ಕಮಲಿ ಸೀರಿಯಲ್ ಅನಿಕಾ ಜಗ್ಗೇಶ್ ಅವರ ಫೇಮಸ್ ಡೈಲಾಗ್ ಗೆ ಡ್ಯಾನ್ಸ್ ಮಾಡಿದ ಈ ವಿಡಿಯೋ ನೋಡಿ, ನಿಜಕ್ಕೂ ಹೊಟ್ಟೆ ಹುಣ್ಣಾಗುವಷ್ಟು ನಗ್ತೀರಾ.

ಅನಿಕಾ ಅಲಿಯಾಸ್ ಗ್ಯಾಬ್ರಿಯಾಲ

ಗೇಬ್ರಿಯಾಲ ಎಂದರೆ ಇದು ಯಾರೋ ಫಾರಿನ್ ಹುಡುಗಿ ಇರಬೇಕು ಎಂದು ಎಲ್ಲರೂ ತಿಳಿದುಕೊಳ್ಳುತ್ತಾರೆ ಆದರೆ ಏಕೆ ಅಪ್ಪಟ ಕನ್ನಡತಿ ಅಲ್ಲದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಮಲಿ ಎನ್ನುವ ಸೂಪರ್ ಹಿಟ್ ಜನ ಮನ ಗೆದ್ದ ಸೀರಿಯಲ್ ಅಲ್ಲಿ ನಾಯಕ ನಾಯಕಿ ಪಾತ್ರಕ್ಕೆ ಸಮಾನವಾಗಿ ಇದ್ದ ಖಳನಾಯಕಿ ಪಾತ್ರದಲ್ಲಿ ನಟಿಸಿದ ಪ್ರತಿಭಾವಂತೆ.

ಈ ಧಾರಾವಾಹಿಯಲ್ಲಿ ರಿಷಿ ಹಾಗೂ ಕಮಲಿ ಎನ್ನುವ ನಾಯಕ ನಾಯಕಿ ಎಷ್ಟು ಫೇಮಸ್ ಆಗಿದ್ದರೂ ಅಷ್ಟೇ ಖಳನಾಯಕಿ ಪಾತ್ರವಾಗಿದ್ದ ಅನಿಕ ಕೂಡ ಫೇಮಸ್. ಈ ಅನಿಕಾ ಪಾತ್ರವನ್ನು ಅದ್ಭುತವಾಗಿ ನಟಿಸಿ ಕನ್ನಡದ ಸೀರಿಯಲ್ ಗಳಲ್ಲಿ ಸ್ಟೈಲ್ ಐಕಾನ್ ಖಳನಾಯಕಿ ಪಾತ್ರಕ್ಕೆ ಉದಾಹರಣೆಯಾಗಿ ಉದಾಹರಣೆ ಆದ ಅನಿಕ ಅವರ ನಿಜವಾದ ನಾಮಧೇಯ ಗೆಬ್ರಿಯಲಾ.

ಆದರೆ ಗೇಬ್ರಿಯಾಲ ಎನ್ನುವ ಹೆಸರಿಗಿಂತ ಅನಿಕ ಎನ್ನುವ ಹೆಸರಿನಿಂದಲೇ ಇವರನ್ನು ಜನ ಗುರುತಿಸುವುದು. ಅನಿಕಾ ಅಲಿಯಾಸ್ ಗೇಬ್ರಿಯಾಲ ಅವರು ಕಮಲಿ ಧಾರಾವಾಹಿ ಜೊತೆಗೆ ಜೀ ಕನ್ನಡ ವಾಹಿನಿಯ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಡಿಕೆಡಿ ಡ್ಯಾನ್ಸಿಂಗ್ ಶೋ ಅಲ್ಲಿ ಕಂಟೆಸ್ಟೆಂಟ್ ಆಗಿ ಕೂಡ ತನ್ನ ಛಾಪನ್ನು ಮೂಡಿಸಿದ ಈಕೆ ನೃತ್ಯದಲ್ಲಿ ತಾನೆಂತ ಮೇಲುಗೈ ಎನ್ನುವುದನ್ನು ತೋರಿಸಿದ್ದಾರೆ.

ಇದರ ಜೊತೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅನೇಕ ಫಂಕ್ಷನ್ಗಳಲ್ಲೂ ಭಾಗಿಯಾಗುತ್ತಾರೆ. ಆಗಾಗ ಇತರ ರಿಯಾಲಿಟಿ ಶೋಗಳನ್ನು ಕೂಡ ಅತಿಥಿ ಪಾತ್ರದಲ್ಲಿ ಬರುವ ಅನಿಕಾ ಅವರು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಮತ್ತು ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲೂ ಕೂಡ ಕೆಲವು ಎಪಿಸೋಡ್ ಗಳಲ್ಲಿ ಕಾಣಿಸಿಕೊಂಡಿದ್ದರು.

ಈಗ ಕಮಲಿ ಸೀರಿಯಲ್ ಮುಗಿದಿರುವುದು ಎಲ್ಲರಿಗೂ ಬೇಸರ ಮೂಡಿಸಿದೆ. ಇತರ ಕಲಾವಿದರಂತೆ ಅನಿಕ ಅಲಿಯಾಸ್ ಗೇಬ್ರಿಯಾಲ ಅವರು ಈಗ ಬೇರೆ ಪ್ರಾಜೆಕ್ಟ್ ಗಳತ್ತ ಮುಖ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ಬಹಳ ಆಕ್ಟಿವ್ ಆಗಿರುವ ಇವರು ಹಾಗಾಗ ಕೆಲವು ಪೋಸ್ಟ್ ಗಳನ್ನು ಆಗುತ್ತಾ ಸುದ್ದಿ ಆಗುತ್ತಿರುತ್ತಾರೆ.

ತನ್ನ ಫೋಟೋ ಶೂಟ್ಗಳು ಮತ್ತು ರೀಲ್ಸ್ ಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ಅನಿಕ ಅವರಿಗೆ ಸಾಕಷ್ಟು ಸಂಖ್ಯೆ ಅಭಿಮಾನಿಗಳು ಮತ್ತು ಫಾಲೋವರ್ಸ್ ಗಳು ಕೂಡ ಇದ್ದಾರೆ. ಈಗ ಇವರ ಖಾತೆಯಿಂದ ಹೊಸದೊಂದು ರೀಲ್ ಅಪ್ಲೋಡ್ ಆಗಿದ್ದು ಇದು ಬಹಳ ವಿಶೇಷವಾಗಿದೆ ಕಾರಣ ಜಗ್ಗೇಶ್ ಅವರ ಹಳೆ ಸಿನಿಮಾ ಒಂದರ ಫೇಮಸ್ ಡೈಲಾಗ್ ಗೆ ಅನಿಕ ರೀಲ್ಸ್ ಮಾಡಿದ್ದಾರೆ.

ಈ ವಿಡಿಯೋ ಈಗ ಜೀ ಕನ್ನಡ ವಾಹಿನಿಯ ಅಫಿಶಿಯಲ್ ಇನ್ಸ್ಟಾಗ್ರಾಮ್ ಅಕೌಂಟ್ ಅಲ್ಲಿ ಗೇಬ್ರಿಯಾಲ ಜೊತೆ ಟ್ಯಾಗ್ ಆಗಿ ಶೇರ್ ಆಗಿದೆ. ಸರ್ವರ್ ಸೋಮಣ್ಣ ಸಿನಿಮಾದಲ್ಲಿ ಜಗ್ಗೇಶ್ ಅವರು ಸಿನಿಮಾ ಅಡಿಶನ್ ಗೆ ಹೋಗಿದ್ದ ಸಂದರ್ಭ ಒಂದರ ಫೇಮಸ್ ಡೈಲಾಗ್ ಆದ ಮೈ ಡಿಯರ್ ರೇಖಾ ಏನು ನಿನ್ನ ಆಟ ಮಾಡು ನಿಮ್ಮ ಡ್ಯಾಡಿಗೆ ಟಾಟಾ ಹಾಕಿಸುವೆ ಮದುವೆ ಊಟ ಆಮೇಲೆ ಪ್ರೇಮದ ಆಟ ಡೈಲಾಗ್ ಅನ್ನು ಜಗ್ಗೇಶ್ ಅವರ ರೀತಿ ಪಂಚೆ ಟವಲ್ ಹಾಕಿಕೊಂಡು ಹಳ್ಳಿ ಹೈದನ ಅವತಾರದಲ್ಲಿ ಅಭಿನಯಿಸಿದ್ದಾರೆ.

ಇವರ ಈ ಲುಕ್ಕಿಗೆ ಹಾಗೂ ಡೈಲಾಗ್ ಡೆಲಿವರಿ ರೀತಿಗೆ ನೋಡಿದವರೆಲ್ಲ ಫಿದಾ ಆಗಿದ್ದಾರೆ. ಈ ಡೈಲಾಗ್ ಹೇಳುವಾಗ ಜಗ್ಗೇಶ್ ಅವರಿಗೆ ಉಮಾಶ್ರೀ ಅವರು ಕೌಂಟರ್ ಕೊಟ್ಟಿದ್ದರು, ಉಮಾಶ್ರೀ ಡೈಲಾಗ್ ಹೇಳುವಾಗ ಜಗ್ಗೇಶ್ ಅವರು ಕೊಟ್ಟಿದ್ದ ಎಕ್ಸ್ಪ್ರೆಶನ್‌ಗಳನ್ನು ತಾವು ಕೂಡ ಮಾಡಿ ತೋರಿಸಿದ್ದಾರೆ.

Leave a Comment

WhatsApp Group Join Now
Telegram Group Join Now