Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಚುಟು ಚುಟು ಹಾಡಿಗೆ ಕುರಿ ಪ್ರತಾಪ್ & ಶ್ವೇತ ಚಂಗಪ್ಪ ಮಾಡಿದ ಜಾಭರ್ದಾಸ್ತ್ ಡ್ಯಾನ್ಸ್.

Posted on December 8, 2022 By Kannada Trend News No Comments on ಚುಟು ಚುಟು ಹಾಡಿಗೆ ಕುರಿ ಪ್ರತಾಪ್ & ಶ್ವೇತ ಚಂಗಪ್ಪ ಮಾಡಿದ ಜಾಭರ್ದಾಸ್ತ್ ಡ್ಯಾನ್ಸ್.

ಸೂಪರ್ ಕ್ವೀನ್ ಶೋ

ಶ್ವೇತಾ ಚಂಗಪ್ಪ ರವರು ಕನ್ನಡದ ಕಿರುತೆರೆಯಲ್ಲಿ ಅವರದೇ ಆದ ಹೆಸರನ್ನು ಮೂಡಿಸಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಕಿರುತೆರೆಯ ನಿರೂಪಕಿಯಾಗಿ ಪ್ರಖ್ಯಾತಿಯನ್ನು ಹೊಂದಿದ್ದಾರೆ. ಮೊದಲು ಸುಮತಿ ಧಾರಾವಾಹಿಯಲ್ಲಿ ಅವಕಾಶವನ್ನು ಪಡೆದುಕೊಂಡ ಶ್ವೇತಾರವರು ನಂತರ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಾದಂಬರಿ ಧಾರಾವಾಹಿಯ ಮೂಲಕ ಜನರ ಮನಸನ್ನು ಗೆದ್ದಿದ್ದಾರೆ.

ಇವರು ಮೂಲತಃ ಕೊಡಗಿನ ಸೋಮವಾರಪೇಟೆಯವರು. ಹೌದು ಎಸ್ ನಾರಾಯಣ್ ಅವರು ನಿರ್ದೇಶನದ ಸುಮತಿ ಮೂಲಕ ಪಾದಾರ್ಪಣೆಯನ್ನು ಮಾಡಿದ ಶ್ವೇತಾ ಅವರು ಕಾದಂಬರಿ ಮೂಲಕ ಇಡೀ ಕರ್ನಾಟಕ ಜನತೆಯನ್ನು ಅವರತ್ತ ಸೆಳೆದಿದ್ದರು.ಈ ಧಾರಾವಾಹಿ ಆ ಕಾಲದಲ್ಲಿ ಸೃಷ್ಟಿಸಿದ್ದ ಕ್ರೇಜ್ ಅಭೂತಪೂರ್ವವಾಗಿತ್ತು.ಮುಂದೆ ಈ ಟಿವಿ ಕನ್ನಡದಲ್ಲಿ ಪ್ರಸಾರವಾದ `ಸುಕನ್ಯ’ ಮತ್ತು `ಅರುಂಧತಿ’ ಧಾರಾವಾಹಿಯಲ್ಲಿಯೂ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು.

ನಟನೆ ಮಾತ್ರವಲ್ಲದೇ ನಿರೂಪಣೆಗೂ ಇಳಿದ ಶ್ವೇತಾ ಕಿರುತೆರೆಯಲ್ಲಿ `ಯಾರಿಗುಂಟು ಯಾರಿಗಿಲ್ಲಾ’ ಎಂಬ ಕಾರ್ಯಕ್ರಮ ರೂಪಿಸಿ ಸೈ ಎನಸಿಕೊಂಡರು.ನಂತರ ಜೀ ಕನ್ನಡದಲ್ಲಿ `ಕುಣಿಯೋಣ ಬಾರಾ’ ಎಂಬ ಚಿಣ್ಣರರ ನೃತ್ಯ ಶೋ ಅನ್ನು ನಿರೂಪಿಸಿದರು. `ಡ್ಯಾನ್ಸ್ ಜ್ಯೂನಿಯರ್ಸ್ ಡ್ಯಾನ್ಸ್’ ಮುಂತಾದ ರಿಯಾಲಿಟಿ ಶೋಗಳ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಇತ್ತೀಚಿಗೆ ನಡೆದ ಜೋಡಿ ನಂಬರ್ ಒನ್ ಕಾರ್ಯಕ್ರಮವನ್ನು ಕೂಡ ಶ್ವೇತಾ ಚಂಗಪ್ಪ ರವರು ನಿರೂಪಕಿಯಾಗಿ ನಡೆಸಿಕೊಟ್ಟಿದ್ದಾರೆ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ತಂಗಿಗಾಗಿ’ ಚಿತ್ರದಲ್ಲಿ ದರ್ಶನ್ ಅವರ ತಂಗಿ ಪಾತ್ರದಲ್ಲಿ ಅಭಿನಯಿಸುವ ಮೂಲಕ ಸಿನಿಪಯಣ ಆರಂಭಿಸಿದರು.ನಂತರ ಸಾಹಸಸಿಂಹ ವಿಷ್ಣುವರ್ಧನ ಅಭಿನಯದ `ವರ್ಷ’ ಚಿತ್ರದಲ್ಲಿ ನಟಿಸಿ ತಮ್ಮ ಅಭಿನಯ ಪ್ರೌಡಿಮೆ ಮೆರೆದರು.

`ಕೃಷ್ಣನ್ ಮ್ಯಾರೇಜ್ ಸ್ಟೋರಿ’,`ಗನ್’ ಮುಂತಾದ ಚಿತ್ರಗಳಲ್ಲಿ ಕಂಠದಾನ ಕಲಾವಿದೆಯಾಗಿ ಕೂಡ ಮೆಚ್ಚುಗೆ ಗಳಿಸಿದರು.ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ 2 ನೇ ಸೀಜನ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ಇವರು ನಾಲ್ಕನೆ ಸ್ಥಾನಗಳಿಸಿದರು. ಇವರ ಜೊತೆ ಅಕುಲ್ ಬಾಲಾಜಿ, ಸೃಜನ್ ಲೋಕೇಶ್, ಶಕೀಲಾ, ನೀತು ಮುಂತಾದವರು ಈ ಸೀಸನ್‌ನಲ್ಲಿ ಭಾಗವಹಿಸಿದ್ದರು.

ಸೃಜನ್ ಲೋಕೇಶ್ ನಿರೂಪಣೆಯ `ಮಜಾಟಾಕೀಸ್’ ಕಾಮಿಡಿ ಶೋನಲ್ಲಿ ರಾಣಿ ಪಾತ್ರಧಾರಿಯಾಗಿ ಸೃಜನ್ ಜೊತೆ ಸೇರಿ ಪ್ರೇಕ್ಷಕರಿಗೆ ಕಚಗುಳಿ ಇಡುತ್ತಿದ್ದರು. ಎರಡು ಬಾರಿ ಜೀ ಕನ್ನಡದ ಬೆಸ್ಟ್ ಆಂಕರ್ ಪ್ರಶಸ್ತಿ ಪಡೆದಿದ್ದಾರೆ. ಸದ್ಯ ಶ್ವೇತಾ ಚಂಗಪ್ಪ ರವರು ತಮ್ಮ ಮಗುವಿನ ಜನನದ ನಂತರ ಕೆಲವು ವರ್ಷಗಳು ಯಾವುದೇ ಚಿತ್ರರಂಗಕ್ಕು ಅಥವಾ ಕಿರುತ್ತರೆಗು ಬಂದಿರಲಿಲ್ಲ ಈಗ ಸ್ವಲ್ಪ ಬಿಡುವಿನ ನಂತರ ಜೀ ಕನ್ನಡದ ಜೋಡಿ ನಂಬರ್ ವನ್ ರಿಯಾಲಿಟಿ ಶೋ ಮೂಲಕ ಮತ್ತೆ ನಿರುಪಕಿಯಾಗಿ ಕಿರುತೆರೆಗೆ ಹಿಂದಿರುಗಿದ್ದಾರೆ.

ಹೌದು ಈಗ ಹೊಸದಾಗಿ ಶುರುವಾಗಿರುವ ಸೂಪರ್ ಕ್ವೀನ್ ರಿಯಾಲಿಟಿ ಶೋ ಅಲ್ಲೂ ಕೂಡ ಶ್ವೇತಾ ಚಂಗಪ್ಪ ರವರು ನಿರೂಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಅಲ್ಲದೆ ಇದರ ಜೊತೆಗೆ ಕುರಿ ಪ್ರತಾಪ್ ರವರು ಕೂಡ ನಿರೂಪಣೆಯನ್ನು ಮಾಡಲಿರುವುದು ವಿಶೇಷವಾಗಿದೆ. ಸದ್ಯ ಶ್ವೇತಾ ಚಂಗಪ್ಪ ರವರು ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಆಕ್ಟಿವ್ ಆಗಿ ಇರುತ್ತಾರೆ. ಇನ್ನು ಇನ್ಸ್ಟಾಗ್ರಾಮ್ ನ ರೂಲ್ಸ್ ಮೂಲಕ ತನ್ನ ಅಭಿಮಾನಿಗಳನ್ನು ಮನರಂಜಿಸುತ್ತಾ ಇರುತ್ತಾರೆ.

ಇತ್ತೀಚಿಗೆ ಶ್ವೇತಾ ಚಂಗಪ್ಪ ಅವರು ಹಾಗೂ ಕುರಿ ಪ್ರತಾಪ್ ಅವರೂ ಸೂಪರ್ ಕ್ವೀನ್ ವೇದಿಕೆಯ ಮೇಲೆ ಶರಣ್ ರವರ ಚುಟು ಚುಟು ಹಾಡಿಗೆ ರೀಲ್ಸ್ ಮಾಡಿದ್ದಾರೆ. ಹೆಚ್ಚು ಫಾಲೋವರ್ಸ್ ಅನ್ನು ಹೊಂದಿರುವ ಶ್ವೇತಾ ಚಂಗಪ್ಪ ರವರು ಹೆಚ್ಚು ಲೈಕ್ಗಳನ್ನು ಕೂಡ ಪಡೆದಿದ್ದಾರೆ ಸದ್ಯ ಈ ವಿಡಿಯೋ ಇನ್ಸ್ಟಾಗ್ರಾಮ್ ರಿಲ್ಸ್ ನಲ್ಲಿ ವೈರಲ್ ಆಗಿರುವುದು ನಿಜ.

View this post on Instagram

A post shared by Swetha Changappa (@swethachangappa)

Entertainment Tags:Kuri Prathap, Shwetha Chengappa, Super Queen, Zee kannada
WhatsApp Group Join Now
Telegram Group Join Now

Post navigation

Previous Post: ಕಮಲಿ ಸೀರಿಯಲ್ ಅನಿಕಾ ಜಗ್ಗೇಶ್ ಅವರ ಫೇಮಸ್ ಡೈಲಾಗ್ ಗೆ ಡ್ಯಾನ್ಸ್ ಮಾಡಿದ ಈ ವಿಡಿಯೋ ನೋಡಿ, ನಿಜಕ್ಕೂ ಹೊಟ್ಟೆ ಹುಣ್ಣಾಗುವಷ್ಟು ನಗ್ತೀರಾ.
Next Post: ಅಂದು ಇಡೀ ಚಿತ್ರರಂಗವೇ ಬೇಡ ಬೇಡ ಎಂದು ರವಿಚಂದ್ರನ್ ಗೆ ಬುದ್ದಿ ಹೇಳಿದ್ರು, ಆದ್ರೂ ಕೂಡ ರಜನಿಕಾಂತ್ ಕಾಂತ್ ಗೆ ರವಿಚಂದ್ರನ್ ಸವಾಲ್ ಹಾಕಿದ್ರು ನಂತರ ಇಬ್ಬರಲ್ಲಿ ಗೆದ್ದವರು ಯಾರು ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore