ಚಾಲೆಂಜಿಗ್ ಸ್ಟಾರ್’ ದರ್ಶನ್ ಮತ್ತು ‘ಕಿಚ್ಚ’ ಸುದೀಪ್ ಇಬ್ಬರ ನಡುವೆ ಒಂದು ಕಾಲದಲ್ಲಿ ಉತ್ತಮ ಒಡನಾಟ ಇತ್ತು. ಆದಾದ ಮೇಲೆ ಕಾರಣಾಂತರಗಳಿಂದ ಇಬ್ಬರು ದೂರ ದೂರ ಆಗಿಬಿಟ್ಟರು. ಅದಕ್ಕೂ ಮೊದಲು ಸುದೀಪ್ ಮತ್ತು ದರ್ಶನ್ ಸಿನಿಮಾಗಳು ಒಟ್ಟಿಗೆ ಒಂದೇ ದಿನ ತೆರೆಕಂಡು, ಬಾಕ್ಸ್ ಆಫೀಸ್ ವಾರ್ ಆಗಿದ್ದ ಉದಾಹರಣೆಗಳು ಇವೆ. ಕನ್ನಡ ಚಿತ್ರರಂಗದ ಟಾಪ್ ನಟರಲ್ಲಿ ಮೊದಲು ಕೇಳಿಬರುವ ಹೆಸರುಗಳೆಂದರೆ ದರ್ಶನ್ ಮತ್ತು ಸುದೀಪ್ ಅವರದ್ದು.
ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339
ಆರಂಭದ ದಿನಗಳಿಂದಲೂ ಈ ನಟರ ನಡುವೆ ಉತ್ತಮ ಬಾಂಧವ್ಯ ಬಾಂಧವ್ಯ ಇತ್ತು. 1997ರ ಸಮಯದಲ್ಲಿ ಆಗ ತಾನೇ ಚಿತ್ರರಂಗಕ್ಕೆ ಕಾಲಿಟ್ಟ ಸುದೀಪ್ ಮತ್ತು ದರ್ಶನ್ ನಂತರದಲ್ಲಿ ಸ್ಟಾರ್ ಕಲಾವಿದರಾಗಿ ಬೆಳೆದರು. ಸೋಲು-ಗೆಲುವು ಏನೇ ಇದ್ದರೂ ಇಬ್ಬರ ನಡುವಿನ ಸ್ನೇಹ ಗಟ್ಟಿ ಆಗಿತ್ತು. ಸಿನಿಮಾ ಸಮಾರಂಭಗಳ ವೇದಿಕೆಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಸುದೀಪ್ ನೀಡಿದ ಒಂದೇ ಒಂದು ಹೇಳಿಕೆಯಿಂದಾಗಿ ದರ್ಶನ್ ಮನಸ್ಸು ಬದಲಾಗಿ ಬಿಟ್ಟಿತ್ತು.
ದರ್ಶನ್ಗೆ 2002ರಲ್ಲಿ ಮೆಜೆಸ್ಟಿಕ್ ಸಿನಿಮಾ ದೊಡ್ಡಮಟ್ಟದ ಬ್ರೇಕ್ ನೀಡಿತು. ಅಷ್ಟರಲ್ಲಾಗಲೇ ಸುದೀಪ್ ಸ್ಪರ್ಶ ,ಹುಚ್ಚ, ಸಿನಿಮಾಗಳಿಂದಾಗಿ ಕರುನಾಡಿನಲ್ಲಿ ಮನೆ ಮಾತಾಗಿದ್ದರು. ಮೆಜೆಸ್ಟಿಕ್’ ಚಿತ್ರಕ್ಕೆ ದರ್ಶನ್ ಹೆಸರನ್ನು ತಾವೇ ಸೂಚಿಸಿದ್ದು ಎಂದು ಸುದೀಪ್ ಅವರು 2017ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದರು. ಈ ಸಂದರ್ಶನದ ತುಣುಕು ದರ್ಶನ್ ಕಣ್ಣಿಗೆ ಬೀಳುತ್ತಿದ್ದಂತೆಯೇ ಅವರಿಗೆ ಸಖತ್ ಬೇಸರವಾಯಿತು. ಅದಕ್ಕೆ ಅವರು ನೀಡಿದ ಪ್ರತಿಕ್ರಿಯೆ ಸಿಕ್ಕಾಪಟ್ಟೆ ಖಾರವಾಗಿತ್ತು.
ಮೊದಲು ಸ್ನೇಹಿತರಾಗಿದ್ದ ಸಂಧರ್ಭದಲ್ಲಿ ದರ್ಶನ್ ಸುದೀಪ್ ಫ್ಯಾಮಿಲಿ ಹೇಗೆ ಜೊತೆಯಾಗಿದ್ದಾರೆ ನೋಡಿ.ಈ ಫೋಟೋಗಳನ್ನು ನೋಡುವಾಗ ದರ್ಶನ್ ಸುದೀಪ್ ಫ್ಯಾಮಿಲಿ ಮತ್ತೆ ಜೊತೆಯಾಗಲಿ ಅನಿಸುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಇಂದಿಗೂ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ಮಧ್ಯೆ ಆಗಾಗ ವಾರ್ ನಡೆಯುತ್ತದೆ ಎಂಬುದು ನಿಜ. ಅದರ ನಡುವೆಯೂ ಈ ಸ್ಟಾರ್ ಕಲಾವಿದರಿಬ್ಬರೂ ಒಂದಾಗಲಿ ಎಂದು ಅನೇಕ ಅಭಿಮಾನಿಗಳು ಬಯಸುತ್ತಿದ್ದಾರೆ. ತಮ್ಮ ಬಯಕೆಯನ್ನು ಕಾಮೆಂಟ್ಗಳ ಮೂಲಕ ವ್ಯಕ್ತಪಡಿಸುತ್ತಲೇ ಇರುತ್ತಾರೆ.
ಆದರೆ ಅವರ ಬಯಕೆ ಈಡೇರುವ ಕಾಲ ಈವರೆಗೂ ಬಂದಿಲ್ಲ ಯಾರ ಜೊತೆ ಸ್ನೇಹ ಮಾಡಬೇಕು, ಮಾಡಬಾರದು ಎಂಬುದು ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ವಿಚಾರ. ಆದರೂ ದರ್ಶನ್ ಹೀಗೆ ಸ್ನೇಹ ಕಡಿದುಕೊಳ್ಳಬಾರದಿತ್ತು ಎಂದು ಅನೇಕರು ಈಗಲೂ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ಹಿಂದೆ ಡಾ. ರಾಜ್ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ನಡುವೆ ಜಟಾಪಟಿ ಇದೆ ಎಂಬಂತಹ ಮಾತುಗಳು ’ಗಂಧದ ಗುಡಿ’ ಕಾಲದಿಂದಲೂ ಕೇಳಿಬರುತ್ತಿತ್ತು. ಈ ಸ್ಟಾರ್ ನಟರ ಅಭಿಮಾನಿಗಳು ಕೂಡ ಪರಸ್ಪರ ಜಗಳ ಮಾಡಿಕೊಂಡ ಉದಾಹರಣೆಗಳು ಸಾಕಷ್ಟಿವೆ.
ಆದರೆ ಒಮ್ಮೆಯೂ ಕೂಡ ರಾಜ್ಕುಮಾರ್ ಅವರಾಗಲೀ, ವಿಷ್ಣುವರ್ಧನ್ ಅವರಾಗಲೀ ಹೀಗೆ ನೇರಾನೇರ ಸ್ನೇಹ ಕಡಿದುಕೊಳ್ಳುವ ಮಟ್ಟಕ್ಕೆ ಮುಂದುವರಿಯಲಿಲ್ಲ. ಅವರಿಬ್ಬರ ನಡುವಿನ ಸಾಮರಸ್ಯವನ್ನೇ ಇಡೀ ಕನ್ನಡ ಚಿತ್ರರಂಗ ಬಯಸಿತ್ತು ಆದರೆ ದರ್ಶನ್ ಮತ್ತು ಸುದೀಪ್ ವಿಚಾರದಲ್ಲಿ ಈ ವೈಮನಸ್ಸು ಬೇರೆಯದೇ ಹಂತ ತಲುಪಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ವಾಗ್ವಾದಗಳು ಕೂಡ ವಾತಾವರಣ ಕೆಡಿಸುತ್ತಲೇ ಇವೆ. ಮುಂದಾದರೂ ಕಿಚ್ಚ ಮತ್ತು ದಚ್ಚು ಮತ್ತೆ ಸ್ನೇಹ ಮುಂದುವರಿಸಲಿ. ಫೋಟೋ ಕ್ಲಿಕ್ಕಿಸಿದ ಸಮಯದಲ್ಲಿ ದರ್ಶನ್ ಹಾಗೂ ಸುದೀಪ್ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು ಎಂದೇ ಹೇಳಬಹುದು.