ಮಾಂಗಲ್ಯದ ಮಹತ್ವದ ಬಗ್ಗೆ ಮನೆಯಲ್ಲಿ ಯಾವಾಗಲೂ ಹಿರಿಯರು ಮಾತನಾಡುತ್ತಲೇ ಇರುತ್ತಾರೆ. ಹಿರಿಯರು ಈ ರೀತಿ ಯಾವುದೇ ನಿಯಮಗಳನ್ನು ಮಾಡಿದ್ದರು ಅದಕ್ಕೆ ಖಂಡಿತವಾಗಿ ಒಂದು ಕಾರಣ ಇದ್ದೇ ಇರುತ್ತದೆ. ಆ ಪ್ರಕಾರವಾಗಿ ನಡೆದುಕೊಂಡಾಗ ಸಂಸಾರ ನೆಮ್ಮದಿಯಿಂದ ಇರುತ್ತದೆ ಇಲ್ಲವಾದಲ್ಲಿ ವಿನಾಕಾರಣ ದಂಪತಿಗಳ ನಡುವೆ ಮನಸ್ತಾಪ ಮನೆಯಲ್ಲಿ ಕಷ್ಟ, ಕಣ್ಣೀರು ತಪ್ಪುವುದಿಲ್ಲ.
ಆದರೆ ಈಗಿನ ಕಾಲದಲ್ಲಿ ಬಹಳ ಆಡಂಬರ ಹಾಗೂ ಪಾಶ್ಚಿಮಾತ್ಯ ಶೈಲಿಗೆ ಮಾರುಹೋಗಿ ಮಂಗಳಸೂತ್ರದ ಮಹತ್ವವನ್ನೇ ಮರೆಯುತಿದ್ದಾರೆ. ಈ ಹಿಂದಿನ ತಲೆಮಾರನ್ನು ಕೇಳಿದರೆ ಪತ್ನಿಯ ಕೈನಲ್ಲಿ ಕೈ ಬಳೆ, ಹಣೆಯಲ್ಲಿ ಕುಂಕುಮ ಹಾಗೂ ಮುಖ್ಯವಾಗಿ ಕೊರಳಲ್ಲಿ ಮಂಗಳಸೂತ್ರ ಇಲ್ಲ ಎಂದರೆ ಅವರ ಕೈಯಿಂದ ಮಾಡಿದ ಅಡುಗೆಯನ್ನು ಪತಿ ತಿನ್ನುತ್ತಿರಲಿಲ್ಲ ಹಾಗೂ ಅವರಿಂದ ಊಟ ಬಡಿಸಿಕೊಳ್ಳುತ್ತಿರಲಿಲ್ಲ.
ಪತಿಯೇ ಸರ್ವಸ್ವ ಎಂದು ನಂಬಿ ಸದಾ ಕಾಲ ಅವರ ಒಳಿತಿನ ಬಗ್ಗೆ ಯೋಚಿಸುತ್ತಿದ್ದ ಹೆಣ್ಣು ಮಕ್ಕಳು ಈ ಕಾರಣಕ್ಕಾಗಿ ಬಹಳ ಭಯ ಭಕ್ತಿಯಿಂದ ಮಂಗಳಸೂತ್ರಕ್ಕೆ ಬೆಲೆ ಕೊಟ್ಟು ನಡೆದುಕೊಳ್ಳುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಅರ್ಧಕರ್ಧ ಜನರಿಗೆ ಈ ಭ’ಯ ಹೊರಟು ಹೋಗಿದೆ.
ಇದೇ ಕಾರಣಕ್ಕೆ ಇಂದು ಅವರು ಇಲ್ಲ ಸಲದ ಕ’ಷ್ಟಗಳಿಗೆ ಗುರಿಯಾಗಿ ಕ’ಣ್ಣೀ’ರು ಹಾಕುತ್ತಿದ್ದಾರೆ. ನಿಮ್ಮ ಸಂಸಾರ ಚೆನ್ನಾಗಿರಬೇಕು ಎಂದರೆ ಗಂಡ ಹೆಂಡತಿ ನಡುವೆ ಅನ್ಯೋನ್ಯತೆ ಹೆಚ್ಚಾಗಿರಬೇಕು ಎಂದರೆ ಮಂಗಳಸೂತ್ರದ ಬಗ್ಗೆ ಈಗ ನಾವು ಹೇಳುವ ಈ ವಿಚಾರವನ್ನು ಪಾಲಿಸಿ ನೋಡಿ.
* ಮಂಗಳಸೂತ್ರವನ್ನು ಆಗಾಗ ಬಿಚ್ಚಿಡಬಾರದು ಒಂದು ಬಾರಿ ತಾಳಿ ಕಟ್ಟಿದ ಮೇಲೆ ಒಂದು ವೇಳೆ ಆ ದಾರ ಸವೆದಾಗ ಇಂತಹ ಅಗತ್ಯ ಕಾರಣಗಳಿಗೆ ಮಾತ್ರ ಅದನ್ನು ಕೊರಳಿನಿಂದ ತೆಗೆಯಬೇಕು ಫ್ಯಾಶನ್ ಡ್ರೆಸ್ ಹಾಕುವಾಗ ಸ್ನಾನ ಮಾಡುವಾಗ ಹೀಗೆ ಆಗಾಗ ತಾಳಿ ತೆಗಿಯುತ್ತಿದ್ದರೆ ತಾಳಿಗೆ ಇರುವ ಪಾವಿತ್ರ್ಯತೆ ಮತ್ತು ಶಕ್ತಿ ಹೊರಟು ಹೋಗುತ್ತದೆ.
* ಮಂಗಳ ಸೂತ್ರವು ಅತಿಯಾಗಿ ಉತ್ತಮವಿರಬಾರದು, ನಿಮ್ಮ ಬೈತಲೆಗೆ ಮುಟ್ಟುವಷ್ಟು ಉದ್ದ ಮಾತ್ರ ಇರಬೇಕು.
* ಮಂಗಳಸೂತ್ರವನ್ನು ಎಲ್ಲರ ಕಣ್ಣಿಗೂ ಕಾಣುವಂತೆ ಹೊರಗಡೆ ಬಿಟ್ಟುಕೊಂಡು ಓಡಾಡಬಾರದು.
* ಮದುವೆಗೆ ಮಂಗಳಸೂತ್ರ ತರಲು ಹೋಗುವಾಗ ಮಂಗಳವಾರ, ಅಮಾವಾಸ್ಯೆ, ಹುಣ್ಣಿಮೆ ದಿನ ಮತ್ತು ಮುಸ್ಸಂಜೆ ವೇಳೆ ಯಾವುದೇ ಕಾರಣಕ್ಕೂ ಹೋಗಬಾರದು.
* ಹೆಣ್ಣು ಮಕ್ಕಳು ಪ್ರತಿದಿನವೂ ದೇವರ ಪೂಜೆ ಮಾಡಿದ ನಂತರ ಮಾಂಗಲ್ಯಕ್ಕೂ ಅರಿಶಿಮ ಕುಂಕುಮ ಹಚ್ಚಿ ಮಾಂಗಲ್ಯದ ಹಿಂಬದಿಗೂ ಕೂಡ ಅರಿಶಿಣ ಕುಂಕುಮ ಹಚ್ಚಿ ತಾಯಿ ಮಹಾಗೌರಿಯನ್ನು ಪತಿಗೆ ಧಿರ್ಘಾಯುಷ್ಯ ತನಗೆ ದೀರ್ಘಸುಮಂಗಲಿದಲ್ಲಿ ಭಾಗ್ಯ ಕೊಡುವಂತೆ ಪ್ರಾರ್ಥಿಸಬೇಕು. ಆ ಸಮಯದಲ್ಲಿ ಸರ್ವ ಮಂಗಳ ಮಾಂಗಲ್ಯೇ, ಶಿವೇ ಸರ್ವಾತ್ರ ಸಾಧ್ಯಕೇ, ಶರಣ್ಯೇ ತ್ರಯಂಬಕೇ ಗೌರಿ, ನಾರಾಯಣ ನಮೋಸ್ತುತೆ ಈ ಮಂತ್ರವನ್ನು ಹೇಳಬೇಕು.
* ತಾಳಿ ಪಕ್ಕ ಕರಿಮಣಿ ಹಾಕುವುದರಿಂದ ಕ’ಷ್ಟ ಬರುತ್ತದೆ ಎಂದು ಅನೇಕ ತಿಳಿದುಕೊಂಡಿದ್ದಾರೆ. ಆದರೆ ಮಂಗಳ ಸೂತ್ರದ ಪಕ್ಕ ಎರಡು ಕರಿಮಣಿ ಹಾಕಬೇಕು. ಮಂಗಳಸೂತ್ರದ ಬಂಗಾರ ಗುರು ಗ್ರಹದ ಪ್ರಭಾವ ಹೊಂತಿದ್ದರೆ, ಕಪ್ಪು ಮಣಿ ಶನಿಪ್ರಭಾವ. ಇವೆರಡರ ಪ್ರಭಾವದಿಂದ ಸಂಸಾರ ಚೆನ್ನಾಗಿ ನಡೆದುಕೊಂಡು ಹೋಗುತ್ತದೆ ಮತ್ತು ವೈಜ್ಞಾನಿಕವಾಗಿ ಹೆಣ್ಣು ಮಕ್ಕಳು ಈ ರೀತಿ ಮಂಗಳಸೂತ್ರ ಹಾಗೂ ಕರಿಮಣಿ ಹಾಕುವುದರಿಂದ ಅವರಿಗೆ ಮಕ್ಕಳಾದಾಗ ಮಗುವಿಗೆ ಹಾಲುಣಿಸಲು ಹಾಲು ಕೆಡದಂತೆ ಈ ಅಂಶಗಳು ಕಾಪಾಡುತ್ತವೆ ಎಂದು ಹೇಳಲಾಗಿದೆ
* ಹೆಣ್ಣು ಮಕ್ಕಳು ಮಂಗಳಸೂತ್ರ ಹಾಕಿ ಸ್ನಾನ ಮಾಡುವುದರಿಂದ ದೇಹದ ಬೀಳುವ ಬಂಗಾರದ ನೀರು ಅವರಿಗೆ ಅವುಗಳಿಂದ ರಕ್ಷಣೆ ನೀಡುತ್ತದೆ ಎನ್ನುವುದು ಕೂಡ ವೈಜ್ಞಾನಿಕವಾಗಿ ಸಾಬೀತಾಗಿದೆ
* ಈ ರೀತಿ ಮಂಗಳಸೂತ್ರಕ್ಕೆ ಗೌರವ ಕೊಡುವ ಹೆಣ್ಣು ಮಕ್ಕಳನ್ನು ಅವರ ಪತಿಯು ಖಂಡಿತವಾಗಿಯೂ ಗೌರವದಿಂದ, ಪ್ರೀತಿಯಿಂದ ನೋಡಿಕೊಳ್ಳುತ್ತಾರೆ
* ಮರು ಮಾಂಗಲ್ಯ ಧಾರಣೆ ಎಲ್ಲರಿಗೂ ಮಾಡಿಸುವ ಅವಶ್ಯಕತೆ ಇರುವುದಿಲ್ಲ. ಜಾತಕದಲ್ಲಿ ಕುಜ ದೋಷ ಇದ್ದರೆ ಅಥವಾ ಮದುವೆ ಸಮಯದಲ್ಲಿ ಮುಹೂರ್ತ ಮೀರಿ ಮಾಂಗಲ್ಯ ಧಾರಣೆ ಆಗಿದ್ದರೆ ಒಳ್ಳೆಯ ಜ್ಯೋತಿಷ್ಯ ಶಾಸ್ತ್ರಜ್ಞರ ಬಳಿ ಅಥವಾ ಗುರುಗಳ ಬಳಿ ಸಲಹೆ ಕೇಳಿ ಅವರ ಅಣತಿಯಂತೆ ಮರುಮಾಂಗಲ್ಯ ಧಾರಣೆ ಮಾಡಿಸಬಹುದು.