Home Entertainment ನಾಯಿ ಬಾಲ ಯಾವತ್ತಿದ್ರೂ ಡೊಂಕು ದರ್ಶನ್ ಪರವಾಗಿ ಮಾತನಾಡಿ ನಿಮ್ಮ ಅಭಿಮಾನಿಗಳನ್ನು ಕಳೆದುಕೊಳ್ಳಬೇಡಿ ಎಂದು ಸುದೀಪ್ಗೆ ಎಚ್ಚರಿಕೆ ಕೊಟ್ಟ ಫ್ಯಾನ್ಸ್, ಇದಕ್ಕೆ ಸುದೀಪ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ.?

ನಾಯಿ ಬಾಲ ಯಾವತ್ತಿದ್ರೂ ಡೊಂಕು ದರ್ಶನ್ ಪರವಾಗಿ ಮಾತನಾಡಿ ನಿಮ್ಮ ಅಭಿಮಾನಿಗಳನ್ನು ಕಳೆದುಕೊಳ್ಳಬೇಡಿ ಎಂದು ಸುದೀಪ್ಗೆ ಎಚ್ಚರಿಕೆ ಕೊಟ್ಟ ಫ್ಯಾನ್ಸ್, ಇದಕ್ಕೆ ಸುದೀಪ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ.?

0
ನಾಯಿ ಬಾಲ ಯಾವತ್ತಿದ್ರೂ ಡೊಂಕು ದರ್ಶನ್ ಪರವಾಗಿ ಮಾತನಾಡಿ ನಿಮ್ಮ ಅಭಿಮಾನಿಗಳನ್ನು ಕಳೆದುಕೊಳ್ಳಬೇಡಿ ಎಂದು ಸುದೀಪ್ಗೆ ಎಚ್ಚರಿಕೆ ಕೊಟ್ಟ ಫ್ಯಾನ್ಸ್, ಇದಕ್ಕೆ ಸುದೀಪ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ.?
ದರ್ಶನ್ ಗೆ ಸಹಾಸ ಮಾಡಲು ಹೋಗಲು ತನ್ನ ಅಭಿಮಾನಿಗಳನ್ನು ಕಳೆದುಕೊಳ್ತಿದ್ದರ ನಟ ಸುದೀಪ್.?

ಕಳೆದ ನಾಲ್ಕು ದಿನದ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಹೊಸ ಪೇಟೆಯಲ್ಲಿ ಚಪ್ಪಲಿ ಎಸೆತವನ್ನು ಎಸೆಯಲಾಗುತ್ತದೆ ಈ ವಿಚಾರ ಹೊರ ಬರುತ್ತಿದ್ದ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪರವಾಗಿ ಸಾಕಷ್ಟು ನಟ ನಟಿಯರು ನಿಂತರು. ಇಂತಹದೊಂದು ಕೃತ್ಯವನ್ನು ಯಾರು ಮಾಡಬಾರದು ಈ ರೀತಿ ಯಾರೇ ಮಾಡಿದ್ದರು ಕೂಡ ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಹೇಳಿದ್ದರು. ಇದೆಲ್ಲವೂ ನಮಗೆ ಸಾಮಾನ್ಯವಾಗಿ ಕಂಡರೂ ಅಸಮಾನ್ಯವಾಗಿ ಒಂದು ವಿಚಾರ ಹೊರ ಬರುತ್ತದೆ.

ಹೌದು ಅದೇನೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪರವಾಗಿ ಕಿಚ್ಚ ಸುದೀಪ್ ಅವರು ಮಾತನಾಡಿದ್ದು ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಹಾಗೂ ಕಿಚ್ಚ ಸುದೀಪ್ ದೂರಾಗಿ ಕಳೆದು ನಾಲ್ಕೈದು ವರ್ಷಗಳೇ ಕಳೆದು ಹೋಗಿದೆ. ಒಬ್ಬರು ಮತ್ತೊಬ್ಬರ ವಿಚಾರಕ್ಕೆ ಬರುವುದಿಲ್ಲ ಆಗಿದ್ದರು ಕೂಡ ಈ ಬಾರಿ ಕಿಚ್ಚ ಸುದೀಪ್ ತಮ್ಮ ಮನಸ್ಸಿನಲ್ಲಿ ಇದ್ದಂತಹ ವೈ ಮನಸು ಎಲ್ಲವನ್ನು ಮರೆತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಆದಂತಹ ಅಪಮಾನ ಕುರಿತು ಮಾತನಾಡಿದ್ದಾರೆ.

ಎಲ್ಲ ನಟರನ್ನು ಗೌರವಿಸಿ ಯಾರನ್ನು ದ್ವೇಷಿಸಬೇಡಿ ಅವರಿಗೆ ಅವರದ್ದೇ ಆದಂತಹ ಬೆಲೆ ಇರುತ್ತದೆ ಈ ರೀತಿಯ ಕೃತ್ಯ ಮಾಡಿರುವುದು ನಿಜಕ್ಕೂ ಕೂಡ ಬೇಸರದ ಸಂಗತಿ. ಈ ವಿಡಿಯೋ ನೋಡಿ ನನ್ನ ಮನಸ್ಸು ತಲ್ಲಣಗೊಂಡಿತು ಕಲಾಸೇವೆ ಮಾಡುವಂತಹ ಕಲಾವಿದನಿಗೆ ಈ ರೀತಿ ಅಪಮಾನ ಮಾಡುವುದು ಸರಿಯಲ್ಲ ಎಂದು ಬುದ್ಧಿವಾದ ಹೇಳಿದರು. ಇದು ಒಂದು ಕಡೆಯಾದರೆ ಮೊನ್ನೆಯಷ್ಟೇ ಮತ್ತೊಂದು ವಿಡಿಯೋ ಮಾಡುವುದರ ಮೂಲಕ ಸ್ಪಷ್ಟನೆ ನೀಡಿದರು.

“ಚಪ್ಪಲಿ ಎಸೆದದ್ದು ಯಾರೇ ಆಗಿರಲಿ ಆದರೆ ಯಾವುದೇ ಕಾರಣಕ್ಕೂ ಕೂಡ ನೀವು ಸಿಕ್ಕಿ ಹಾಕಿಕೊಳ್ಳಬೇಡಿ ಒಂದು ವೇಳೆ ಸಿಕ್ಕಿ ಹಾಕಿಕೊಂಡರೆ ಆ ನಟನ ಅಭಿಮಾನಿಗಳು ಎಷ್ಟು ಜನ ಇದ್ದಾರೋ ಅಷ್ಟು ಜನರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಒಡೆದು ಹಾಕಿ ಬಿಡುತ್ತಾರೆ ಎಂದು ಎಚ್ಚರಿಸಿದ್ದರು. ಇದೆಲ್ಲವನ್ನು ನೋಡುತ್ತಿದ್ದಂತಹ ಅಭಿಮಾನಿಗಳಿಗೆ ಆಶ್ಚರ್ಯವಾಗುತ್ತದೆ ಏಕೆಂದರೆ ದರ್ಶನ್ ಜೊತೆ ಮಾತನಾಡುತ್ತಿಲ್ಲ ಅವರಿಂದ ದೂರ ಇದ್ದಾರೆ ಇಷ್ಟೆಲ್ಲ ಆಗಿದ್ದರೂ ಕೂಡ ಕಿಚ್ಚ ಸುದೀಪ್ ಈ ಪರಿಯಾಗಿ ದರ್ಶನ್ ಗೆ ಸಪೋರ್ಟ್ ಮಾಡುತ್ತಿರುವುದಾದರೂ ಯಾಕೆ ಎಂದು ಯೋಚಿಸಿದರು.

ಇನ್ನು ಕೆಲವು ದರ್ಶನ್ ಅಭಿಮಾನಿಗಳು ಕಿಚ್ಚ ಸುದೀಪ್ ಮಾಡುತ್ತಿರುವಂತಹ ಸಪೋರ್ಟ್ ಅನ್ನು ಬೆಂಬಲವಾಗಿ ಪಡೆದು ಸೋಶಿಯಲ್ ಮೀಡಿಯಾದಲ್ಲಿ ಇನ್ನಷ್ಟು ಪ್ರಚೋದನಾತ್ಮಕ ಸ್ಟೇಟ್ಮೆಂಟ್ ಗಳನ್ನು ಹಾಕುವುದು ಪೋಸ್ಟರ್ಗಳನ್ನು ಹಾಕುವುದು ಮಾಡುತ್ತಿದ್ದರು. ಇವೆಲ್ಲವನ್ನೂ ನೋಡಿದಂತಹ ಕಿಚ್ಚ ಸುದೀಪ್ ಅಭಿಮಾನಿ ಒಬ್ಬರು ನೇರವಾಗಿ ಕಿಚ್ಚ ಸುದೀಪ್ ಅವರಿಗೆ ಟ್ವಿಟ್ ಮಾಡಿದ್ದಾರೆ. “ನಾಯಿ ಬಾಲ ಯಾವತ್ತಿದ್ದರೂ ಡೊಂಕು, ನೀವು ದರ್ಶನ್ ಗೆ ಸಹಾಯ ಮಾಡುವುದಕ್ಕೆ ಹೋಗಿ ನಿಮ್ಮ ಅಭಿಮಾನಿಗಳಿಗೆ ನೋವುಂಟು ಮಾಡಬೇಡಿ, ನಿಮ್ಮ ಪರವಾಗಿ ಯಾವಾಗಲೂ ನಿಲ್ಲುವುದು ನಿಮ್ಮ ಅಭಿಮಾನಿಗಳು ಮಾತ್ರ” ಎಂದು ಖಡಕ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

ಇನ್ನು ಅಭಿಮಾನಿ ಮಾಡಿದಂತಹ ಟ್ವೀಟ್ ಅನ್ನು ನೋಡಿದಂತಹ ಕಿಚ್ಚ ಸುದೀಪ್ ಅವರು ಕೂಡ ಇದೀಗ ಈ ಸ್ಟೇಟ್ಮೆಂಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. “ನಾನು ನನ್ನ ಅಭಿಮಾನಿಗಳ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಏಕೆಂದರೆ ನಾನು ಅವರಿಂದ ದೂರ ಉಳಿದಿಲ್ಲ. ನಾನು ಅವರ ಜೊತೆಯಲ್ಲೇ ಬದುಕುತ್ತಿದ್ದೇನೆ, ಅವರಿಗಾಗಿಯೇ ಬದುಕುತ್ತಿದ್ದೇನೆ. ಅವರು ನನ್ನನ್ನು ಜೀವಂತವಾಗಿ ಉಳಿಸಿದ್ದಾರೆ” ಎಂದು ರೀ ಟ್ವಿಟ್ ಮಾಡಿದ್ದಾರೆ. ಇವೆಲ್ಲವನ್ನೂ ನೋಡುತ್ತಿದ್ದರೆ ಕಿಚ್ಚ ಸುದೀಪ್ ಅವರು ದರ್ಶನ್ ಅವರಿಗೆ ಬೆಂಬಲ ನೀಡುತ್ತಿರುವುದು ಎಲ್ಲೋ ಒಂದು ಕಡೆ ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ನೋವನ್ನು ಉಂಟು ಮಾಡಿದೆ ಅಂತ ಹೇಳಬಹುದು.

ಏಕೆಂದರೆ ಕಿಚ್ಚ ಸುದೀಪ್ ಅವರು ಎಲ್ಲಾ ಸಂದರ್ಶನ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಪರವಾಗಿ ಇಲ್ಲಿವರೆಗೂ ಮಾತನಾಡುತ್ತಾ ಬಂದಿದ್ದಾರೆ. ಆದರೆ ದರ್ಶನ್ ಅವರು ಮಾತ್ರ ಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ ಹಾಗಾಗಿ ಇದರಿಂದ ಮನನಂದಂತಹ ಅಭಿಮಾನಿ ಒಬ್ಬರು ಸುದೀಪ್ ಅವರಿಗೆ ಈ ಪರಿಯಾಗಿ ಮನವಿ ಮಾಡಿದ್ದಾರೆ. ಈ ಪ್ರಕರಣ ಮುಂದೆನಾಗುತ್ತದೆ ಕಾದು ನೋಡೋಣ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

LEAVE A REPLY

Please enter your comment!
Please enter your name here