Friday, June 9, 2023
HomeEntertainment64ನೇ ವಯಸ್ಸಿನಲ್ಲಿ 3ನೇ ಮದುವೆ ಆಗುತ್ತಿರುವ ನಟಿ ಜಯಸುಧಾ, ಆ ಲಕ್ಕಿ ಮ್ಯಾನ್ ಯಾರು ಗೊತ್ತ.?

64ನೇ ವಯಸ್ಸಿನಲ್ಲಿ 3ನೇ ಮದುವೆ ಆಗುತ್ತಿರುವ ನಟಿ ಜಯಸುಧಾ, ಆ ಲಕ್ಕಿ ಮ್ಯಾನ್ ಯಾರು ಗೊತ್ತ.?

 

ಜಯಸುಧ ಅವರು ತಮಿಳು ಚಿತ್ರರಂಗದಲ್ಲಿ ಖ್ಯಾತ ತಾರೆ. ತಮಿಳು ಮಾತ್ರವಲ್ಲದೆ ತೆಲುಗು ಕನ್ನಡ ಹೀಗೆ ನಾನಾ ಭಾಷೆಗಳಲ್ಲಿ ಅಭಿನಯಿಸಿರುವ ಇವರು ಕನ್ನಡದಲ್ಲೂ ಸಹ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನೀ ತಂದ ಕಾಣಿಕೆ ಸಿನಿಮಾದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜೊತೆ ನಟಿಯಾಗಿ ಮೊದಲ ಬಾರಿಗೆ ಕನ್ನಡದಲ್ಲಿ ಕಾಣಿಸಿಕೊಂಡ ಅವರು ನಂತರ ಇತ್ತೀಚೆಗೆ ತಾಯಿಯ ಮಡಿಲು, ಭೂಪತಿ, ವಜ್ರಕಾಯ ಇನ್ನು ಮುಂತಾದ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ನಟಿ ಮಾತ್ರ ಅಲ್ಲದೆ ಜಯಸುಧಾ ಅವರು ರಾಜಕೀಯದಲ್ಲಿ ಕೂಡ ಸಕ್ರಿಯರಾಗಿದ್ದಾರೆ. ಆಂಧ್ರಪ್ರದೇಶದ ವಿಧಾನಸಭಾ ಸದಸ್ಯರಾಗಿ ಕೂಡ ಆಯ್ಕೆ ಆಗಿದ್ದ ಅವರು ಕಾಂಗ್ರೆಸ್ ಪಕ್ಷದಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. 64 ವರ್ಷ ವಯಸ್ಸಿನಲ್ಲಿ ಜಯಸುಧಾ ಅವರು ಮೂರನೇ ಹಾಗೂ ಮೂಲಕ ಈಗ ಗಾಸಿಪ್ ಗೆ ಗುರಿ ಆಗಿದ್ದಾರೆ. ಜಯಸುಧಾ ಅವರು ತಮಿಳಿನ ಖ್ಯಾತ ನಿರ್ಮಾಪಕರಾದ ವಡ್ಡೆ ರಮೇಶ್ ಅವರ ಜೊತೆ ವಿವಾಹ ಆಗಿದ್ದರು.

ಆದರೆ ಹೊಂದಾಣಿಕೆ ಕೊರತೆಯ ಕಾರಣದಿಂದಾಗಿ ಕೆಲವೇ ವರ್ಷಗಳಲ್ಲಿ ಅವರ ಮದುವೆ ಮುರಿದು ಬಿತ್ತಿತ್ತು. ಇದಾಗ ಬಳಿಕ ಬಾಲಿವುಡ್ ನ ಖ್ಯಾತ ನಟ ಜಿತೇಂದ್ರ ಕಪೂರ್ ಅವರ ಸೋದರ ಸಂಬಂಧಿ ಆದ ನಿತಿನ್ ಕಪೂರ್ ಅವರನ್ನು 1985ರಲ್ಲಿ ಎರಡನೇ ವಿವಾಹವಾಗಿದ್ದರು. ಇವರ ದಾಂಪತ್ಯಕ್ಕೆ ಸಾಕ್ಷಿಯಾಗಿ ನಿಹಾರ್ ಕಪೂರ್ ಮತ್ತು ಶ್ರೇಯಾನ್ ಕಪೂರ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಈಕೆಯ ಬದುಕಿನಲ್ಲಿ ಎಲ್ಲವೂ ಸರಿಯಿದೆ ಎಂದುಕೊಳ್ಳುವಷ್ಟರಲ್ಲಿ 2017ರಲ್ಲಿ ನಿತಿನ್ ಕಪೂರ್ ಅವರು ಆ.ತ್ಮ.ಹ.ತ್ಯೆ ಮಾಡಿಕೊಂಡರು.

 

ಆ ಬಳಿಕ ಒಂಟಿಯಾಗಿದ್ದ ಜಯಸುಧಾ ಅವರು ಈಗ ಉದ್ಯಮಿಯೊಡನೆ ಮೂರನೇ ಮದುವೆ ಆಗುತ್ತಿದ್ದಾರೆ ಎಂದು ಗಾಳಿ ಸುದ್ದಿ ಒಂದು ಹರಿದಾಡುತ್ತಿದೆ. ಜಯಸುಧಾ ಅವರು ಮಾತ್ರವಲ್ಲದೆ ಹಲವಾರು ಸೆಲೆಬ್ರಿಟಿಗಳ ಕಥೆ ಇದೇ ರೀತಿ ಇರುತ್ತದೆ. ಬಣ್ಣದ ಪ್ರಪಂಚದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಆಸೆಪಟ್ಟು ಬರುವ ಎಷ್ಟೋ ಜನರ ವೈವಾಹಿಕ ಬದುಕು, ಈ ರೀತಿ ನಾನು ರೀತಿ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ.

ಅದರಲ್ಲೂ ಹೆಚ್ಚಾಗಿ ನಟಿಮಣಿಯರ ದಾಂಪತ್ಯ ಮುರಿದು ಬೀಳುತ್ತಿರುವುದು ಸರ್ವೆ ಸಾಮಾನ್ಯ ಎನ್ನುವ ರೀತಿ ಆಗಿಬಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಇನ್ನೂ ಹೆಚ್ಚಾಗುತ್ತಿದ್ದು ಹಿಂದಿನ ನಟಿಯರನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು ಎಂದರೆ ಈಗ ಅವರ ಸ್ಥಿತಿಯು ಹೀಗೆ ಆಗಿದೆ. ಜನರು ತೆರೆ ಮೇಲೆ ಕಂಡು ಇವರನ್ನು ರೋಲ್ ಮಾಡಲ್ ರೀತಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಈ ರೀತಿ ತೆರೆ ಮೇಲೆ ಸ್ಟಾರ್ ಆಗಿ ಮಿಂಚಿದವರ ವೈಯಕ್ತಿಕ ಬದುಕು ಮಾತ್ರ ಅಷ್ಟಕಷ್ಟೇ ಆಗುತ್ತಿದೆ.

ಬೆರಳೆಣಿಕೆ ಅಷ್ಟು ನಟಿಯರು ಮಾತ್ರ ಎರಡರಲ್ಲೂ ಸಕ್ಸಸ್ ಕಾಣುತ್ತಿದ್ದಾರೆ. ಅದನ್ನು ಹೊರತುಪಡಿಸಿ ಬಹುತೇಕ ನಟಿಯರ ಬದುಕು ಕಣ್ಣೀರಿನಲ್ಲಿ ಕೈ ತೊಳೆಯುವ ರೀತಿಯೇ ಆಗಿಬಿಡುತ್ತದೆ. ಈ ಹಿಂದೆ ರಮ್ಯಾ ಹಾಗೂ ಅವರ ಪತಿ ಕೃಷ್ಣ ಅವರ ನಡುವೆ ಸಂಬಂಧ ಸರಿ ಇಲ್ಲ ಎಂದು ಸುದ್ದಿ ಆಗಿತ್ತು ನಂತರ ಮೀನಾ ಅವರನ್ನು ಕುರಿತು ಪತಿ ಅಗಲಿಕೆಯಿಂದ ಒಂಟಿಯಾಗಿರುವ ಮೀನ ಅವರಿಗೆ ಕುಟುಂಬಸ್ಥರು ಮರು ಮದುವೆ ಆಗಲು ಒತ್ತಾಯಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.

ಈಗ ಜಯಸುಧಾ ಅವರ ಬಗ್ಗೆ ಹಬ್ಬುತ್ತಿರುವ ಸುದ್ದಿ ಬಗ್ಗೆ ಅವರೇ ಸ್ಪಷ್ಟನೆ ಕೊಡಬೇಕಿದೆ. ಇದು ನಿಜ ಆದರೆ ಎಲ್ಲವನ್ನು ಧೈರ್ಯದಿಂದ ಎದುರಿಸಿ ಮತ್ತೊಮ್ಮೆ ಬದುಕಿನಲ್ಲಿ ಹೊಸ ಅಧ್ಯಾಯ ಬರೆಯಲು ಜಯಪ್ರಧಾ ಅವರು ನಿರ್ಧರಿಸಿದ್ದರೆ ಅವರ ಇಚ್ಛೆಯಂತೆಯೇ ಬದುಕು ಸಾಗಲಿ. ಸಿನಿಮಾಗಳಲ್ಲಿ ಮಾತ್ರವಲ್ಲದೆ ರಾಜಕೀಯದಲ್ಲಿ ಸಹ ಅವರು ಇನ್ನಷ್ಟು ಹೆಸರು ಮಾಡಿ ಸಾಕಷ್ಟು ಜನರ ಬದುಕಿಗೆ ದೀಪವಾಗಲಿ ಎಂದು ಹರಸೋಣ.