ತಲೆ ಕೂದಲು ಬೆಳ್ಳಗಾಗುವುದು ವಯಸ್ಸಾಗುವುದರ ಸಂಕೇತ ಎಂದುಕೊಳ್ಳಲಾಗುತ್ತಿತ್ತು. ಆದರೆ ಈಗ ಶಾಲೆಗೆ ಹೋಗುವ ಮಕ್ಕಳಿಗೂ ಕೂಡ ತಲೆಕೂದಲು ಬೆಳ್ಳಗಾಗುತ್ತಿದೆ. ಇದಕ್ಕೆಲ್ಲಾ ಕಾರಣ ನಮ್ಮ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಬದಲಾಗಿರುವುದು. ಇಂದು ನಾವು ಹೆಚ್ಚು ರಾಸಾಯನಿಕಯುಕ್ತ ಆಹಾರಗಳನ್ನು ಸೇವಿಸುತ್ತಿರುವುದರಿಂದ ದೇಹದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳಲ್ಲಿ ತಲೆಕೂದಲು ಬೆಳ್ಳಗಾಗುವುದು ಕೂಡ ಒಂದು.
ಈ ತಲೆ ಕೂದಲನ್ನು ಕಪ್ಪಾಗಿಸುವುದಕ್ಕೆ ನಾವು ಪಡುವ ಶ್ರಮ ಅಷ್ಟಿಷ್ಟಲ್ಲ. ದುಬಾರಿ ಬೆಲೆಗಳ ಎಣ್ಣೆಗಳನ್ನು ಹಾಕಿ ಪ್ರಯೋಗ ಮಾಡುತ್ತೇವೆ, ಅಷ್ಟೇ ದುಬಾರಿ ಬ್ರಾಂಡೆಡ್ ಶಾಂಪೂಗಳನ್ನು ಉಪಯೋಗಿಸಿ ತಲೆ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ ಇದೆಲ್ಲಕ್ಕಿಂತಲೂ ಬೆಸ್ಟ್ ಆದ ಒಂದು ಅತ್ಯುತ್ತಮವಾದ ಆಯುರ್ವೇದಿಕ್ ಮನೆ ಮದ್ದು ಇದೆ ಕೇವಲ ಒಂಬತ್ತು ದಿನಗಳಲ್ಲಿ ತಯಾರಿಸಬಹುದಾದ ಈ ರೆಮೆಡಿ ಇಂದ ನಿಮ್ಮ ತಲೆ ಕೂದಲು ನ್ಯಾಚುರಲ್ ಆಗಿ ಬುಡದಿಂದ ಕಪ್ಪಾಗುತ್ತದೆ.
ತಲೆ ಕೂದಲು ಬೆಳ್ಳಗಾಗಿರುವುದು ಕಪ್ಪಾಗಬೇಕು ಎಂದರೆ ದೇಹದಲ್ಲಿ ಮೆಲನಿನ್ ಮತ್ತು ಹೇರ್ ಗ್ರೋತ್ ಗೆ ಸಂಬಂಧಪಟ್ಟ ಮಾಲೀಕ್ಯೂಲ್ ಗಳು ಕ್ರಿಯಾಶೀಲಗೊಳ್ಳಬೇಕು. ಆಗಿದ್ದಾಗ ಮಾತ್ರ ಆ ಫಲಿತಾಂಶ ಬಹಳ ದಿನಗಳವರೆಗೆ ಉಳಿದುಕೊಳ್ಳುತ್ತದೆ. ಕೆಲವೊಮ್ಮೆ ಆರ್ಟಿಫಿಶಿಯಲ್ ಕಲರ್ ಗಳಿಗೆ ಅತಿ ಹೆಚ್ಚಿನ ರಾಸಾಯನಿಕಗಳನ್ನೇ ಬಳಸುವುದರಿಂದ ಅದು ಕಣ್ಣುಗಳ ಆರೋಗ್ಯದ ಮೇಲೆ, ಚರ್ಮದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಹಾಗಾಗಿ ಇಷ್ಟೆಲ್ಲ ರಿಸ್ಕ್ ತೆಗೆದುಕೊಳ್ಳುವುದರ ಬದಲು ನ್ಯಾಚುರಲ್ ಆಗಿ ಶಾಶ್ವತವಾಗಿ ನಿಮ್ಮ ತಲೆ ಕೂದಲನ್ನು ಕಪ್ಪಾಗಿ ಮಾಡಿಕೊಳ್ಳಲು ಹೀಗೆ ಮಾಡಿ ಸಾಕು. 100 ಗ್ರಾಂ ನಷ್ಟು ಪೇರಲೆ ಎಲೆ ಪೇಸ್ಟ್ ತೆಗೆದುಕೊಳ್ಳಿ, ಇದಕ್ಕೆ 50 ಗ್ರಾಂ ನಷ್ಟು ಮೆಹಂದಿ ಎಲೆಯ ಪುಡಿ ಅಥವಾ ಪೇಸ್ಟ್ ಅನ್ನು ಹಾಕಿ ಮಿಕ್ಸ್ ಮಾಡಿ ಮತ್ತು 40 ml ನಷ್ಟು ನಿಂಬೆಹಣ್ಣಿನ ರಸವನ್ನು ಹಾಕಿ ಈ ಮೂರನ್ನು ಒಂದು ಕಬ್ಬಿಣದ ಪಾತ್ರೆಗೆ ಹಾಕಬೇಕು ಚೆನ್ನಾಗಿ ಮಿಕ್ಸ್ ಮಾಡಿದ ಮೇಲೆ ಇದರಲ್ಲಿ ಗಾಳಿ ಹೋಗದ ಹಾಕಿ ಹಾಗೆ ಮೇಲಿನಿಂದ ಕವರ್ ಮಾಡಿ ಒಂದು ಕಡೆ ಇಡಬೇಕು.
ಮರುದಿನ ಕೂಡ ಆ ಕವರ್ ಓಪನ್ ಮಾಡಿ ಮತ್ತೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ ಅದರಲ್ಲಿರುವ ಎಲ್ಲಾ ಅಂಶಗಳು ಚೆನ್ನಾಗಿ ಬೆರೆಯಲು ಬಿಡಬೇಕು. ಈ ರೀತಿ ಸತತ ಒಂಬತ್ತು ದಿನಗಳವರೆಗೆ ಪ್ರತಿದಿನವೂ ತೆಗೆದು ಚೆನ್ನಾಗಿ ಅವುಗಳನ್ನು ಮಿಕ್ಸ್ ಮಾಡಿ ಮತ್ತೆ ಗಾಳಿಯಾಗದಂತೆ ಸರಿಯಾಗಿ ಟೈಟಾಗಿ ಕವರ್ ಮಾಡಿ ಇಡಬೇಕು.
10ನೇ ದಿನಕ್ಕೆ ಒಂದು ನ್ಯಾಚುರಲ್ ಆದ ಔಷಧಿ ನಿಮಗೆ ತಯಾರಾಗಿರುತ್ತದೆ ಇದನ್ನು ತಲೆಕೂದಲಿಕೆ ಹಚ್ಚಿ ಸ್ವಲ್ಪ ಹೊತ್ತು ಇದ್ದು ಬೆಚ್ಚಗಿನ ನೀರಿನಿಂದ ತಲೆ ಸ್ನಾನ ಮಾಡಬೇಕು. ಆದರೆ ಯಾವುದೇ ಕಾರಣಕ್ಕೂ ಶಾಂಪೂ ಬಳಸ ಕೂಡದು. ಅಂಟವಾಳದ ಕಾಯಿ ಅಥವಾ ಮುಲ್ತಾನ್ ಮಟ್ಟಿ ಬಳಸಿ ಹೇರ್ ವಾಷ್ ಮಾಡಬೇಕು. ಮರುದಿನ ತಲೆಗೆ ಚೆನ್ನಾಗಿ ಎಣ್ಣೆ ಹಚ್ಚಬೇಕು.
ಒಂದು ಬಾರಿ ಮಾಡಿದಾಗಲೇ ಇದರ ಅದ್ಭುತ ರಿಸಲ್ಟ್ ನಿಮಗೆ ಗೊತ್ತಾಗುತ್ತದೆ. ಈ ರೀತಿ ವಾರದಲ್ಲಿ ಎರಡು ಬಾರಿ ನಿಮಗೆ ಸಾಧ್ಯವಾದಷ್ಟು ವಾರಗಳವರೆಗೆ ಮಾಡಿ ನೋಡಿ ಎಷ್ಟು ಬೇಗ ನಿಮ್ಮ ಹೇರ್ ನ್ಯಾಚುರಲ್ ಆಗಿ ಕಪ್ಪಾಗುತ್ತದೆ ಎಂದು. ಒಂದು ವೇಳೆ ಈ ಟಿಪ್ ವರ್ಕ್ ಆಗದೆ ಇದ್ದವರು ಇನ್ನೊಂದು ಮನೆಮದ್ದು ಇದೆ ಇದನ್ನು ಮಾಡಿ, ಇದು ಕೂಡ ಖಂಡಿತ ವರ್ಕ್ ಆಗುತ್ತಿದೆ.
ಪ್ರತಿದಿನ ಕೊಬ್ಬರಿ ಎಣ್ಣೆಯನ್ನು ಹಾಗೂ ನಿಂಬೆ ರಸವನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ತಲೆ ಕೂದಲಕ್ಕೆ ಹಚ್ಚಿ ಎಳೆ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಇರಿ ನಂತರ ಬೆಚ್ಚಗಿನ ನೀರಿನಲ್ಲಿ ಯಾವುದೇ ಶಾಂಪು ಬಳಸದೆ ಅಂಟವಾಳದ ಕಾಯಿ ಬಳಸಿ ತಲೆ ಸ್ನಾನ ಮಾಡಿ 6 ತಿಂಗಳ ಕಾಲ ಮಾಡಿಕೊಂಡು ಬನ್ನಿ. ನಿಮ್ಮ ಕೂದಲು ನ್ಯಾಚುರಲ್ ಆಗಿ ಕಪ್ಪಾಗುತ್ತದೆ.