ಮದುವೆ ಎನ್ನುವುದು ಮನುಷ್ಯನ ಜೀವನಕ್ಕೆ ಬಹಳ ಮುಖ್ಯವಾದದ್ದು. ಒಬ್ಬ ವ್ಯಕ್ತಿಯು ಬೆಳೆದು ಪ್ರೌಢಾವಸ್ಥೆಗೆ ಬಂದ ನಂತರ ಗೃಹಸ್ಥಾಶ್ರಮಕ್ಕೆ ಕಾಲಿಟ್ಟು ಸತ್ಸಂತಾನ ಗಳನ್ನು ಪಡೆದು, ವಂಶೋದ್ಧಾರ ಮಾಡುತ್ತಾ ಮುಂದಿನ ಜೀವನವನ್ನು ಅರ್ಥಪೂರ್ಣವಾಗಿ ಕಳೆಯಬೇಕು ಎಂದರೆ ಮದುವೆ ಬೇಕೆ ಬೇಕು. ಆಗ ಬದುಕು ಒಂದು ವ್ಯವಸ್ಥೆತವಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಸಮಾಧಾನ ಸಿಗುತ್ತದೆ ಹಾಗೂ ಪ್ರಪಂಚ ಕೂಡ ಹೀಗೆ ಬದುಕುತ್ತಿದೆ.
ಪ್ರಪಂಚದ ಯಾವುದೇ ಮೂಲೆಗೆ ಹೋದರು ಕೂಡ ವಿವಾಹದ ಮೂಲಕವೇ ಎರಡು ಜೋಡಿಗಳು ಒಂದಾಗಿ ಒಟ್ಟಿಗೆ ಬದುಕುವುದು. ಅದರಲ್ಲೂ ನಮ್ಮ ದೇಶದಲ್ಲಿ ವಿವಾಹ ಬಂಧನಕ್ಕೆ ಬಹಳ ಪವಿತ್ರವಾದ ಸ್ಥಾನವನ್ನು ಕೊಡಲಾಗಿದೆ ಮತ್ತು ನಾವು ಮದುವೆ ಎನ್ನುವುದು ಸ್ವರ್ಗದಲ್ಲಿಗೆ ನಿಶ್ಚಯ ಆಗಿರುತ್ತದೆ. ಯಾವ ವರನಿಗೆ ಯಾವ ವಧು ಜೊತೆಯಾಗಬೇಕು ಎಂದು ಈಗಾಗಲೇ ಬ್ರಹ್ಮ ಲಿಖಿತದಲ್ಲಿ ದಾಖಲಾಗಿದೆ ಎನ್ನುವುದನ್ನು ಕೂಡ ನಂಬಿ ಅದೇ ರೀತಿಯಾಗಿ ಬದುಕುತ್ತಿದ್ದೇವೆ.
ಆದರೆ ಕೆಲವರಿಗೆ ಮದುವೆ ಆಗುವುದೇ ಇಲ್ಲ ಆಗ ಅವರ ಯೋಗದಲ್ಲಿ ಬರೆದಿದ್ದ ಕಂಕಣ ಭಾಗ್ಯ ಮುಗಿದಿದೆ ಹಾಗಾಗಿ ಅವರಿಗೆ ಕಾಡಿಸುತ್ತದೆ ಎಂದು ಮಾತನಾಡುವುದನ್ನು ಕೂಡ ನಾವು ಕೇಳಿರುತ್ತೇವೆ. ಹಾಗಾಗಿ ಕಂಕಣ ಭಾಗ್ಯ ಕೂಡಿ ಬಂದಾಗ ತಡ ಮಾಡದೆ ಮದುವೆ ಆಗಿ ಬಿಡಬೇಕು.
ಆದರೆ ಕೆಲವೊಮ್ಮೆ ನಾವೇ ಎಷ್ಟೇ ಸಂಬಂಧಗಳನ್ನು ನೋಡಿದರು ಒಪ್ಪಿಗೆ ಆಗುವುದಿಲ್ಲ, ಕೆಲವೊಂದು ನಿಶ್ಚಿತಾರ್ಥದ ಹಂತಕ್ಕೆ ಹೋಗಿ ಮುರಿದುಬಿಡುತ್ತದೆ, ಈ ರೀತಿ ಪದೇ ಪದೇ ಆಗುತ್ತಿದ್ದರೆ ಮದುವೆ ಬಗ್ಗೆ ಉತ್ಸಾಹವೆ ಹೋಗಿಬಿಡುತ್ತದೆ. ನಿಮಗೂ ಕೂಡ ಈ ರೀತಿ ಮದುವೆಯಲ್ಲಿ ವಿಷಯದಲ್ಲಿ ಬಹಳ ಅಡೆತಡೆಗಳು ಆಗುತ್ತಿತ್ತು ಮದುವೆ ವಿಡಂಬ ಆಗುತ್ತಿದ್ದರೆ ನೀವು ಕೆಲ ವಿಷಯಗಳ ಬಗ್ಗೆ ಗಮನ ಹರಿಸಲೇಬೇಕು.
ಮೊದಲಿಗೆ ನಿಮ್ಮ ಪ್ರಯತ್ನವು ನೂರಕ್ಕೆ ನೂರಷ್ಟಿದ್ದು ನಿಮಗೆ ತಕ್ಕನಾದ ಪ್ರತಿಫಲ ಸಿಗುತ್ತಿಲ್ಲ ಮತ್ತು ಬಹಳ ನಕರಾತ್ಮಕವಾದ ಪರಿಣಾಮಗಳನ್ನು ಪಡೆಯುತ್ತಿದ್ದೀರ ಅಂದರೆ ಸೂಕ್ತ ಜೋತಿಷ್ಯ ಶಾಸ್ತ್ರಜ್ಞರ ಬಳಿ ಹೋಗಿ ನಿಮ್ಮ ಜಾತಕದ ವಿಮರ್ಶೆ ಮಾಡಿಸಬೇಕು. ನಿಮಗೆ ಕಂಕಣ ಯೋಗ ಯಾವಾಗ ಇದೆ ಎಂದು ಕೇಳಿ ತಿಳಿದುಕೊಳ್ಳಬೇಕು ಮತ್ತು ನಿಮ್ಮ ಜಾತಕದಲ್ಲಿ ಗುರುಬಲ ಬಲವಾಗಿದೆಯೇ ಎಂದು ತಿಳಿದುಕೊಳ್ಳಬೇಕು,
ಗುರುಬಲ ಇಲ್ಲದೆ ಇಲ್ಲದಿದ್ದರೆ ಮದುವೆ ಆಗುವುದು ಕ’ಷ್ಟ ಹಾಗೆಯೇ ಜಾತಕದಲ್ಲಿ ಮಂಗಳ ಸ್ಥಾನ ಎಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಮಂಗಳನ ಸ್ಥಾನ ನೀಚವಾಗಿದ್ದಾಗ ಕೂಡ ಮದುವೆಗಳು ಮುರಿದು ಬಿಡುತ್ತವೆ. ಕುಜ ದೋಷಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಇದ್ದರೆ ಅವುಗಳನ್ನು ಪರಿಹಾರ ಮಾಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ನಿಮಗೆ ಮದುವೆಗೆ ಸಂಬಂಧಪಟ್ಟ ಹಾಗೆ ಇರುವ ಅಡೆತಡೆಗಳು ನಿವಾರಣೆಯಾಗಿ ಆದಷ್ಟು ಬೇಗ ವಿವಾಹ ಯೋಗ ಕೂಡಿಬರುತ್ತದೆ.
ಉಮಾ ಮಹೇಶ್ವರನ ಆರಾಧನೆ ಮಾಡುವುದರಿಂದ ಕೂಡ ಅನೇಕರಿಗೆ ಮದುವೆಗೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರ ಆಗುತ್ತದೆ. ಗಿರಿಜಾ ಕಲ್ಯಾಣ, ಶ್ರೀನಿವಾಸ ಕಲ್ಯಾಣ ಪಾರಾಯಣ ಮಾಡುವುದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ರೀತಿ ವಿವಾಹ ವಿಳಂಬ ಸಮಸ್ಯೆಗಳನ್ನು ಪರಿಹರಿಸಲಾಗಿ ಏರ್ಪಡಿಸಲಾಗುವ ಸಾಮೂಹಿಕ ಯಾಗ ಯಜ್ಞಗಳಲ್ಲಿ ಭಾಗಿಯಾಗುವುದು,
ಸಾಧ್ಯವಾದರೆ ಶಕ್ತಿಯನುಸಾರ ಹೋಮ ಹವನಗಳನ್ನು ಮಾಡಿಸುವುದು ಇವುಗಳಿಂದ ಕೂಡ ನಿಮ್ಮ ಮದುವೆಗೆ ಇರುವ ಸಮಸ್ಯೆಗೆ ಪರಿಹಾರ ಆಗಿ ಒಳ್ಳೆಯ ಜೋಡಿ ಸಿಗುತ್ತಾರೆ. ಹಿರಿಯರ ಹಾಗೂ ಗುರುಗಳ ಸಲಹೆಯಂತೆ ಮುಂದುವರೆಯಿರಿ ಒಳ್ಳೆಯದಾಗುತ್ತದೆ.