಳವಡಿಸಿಕೊಳ್ಳದೆ ಇದ್ದಲ್ಲಿ ಈ ಹಿಂದೆ ತಿಳಿಸಿದಂತೆ ಮೊದಲ ಬಾರಿ ಪೊಲೀಸರಿಗೆ ಸಿಕ್ಕಿಬಿದ್ದಲ್ಲಿ ರೂ.1000, ಎರಡನೇ ಬಾರಿ ಸಿಕ್ಕಿಬಿದ್ದಲ್ಲಿ ರೂ.2000 ಹೀಗೆ ದಂಡ ಬೀಳಲಿದೆ ಮತ್ತು ವಾಹನ ಮಾರಾಟ ಮಾಡುವಾಗ ಸಮಸ್ಯೆಯಾಗಲಿದೆ. ಇದನ್ನು ತಪ್ಪಿಸಲು ಸರ್ಕಾರದ ನಿಯಮವನ್ನು ಪಾಲಿಸಿ. HSRP ನಂಬರ್ ಪೆಟ್ ಅಳವಡಿಕೆಗೆ ಆನ್ಲೈನ್ ನಲ್ಲಿ ಬುಕಿಂಗ್ ಮಾಡಲು ಅವಕಾಶ ನೀಡಲಾಗಿದೆ.

ಸಾರಿಗೆ ಇಲಾಖೆ ಅಧಿಕೃತ ವೆಬ್ಸೈಟ್ https://transport.karnataka.gov.in ಅಥವಾ www.siam.in ಮೂಲಕ ಮಾತ್ರ ನೋಂದಣಿಯ ಮಾಡಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ ಮತ್ತು ಇದಕ್ಕೆ ನಿಗದಿಪಡಿಸಿರುವ ಶುಲ್ಕವನ್ನು ಕೂಡ ಆನ್ಲೈನ್ ಮೂಲಕವೇ ಪಾವತಿ ಮಾಡಬೇಕು ಈ ಪ್ರಕಾರವಾಗಿ ಯಾವ ವಾಹನಗಳಿಗೆ ಎಷ್ಟು ಶುಲ್ಕ ತಗಲುತ್ತದೆ, ಎನ್ನುವ ಮಾಹಿತಿ ಹೇಗಿದೆ ನೋಡಿ.

ದ್ವಿಚಕ್ರ ವಾಹನಗಳಿಗೆ – ರೂ.450 ರಿಂದ ರೂ.550
ತ್ರಿ ಚಕ್ರ ವಾಹನಗಳಿಗೆ – ರೂ.450 ರಿಂದ ರೂ.550
4 ವೀಲರ್ – ರೂ.650 ರಿಂದ ರೂ.780
ಲಾರಿ, ಬಸ್, 10 ವೀಲರ್ – 650 ರಿಂದ ರೂ.800

ಈ ಸುದ್ದಿ ಓದಿ:- ಹೆಣ್ಣು ಮಕ್ಕಳ ಪೋಷಕರಿಗೆ ಮಹತ್ವದ ಸುದ್ದಿ, ಮಾರ್ಚ್ 31ರ ಒಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಮಗಳ ಸುಕನ್ಯಾ ಸಮೃದ್ಧಿ ಯೋಜನೆ ಅಕೌಂಟ್ ರದ್ದಾಗುತ್ತದೆ.!
Useful Information
WhatsApp Group Join Now
Telegram Group Join Now

Post navigation

Previous Post: ಆಂಜನೇಯ ಸ್ವಾಮಿಗೆ ಇಷ್ಟ ಈ 8 ವಸ್ತು ಅರ್ಪಿಸಿ ಸಾಕು.! ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ ಖಂಡಿತ ಒಲಿಯುತ್ತಾನೆ ಮಾರುತಿ.!
Next Post: ಬೆಳ್ಳಿಯ ಉಂಗುರವನ್ನು ಧರಿಸುವವರಿಗೆ ಈ 9 ಅದ್ಭುತ ಲಾಭಗಳು ಸಿಗುತ್ತವೆ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore