Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕಿಚ್ಚನ ಹುಟ್ಟುಹಬ್ಬದ ದಿನದಂದೆ ಸುದೀಪ್ ಕಡೆಯಿಂದ ದುಬಾರಿ ಬೆಲೆಯ ಬೈಕ್ ಗಿಫ್ಟ್ ಪಡೆದ ಅಕೂಲ್ ಬಾಲಾಜಿ. ಈ ಬೈಕ್ ಬೆಲೆ ಎಷ್ಟು ಗೊತ್ತ.?

Posted on September 3, 2022 By Kannada Trend News No Comments on ಕಿಚ್ಚನ ಹುಟ್ಟುಹಬ್ಬದ ದಿನದಂದೆ ಸುದೀಪ್ ಕಡೆಯಿಂದ ದುಬಾರಿ ಬೆಲೆಯ ಬೈಕ್ ಗಿಫ್ಟ್ ಪಡೆದ ಅಕೂಲ್ ಬಾಲಾಜಿ. ಈ ಬೈಕ್ ಬೆಲೆ ಎಷ್ಟು ಗೊತ್ತ.?

ಸೆಪ್ಟೆಂಬರ್ 2 ಇಂದು ಕಿಚ್ಚೋತ್ಸವ, ಕರ್ನಾಟಕದ ಅಭಿನಯ ಚಕ್ರವರ್ತಿಗೆ ಇಂದು 49ನೇ ವಯಸ್ಸಿಗೆ ಕಾಲಿಟ್ಟ ಸಂಭ್ರಮ. ಅಭಿಮಾನಿಗಳ ಪಾಲಿಗೆ ನೆಚ್ಚಿನ ನಟನ ಹುಟ್ಟಿದ ದಿನದ ಹಬ್ಬವಾಗಿ ಆಚರಿಸುವ ಸಡಗರ. ಇದಕ್ಕೆ ಸಾಕ್ಷಿಯಾಗಿ ಇಂದು ಸುದೀಪ್ ಅವರ ಮನೆಯ ಮುಂದೆ ಅಭಿಮಾನಿಗಳು ಜಮಾಯಿಸಿ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ ಕೇಕ್ ಕಟ್ ಮಾಡಿಸಿ ಸಂತಸಪಟ್ಟಿದ್ದಾರೆ. ಕಳೆದ ಕೆಲವು ವರ್ಷಗಳಿಂದ ತಮ್ಮ ಹುಟ್ಟುಹಬ್ಬವನ್ನು ಬಹಳ ಸರಳವಾಗಿ ಆಚರಿಸಿಕೊಳ್ಳುತ್ತಿದ್ದ ಕಿಚ್ಚ ಸುದೀಪ್ ಅವರು ಈ ಬಾರಿ ಅಭಿಮಾನಿಗಳ ಒತ್ತಾಯದ ಮೇರೆಗೆ ಅಭಿಮಾನಿಗಳ ನಡುವೆ ತಮ್ಮ ಹುಟ್ಟಿದ ದಿನದ ಖುಷಿಯನ್ನು ಸೆಲೆಬ್ರೇಟ್ ಮಾಡಿದ್ದಾರೆ. ಈ ದಿನ ಸುದೀಪ್ ಅವರ ಪತ್ನಿ ಪ್ರಿಯ ಸುದೀಪ್ ಹಾಗೂ ಪುತ್ರಿ ಸಾನ್ವಿ ಸುದೀಪ ಕೂಡ ಸುದೀಪ್ ಅವರ ಜೊತೆಗಿದ್ದು ಅಭಿಮಾನಿಗಳ ನಡುವೆ ಬೆರೆತು ಈ ಸಂಭ್ರಮದ ಭಾಗವಾಗಿದ್ದಾರೆ.

ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಆಸೆ ಪಡುವ ಕಿಚ್ಚ ಸುದೀಪ್ ಅವರು ಇಂದು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದಾರೆ. ಈಗಾಗಲೇ ಕಿಚ್ಚ ಚಾರಿಟೇಬಲ್ ಟ್ರಸ್ಟ್ ಇಂದ ಹಲವಾರು ಜನರಿಗೆ ಕೃತಕ ಕಾಲು ಜೋಡಿಸುವ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ ಈ ದಿನವೂ ಕೂಡ ಇಬ್ಬರ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ. ಇದಲ್ಲದೆ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೂ ತಿಳಿಯಬಾರದು ಎನ್ನುವ ರೂಲ್ಸ್ ಫಾಲೋ ಮಾಡುವ ಕಿಚ್ಚ ಸುದೀಪ್ ಅವರು ಯಾರಿಗೂ ತಿಳಿಯದಂತೆ ಇನ್ನು ಅನೇಕ ಒಳ್ಳೆಯ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವಳ ಇಂತಹ ಗುಣದಿಂದ ಮತ್ತು ಅತ್ಯದ್ಭುತವಾದ ಅಭಿನಯದಿಂದ ಭಾರತದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟರಾಗಿರುವ ಇವರು ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಭಾಷೆ ಸಿನಿಮಾಗಳಲ್ಲೂ ಕೂಡ ನೆಗೆಟಿವ್ ರೋಲ್, ಗೆಸ್ಟ್ ಅಪೀರಿಯನ್ಸ್ ರೋಲ್, ಸಪೋರ್ಟಿಂಗ್ ಆಕ್ಟರ್ ಇನ್ನು ಮುಂತಾದ ಪಾತ್ರಗಳಲ್ಲಿ ತೊಡಗಿಸಿಕೊಂಡು ಇಡೀ ಭಾರತಕ್ಕೆ ಪರಿಚಿತರಾಗಿದ್ದಾರೆ.

ಇಷ್ಟೊಂದು ಫೇಮಸ್ ಆಗಿರುವ ಸೆಲೆಬ್ರಿಟಿಗಳಿಗೆ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳಿಂದ ಹಾಗೂ ಕುಟುಂಬದವರಿಂದ ಮತ್ತು ಸಿನಿಮಾ ಇಂಡಸ್ಟ್ರಿಗೆ ಸಂಬಂಧಪಟ್ಟವರಿಂದ ಗಿಫ್ಟ್ ಗಳು ಬರುವುದು ಸರ್ವೇಸಾಮಾನ್ಯ. ಆದರೆ ತಮ್ಮ ಹುಟ್ಟುಹಬ್ಬದ ದಿನದಂದು ಕಿಚ್ಚ ಸುದೀಪ್ ಅವರು ಬೇರೆಯವರಿಗೆ ಗಿಫ್ಟ್ ಕೊಡುವ ಮೂಲಕ ಸುದ್ದಿಯಾಗಿದ್ದಾರೆ. ಕನ್ನಡದ ಹೆಸರಾಂತ ನಿರೂಪಕ ಅಕುಲ್ ಬಾಲಾಜಿ ಅವರಿಗೆ ಈ ದಿನ ದುಬಾರಿ ಬೆಲೆಯ ಬಿಎಂಡಬ್ಲ್ಯೂ ಬೈಕ್ ಒಂದನ್ನು ಗಿಫ್ಟ್ ನೀಡಿದ್ದಾರೆ ಈ ಸಂತಸವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅಕೂಲ್ ಬಾಲಜಿ ಅವರು ಎಲ್ಲರೂ ತಮ್ಮ ಹುಟ್ಟು ಹಬ್ಬಕ್ಕೆ ಗಿಫ್ಟ್ ಪಡೆಯುತ್ತಾರೆ ಆದರೆ ನನಗೆ ಸುದೀಪ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರಿಂದ ಗಿಫ್ಟ್ ದೊರೆತಿದೆ ಇದು ನನ್ನ ಪಾಲಿನ ಅದೃಷ್ಟ ಎಂದು ಭಾವಿಸುತ್ತೇನೆ ಎಂದು ಧನ್ಯವಾದ ಹೇಳಿದ್ದಾರೆ.

Wishing our #abhinayachakravarthy my @KicchaSudeep bro a wonderful, blessed birthday!! Thank you so much kichcha bro for this amazing BMW bike gift from you !!! 🤗🤗♥️♥️✨✨✨✨ wishing you a fabulous and successful year !! ✨✨✨✨✨#kicchasudeepa #happybirthdaykichchasudeep pic.twitter.com/8r9oEqVjeh

— Akul Balaji (@AkulBalaji) September 2, 2022

ಈ ವಿಡಿಯೋದಲ್ಲಿ ಕಿಚ್ಚ ಸುದೀಪ್ ಅವರು ಕೂಡ ಜೊತೆ ಇದ್ದಾರೆ ಈ ಹಿಂದೆ ಕೂಡ ಕಿಚ್ಚ ಸುದೀಪ್ ಅವರು ಕಳೆದ ತಿಂಗಳು ಅವರ ವಿಕ್ರಂತ್ ರೋಣ ಸಿನಿಮಾದ ನಿರ್ದೇಶಕರಾದ ಅನೂಪ್ ಭಂಡಾರಿ ಅವರಿಗೆ 22 ಲಕ್ಷ ಬೆಲೆಬಾಳುವ ಕಾರ್ ಒಂದನ್ನು ಗಿಫ್ಟ್ ನೀಡಿ ಸುದ್ದಿಯಾಗಿದ್ದರು. ಮತ್ತು ಯೋಗರಾಜ್ ಭಟ್ ಅವರಿಗೂ ಸಹ ಅವರ ಸಿನಿಮಾ ಇಂಡಸ್ಟ್ರಿ ಆರಂಭದ ದಿನಗಳಲ್ಲಿ ಬಹಳ ಸಹಾಯ ಮಾಡಿದ ಸುದೀಪ್ ಅವರಿಗೂ ಸಹ ಕಾರು ತೆಗೆದುಕೊಳ್ಳಲು ಹಣ ಸಹಾಯ ಮಾಡಿದ್ದರಂತೆ. ಇದೀಗ ಅಕುಲ್ ಬಾಲಾಜಿ ಅವರಿಗೆ ಎರಡುವರೆ ಲಕ್ಷ ರೂಪಾಯಿ ಬೆಲೆ ಬಾಳುವ ಬೈಕ್ ಅನ್ನು ನೀಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮಾಡಿ.

 

Entertainment Tags:Akul Balaji, Kiccha sudeep
WhatsApp Group Join Now
Telegram Group Join Now

Post navigation

Previous Post: ಕಿಚ್ಚನ ಹುಟ್ಟು ಹಬ್ಬದ ಆಚರಣೆಯಲ್ಲಿ ಭಾಗಿಯಾದ ದಚ್ಚು, ಫೋಟೋ ನೋಡಿ ಶಾ-ಕ್ ಆದ ಅಭಿಮಾನಿಗಳು.
Next Post: ಅಪ್ಪು ಯಾರದ್ದೆ ಮದುವೆಗೆ ಹೋದರು ತಪ್ಪದೇ ಇದೊಂದು ಗಿಫ್ಟ್ ತೆಗೆದುಕೊಂಡು ಹೋಗುತ್ತಿದ್ದರು ಅದಕ್ಕೆ ಸಾಕ್ಷಿ ಈ ವಿಡಿಯೋ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore