ರಾಜಕೀಯಕ್ಕೆ(Politics) ಬರುವ ಸೂಚನೆ ಕೊಟ್ರ ಕಿಚ್ಚ ಸುದೀಪ್ ಈ ಕುರಿತ ಒಂದು ಸುದ್ದಿ ಕಳೆದೆರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಚರ್ಚೆ ಆಗುತ್ತಿದೆ. ಮೀಡಿಯ ಹಾಗು ಸೋಶಿಯಲ್ ಮೀಡಿಯಾಗಳು ಈ ವಿಷಯದ ಹಿಂದೆ ಬಹಳ ಬಿದ್ದಿವೆ. ಇದರ ಸತ್ಯಾನುಸತ್ಯತೆ ತಿಳಿದುಕೊಳ್ಳಲು ಜನರು ಬಹಳ ಕುತೂಹಲ ತೋರುತ್ತಿದ್ದಾರೆ ರಾಜ್ಯದಲ್ಲಿ ಈಗಾಗಲೇ ಮುಂದಿನ ಚುನಾವಣೆಗಾಗಿ ತಯಾರಿ ಕೂಡ ಬಾರಿ ಜೋರಾಗಿದೆ.
ಪ್ರತಿನಿತ್ಯ ಕೂಡ ರಾಜಕೀಯ ವಲಯದಲ್ಲಿ ನಾನಾ ಕಸರತ್ತುಗಳು ನಡೆಯುತ್ತಿದ್ದು ಈಗಾಗಲೇ ಗೆಲುವಿನ ಪಟ್ಟಗಾಗಿ ತೆರೆ ಹಿಂದಿನ ತಯಾರಿ ಜೋರಾಗಿದೆ. ಇದರ ಒಂದು ಭಾಗವಾಗಿ ಕಿಚ್ಚ ಸುದೀಪ್(Kiccha Sudeep) ಅವರು ರಾಜಕೀಯಕ್ಕೆ ಎಂಟ್ರಿ ಆಗುತ್ತಿದ್ದಾರೆ ಎನ್ನುವ ಗುಸುಗುಸು ಕೂಡ ಭುಗಿಲೆದ್ದಿದೆ. ಅದರಲ್ಲೂ ಕಾಂಗ್ರೆಸ್(Congress) ಪಾಳಯದಲ್ಲಿ ಕಿಚ್ಚ ಸುದೀಪ್ ಅವರು ಗುರುತಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ನೆನ್ನೆಯಿಂದ ಬಹಳ ಸುದ್ದಿ ಆಗುತ್ತಿದೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ವಿಕ್ರಾಂತ್ ರೋಣ(Vikrant Rona) ಸಿನಿಮಾದ ನಂತರ ಬೇರೆ ಬೇರೆ ಪ್ರಾಜೆಕ್ಟ್ಗಳಲ್ಲಿ ಬಹಳ ಬಿಸಿ ಆಗಿದ್ದಾರೆ. ಇದರ ನಡುವೆ ಬಿಗ್ ಬಾಸ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಣೆ ಮಾಡುತ್ತಿದ್ದಾರೆ, ಡಿಸೆಂಬರ್ 30ಕ್ಕೆ ಈ ಕಾರ್ಯಕ್ರಮ ಮುಗಿದಿರುವುದರಿಂದ ಈಗ ಸ್ವಲ್ಪ ಬ್ರೇಕ್ ಅಲ್ಲಿ ಇದ್ದಾರೆ. ಇದರ ನಡುವೆ ನೆನ್ನೆ ಅಷ್ಟೇ ಚಿಕ್ಕಬಳ್ಳಾಪುರದ ಉತ್ಸವದಲ್ಲೂ ಭಾಗಿಯಾಗಿದ್ದರು.
ಆದರೆ ಇದ್ದಕ್ಕಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ಸುದೀಪ್ ಅವರ ಹೆಸರು ಕೇಳಿ ಬರುತ್ತಿದೆ ರಾಜಕೀಯ ಸೇರಲಿದ್ದಾರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಪಾಲ್ಗೊಂಡಿದ್ದಾರೆ. ಇದರ ಸಲುವಾಗಿ ರಮ್ಯಾ ಅವರ ಕಡೆಯಿಂದ ಸುದೀಪ್ ಅವರನ್ನು ಸಂಪರ್ಕಿಸಲಾಗಿದೆ, ಈಗಾಗಲೇ ಹೈಕಮಾಂಡ್ ಬಳಿ ಒಂದು ಸುತ್ತಿನ ಮಾರ್ತಿಕತೆ ಸಹ ಆಗಿದೆ ಸುದೀಪ್ ಅವರು ಮುಂದಿನ ಚುನಾವಣೆ ಎದುರಿಸುವದಂತು ಖಚಿತ ಎಂಬಿತ್ಯಾದಿ ಮಾತುಗಳು ಬಹಳ ಚರ್ಚೆ ಆಗುತ್ತಿವೆ.
ಸುದೀಪ್ ಅವರು ಈಗಾಗಲೇ ನಾನು ರಂಗಗಳಲ್ಲಿ ಗುರುತಿಸಿಕೊಂಡಿದ್ದಾರೆ. ಕ್ರಿಕೆಟ್ ಅಡುಗೆ ಸಿನಿಮಾ ಸಂಗೀತ ನಿರ್ಮಾಪಣೆ ನಿರ್ದೇಶನ ಹೀಗೆ ಸಕಲ ಕಲಾವಲ್ಲಭ ಆಗಿರುವ ಸುದೀಪ ಅವರು ಮೊದಲಿನಿಂದಲೂ ರಾಜಕೀಯದಿಂದ ದೂರ ಇದ್ದವರು. ಆದರೆ ಇದ್ದಕ್ಕಿದ್ದಂತೆ ಅವರ ಹೆಸರು ಈ ರೀತಿ ಪ್ರಸ್ತಾಪವಾಗುತ್ತಿದೆ ಎನ್ನುವುದರ ಬಗ್ಗೆ ಎಲ್ಲರಿಗೂ ಕುತೂಹಲ ಇದೆ. ಒಂದು ವೇಳೆ ಈ ಮಾತು ನಿಜವಾದರೆ ಅವರಿಗೆ ಬಿಜೆಪಿಯಲ್ಲೂ ಸಹ ಆತ್ಮೀಯರು ಇದ್ದಾರೆ.
ಅವರು ಕಾಂಗ್ರೆಸ್ ಗೆ ಹೋಗುತ್ತಾರೆ ಎನ್ನುವ ಬಗ್ಗೆ ಬಲವಾದ ಯಾವ ಆಧಾರವೂ ಇಲ್ಲ. ಸುದೀಪ್ ಅವರಂತೂ ಸಿನಿಮಾಗಳಲ್ಲೇ ಬಹಳ ಬಿಝಿ ಇದ್ದಾರೆ. ಮೊದಲಿಂದಲೂ ಹೀರೋ ಹಾಗೆ ಇರಬೇಕು ಎಂದು ಆಸೆ ಪಟ್ಟವರು ಈಗ ರಾಜಕೀಯಕ್ಕೆ ಹೋಗುತ್ತಿದ್ದಾರೆ ಎಂದರೆ ಕೊಂಚ ಆಶ್ಚರ್ಯ ಕೂಡ ತರುತ್ತದೆ. ಈ ವಿಷಯದ ಕುರಿತು ಸುದೀಪ್ ಅವರು ಆಗಲಿ ರಮ್ಯಾ ಅವರೇ ಆಗಲಿ ಅಥವಾ ಕಾಂಗ್ರೆಸ್ ಪಕ್ಷದ ನಾಯಕರೇ ಆಗಲಿ ಯಾವುದೇ ಸ್ಪಷ್ಟನೆ ಕೊಡದಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಇದರ ಬಗ್ಗೆ ಚರ್ಚೆ ಜೋರಾಗಿದೆ.
ಕಾಮೆಂಟ್ಗಳಲ್ಲಿ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಯಾವುದೇ ಕಾರಣಕ್ಕೂ ನೀವು ರಾಜಕೀಯಕ್ಕೆ ಮಾತ್ರ ಬರಬೇಡಿ ಎನ್ನುವ ಸಲಹೆ ಕೂಡ ಕೊಡುತ್ತಿದ್ದಾರೆ. ಈಗಾಗಲೇ ಉಪೇಂದ್ರ ದರ್ಶನ್ ಯಶ್ ಅಭಿಷೇಕ್ ಅಂಬರೀಶ್ ಶಿವರಾಜ್ ಕುಮಾರ್ ರಮ್ಯಾ ರಕ್ಷಿತಾ ಹೀಗೆ ಕನ್ನಡದ ಹಲವು ಸೆಲೆಬ್ರಿಟಿಗಳು ರಾಜಕೀಯದಲ್ಲಿ ಸಕ್ರಿಯ ರಾಗಿದ್ದಾರೆ. ಈಗ ಸುದೀಪ್ ಅವರು ಕೂಡ ಆ ಕಡೆ ಮನಸ್ಸು ಮಾಡುತ್ತಿದ್ದಾರ ಎನ್ನುವ ಅನುಮಾನವೂ ಇದೆ. ಈ ವಿಷಯದಲ್ಲಿ ಅವರ ಕಡೆಯಿಂದಲೇ ಸ್ಪಷ್ಟನೆ ಸಿಗುವವರೆಗೂ ಕಾದು ನೋಡಬೇಕು ಅಷ್ಟೇ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.