ನಟನೆ ಬಿಟ್ಟು ಹೊಸ ಉದ್ಯಮ ಆರಂಭಿಸಿದ ನಟ ಶೈನ್ ಶೆಟ್ಟಿ, ಸ್ಯಾಂಡಲ್ ವುಡ್ ತಾರೆಯರಿಂದ ಹರಿದು ಬಂತು ಶುಭಾಶಯದ ಮಹಾಪುರ.

 

ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಅವರು ಬಿಗ್ ಬಾಸ್ ಗೆ ಹೋಗುವ ಮುನ್ನ ಗಲ್ಲಿ ಕಿಚ್ಚನ್ ಎನ್ನುವ ಮೊಬೈಲ್ ಕ್ಯಾಂಟೀನ್ ನಡೆಸುತ್ತಿದ್ದರು. ಯಾಕೆಂದರೆ ಸಿನಿಮಾ ಮಾಡಬೇಕು ಎಂದು ಸೀರಿಯಲ್ ಇಂದ ಹೊರಬಂದ ನಂತರ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಆ ಸಮಯದಲ್ಲಿ ಮತ್ತೆ ಕಿರುತೆರೆಗೆ ಹೋಗಲು ಅವಕಾಶಗಳಿದ್ದರೂ ಸಿನಿಮಾ ಮಾಡಬೇಕು ಎನ್ನುವ ಕನಸು ಇಟ್ಟುಕೊಂಡೆ ಬಂದೆ ಮತ್ತೆ ಹಿಂದಿರುಗಲು ಮನಸ್ಸಿಲ್ಲ ಎನ್ನುವ ಕಾರಣಕ್ಕೆ.

ತಾಯಿಯ ಸಹಾಯ ತೆಗೆದುಕೊಂಡು ಬನಶಂಕರಿ ಬಳಿ ಗಲ್ಲಿ ಕಿಚನ್ ಎನ್ನುವ ಕಾನ್ಸೆಪ್ಟ್ ಅಲ್ಲಿ, ತಮ್ಮ ಬಳಿ ಇದ್ದ ವ್ಯಾನ್ ಅನ್ನೇ ಕಿಚನ್ ಮಾಡಿಕೊಂಡು ಉದ್ಯಮ ಶುರು ಮಾಡಿದರು. ಅವರ ಅದೃಷ್ಟ ಕುಲಾಯಿಸಿ ಆ ಉದ್ಯಮ ಚೆನ್ನಾಗಿ ಕೈ ಹಿಡಿಯಿತು, ಅವರ ತಾಯಿ ಕೈ ರುಚಿ ಎಲ್ಲರಿಗೂ ಇಷ್ಟವಾಗಿ ಕೈ ತುಂಬಾ ಕಾಸು ಸೇರುತ್ತಿತ್ತು. ಅವರ ಗಲ್ಲಿ ಕಿಚನ್ ಅಲ್ಲಿ ವಿಶೇಷವಾಗಿ ಮಸಾಲ ದೋಸೆ, ಗುಲಾಬ್ ಜಾಮೂನು ಮತ್ತು ಕ್ಯಾರೆಟ್ ಹಲ್ವಾ ವಿಶೇಷವಾಗಿರುತ್ತದೆ.

ಇವರು ಬಿಗ್ ಬಾಸ್ ಹೋದಮೇಲೆ ಅವರ ತಾಯಿಯೇ ಅದನ್ನು ನಡೆಸಿಕೊಂಡು ಹೋಗುತ್ತಿದ್ದರು. ಬಿಗ್ ಬಾಸ್ ಅಲ್ಲಿ ಅವರು ಅವರ ಜೀವನದ ಕಥೆ ಹೇಳುವಾಗ ಗಲ್ಲಿ ಕಿಚನ್ ಬಗ್ಗೆ ಹೇಳಿಕೊಂಡಾಗಲಿಂದ ಅದರ ಖ್ಯಾತಿ ಇನ್ನಷ್ಟು ಹೆಚ್ಚಿತು. ಬಿಗ್ ಬಾಸ್ ಇಂದ ಬಂದ ಮೇಲೆ ಸಿನಿಮಾಗಳಲ್ಲೂ ಕೂಡ ಶೈನ್ ಶೆಟ್ಟಿ ಅವರಿಗೆ ಚಾನ್ಸ್ ಸಿಗುತ್ತಿದೆ. ಪುನೀತ್ ರಾಜ್ ಕುಮಾರ್ ಅವರ ಕೊನೆ ಚಿತ್ರವಾದ ಜೇಮ್ಸ್ ಸಿನಿಮಾದಲ್ಲಿ ಅವರ ಗೆಳೆಯನ ಪಾತ್ರ ಮಾಡಿದ್ದರು ಅದು ಕೂಡ ಬಹಳ ಮಹತ್ವ ಇದ್ದ ಪಾತ್ರ ಆಗಿತ್ತು.

ಈಗ ದೇಶದಾದ್ಯಂತ ರೆಕಾರ್ಡ್ ಮಾಡಿರುವ ಕಾಂತರಾ ಸಿನಿಮಾದಲ್ಲೂ ಕೂಡ ಶೈನ್ ಶೆಟ್ಟಿ ಪಾತ್ರ ಮಾಡಿದ್ದರು, ಈಗ ಅದರ ಪ್ರೀಕ್ವೆಲ್ ತಯಾರಾಗುತ್ತಿರುವುದರಿಂದ ಅಲ್ಲೂ ಸಹ ಒಳ್ಳೆ ಅವಕಾಶ ಸಿಗುವ ಮತ್ತು ಹೆಚ್ಚಿನ ಸಮಯ ಸ್ಕ್ರೀನ್ ಮೇಲೆ ಇರುವ ಅದೃಷ್ಟ ಸಿಗುವ ಸಾಧ್ಯತೆ ಇದೆ. ಇದರ ನಡುವೆಯೇ ಗಲ್ಲಿ ಕಿಚನ್ ಕೂಡ ಚೆನ್ನಾಗಿ ನಡೆಯುತ್ತಿರುವುದರಿಂದ ಅದರ ಹೊಸ ಬ್ರಾಂಚ್ ಅನ್ನು ಶುರು ಮಾಡಿದ್ದಾರೆ. ಮೊನ್ನೆ ಅಷ್ಟೇ ತಮ್ಮ ಗಲ್ಲಿ ಗಿಚನ್ ಅಲ್ಲಿ ಕೆಲಸ ಮಾಡಲು ಸಹಾಯಕರು ಬೇಕಾಗಿದ್ದಾರೆ ಎಂದು ಪೋಸ್ಟ್ ಹಾಕಿದ್ದ ಅವರು ದಿಢೀರ್ ಎಂದು ಆರ್ ಆರ್ ನಗರದಲ್ಲಿ ಹೊಸ ಬ್ರಾಂಚ್ ಒಂದನ್ನು ಓಪನ್ ಮಾಡಿದ್ದಾರೆ.

ವಿಶೇಷ ಏನೆಂದರೆ ಈ ಬ್ರಾಂಚ್ ಅನ್ನು ಅವರು ದಿವಂಗತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಕೈಯಿಂದ ಟೇಪ್ ಕಟ್ ಮಾಡಿಸುವ ಮೂಲಕ ಓಪನ್ ಮಾಡಿದ್ದಾರೆ. ಶೈನ್ ಶೆಟ್ಟಿಯ ಹಲವು ಸ್ನೇಹಿತರು ಈ ಸಮಾರಂಭಕ್ಕೆ ಭಾಗಿಯಾಗಿದ್ದರು, ಅನೇಕರು ಅಲ್ಲಿ ಹೋಗಿ ವಿಶ್ ಮಾಡಲು ಸಾಧ್ಯವಾಗದ ಕಾರಣ ಸೋಶಿಯಲ್ ಮೀಡಿಯಾದಲ್ಲಿ ಶೈನ್ ಶೆಟ್ಟಿಗೆ ಆಲ್ ದ ಬೆಸ್ಟ್ ಹೇಳುತ್ತಿದ್ದಾರೆ.

ಶೈನ್ ಶೆಟ್ಟಿ ಅವರ ಆತ್ಮೀಯರಲ್ಲಿ ಒಬ್ಬರಾದ ನಿರಂಜನ್ ದೇಶಪಾಂಡೆ ಮತ್ತು ಅವರ ಪತ್ನಿ ಸಹ ಈ ಕಾರ್ಯಕ್ರಮಕ್ಕೆ ಹೋಗಿದ್ದರು. ಅಲ್ಲಿ ಶೈನ್ ಶೆಟ್ಟಿ ಜೊತೆ ದಂಪತಿಗಳು ತೆಗೆದುಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿರುವ ನಿರಂಜನ್ ದೇಶಪಾಂಡೆ ಈ ರೀತಿ ಗೆಳೆಯನ ಉದ್ಯಮಕ್ಕೆ ಶುಭ ಕೋರಿದ್ದಾರೆ. ಕಂಗ್ರಾಜುಲೇಷನ್ ಗೆಳೆಯ ನಿನ್ನ ಹೊಸ ಗಲ್ಲಿ ಕಿಚನ್ ಬ್ರಾಂಚ್ ಗೆ ಒಳ್ಳೇದಾಗಲಿ, ಸಿಕ್ಕಾಪಟ್ಟೆ ಪ್ರಾಫಿಟ್ ತಂದು ಕೊಡಲಿ ಆಲ್ ದ ಬೆಸ್ಟ್ ಗೆಳೆಯ ಎಂದಿದ್ದಾರೆ. ಜೊತೆಗೆ ಬೆಂಗಳೂರಿಗರಿಗೆ ಆರ್.ಆರ್ ನಗರ ಕಡೆ ಬಂದು ನನ್ನ ಗೆಳೆಯನ ಕಿಚನ್ ಗೆ ಭೇಟಿ ಕೊಡಿ ನಿಮ್ಮೆಲ್ಲರ ಸಹಕಾರ ಸದಾ ಶೈನ್ ಶೆಟ್ಟಿ ಇರಲಿ ಎಂದು ಕೋರಿಕೊಂಡಿದ್ದಾರೆ.

Leave a Comment