ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಇಂದಿಗೆ 75 ವರ್ಷಗಳಾಗಿದೆ ಹಾಗಾಗಿ ಈ ಒಂದು 75ನೇ ವರ್ಷದ ಪ್ರಯುಕ್ತ ಪ್ರಧಾನ ಮೋದಿಯವರು ಅರ್ ಘರ್ ತಿರಂಗ ಎಂಬ ಹೊಸ ಯೋಜನೆಯನ್ನು ಆಯೋಜನೆಗೆ ತಂದರು. ಈ ಒಂದು ಯೋಜನೆಯ ಮೂಲ ಉದ್ದೇಶ ಎಂದರೆ ಭಾರತದ ಪ್ರತಿಯೊಬ್ಬ ಪ್ರಜೆಯೂ ಕೂಡ ಭಾರತದ ರಾಷ್ಟ್ರ ಧ್ವಜವನ್ನು ಆರಾಡಿಸುವಂತಹದು. ಸಾಮಾನ್ಯವಾಗಿ ನಮ್ಮಲ್ಲಿ ಸ್ವತಂತ್ರ ದಿನಾಚರಣೆ ಬಂದರೆ ನಾವು ಓದುತ್ತಿದ್ದಂತಹ ಶಾಲೆ ಕಾಲೇಜು ಸರ್ಕಾರಿ ಕಚೇರಿ ಅಥವಾ ಇನ್ನಿತರ ಸಾರ್ವಜನಿಕ ಸ್ಥಳದಲ್ಲಿ ಮಾತ್ರ ಧ್ವಜಾರೋಹಣ ಮಾಡಲಾಗುತ್ತಿದ್ದು. ಈ ದ್ವಜಾರೋಹಣಕ್ಕೆ ಕೆಲವು ಸದಸ್ಯರು ಹೋಗುತ್ತಿದ್ದರು ಇನ್ನು ಕೆಲವು ಸದಸ್ಯರು ಹೋಗುತ್ತಿರಲಿಲ್ಲ. ಹಾಗಾಗಿ ಈ ಉದ್ದೇಶವನ್ನು ಮತ್ತು ಈ ನಿಯಮವನ್ನು ಬದಲಾಯಿಸಬೇಕು ಎಂಬ ಕಾರಣದಿಂದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೊಸದೊಂದು ಯೋಜನೆಗೆ ಚಾಲನೆ ನೀಡಿದರು.
ಹೌದು ಆ ಯೋಜನೆಯೇ ಹರ್ ಘರ್ ತಿರಂಗ ಈ ಒಂದು ಯೋಜನೆಯ ಮೂಲಕ ಇದೀಗ ಭಾರತದ ಎಲ್ಲಾ ಮನೆ ಮನೆಗಳಲ್ಲಿಯೂ ಕೂಡ ರಾಷ್ಟ್ರ ಧ್ವಜ ಹರಡುತ್ತಿದೆ. ಮೊದಲೆಲ್ಲ ಒಂದು ಪ್ರದೇಶದಲ್ಲಿ ಮಾತ್ರ ಸೀಮಿತವಾಗಿ ಇದ್ದಂತಹ ಧ್ವಜಾರೋಹಣ ಇದೀಗ ಪ್ರತಿ ಮನೆಯಲ್ಲೂ ಕೂಡ ರಾರಾಜಿಸುತ್ತಿದೆ. ಅಷ್ಟೇ ಅಲ್ಲದೆ ಕೆಲವು ಜನರು ಈ ಒಂದು ರಾಷ್ಟ್ರಧ್ವಜ ಹಾರಾಡಿಸುವಾಗ ಭಾಗಿಯಾಗುತ್ತಿದ್ದರು ಇನ್ನು ಕೆಲವು ಜನ ಬಾಗಿಯಾಗುತ್ತಿರಲಿಲ್ಲ. ಆದರೆ ಈಗ ಎಲ್ಲರೂ ಕೂಡ ತಮ್ಮ ಮನೆಯಲ್ಲಿ ರಾಷ್ಟ್ರಧ್ವಜವನ್ನು ಕಟ್ಟುವುದರ ಮೂಲಕ ಎಲ್ಲರೂ ಕೂಡ ಪಾಲ್ಗೊಳ್ಳುತ್ತಿದ್ದರೆ. ಪ್ರತ್ಯೇಕ್ಷವಾಗಿ ಮತ್ತು ಪರೋಕ್ಷವಾಗಿ ಎಲ್ಲರಲ್ಲೂ ಕೂಡ ದೇಶದ ಮೇಲೆ ಭಾವೈಕ್ಯತೆ ಮೂಡುತ್ತಿರುವುದು ಸತ್ಯ.
ಇನ್ನು ನಮ್ಮ ಸ್ಯಾಂಡಲ್ ವುಡ್ ನ ವಿಚಾರಕ್ಕೆ ಬರುವುದಾದರೆ ಕೇವಲ ಸಾಮಾನ್ಯರು ಮಾತ್ರವಲ್ಲದೆ ಸ್ಯಾಂಡಲ್ ವುಡ್ನ ಸಾಕಷ್ಟು ಸೆಲೆಬ್ರೆಟಿಗಳು ತಮ್ಮ ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಾಡಿಸುವ ಮೂಲಕ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ಚಾಲನೆ ಕೊಟ್ಟಿದ್ದಾರೆ. ಅದರಲ್ಲಿಯೂ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಇಬ್ಬರು ಮಕ್ಕಳೊಂದಿಗೆ ತಮ್ಮ ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಾಡಿಸಿದ್ದಾರೆ. ಅಷ್ಟೇ ಅಲ್ಲದೆ ಮೇಘನಾ ರಾಜ್ ಹಾಗೂ ಅವರ ಮಗ ಆದಂತಹ ಸರ್ಜಾ ಅವರು ಕೂಡ ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಇನ್ನು ಸ್ಯಾಂಡಲ್ವುಡ್ ನ ಮೋಸ್ಟ್ ಬ್ಯೂಟಿಫುಲ್ ನಟಿ ಅಂತಾನೆ ಹೆಸರು ಪಡೆದಂತಹ ಹರ್ಷಿಕ ಪೂಣಚ್ಛ ಅವರು ಕೂಡ ವಿಧಾನಸೌಧದ ಮುಂದೆ ನಿಂತು ಭಾರತದ ಧ್ವಜವನ್ನು ಹಾರಿಸಿ ಸಂಭ್ರಮಾಚರಣೆ ಮಾಡಿದ್ದಾರೆ.
ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರು ಕೂಡ ಸಾರ್ವಜನಿಕ ಸ್ಥಳಕ್ಕೆ ಭೇಟಿ ನೀಡಿ ಬಾವುಟವನ್ನು ಹಾರಿಸುವುದರ ಮೂಲಕ ನಮ್ಮ ದೇಶಕ್ಕೆ ಮತ್ತು ನಮ್ಮ ರಾಷ್ಟ್ರಧ್ವಜಕ್ಕೆ ಗೌರವವನ್ನು ಸಲ್ಲಿಸಿದರೆ. ಕೇವಲ ಇದಿಷ್ಟು ಜನ ಮಾತ್ರವಲ್ಲದೆ ಕಿಚ್ಚ ಸುದೀಪ್ ನಟ ದರ್ಶನ್ ಶಿವರಾಜ್ ಕುಮಾರ್ ಉಪೇಂದ್ರ ಹೀಗೆ ಕನ್ನಡದ ಸಾಕಷ್ಟು ನಟ ನಟಿಯರು ತಮ್ಮ ಮನೆಯಲ್ಲಿಯೇ ರಾಷ್ಟ್ರಧ್ವಜವನ್ನು ಹಾರಾಟ ಮಾಡಿದ್ದಾರೆ,.
ನಿಜಕ್ಕೂ ಕೂಡ ಇದೊಂದು ಅಭೂತಪೂರ್ವ ಸಂಗಮ ಹಾಗೂ ಅಭೂತ ಪೂರ್ವವಾದಂತಹ ಯೋಜನೆ ಅಂತಾನೇ ಹೇಳಬಹುದು. ಒಂದು ವೇಳೆ ಈ ಯೋಜನೆಯನ್ನು ಆಚರಣೆಗೆ ತರದಿದ್ದರೆ ಇಂದು ಯಾರೂ ಕೂಡ ಅಷ್ಟಾಗಿ ಸ್ವತಂತ್ರ ದಿನಾಚರಣೆಯನ್ನು ಸಂಭ್ರಮಿಸುತ್ತ ಇರಲಿಲ್ಲ ಅಂತ ಅನಿಸುತ್ತದೆ. ಸೆಲೆಬ್ರಿಟಿಗಳ ಮನೆಯಲ್ಲಿ ರಾರಾಜಿಸುತ್ತಿರುವಂತಹ ಈ ರಾಷ್ಟ್ರಧ್ವಜ ನಿಮಗೆ ಇಷ್ಟ ಆದರೆ ತಪ್ಪದೇ ಈ ಲೇಖನಕ್ಕೆ ಲೈಕ್ ಕೊಟ್ಟು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.