ಅದ್ಯಾಕೋ ಏನೋ ಪದೇ ಪದೇ ಕನ್ನಡ ಭಾಷೆಯ (Kannada Language) ವಿಚಾರಕ್ಕೆ ಬಂದು ಕನ್ನಡಿಗರನ್ನು ಮತ್ತೆ ಮತ್ತೆ ಕೆರಳಿಸುವಂತಹ ಘಟನೆಗಳು ನಡೆಯುತ್ತಲೇ ಇದೆ. ಕನ್ನಡದ ಹಾಡನ್ನು ಹಾಡುವಂತೆ ಕೇಳಿದಕ್ಕಾಗಿ ಅಭಿಮಾನಿಗೆ ಪೆಹಲ್ಗಾಮ್ ಉದಾಹರಣೆ ಕೊಟ್ಟು ಸೋನು ನಿಗಮ್ (Sonu Nigam Ban) ಕನ್ನಡದಿಂದ ಬ್ಯಾನ್ ಆಗಿದ್ದು, ಬೆಂಗಳೂರಿನ ಫೈವ್ ಸ್ಟಾರ್ ಹೋಟೆಲ್ ಫಲಕದಲ್ಲಿ ಕನ್ನಡಿಗರನ್ನು ಕೆರಳಿಸುವಂತಹ ಡಿಸ್ಪ್ಲೇ ಹಾಕಿ ಹೋಟೆಲ್ ಮುಚ್ಚಿದ್ದು.
ಬೆಂಗಳೂರಿನ SBI ಬ್ಯಾಂಕ್ ಮ್ಯಾನೇಜರ್ ಕನ್ನಡ ಮಾತನಾಡುವುದಿಲ್ಲ ಎಂದು ಪಟ್ಟು ಹಿಡಿದು ಸೀನ್ ಕ್ರಿಯೇಟ್ ಮಾಡಿದ್ದು, ನಮ್ಮ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ಗೆ (Mysore Sandal Soap) ಕೋಟಿ ಕೋಟಿ ಸಂಭಾವನೆ ಸುರಿದು ಪರಭಾಷಾ ನಟಿಯನ್ನು ರಾಯಭಾರಿ ಮಾಡಲು ಹೊರಟದ್ದು ಇನ್ನು ಇತ್ಯಾದಿ ಬೆಳವಣಿಗೆಗಳ ಕಾವು ಆರುವ ಮುನ್ನವೇ ಮತ್ತೊಮ್ಮೆ ಕನ್ನಡಿಗರ ಆಸ್ಮಿತೆಯನ್ನು ಕೆಣಕುವ ಪ್ರಯತ್ನವನ್ನು ಪ್ಯಾನ್ ಇಂಡಿಯ ಸ್ಟಾರ್ ಒಬ್ಬರು ಮಾಡಿದ್ದಾರೆ.
ನಟ ಕಮಲ್ ಹಾಸನ್ (Kamal Hasan) ಇಂತಹದೊಂದು ವಿವಾದಾತ್ಮಕ ಹೇಳಿಕೆ ಕೊಟ್ಟು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಚೆನ್ನೈನಲ್ಲಿ ನಡೆದ ತಮ್ಮ ಥಗ್ಸ್ ಲೈಫ್ (Thugs life Movie) ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ಕನ್ನಡಿಗರನ್ನು ಎದುರು ಹಾಕಿಕೊಂಡಿದ್ದಾರೆ. ನಟನ ಈ ಹೇಳಿಕೆಯಲ್ಲಿ ವಿರೋಧಿಸಿ ಎಕ್ಸ್ ಜಾಲತಾಣದಲ್ಲಿ ಕನ್ನಡಿಗರು ಪೋಸ್ಟ್ ಹಾಕಿ ತಮ್ಮ ಆಕ್ರೋಶವನ್ನು ನಾನು ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ.
ತಮ್ಮ ಥಗ್ಸ್ ಲೈಫ್ ಸಿನಿಮಾ ಪ್ರಮೋಷನ್ ಕಾರ್ಯಕ್ರಮದಲ್ಲಿ ಹಲವಾರು ವಿಷಯಗಳ ಬಗ್ಗೆ ವೇದಿಕೆ ಮೇಲೆ ಕಮಲ್ ಹಸನ್ ಮಾತನಾಡಿದರು ಹೀಗೆ ಭಾಷೆಯ ವಿಚಾರ ಬಂದಾಗ ತಮಿಳು ಭಾಷೆ ಎಲ್ಲಾ ಭಾಷೆಗಳಿಂದ ಹಳೆಯದು ಕನ್ನಡ ಸೇರಿ ಎಲ್ಲಾ ಭಾಷೆಗಳು ತಮಿಳು ಮೂಲದಿಂದ ಬಂದದ್ದು ಎಂಬ ಹೇಳಿಕೆಯನ್ನು ಕೊಟ್ಟಿದ್ದಾರೆ. ಈಗ ಇದಕ್ಕೆ ವ್ಯಾಪಕ ಪ್ರತಿಕ್ರಿಯೆ ಕೇಳಿ ಬರುತ್ತಿದೆ.
ಆದರೆ ಅಸಲಿಯಾಗಿ ಕನ್ನಡ ತಮಿಳು ಎಲ್ಲವೂ ಕೂಡ ದ್ರಾವಿಡ ಮೂಲದಿಂದ ಬಂದದ್ದು ಹಾಗಾಗಿ ಈ ಭಾಷೆಗಳು ಸಹೋದರಿಯರು ಇದ್ದಂತೆ ಆದರೆ ದ್ರಾವಿಡ ಭಾಷೆಗಳಲ್ಲಿ ತಮಿಳು ಬಹಳ ಹಳೆಯದು ಎನ್ನುವ ವಾದವಿದೆ ಹೀಗಾಗಿ ಶಾಲೆಗಳಲ್ಲೂ ಕೂಡ ಅವರು ಅದನ್ನೇ ಕಲಿಸುತ್ತಿದ್ದಾರೆ ಎಂಬುದು ತಜ್ಞರ ಅಭಿಪ್ರಾಯ.
ಹೀಗಾಗಿ ಕನ್ನಡಿಗರು ನಟನಿಗೆ ನಿಮ್ಮ ಶಾಲೆಯಲ್ಲಿ ಮೇಷ್ಟ್ರು ಹೇಳಿಕೊಟ್ಟಿರುವ ತಪ್ಪನ್ನು ಮುಂದುವರಿಸಬೇಡಿ ಒಂದು ಭಾಷೆ ಬಗ್ಗೆ ಸರಿಯಾಗಿ ತಿಳಿದುಕೊಂಡು ಮಾತನಾಡಿ, ಕನ್ನಡಕ್ಕೆ ಕ್ರಿಸ್ತಪೂರ್ವ 3 ರಿಂದಲೂ ಭಾಷೆ ಇತ್ತು ಎನ್ನುವ ಉಲ್ಲೇಖವಿದೆ ಇತಿಹಾಸ ತಿಳಿದುಕೊಂಡು ಮಾತನಾಡಿ ಎಂದು ಸಲಹೆ ಕೊಟ್ಟಿದ್ದಾರೆ.
ಇಂತಹ ಹೇಳಿಕೆಗಳು ಕೊಡುವುದರಿಂದ ಎರಡು ರಾಜ್ಯಗಳ ನಡುವಿನ ಸಂಬಂಧವನ್ನು ಹಾಳು ಮಾಡುವ ಪ್ರಯತ್ನವಾಗುತ್ತದೆ ಎಂದು ಕೆಲವರು ಆತಂಕ ಹೊರ ಹಾಕಿದ್ದಾರೆ. ಇನ್ನು ಕೆಲವರು ಒಂದು ರಾಜ್ಯದ ಭಾವನೆ ಆಗಿರುವ ಭಾಷೆಯ ವಿಚಾರಕ್ಕೆ ಬಂದು ನಮ್ಮ ಭಾವನೆಗಳಿಗೆ ಧಕ್ಕೆ ಉಂಟಾಗುವಂತಹ ಹೇಳಿಕೆ ಕೊಟ್ಟಿರುವ ನಟ ಕ್ಷಮೆ ಕೇಳುವವರೆಗೂ ಕೂಡ ಕರ್ನಾಟಕದಲ್ಲಿ ಕಮಲ್ ಹಾಸನ್ ಅವರ ಸಿನಿಮಾಗಳನ್ನು ಬ್ಯಾನ್ ಮಾಡಬೇಕು ಎಂದು ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ.
ತಮಿಳಿಗರು ಮಾತ್ರ ನಟನೆ ಹೇಳಿಕೆಯನ್ನು ಸಮರ್ಥಿಸಿಕೊಂಡು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇನ್ನು ಸಿನಿಮಾ ವಿಚಾರ ಹೇಳುತ್ತಿರುತ್ತಾರೆ ಮನಿರತ್ನ ಅವರು ಈ ಸಿನಿಮಾ ಗೆ ಆಕ್ಷನ್ ಕಟ್ ಹೇಳಿದ್ದಾರೆ. ತ್ರಿಶಾ, ಸಿಂಬು, ಅಭಿರಾಮಿ ಸೇರಿದಂತೆ ದೊಡ್ಡ ತಾರಾ ಬಳಗವೇ ಸಿನಿಮಾದಲ್ಲಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.