ಜನಸಾಮಾನ್ಯರು ಮಾತನಾಡುವಾಗ ಯಾವುದಾದರೂ ವ್ಯಕ್ತಿಯೊಬ್ಬ ಯಾವುದಾದರೂ ಅಪಾಯದಿಂದ ಪಾರಾದರೆ ಅಥವಾ ಯಾವುದಾದರೂ ಯಾರಿಗಾದರೂ ಅನಿರೀಕ್ಷಿತ ಲಾಭ ಉಂಟಾದರೆ ನೀನು ಹೋದ ಜನ್ಮದಲ್ಲಿ ಮಾಡಿರುವ ಪುಣ್ಯ ಎಂದು ಹೇಳಿರುವುದನ್ನು ಕೇಳಿರುತ್ತೇವೆ, ಹಾಗಾದರೆ ಇದೆಲ್ಲ ನಿಜವೇ ಎನ್ನುವ ಅನುಮಾನ ಹುಟ್ಟುತ್ತದೆ.
ನಮಗೆ ಕ’ಷ್ಟಗಳು ಎದುರಾದಾಗ ಅಥವಾ ಸಮಸ್ಯೆಗಳಾದಾಗ ನಿನ್ನ ಹಣೆಬರದಲ್ಲಿ ಬರೆದದ್ದು ಆಯಿತು ಎಂದು ಹೇಳುತ್ತಾರೆ ಹಾಗಾದರೆ ಎಲ್ಲವೂ ಮೊದಲೇ ನಿರ್ಧಾರವಾಗಿರುತ್ತದೆಯೇ ಈ ಬಗ್ಗೆ ಸ್ಪಷ್ಟ ಉತ್ತರ ಯಾರಿಂದಲೂ ಸಿಗದು ಆದರೆ ಪುರಾಣಗಳಲ್ಲಿ ನಾವಿದಕ್ಕೆ ಉತ್ತರಗಳನ್ನು ಹುಡುಕಬಹುದು.
ಅದರಲ್ಲೂ ಗರುಡ ಪುರಾಣವು ಇದರ ಬಗ್ಗೆ ವಿವರವಾಗಿ ತಿಳಿಸುತ್ತದೆ. ಗರುಡ ಪುರಾಣ ಹಾಗೂ ಚಾಣಕ್ಯರ ನೀತಿ ಪ್ರಕಾರವಾಗಿ ನಮ್ಮ ಹುಟ್ಟು,
ಸಾವು, ಬದುಕು, ಪಾಪ, ಪುಣ್ಯ ಇದೆಲ್ಲದರ ಕುರಿತಾದ ಕೆಲ ಸಂಗತಿಗಳನ್ನು ಈ ಅಂಕಣದಲ್ಲಿ ತಿಳಿಸ ಬಯಸುತ್ತಿದ್ದೇವೆ.
ಗರುಡ ಪುರಾಣವು ಹೇಳುವ ಪ್ರಕಾರ ಮಗು ತನ್ನ ತಾಯಿ ಹೊಟ್ಟೆಯಲ್ಲಿ ಭ್ರೂಣಾವಸ್ಥೆಯಲ್ಲಿ ಇರುವಾಗಲೇ ಯಾವಾಗ ಜನನವಾಗಬೇಕು? ಆತನಿಗೆ ಆಯಸ್ಸು ಎಷ್ಟಿರುತ್ತದೆ? ಹುಟ್ಟಿದ ಮೇಲೆ ಎಷ್ಟು ಯಶಸ್ಸು ಪಡೆಯುತ್ತಾರೆ? ಎಷ್ಟು ವಿದ್ಯಾಭ್ಯಾಸ ಪಡೆಯುತ್ತಾರೆ? ಹೆಣ್ಣು ಹೊನ್ನು ಮಣ್ಣಿನ ಋಣ ಎಷ್ಟಿದೆ ಎನ್ನುವುದು ನಿರ್ಧಾರ ಆಗಿರುತ್ತದೆಯಂತೆ.
ಹಾಗಾದರೆ ಇದೆಲ್ಲ ಮೊದಲೇ ನಿರ್ಧಾರವಾಗಿದ್ದರೆ ನಾವು ಯಾಕೆ ಕ’ಷ್ಟ ಪಡಬೇಕು ಎಲ್ಲರೂ ಸುಮ್ಮನಿರಬಹುದಲ್ಲ ಎಂದು ಬುದ್ಧಿವಂತರು ಪ್ರಶ್ನೆ ಮಾಡಿಯೇ ಮಾಡುತ್ತಾರೆ. ಆದರೆ ನಿಧಾನವಾಗಿ ಇದನ್ನು ಚಿಂತಿಸಿ ನೋಡಿದರೆ ಈ ಪ್ರಶ್ನೆಯ ಜಟಿಲತೆ ತಿಳಿಯಾಗುತ್ತದೆ. ಇದಕ್ಕೆ ಮಹಾಭಾರತದಲ್ಲಿ ಬರುವ ಒಂದು ವಾಕ್ಯವನ್ನು ಕೂಡ ನಾವು ನೆನೆಯಬಹುದು.
ಇದೇ ವಿಚಾರವಾಗಿ ಅರ್ಜುನರು ಒಮ್ಮೆ ಶ್ರೀ ಕೃಷ್ಣನನ್ನು ಎಲ್ಲವೂ ಪೂರ್ವದಲ್ಲೇ ನಿರ್ಧಾರವಾಗಿದ್ದರೆ ನಾವು ಏಕೆ ಕರ್ಮಗಳನ್ನು ಮಾಡಬೇಕು, ಪ್ರಯತ್ನಗಳನ್ನು ಮಾಡಬೇಕು ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಶ್ರೀ ಕೃಷ್ಣ ಕೊಟ್ಟ ಉತ್ತರ ಹೇಳಿ ಏನಿತ್ತು ಗೊತ್ತಾ? ಹೌದು, ಮಧ್ಯಮ ಪಾಂಡವ ಎಲ್ಲವೂ ಮೊದಲೇ ನಿರ್ಧಾರವಾಗಿರುತ್ತದೆ.
ಆ ಪ್ರಕಾರವಾಗಿ ನಿನಗೆ ಯಾವುದು ಸಿಗಬೇಕು ಎಂದು ನಿನ್ನ ಯೋಗದಲ್ಲಿ ಇದೆಯೋ ಅದು ಸಿಕ್ಕೇ ಸಿಗುತ್ತದೆ ಆದರೆ ನಿನ್ನ ಹಣೆಬರಹ ಏನಿದೆ ಎಂದು ನಿನಗೆ ಗೊತ್ತಿಲ್ಲ ನಿನ್ನ ಹಣೆಬರಹದಲ್ಲಿ ನೀನು ಪ್ರಯತ್ನ ಪಟ್ಟರೆ ಮಾತ್ರ ಸಿಗುತ್ತದೆ ಎಂದು ಬರೆದಿದ್ದರೆ ನಿನ್ನ ಕೈತಪ್ಪಿ ಹೋಗುವುದಲ್ಲವೇ ಅದಕ್ಕಾಗಿ ನೀನು ಕೆಲಸ ಕಾರ್ಯಗಳನ್ನು ಮಾಡಿ ನಿನಗೆ ಬೇಕಾದದ್ದನ್ನು ದಕ್ಕಿಸಿಕೊಳ್ಳಬೇಕು.
ಆದರೆ ಅದು ನ್ಯಾಯ ಮಾರ್ಗದಲ್ಲಿ, ಧರ್ಮ ಮಾರ್ಗದಲ್ಲಿ ಇರಬೇಕು ನೀನು ಮಾಡುವ ಆ ಕರ್ಮವು ಯಾವ ಆಧಾರದಲ್ಲಿ ಇದೆ ಎನ್ನುವುದರ ಮೇಲೆ ನಿನ್ನ ಪಾಪ ಪುಣ್ಯ ನಿರ್ಧಾರ ಆಗುತ್ತದೆ ಎಂದು ಹೇಳುತ್ತಾರೆ. ಮನುಷ್ಯ ಜನ್ಮವು ಬಹಳ ಶ್ರೇಷ್ಠವಾದ ಧರ್ಮ. ಹಾಗೆಯೇ ವೈಜ್ಞಾನಿಕವಾಗಿ ಕೂಡ ಎಲ್ಲಾ ಪ್ರಾಣಿಗಳಿಗಿಂತಲೂ ಮನುಷ್ಯನೇ ಬುದ್ಧಿವಂತ.
ಹೀಗಿದ್ದರೂ ಮನುಷ್ಯರಲ್ಲಿ ಇರುವಷ್ಟು ನಕಾರಾತ್ಮಕತೆ ಬೇರೆ ಯಾವ ಜೀವಿಯಲ್ಲೂ ಇಲ್ಲ. ಪ್ರತಿಯೊಂದು ಜೀವಿಯು ತನ್ನ ಆಹಾರಕ್ಕಾಗಿ ಅಥವಾ ರಕ್ಷಣೆಗಾಗಿ ಕ’ಷ್ಟಪಡುತ್ತದೆ, ಮನುಷ್ಯನೊಬ್ಬ ಮಾತ್ರ ದುರಾಸೆಗಾಗಿ ಬದುಕುತ್ತಾನೆ. ಆದರೆ ಇಂತಹ ಅತಿಯಾದ ಆಕಾಂಕ್ಷೆಗಳನ್ನು ಇಟ್ಟುಕೊಂಡು ಅಧರ್ಮದ ಮಾರ್ಗದಲ್ಲಿ ನಡೆದು ಯಾರಿಗಾದರೂ ಮೋ’ಸ, ವಂ’ಚ’ನೆ, ದ್ರೋ’ಹ ಮಾಡಿದರೆ ಅದನ್ನು ಮರು ಜನ್ಮ ಎತ್ತಿ ತೀರಿಸಲೇಬೇಕು ಎಂದು ಹೇಳುತ್ತದೆ ಗರುಡ ಪುರಾಣ.
ಗರುಡ ಪುರಾಣದ ಪ್ರಕಾರವಾಗಿ ಧರ್ಮ ಮಾರ್ಗವಾಗಿ ನಡೆಯದೆ ಧರ್ಮ ಗ್ರಂಥಗಳಲ್ಲಿ ಇರುವುದನ್ನು ಅನುಸರಿಸದೆ ಅದಕ್ಕೆ ಅಪಚಾರ ಮಾಡಿದರೆ ಅಂತವರು ನಾಯಿ ಜನ್ಮ ತಾಳುತ್ತಾರೆ ಹಾಗೂ ಆತ್ಮೀಯರೇ ಆಗಿದ್ದುಕೊಂಡು ವಂಚನೆ ಮಾಡಿದರೂ ಅಂತಹವರು ರಣಹದ್ದುಗಳಾಗಿ ಹುಟ್ಟುತ್ತಾರೆ ಎಂಬಿತ್ಯಾದಿಯಾಗಿ ಬರೆಯಲಾಗಿದೆ ಮತ್ತು ಚಾಣಕ್ಯರು ಕೂಡ ಮನುಷ್ಯನಾದವನು ನ್ಯಾಯ ನೀತಿ ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದು ಸಾರಿದ್ದಾರೆ.