ದೇವರ ಪೂಜೆ ಮಾಡುವಾಗ ಸಾಧ್ಯವಾದಷ್ಟು ನಮ್ಮ ಕೈಯಾರೆ ತಯಾರಿಸಿದ ಪದಾರ್ಥಗಳನ್ನು ಬಳಸಬೇಕು. ಸಾಧ್ಯವಾದರೆ ನಮ್ಮ ಕೈ ತೋಟದಲ್ಲಿ ಬೆಳೆಸಿದ ಹೂಗಳನ್ನು ದೇವರಿಗೆ ಅರ್ಪಿಸುವುದು ಅಥವಾ ನಮ್ಮ ಹಿತ್ತಲಲ್ಲಿ ಬೆಳೆಸಿದ ಗಿಡಮರಗಳಿಂದ ಫಲಪುಷ್ಪಗಳನ್ನು ತಂದು ಅರ್ಪಿಸುವುದು, ದೇವರ ಮನೆಯ ಪೂಜೆಗೆ ಬೇಕಾದ ವಸ್ತುಗಳನ್ನು ನಾವೇ ಸಿದ್ಧಪಡಿಸಿಕೊಳ್ಳುವುದು ಈ ರೀತಿ ಮಾಡುವುದರಿಂದ ಅಂಗಡಿಯಿಂದ ಖರೀದಿಸಿ ತಂದು ಪೂಜೆ ಮಾಡಿದ್ದಕ್ಕಿಂತ ಹೆಚ್ಚು ಫಲ ಸಿಗುತ್ತದೆ ಮತ್ತು ಶೀಘ್ರವಾಗಿ ಸಿಗುತ್ತದೆ ಎನ್ನುವ ಮಾತನ್ನು ಹಿರಿಯರು ಹೇಳುತ್ತಾರೆ.
ನೀವೀಗ ದೇವರಿಗೆ ಸಾಂಬ್ರಾಣಿ ಹಚ್ಚಬೇಕು ಎಂದಿದ್ದರೆ ಅದನ್ನು ಕೂಡ ನಿಮ್ಮ ಮನೆಯಲ್ಲಿಯೇ ಇರುವ ಕೆಲ ವಸ್ತುಗಳಿಂದ ಒಣಗಿದ ಹೂಗಳಿಂದಲೇ ತಯಾರಿಸಿಕೊಳ್ಳಬಹುದು. ಪ್ರತಿಯೊಬ್ಬರ ಮನೆಯಲ್ಲೂ ಕೂಡ ಹೂವುಗಳನ್ನು ಬೆಳಸುತ್ತಾರೆ, ಅಥವಾ ಖರೀದಿಸಿ ತರುತ್ತಾರೆ. ಈ ರೀತಿ ಪೂಜೆಗೆ ಬಳಸಿದ ಹೂವನ್ನು ಒಣಗಿದ ಮೇಲೆ ತೆಗೆದು ಕಸಕ್ಕೆ ಹಾಕುವುದು ಅಥವಾ ಎಲ್ಲೋ ಬಿಸಾಡುವ ಬದಲು ಅದರಿಂದ ಮತ್ತೊಂದು ವಸ್ತುವನ್ನು ಮಾಡಿಕೊಳ್ಳಬಹುದು.
ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೇ ಇರಲು ಇದೇ ಮುಖ್ಯವಾದ ಕಾರಣ.!
ಇದನ್ನು ಮಾಡುವುದು ಬಹಳ ಸರಳ. ಮೊದಲಿಗೆ ಒಂದು ಜಾರ್ ಹಿಡಿಯುವಷ್ಟು ಒಣಗಿದ ಗುಲಾಬಿ ಹೂವಿನ ದಳಗಳು ಅಥವಾ ಚೆಂಡು ಮಲ್ಲಿಗೆ ಹೂವಿನ ದಳಗಳನ್ನು ತೆಗೆದುಕೊಳ್ಳಿ. ಒಂದೇ ಬಗೆಯ ಹೂವನ್ನು ಒಣಗಿಸಿ ತೆಗೆದುಕೊಳ್ಳಬಹುದು ಅಥವಾ ಎರಡು ಹೂಗಳನ್ನು ಮಿಕ್ಸ್ ಮಾಡಿ ಕೂಡ ತೆಗೆದುಕೊಳ್ಳಬಹುದು. ಆದರೆ ಚೆನ್ನಾಗಿ ಒಣಗಿರಬೇಕು ಈಗ ಅದನ್ನು ಮಿಕ್ಸಿ ಜಾರಿಗೆ ಹಾಕಿ ಏಳೆಂಟು ಪಚ್ಚ ಕರ್ಪೂರ ಹಾಕಿ, ಕರ್ಪೂರಕ್ಕೆ ಒಳ್ಳೆಯ ಸುವಾಸನೆ ಕೊಡುತ್ತದೆ ಪಲಾವ್ ಎಲೆ ಇದ್ದರೂ ಕೂಡ ಹಾಕಬಹುದು ಇಲ್ಲದಿದ್ದರೆ ಸ್ಕಿಪ್ ಕೂಡ ಮಾಡಬಹುದು.
ನಂತರ ಐದಾರು ಏಲಕ್ಕಿ ಕೂಡ ಹಾಕಿ ಸಾಂಬ್ರಾಣಿ ಹೊಗೆ ಸೇವಿಸಿದ ಮೇಲೆ ಕಫ ಬರುತ್ತದೆ ಎನ್ನುವ ಭಯ ಇರುವವರು, ಏಲಕ್ಕಿ ಬೆರೆಸಿದರೆ ಅಂತಹ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದಾದ ಬಳಿಕ ಅದಕ್ಕೆ 2 ರಿಂದ 3 ಚಮಚದಷ್ಟು ಸಾಂಬ್ರಾಣಿ ಪುಡಿ ಹಾಕಿ ಕೊನೆಯಲ್ಲಿ ಒಂದೆರಡು ಚಮಚ ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ ಒಂದು ಚಮಚ ಶುದ್ಧ ಹಸುವಿನ ತುಪ್ಪವನ್ನು ಹಾಕಿ ಸ್ವಲ್ಪ ಸ್ವಲ್ಪ ನೀರು ಮಿಕ್ಸ್ ಮಾಡಿಕೊಂಡು ಇದನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
ನೀವು ಮಿಕ್ಸ್ ಮಾಡಿದ ಮಿಶ್ರಣವು ಕೋನ್ ಶೇಪ್ ಬರಬೇಕು ಆ ಹದದವರೆಗೂ ಕೂಡ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಂಡು ಬನ್ನಿ. ಕೊನೆಯಲ್ಲಿ ಒಂದು ಪ್ಲಾಸ್ಟಿಕ್ ಪೇಪರ್ ತೆಗೆದುಕೊಂಡು ಚಿಕ್ಕದಾಗಿ ಕಟ್ ಮಾಡಿಕೊಳ್ಳಿ ಅದನ್ನು ಕೋನ್ ಶೇಪ್ ರೀತಿ ಮಾಡಿಕೊಂಡು ಅದರ ಒಳಗಡೆ ನೀವು ಮಿಕ್ಸ್ ಮಾಡಿ ಇಟ್ಟಿರುವ ಮಿಶ್ರಣವನ್ನು ತುಂಬಿ ಕೋನ್ ಶೇಪ್ ಸಾಂಬ್ರಾಣಿ ಮಾಡಿ.
ಈಗ ಅದನ್ನು ಹೊರಗಡೆ ಬಿಸಿಲಿನಲ್ಲಿ ಒಣಗಲು ಇಡಿ ತುಂಬಾ ಬಿಸಿಲಿದ್ದರೆ ಮೂರು ದಿನ ಇಲ್ಲದಿದ್ದರೆ ಆರೇಳು ದಿನ ಚೆನ್ನಾಗಿ ಒಣಗಿಸಿ. ಚೆನ್ನಾಗಿ ಒಣಗಿದ ಮೇಲೆ ಇದನ್ನು ತಟ್ಟಿಯಲ್ಲಿ ಹಾಕಿದಾಗ ಸೌಂಡ್ ಬರುತ್ತದೆ ಆಗ ಹದವಾಗಿದೆ ಎಂದರ್ಥ. ಈ ರೀತಿ ಚೆನ್ನಾಗಿ ಒಣಗಿದರೆ ಅದು ಪೂರ್ತಿಯಾಗಿ ಉರಿಯುತ್ತದೆ ಇಲ್ಲವಾದಲ್ಲಿ ಸ್ವಲ್ಪ ಉರಿದು ಹಾರಿಹೋಗುತ್ತದೆ. ಮೆರುನ್ ಬಣ್ಣದಿಂದ ಬೂದು ಬಣ್ಣಕ್ಕೆ ತಿರುಗುತ್ತದೆ ಅಲ್ಲಿಯವರೆಗೂ ಚೆನ್ನಾಗಿ ಒಣಗಿಸಿ ನಂತರ ಈ ಕೋನ್ ಸಾಂಬ್ರಾಣಿಯನ್ನು ಪೂಜೆಗೆ ಬಳಸಿ.