ಬಟ್ಟೆ ಒಗೆಯುವ ಮೊದಲು ಬರಿ ಇಷ್ಟು ಮಾಡಿ ಸಾಕು ಬಟ್ಟೆ ತುಂಬಾನೇ ಚೆನ್ನಾಗಿ ಕ್ಲೀನ್ ಆಗುತ್ತೆ.!

 

ಪ್ರತಿಯೊಬ್ಬರಿಗೂ ಕೂಡ ಬಟ್ಟೆ ಒಗೆಯುವ ಕೆಲಸ ಎಂದರೆ ದೊಡ್ಡ ಕೆಲಸ ಎನ್ನುವ ಹಾಗೆ ನೋಡುತ್ತಾರೆ ಹೌದು, ಬೇರೆ ಯಾವುದೇ ಕೆಲಸವನ್ನು ಮಾಡ ಬಹುದು ಆದರೆ ಬಟ್ಟೆ ಒಗೆಯುವ ಕೆಲಸ ಮಾತ್ರ ನನ್ನಿಂದ ಸಾಧ್ಯವಿಲ್ಲ ಎಂದು ಸಹ ಹೆಚ್ಚಿನ ಜನ ಹೇಳುತ್ತಿರುತ್ತಾರೆ. ಆದ್ದರಿಂದಲೇ ಕೆಲವೊಂದಷ್ಟು ಜನ ಬಟ್ಟೆ ಒಗೆಯುವಂತಹ ಕೆಲಸಕ್ಕೆ ಎಂದೇ ಬೇರೆಯವರನ್ನು ಕರೆಸಿಕೊಂಡು ಅವರಿಂದ ಬಟ್ಟೆಯನ್ನು ಒಗೆಸಿಕೊಳ್ಳುತ್ತಿರುತ್ತಾರೆ.

ಹಾಗೂ ಇನ್ನೂ ಕೆಲವೊಂದಷ್ಟು ಜನ ವಾಷಿಂಗ್ ಮಷೀನ್ ಅನ್ನು ಖರೀದಿ ಮಾಡಿ ಅದರ ಮೂಲಕ ಬಟ್ಟೆಯನ್ನು ಸ್ವಚ್ಛ ಮಾಡಿಕೊಳ್ಳುತ್ತಿರು ತ್ತಾರೆ. ಆದರೆ ಹೆಚ್ಚಿನ ಜನಕ್ಕೆ ವಾಷಿಂಗ್ ಮಷೀನ್ ಗೆ ಬಟ್ಟೆಯನ್ನು ಹೇಗೆ ಹಾಕಬೇಕು ಹಾಗೂ ಯಾವ ವಿಧಾನವನ್ನು ಅನುಸರಿಸುವುದರಿಂದ. ಬಟ್ಟಿಯಲ್ಲಿರುವಂತಹ ಕೊಳೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡ ಬಹುದು ಎನ್ನುವಂತಹ ಮಾಹಿತಿ ತಿಳಿದಿಲ್ಲ. ಬದಲಿಗೆ ಎಲ್ಲ ಬಟ್ಟೆಯನ್ನು ಒಮ್ಮೆಲೆ ಹಾಕಿ ಅದಕ್ಕೆ ಸೋಪ್ ಪೌಡರ್ ಹಾಕಿ ಬಟ್ಟೆಯನ್ನು ಸ್ವಚ್ಛ ಮಾಡುತ್ತಿರುತ್ತಾರೆ.

ಆದರೆ ಈ ರೀತಿ ಮಾಡುವುದರಿಂದ ಬಟ್ಟೆಯಲ್ಲಿರು ವಂತಹ ಕೊಳೆ ಸಂಪೂರ್ಣವಾಗಿ ಹಾಗೆ ಇರುತ್ತದೆ. ಆದ್ದರಿಂದ ಈ ವಿಧಾನವನ್ನು ಅನುಸರಿಸುವುದು ತಪ್ಪು. ಬದಲಿಗೆ ಈಗ ನಾವು ಹೇಳುವಂತಹ ಕೆಲವೊಂದು ವಿಧಾನವನ್ನು ಅನುಸರಿಸುವುದರಿಂದ ವಾಷಿಂಗ್ ಮಷೀನ್ ನಲ್ಲಾಗಿರಲಿ ಅಥವಾ ಕೈಯಿಂದ ಬಟ್ಟೆಯನ್ನು ಒಗೆಯುವುದಾಗಿರಲಿ ಕಡಿಮೆ ಸಮಯದಲ್ಲಿ ಬಟ್ಟೆಯಲ್ಲಿರುವಂತಹ ಎಲ್ಲಾ ಸಂಪೂರ್ಣವಾದ ಕೊಳೆಯನ್ನು ಸ್ವಚ್ಛ ಮಾಡಬಹುದು. ಹಾಗೂ ಯಾವುದೇ ರೀತಿಯ ಹೆಚ್ಚು ಉಜ್ಜಿ ತಿಕ್ಕಿ ಒಗೆಯುವಂತಹ ಅವಶ್ಯಕತೆ ಇರುವುದಿಲ್ಲ ಎಂದೇ ಹೇಳಬಹುದು.

ಹಾಗಾದರೆ ಬಟ್ಟೆಯಲ್ಲಿರುವಂತಹ ಕೊಳೆಯನ್ನು ಸಂಪೂರ್ಣವಾಗಿ ತೆಗೆ ಯುವುದಕ್ಕೆ ಯಾವ ವಿಧಾನವನ್ನು ಅನುಸರಿಸಬೇಕು ಎಂದು ಈಗ ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ.
• ಮೊದಲು ಎಲ್ಲಾ ಬಟ್ಟೆಯನ್ನು ಒಂದೊಂದಾಗಿ ಬಿಡಿಬಿಡಿಯಾಗಿ ಮಾಡಿ ಕೊಂಡು ಒಂದು ಬಕೆಟ್ ನಲ್ಲಿ ಸ್ವಚ್ಛವಾದಂತಹ ನೀರನ್ನು ಹಾಕಿ ಅದಕ್ಕೆ ಯಾವುದೇ ರೀತಿಯ ಪೌಡರ್ ಮಿಶ್ರಣ ಮಾಡಬಾರದು ಆ ನೀರಿನಲ್ಲಿ ಒಂದೊಂದೇ ಬಟ್ಟೆಯನ್ನು ಹಾಕಿ ಆ ನೀರಿನಲ್ಲಿ ಅರ್ಧ ಗಂಟೆಗಳ ಕಾಲ ಹಾಗೆ ಬಿಡಬೇಕು ಈ ರೀತಿ ಮಾಡುವುದರಿಂದ ಬಟ್ಟೆಯಲ್ಲಿರುವಂತಹ ಬೆವರಿನ ವಾಸನೆ ಆಗಿರಬಹುದು ಅಲ್ಲಿರುವಂತಹ ಕೊಳೆ ಎಲ್ಲವೂ ಸಹ ಸ್ವಲ್ಪಮಟ್ಟಿಗೆ ದೂರವಾಗುತ್ತದೆ.

• ಆನಂತರ ಅದನ್ನು ಬೇರೆ ಮಾಡಿ ಮತ್ತೆ ಒಂದು ಬಕೆಟ್ ನಲ್ಲಿ ನೀರನ್ನು ಹಾಕಿ ಒಂದು ಚಮಚ ಸೋಪ್ ಪೌಡರ್ ಹಾಗೂ ಒಂದು ಚಮಚ ಬೇಕಿಂಗ್ ಪೌಡರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಆ ನೀರಿನಲ್ಲಿ ಎಲ್ಲಾ ಬಟ್ಟೆಯನ್ನು ಹಾಕಿ ಅರ್ಧ ಗಂಟೆಗಳ ಕಾಲ ಬಿಟ್ಟು ಆನಂತರ ಆ ಬಟ್ಟೆಯನ್ನು ನೀವು ಕೈಯಿಂದ ಸ್ವಲ್ಪ ಉಜ್ಜಿದರೆ ಸಾಕು ಬಟ್ಟೆಯಲ್ಲಿರುವಂತಹ ಕೊಳೆ ಸಂಪೂರ್ಣವಾಗಿ ದೂರವಾಗುತ್ತದೆ.

• ಅದೇ ರೀತಿಯಾಗಿ ವಾಷಿಂಗ್ ಮಷೀನ್ ಗೆ ಬಟ್ಟೆ ಹಾಕುವಂತಹ ಸಮಯದಲ್ಲೂ ಈ ವಿಧಾನವನ್ನು ಅನುಸರಿಸಿ ಸೋಪ್ ಪೌಡರ್ ನಲ್ಲಿ ನೆನೆ ಹಾಕಿದಂತಹ ಎಲ್ಲ ಬಟ್ಟೆಯನ್ನು ಒಂದೊಂದಾಗಿ ವಾಷಿಂಗ್ ಮಷೀನ್ ಒಳಗಡೆ ಹಾಕಿ ಆ ನಂತರ ನೀವು ವಾಷಿಂಗ್ ಮಷೀನ್ ನಲ್ಲಿ ಬಟ್ಟೆ ಒಗೆದರೆ ಸಾಕು ಅದರಲ್ಲಿರುವಂತಹ ಎಲ್ಲಾ ಕೊಳೆಗಳು ಸಂಪೂರ್ಣ ವಾಗಿ ದೂರವಾಗುತ್ತದೆ ಬದಲಿಗೆ ಯಾವುದೇ ಶರ್ಟ್ ಕಾಲರ್ ಉಜ್ಜುವಂತಹ ಅವಶ್ಯಕತೆ ಇರುವುದಿಲ್ಲ.

ಈ ವಿಧಾನ ತುಂಬಾ ಸುಲಭವಾಗಿದ್ದು ಪ್ರತಿಯೊಬ್ಬರೂ ಕೂಡ ಇದನ್ನು ಅನುಸರಿಸುವುದರಿಂದ ನಿಮಿಷದಲ್ಲಿ ಎಲ್ಲ ಬಟ್ಟೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಬಹುದು.

Leave a Comment