Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕನ್ನಡತಿ ಧಾರವಾಹಿ ಇಂದ ಹೊರನಡೆದ ನಟ, ಹೊಸ ತಿರುವು ಪಡೆದುಕೊಂಡು ಧಾರವಾಹಿ.

Posted on June 20, 2022June 20, 2022 By Kannada Trend News No Comments on ಕನ್ನಡತಿ ಧಾರವಾಹಿ ಇಂದ ಹೊರನಡೆದ ನಟ, ಹೊಸ ತಿರುವು ಪಡೆದುಕೊಂಡು ಧಾರವಾಹಿ.

ಜನರಿಗೆ ಸಾಕಷ್ಟು ಮನರಂಜನೆಯನ್ನು ನೀಡುತ್ತಿರುವಂತೆ ಆದಷ್ಟೋ ಧಾರವಾಹಿಗಳು, ಸಾಕಷ್ಟು ವಾಹಿಗಳಲ್ಲಿ ಪ್ರಸಾರವಾಗುತ್ತಿದೆ. ಯಾವುದೇ ಹೊಸ ಧಾರವಾಹಿಗಳು ಬಂದರೂ ಸರಿಯೇ ಜನರು ವೀಕ್ಷಿಸಿ ಮನ್ನಣೆಯನ್ನು ವ್ಯಕ್ತಪಡಿಸುತ್ತಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಒಂದು ಧಾರಾವಾಹಿಯು ವಿಭಿನ್ನ ರೀತಿಯಾದಂತಹ ಒಂದು ಕಥಾಸಾರವನ್ನು ಹೊಂದಿದೆ ಈ ಧಾರವಾಹಿಯಲ್ಲಿ ಕನ್ನಡದ ಕಂಪನ್ನು ಹೆಚ್ಚು ಸುಂದರವಾಗಿ ತಿಳಿಸಲು ಹೊರಟಿದ್ದಾರೆ. ಕನ್ನಡ ಮಾತನಾಡಲು ಯಾರೆಲ್ಲಾ ಹಿಂಜರಿಯುತ್ತಾರೋ ಅಂತವರಿಗೆ ಕನ್ನಡತಿ ಧಾರವಾಹಿಯನ್ನು ನೋಡಿದರೆ ಸಾಕು ಕನ್ನಡದ ಮೇಲೆ ಇರುವಂತಹ ಅಭಿಮಾನವು ಹೆಚ್ಚಾಗುತ್ತದೆ. ನಮ್ಮ ಮಾತೃಭಾಷೆ ಕನ್ನಡವನ್ನು ಎತ್ತಿ ಹಿಡಿಯುವಂತಹ ಪ್ರಯತ್ನವನ್ನು ಈ ಒಂದು ಧಾರವಾಹಿಯ ಮೂಲಕ ಮಾಡಲಾಗಿದೆ. ಈ ಒಂದು ಧಾರಾವಾಹಿಯನ್ನು ಯಶವಂತ್ ಅವರು ನಿರ್ದೇಶನ ಮಾಡುತ್ತಿದ್ದು, ಧಾರವಾಹಿ ಅತಿ ಹೆಚ್ಚಾಗಿ ಜನಮನ್ನಣೆಯನ್ನು ಪಡೆದುಕೊಂಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಲರ್ಸ್ ಕನ್ನಡ ವಾಹಿನಿಯ ಏರ್ಪಡಿಸಿ ದಂತಹ ಅನುಬಂಧ ಅವಾರ್ಡ್ ನಲ್ಲಿ ಅತಿ ಹೆಚ್ಚು ಅವಾರ್ಡ್ ಗಳನ್ನು ಈ ಒಂದು ಕನ್ನಡತಿ ಧಾರಾವಾಹಿ ತನ್ನ ಮುಡಿಗೇರಿಸಿಕೊಂಡಿದೆ. ಈ ಒಂದು ಧಾರಾವಾಹಿಯಲ್ಲಿ ಮನರಂಜನೆಯ ಜೊತೆಗೆ ಕನ್ನಡದ ವಿಸ್ತಾರತೆಯನ್ನು ತಿಳಿಸುವಂತಹ ಪ್ರಯತ್ನವನ್ನು ಮಾಡಿದ್ದಾರೆ.

ಕರ್ನಾಟಕದಲ್ಲಿ ನಾವು ಇದ್ದುಕೊಂಡು ಕರ್ನಾಟಕದ ಮೆರುಗನ್ನು ಹೆಚ್ಚಿಸಬೇಕು ಎನ್ನುವಂತಹ ಉದ್ದೇಶದಿಂದ ನಿರ್ದೇಶಕ ಯಶವಂತ್ ಅವರು ಈ ಒಂದು ಧಾರವಾಹಿಯ ಮೂಲಕ ಜನರಲ್ಲಿ ಕನ್ನಡದ ಅಭಿಮಾನವನ್ನು ಹೆಚ್ಚು ಮಾಡಲು ಹೊರಟಿದ್ದಾರೆ. ಅಷ್ಟೇ ಅಲ್ಲದೆ ಈ ಒಂದು ಧಾರಾವಾಹಿಯೂ ಬೇರೆ ಭಾಷೆಗಳಿಗೂ ಸಹ ಡಬ್ ಮಾಡಲಾಗುತ್ತಿದೆ ಹಿಂದಿ ಮತ್ತು ಮರಾಠಿ ಭಾಷೆಯಲ್ಲಿ ಕನ್ನಡತಿ ಧಾರಾವಾಹಿ ತರ್ಜುಮೆ ಆಗುತ್ತಿದೆ ಎನ್ನುವುದು ಹೆಮ್ಮೆಯ ವಿಚಾರವಾಗಿದೆ. ಈ ಒಂದು ಕನ್ನಡತಿ ಧಾರಾವಾಹಿ ನೈಜತೆಯಿಂದ ಕೂಡಿರುವುದರ ಜೊತೆಗೆ ಸಹಜತೆಯಿಂದ ಕೂಡಿದೆ ಇದರಲ್ಲಿ ಬರುವಂತಹ ಪ್ರತಿಯೊಂದು ಸನ್ನಿವೇಶಗಳು ಸಹ ಜನರಲ್ಲಿ ನೋಡುವಂತಹ ಉತ್ಸಾಹದ ಹೆಚ್ಚು ಮಾಡುತ್ತಿದೆ. ವೀಕ್ಷಕರು ಎಲ್ಲರೂ ಸಹ ಈ ಒಂದು ಕನ್ನಡತಿ ಧಾರಾವಾಹಿ ಯಲ್ಲಿ ಬರುವಂತಹ ನಾಯಕ ಮತ್ತು ನಾಯಕಿ ಅಂದರೆ ಹರ್ಷ ಮತ್ತು ಭುಮಿಯ ಅವರ ಪ್ರೀತಿಯ ವಿಚಾರವಾಗಿ ಕಾಯುತ್ತಿದ್ದರು ಇದೀಗ ಅವರಿಬ್ಬರ ಮಧ್ಯೆ ಪ್ರೀತಿ ಮೂಡಿ ಆ ಪ್ರೀತಿಯು ಮದುವೆ ಹಂತಕ್ಕೂ ಸಹ ತಲುಪಿದೆ ಅವರಿಬ್ಬರ ಮದುವೆಯನ್ನು ಸಾಕಷ್ಟು ವಿಜೃಂಭಣೆಯಿಂದ ನಡೆಸಲಾಗುತ್ತಿದೆ.

ಇದರಲ್ಲಿ ಬರುವಂತಹ ಪ್ರತಿಯೊಂದು ಶಾಸ್ತ್ರಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಳ್ಳಲಾಗುತ್ತಿದೆ. ಅಂದರೆ ಶಾಸ್ತ್ರಬದ್ಧವಾಗಿ ಒಂದು ಮದುವೆಯಲ್ಲಿ ಯಾವ ಯಾವ ಶಾಸ್ತ್ರ ಕಾರ್ಯಕ್ರಮಗಳು ಇರಬೇಕು ಅದೆಲ್ಲವನ್ನು ಸಹ ಧಾರವಾಹಿಯ ಮೂಲಕ ಜನರಿಗೆ ಬಿತ್ತರಿಸುತ್ತಿದ್ದಾರೆ. ಆ ಶಾಸ್ತ್ರಿಗಳ ನಡುವೆಯೆ ಇರುವಂತಹ ಅರ್ಥವನ್ನು ಸಹ ಜನರಿಗೆ ಆ ತಿಳಿಸುವಂತಹ ಪ್ರಯತ್ನವನ್ನು ಮಾಡಿದ್ದಾರೆ. ಬಳೆ ಶಾಸ್ತ್ರ, ಅರಿಶಿನ ಶಾಸ್ತ್ರ, ಗೌರಿಪೂಜೆ ಈ ಎಲ್ಲ ರೀತಿಯಾದಂತಹ ಶಾಸ್ತ್ರಗಳನ್ನು ನಡೆಸಿದ್ದು ಇದೀಗ ಮದುವೆ ಹಂತಕ್ಕೆ ಅಂದರೆ ಧಾರಾ ಮುಹೂರ್ತದ ಹಂತಕ್ಕೆ ತಲುಪಿದೆ. ಇದೀಗ ಧಾರಾವಾಹಿಯಲ್ಲಿ ನಟಿಸುತ್ತಿದ್ದ ದಂತಹ ಡಾಕ್ಟರ್ ದೇವ್ ಪಾತ್ರದ ವಿಜಯ್ ಕೃಷ್ಣ ಅವರು ಕಾರಣಾಂತರಗಳಿಂದ, ವೈಯಕ್ತಿಕ ಕಾರಣಗಳಿಂದಾಗಿ ಈ ಒಂದು ಸೀರಿಯಲ್ ಇಂದ ಹೊರನಡೆದಿದ್ದಾರೆ. ನನಗೆ ಬೇರೆ ಬೇರೆ ರೀತಿಯಾದಂತಹ ಕಮಿಟ್ಮೆಂಟ್ಗಳು ಇರುವುದರಿಂದ ನಾನು ಈ ಧಾರಾವಾಹಿಯಲ್ಲಿ ನಟಿಸಲು ಆಗುತ್ತಿಲ್ಲ ಆದ್ದರಿಂದ ನಾನು ಈ ಧಾರವಾಹಿಯಿಂದ ಹೊರ ನಡೆಯುತ್ತಿದ್ದೇನೆ ಎಂದು ವಿಜಯ್ ಕೃಷ್ಣ ತಿಳಿಸಿದ್ದಾರೆ. ಡಾಕ್ಟರ್ ದೇವ್‌ ಅವರ ಪಾತ್ರಕ್ಕೆ ಇದೀಗ ಮತ್ತೊಬ್ಬ ನಟನಾದ ಹೇಮಂತ್ ಕುಮಾರ್ ಎನ್ನುವಂತಹ ಇನ್ನೊಬ್ಬ ನಟ ಬಂದಿದ್ದಾರೆ. ಮದುವೆ ಶಾಸ್ತ್ರಗಳು ನಡೆಯುತ್ತಿರುವಂತಹ ಸಂದರ್ಭದಲ್ಲಿ ಅವರ ಪಾತ್ರದ ಎಂಟ್ರಿಯೂ ಸಹ ಆಗಿದೆ. ಇನ್ನು ಮುಂದೆ ಡಾಕ್ಟರ್ ದೇವ್ ಅವರ ಪಾತ್ರಕ್ಕೆ ವಿಜಯ್ಕೃಷ್ಣ ಅವರ ಬದಲಾಗಿ ಹೇಮಂತ್ ಕುಮಾರ್ ಅವರ ನಟನೆಯನ್ನು ಮುಂದುವರಿಸಿಕೊಂಡು ಹೋಗಲಿದ್ದಾರೆ.

ಈ ಒಂದು ಕನ್ನಡತಿ ಧಾರಾವಾಹಿಯು ಬೇರೆಲ್ಲ ಧಾರಾವಾಹಿಗಳಿಗಿಂತ ಹೆಚ್ಚಿನ ಮನ್ನಣೆಯನ್ನು ಪಡೆದುಕೊಂಡು ಒಳ್ಳೆಯ ಟಿ ಆರ್ ಪಿ ಸಹ ಈ ಧಾರವಾಹಿಗೆ ಬರುತ್ತಿದೆ. ಮುಂದಿನ ದಿನಗಳಲ್ಲಿ ಯಾವ ಯಾವ ಸನ್ನಿವೇಶಗಳು ಈ ಒಂದು ಧಾರವಾಹಿಯಲ್ಲಿ ಎದುರಾಗುತ್ತದೆ ಎಂದು ಕಾದು ನೋಡಬೇಕಿದೆ. ನಮ್ಮ ಕನ್ನಡದಲ್ಲಿ ಇದೊಂದು ಹೆಮ್ಮೆಯ ಧಾರವಾಹಿ ಎಂದು ಹೇಳಬಹುದು ಯಾಕೆಂದರೆ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿರುವುದು ಅಷ್ಟೇ ಅಲ್ಲದೆ ಬೇರೆ ಭಾಷೆಗಳಿಗು ಕನ್ನಡತಿ ಧಾರಾವಾಹಿಯನ್ನು ತರ್ಜುಮೆ ಮಾಡಿ ನಡೆಸಲಾಗುತ್ತಿದೆ. ಅಷ್ಟರಮಟ್ಟಿಗೆ ಈ ಒಂದು ಧಾರಾವಾಹಿಯ ಕಥಾ ಸಾರವು ಎಲ್ಲರ ಮನಸ್ಸನ್ನು ಮುಟ್ಟಿದೆ ಅಷ್ಟೇ ಅಲ್ಲದೆ ಜನರಿಗೆ ತುಂಬಾ ಇಷ್ಟವಾಗುವಂತಹ ರೀತಿಯಲ್ಲಿ ಧಾರವಾಹಿಯನ್ನು ನಡೆಸಿಕೊಂಡು ಹೋಗುತ್ತಿದ್ದು ಕನ್ನಡತಿ ಧಾರಾವಾಹಿಯಲ್ಲಿ ಒಳ್ಳೆ ಒಳ್ಳೆಯ ಕಲಾವಿದರು ಅಭಿನಯ ಮಾಡುತ್ತಿದ್ದಾರೆ. ಆದ್ದರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬೇರೆ ಎಲ್ಲಾ ಧಾರವಾಹಿಗಳ ಪೈಕಿ ಕನ್ನಡತಿ ಧಾರಾವಾಹಿಯನ್ನು ಜನರು ಇಷ್ಟಪಟ್ಟು ನೋಡುತ್ತಿದ್ದಾರೆ ಈ ಚಿತ್ರತಂಡದ ನಿಜವಾದಂತಹ ಕಥಾಸಾರ ಮುಂದುವರೆದುಕೊಂಡು ಹೋಗಿದ್ದೆ ಆದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿಮಾನಿಗಳು ಇಟ್ಟುಕೊಳ್ಳುವುದರಲ್ಲಿ ಎರಡು ಮಾತಿಲ್ಲ.‌ ಈ ಧಾರವಾಹಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

Cinema Updates Tags:Kannadathi, Kiranraj, Ranjaniraghavan
WhatsApp Group Join Now
Telegram Group Join Now

Post navigation

Previous Post: ನಟ ದುನಿಯಾ ವಿಜಯ್ ಹಾಗೂ ಕೀರ್ತಿ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತ.? ನಿಜಕ್ಕೂ ಶಾಕ್ ಆಗುತ್ತಿರ
Next Post: ಅಪ್ಪು ಅಭಿನಯಿಸಬೇಕಾಗಿದ್ದ ಸಿನಿಮಾವನ್ನು ಇದೀಗ ಅಭಿಷೇಕ್ ಅಂಬರೀಶ್ ಮಾಡುತ್ತಿದ್ದಾರೆ, ಯಾವ ಸಿನಿಮಾ ನೋಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore