ಮಂಗಳಮುಖಿಯರನ್ನು ಅರ್ಧನಾರೀಶ್ವರ ಎಂದು ಕೆಲವರು ಗೌರವ ಕೊಡುತ್ತಾರೆ. ಆದರೆ ಈ ಸಮಾಜದಲ್ಲಿ ಅನೇಕರು ಮಂಗಳಮುಖಿಯರು ಎಂದರೆ ಕೇವಲವಾಗಿ ನೋಡುವವರು ಇದ್ದಾರೆ. ಯಾಕೆಂದರೆ ಅವರು ನೋಡಿದ ಕಡೆಯೆಲ್ಲ ಸಿಗುತ್ತಾರೆ, ರೈಲ್ವೆ ಸ್ಟೇಷನ್ಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಟ್ರಾಫಿಕ್ ಸಿಗ್ನಲ್ ನಲ್ಲಿ ಬಂದು ಹಣಕ್ಕಾಗಿ ಪೀಡಿಸುತ್ತಾರೆ.
ಎಂದು ಅವರ ಮೇಲೆ ಹೆಚ್ಚಿನವರಿಗೆ ಕೋ’ಪ ಆದರೆ ಅವರಿಗೆ ಸೂಕ್ತವಾದ ಸ್ಥಾನಮಾನಗಳನ್ನು ಸಮಾಜ ನೀಡಿ ಉದ್ಯೋಗವಕಾಶ ಕೊಡದ ಕಾರಣ ಅನಿವಾರ್ಯವಾಗಿ ಜೀವನ ನಿರ್ವಹಣೆಗೆ ಅವರು ಇಂತಹ ಸ್ಥಿತಿ ತಲುಪಿದ್ದಾರೆ ಎಂದು ಭಾವಿಸಬಹುದು.
ಮಂಗಳಮುಖಿಯರು ಕೂಡ ಭಗವಂತನ ಸೃಷ್ಟಿ ಅವರಿಗೂ ಕೂಡ ಎಲ್ಲರಂತೆ ಪ್ರೀತಿ ಗೌರವ ನೀಡಬೇಕು, ಅವರು ಹಣ ಕೇಳಿದಾಗ ಅದರಿಂದ ಅವರಿಗೂ ಒಳ್ಳೆಯದಾಗುತ್ತದೆ ನಮಗೂ ಒಳ್ಳೆಯದಾಗುತ್ತದೆ. ಕೊಡದೆ ಇದ್ದರೆ ಶಾ’ಪ ಹಾಕುತ್ತಾರೆ, ಈ ಶಾ’ಪ ನಿಜವಾಗುತ್ತದಾ ಅಥವಾ ಅವರ ದರ್ಶನವಾದರೆ ಅದು ಒಳ್ಳೆಯದಾ ಕೆಟ್ಟದ್ದಾ ಎನ್ನುವ ಅನುಮಾನ ಅನೇಕರಿಗೆ ಇದೆ, ಅದಕ್ಕೆ ಉತ್ತರ ಹೀಗಿದೆ ನೋಡಿ.
ನೀವು ಯಾವುದಾದರು ಮುಖ್ಯವಾದ ಕೆಲಸಕ್ಕಾಗಿ ಮನೆಯಿಂದ ಹೊರಟು ಮಾರ್ಗಮಧ್ಯದಲ್ಲಿ ಮಂಗಳಮುಖಿಯರ ದರ್ಶನವಾದರೆ ಅದು ಶುಭಫಲ ಎಂದು ಹೇಳಲಾಗುತ್ತದೆ. ಮಂಗಳಮುಖಿಯರ ದರ್ಶನದಿಂದ ಯಾವುದೇ ರೀತಿಯ ಕೆಟ್ಟದಾಗುವುದಿಲ್ಲ, ಅವರ ಆಶೀರ್ವಾದ ಪಡೆದುಕೊಳ್ಳುವುದರಿಂದ ಖಂಡಿತವಾಗಿಯೂ ನೀವು ಹೋಗುವ ಕಾರ್ಯ ಕೈಗೂಡುತ್ತದೆ.
ಹಾಗಾಗಿ ನಿಮ್ಮ ಕಣ್ಣೆದುರಿಗೆ ಅವರು ಕಂಡಾಗ ಬೇಸರವಾಗಬೇಡಿ ಮತ್ತು ಅವರು ಹಣ ಕೇಳಿದಾಗ ಯಾವುದೇ ಕಾರಣಕ್ಕೂ ಕೊಡುವುದಿಲ್ಲ ಎಂದು ಹೇಳಬೇಡಿ. ಅವರ ಕೇಳುವ ಮುಂಚೆ ನೀವಾಗಿಯೇ ನಿಮ್ಮ ಕೈಲಾದಷ್ಟು ಹಣ ಅಥವಾ ನಿಮ್ಮ ಬಳಿ ಇರುವ ಹಣ್ಣು ಹಂಪಲು ಇನ್ಯಾವುದೇ ಅವರಿಗೆ ಅನುಕೂಲಕರವಾಗುವಂತಹ ವಸ್ತುಗಳನ್ನು ನೀಡಿ ಇದರಿಂದ ಅವರು ಮನಸಾರೆ ಸಂತೋಷಪಟ್ಟು ನಿಮ್ಮನ್ನು ಹರಸುತ್ತಾರೆ.
ಆ ಆಶಿರ್ವಾದವು ಭಗವಂತನ ಆಶೀರ್ವಾದದಷ್ಟೇ ಶುದ್ಧವಾಗಿರುತ್ತದೆ. ಒಂದು ವೇಳೆ ಅವರೇ ನಿಮ್ಮನ್ನು ಪೀಡಿಸಿ ಹಣ ತೆಗೆದುಕೊಂಡು ಕೋ’ಪ ಮಾಡಿಕೊಳ್ಳಬೇಡಿ ನಿಮ್ಮ ಪರಿಸ್ಥಿತಿ ಹೇಳಿ ಸಂಬಾಳಿಸಿ ಕೈಲಾದಷ್ಟು ಸಹಾಯ ಮಾಡಿ ಖಾಲಿ ಮಾತ್ರ ಕಳುಹಿಸಬೇಡಿ. ಅನೇಕ ಮಂಗಳಮುಖಿಯರು ಹಣ ತೆಗೆದುಕೊಂಡು ಹಾಗೆ ಹೋಗಿ ಬಿಡುವುದಿಲ್ಲ.
ನೀವು ಹಣ ಕೊಟ್ಟ ಮೇಲೆ ಒಂದು ನಾಣ್ಯವನ್ನು ದೃಷ್ಟಿ ತೆಗೆದು ಇದನ್ನು ಇಟ್ಟುಕೊಳ್ಳಿ ಹಣ ವೃದ್ಧಿಯಾಗುತ್ತದೆ ಎಂದು ಕೊಡುತ್ತಾರೆ. ಎಷ್ಟೋ ಜನರಿಗೆ ಅದು ನಿಜವಾಗಿದೆ ಹಾಗಾಗಿ ಬೇಡ ಎಂದು ಹೇಳುವುದು ಅಥವಾ ತಾತ್ಸಾರ ಮಾಡುವುದು ಮಾಡಬೇಡಿ. ನಂಬಿಕೆ ಇಲ್ಲದಿದ್ದರೂ ಅವರ ಸಂತೋಷಕ್ಕೆ ತೆಗೆದುಕೊಳ್ಳಿ ಖಂಡಿತವಾಗಿಯೂ ಅವರು ಹೇಳಿದಂತೆ ಆಗುತ್ತದೆ.
ಹಲವರು ಮಂಗಳಮುಖಿಯರನ್ನು ಕೆಟ್ಟ ದೃಷ್ಟಿಯಲ್ಲಿ ಕಾಮ ದೃಷ್ಟಿಯಲ್ಲಿ ನೋಡುತ್ತಾರೆ, ಇದಕ್ಕಿಂತ ಘೋರವಾದ ಪಾಪ ಮತ್ತೊಂದು ಇಲ್ಲ ಎಂದು ಹೇಳಬಹುದು. ಮದುವೆ ಮನೆಗಳಿಗೆ ಅಥವಾ ಗೃಹಪ್ರವೇಶದ ಮನೆಗಳಿಗೆ ಗುಂಪು ಕಟ್ಟಿಕೊಂಡು ಮಂಗಳಮುಖಿಯರು ಬರುತ್ತಾರೆ ಬಂದವರು ಇಂತಿಷ್ಟು ಹಣ ಬೇಕು ಎಷ್ಟು ದೊಡ್ಡ ಮನೆ ಕಟ್ಟಿದ್ದೀರ ಇಷ್ಟು ಹಣ ಕೊಡಿ ಎಂದೆಲ್ಲ ಡಿಮ್ಯಾಂಡ್ ಮಾಡುತ್ತಾರೆ.
ಆಗಲೂ ಒಮ್ಮೊಮ್ಮೆ ತಾಳ್ಮೆ ನಮಗೆ ಕೆಡುತ್ತದೆ ಅವರನ್ನು ಬೈದು ಹೊರಗಡೆ ಬಿಡುವವರಿದ್ದಾರೆ. ಆ ಸಮಯದಲ್ಲಿ ಅವರೇನಾದರೂ ಶಾ’ಪ ಕೊಟ್ಟರೆ ನಿಮ್ಮ ಮನೆಗೆ ಗೃಹ ದೋಷ, ಸ್ತ್ರೀ ದೋಷ, ವಾಸ್ತುದೋಷ ಮುಂತಾದ ದೋಷಗಳು ಅಂಟಿಕೊಳ್ಳುತ್ತವೆ. ಅದರ ಬದಲು ಅವರಿಗೆ ನಿಮ್ಮ ಕೈಲಾದಷ್ಟು ಹಣ ಕೊಟ್ಟು ಸತ್ಕರಿಸಿ ಬಹಳ ಒಳ್ಳೆಯದಾಗುತ್ತದೆ.