ಬೆಂಗಳೂರಿನ ಚಿನ್ನಸ್ವಾಮಿ ಸ್ಟುಡಿಯೋ ಬಳಿ ಇಂದು, ಕ್ರಿಕೆಟ್ ಹಬ್ಬ ನಡೆಯುತ್ತಿದೆ. ಇಡೀ ಕನ್ನಡ ಸಿನಿಮಾ ಇಂಡಸ್ಟ್ರಿಯೇ ಇಂದು ಮೈದಾನದ ತುಂಬಾ ತುಂಬಿಕೊಳ್ಳಲಿದೆ. ಇದೇ ಉದ್ದೇಶಕ್ಕಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕರ್ನಾಟಕ ಚಲನಚಿತ್ರ ಕಪ್ ಪಂದ್ಯಾವಳಿಯ ರುವಾರಿಯಾಗಿ ಬಹಳ ಉತ್ಸಾಹ ತೆಗೆದುಕೊಂಡು ಈ ನೆಪದಲ್ಲಿ ಎಲ್ಲಾ ಕಲಾವಿದರನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿದ್ದಾರೆ. ಕನ್ನಡದ ಅನೇಕ ಘನಕಲಿಗಳು ಇಂದು ಸಿನಿಮಾ ಸೆಟ್ ಬಿಟ್ಟು ಕ್ರೀಡಾಂಗಣದಲ್ಲಿ ಕೆಸಿಸಿ ಕಪ್ ಗಾಗಿ ಸೆಣಸಾಡಲಿದ್ದಾರೆ.
ಈ ಹಿಂದೆ ಕೂಡ ಈ ರೀತಿ ಮ್ಯಾಚ್ ಏರ್ಪಡಿಸಲಾಗಿತ್ತು, ಈಗ ಎರಡನೇ ಬಾರಿ ಕೆಸಿಸಿ ಕಪ್ ನಡೆಯುತ್ತಿದೆ , ಅದರಲ್ಲಿ ಕನ್ನಡ ಕಲಾವಿದರ ಜೊತೆ ವೀರೇಂದ್ರ ಸೆಹ್ವಾಗ್ ಹರ್ಶಲ್ ಗಿಬ್ಸ್ ಕ್ರಿಕೆಟಿಗರು ಕೂಡ ತಂಡವನ್ನು ಸೇರಿಕೊಂಡಿದ್ದು ಬಹಳ ವಿಶೇಷ. ಈ ಬಾರಿ ಫೆಬ್ರವರಿ 24 ಮತ್ತು 25 ರ ಶನಿವಾರ ಮತ್ತು ಭಾನುವಾರದಂದು ಕೆಸಿಸಿ ಯ ಮ್ಯಾಚ್ಗಳು ನಡೆಯುತ್ತಿದೆ. ಈಗಾಗಲೇ ಚಿನ್ನಸ್ವಾಮಿ ಸ್ಟುಡಿಯೋದಲ್ಲಿ ಸಕಲ ರೀತಿಯ ಸಿದ್ಧತೆಯು ನಡೆದಿದ್ದು ನೋಡಿ ಕಣ್ತುಂಬಿಕೊಳ್ಳಲು ಸಿನಿಮಾ ತಾರೆಗಳ ಅಭಿಮಾನಿಗಳು ಮತ್ತು ಕ್ರಿಕೆಟ್ ಅಭಿಮಾನಿಗಳ ವಲಯವು ಕಾಯುತ್ತಿದೆ.
ಈ ವರ್ಷ ಕೂಡ ಕೆಸಿಸಿ 2 ಅಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕ್ರಿಕೆಟಿಗರು ಕೂಡ ಕರ್ನಾಟಕದ ಕಲಾವಿದ ತಂಡವನ್ನು ಮುನ್ನಡೆಸುವ ಉದ್ದೇಶದಿಂದ ತಂಡಗಳ ಜೊತೆ ಸೇರಿಕೊಂಡಿದ್ದಾರೆ. ಕ್ರಿಕೆಟ್ ಅಲ್ಲಿ 360°, ಕ್ರಿಕೆಟ್ ಯುನಿವರ್ಸಲ್ ಬಾಸ್ ಎಂದೇ ಹೆಸರಾಗಿರುವ ಕ್ರಿಸ್ ಗೇಲ್ ಅವರು ಕೂಡ ಈ ಬಾರಿ ಆಡುತ್ತಿದ್ದು, ಇವರೊಂದಿಗೆ ಮಿಸ್ಟರ್ ಐಪಿಎಲ್ ಎಂದ ಹೆಸರಾಗಿರುವ ಸುರೇಶ್ ರೈನಾ ಅವರು ಸಹ ಈ ಬಾರಿ ಕೆಸಿಸಿ ಅಖಾಡಕ್ಕಿಳಿದಿದ್ದಾರೆ.
ಇವರೊಂದಿಗೆ ಕಳೆದ ವರ್ಷ ಕೂಡ ಆಡಿದ್ದ ವೀರೇಂದ್ರ ಸೆಹ್ವಾಗ್, ಹರ್ಶಲ್ ಗಿಬ್ಸ್, ಬದ್ರಿನಾಥ್, ಬ್ರೈನ್ ಲಾರ್, ತಿಲಕರತ್ನ ದಿಲ್ಶಾನ್ ಇವರುಗಳು ಸಹ ಈ ಬಾರಿಯ ಕೆಸಿಸಿ ಪಂದ್ಯಾವಳಿಯಲ್ಲಿ ಆಟ ಆಡಲಿದ್ದಾರೆ. ಈಗ ಇದೆಲ್ಲರ ಜೊತೆ ಮತ್ತೊಂದು ವಿಷಯದ ಬಗ್ಗೆ ಬಾರಿ ಕುತೂಹಲ ವ್ಯಕ್ತ ಆಗುತ್ತಿದೆ. ಅದೇನೆಂದರೆ, ದೇಶ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಈ ಕ್ರಿಕೆಟಿಗರು ಬಹುದೊಡ್ಡ ಮಟ್ಟದ ಸಂಭಾವನೆಯನ್ನು ಪಡೆಯುತ್ತಾರೆ.
ಹಾಗಾಗಿ ಕೆಸಿಸಿ ಅಲ್ಲಿ ಆಡಲು ಅವರಿಗೆ ಎಷ್ಟು ಹಣ ಕೊಟ್ಟಿರಬಹುದು ಎನ್ನುವುದು ಎಲ್ಲರ ಕುತೂಹಲ ಇದರ ಬಗ್ಗೆ ಕೂಡ ಮಾಹಿತಿ ಹೊರ ಬಿದ್ದಿದ್ದು, ಇದು ಎರಡೇ ದಿನದ ಮ್ಯಾಚ್ ಆಗಿರುವ ಕಾರಣ ಫೆಬ್ರವರಿ 24 ಮತ್ತು 25 ಎರಡು ದಿನದ ಪಂದ್ಯಾವಳಿಯಲ್ಲಿ ಭಾಗವಹಿಸಲು ಈ ಎಲ್ಲಾ ಕ್ರಿಕೆಟಿಗರಿಗೂ ಒಂದರಿಂದ ಒಂದೂವರೆ ಕೋಟಿ ರೂಗಳನ್ನು ತೆರಲಾಗಿದೆಯಂತೆ. ಈಗಾಗಲೇ ತಿಂಗಳ ಹಿಂದೆಯಿಂದಲೇ ಕನ್ನಡ ಕಲಾವಿದರ ದಂಡು ಮೈದಾನದಲ್ಲಿ ಜಾಂಡ ಹೂಡಿ ಸಾಕಷ್ಟು ತಯಾರಿ ಮಾಡಿಕೊಂಡಿದೆ.
ಜೊತೆಗೆ ತಂಡದ ಕ್ಯಾಪ್ಟನ್ ಗಳಾಗಿರುವ ಶಿವಣ್ಣ, ಸುದೀಪ್, ಉಪೇಂದ್ರ, ಗಣೇಶ್, ಧ್ರುವ ಮತ್ತು ಡಾಲಿ ಧನಂಜಯ್ ಕೂಡ ತಂಡದವರ ಜೊತೆ ಬೆವರು ಸುರಿಸಿ ಸಾಕಷ್ಟು ತಾಲೀಮು ಮಾಡಿ ತಯಾರಾಗಿದ್ದಾರೆ. ಒಂದು ಬಳಗ ಚಿನ್ನ ಸ್ಟುಡಿಯೋ ಬಳಿ ದಾಖಲಾಗಿ ನೆಚ್ಚಿನ ತಾರೆಯನ್ನು ಕಣ್ತುಂಬಿಸಿಕೊಳ್ಳುವುದರ ಜೊತೆಗೆ ಲೈವ್ ಆಗಿ ಮ್ಯಾಚ್ ನೋಡುತ್ತಿದ್ದರೆ, ಮತ್ತೊಂದು ವಲಯ ಜಿ ಪಿಚ್ಚರ್ ಪ್ಲಾಟ್ ಫಾರ್ಮ್ ಅಲ್ಲಿ ಇದರ ಮ್ಯಾಚ್ ಗಳನ್ನು ಮನೆಯಲ್ಲಿ ಕುಳಿತು ಎಂಜಾಯ್ ಮಾಡುತ್ತಾ ಈ ವೀಕೆಂಡ್ ಅನ್ನು ಹಿಟ್ ವೀಕೆಂಡ್ ಆಗಿ ಮಾಡಿಕೊಳ್ಳುತ್ತಿದ್ದಾರೆ.