ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಸಿನಿಮಾ ಕಳೆದ ತಿಂಗಳಿನಷ್ಟೇ ಬಿಡುಗಡೆಯಾಗಿತ್ತು. ಈ ಒಂದು ಸಿನಿಮಾ ಭರ್ಜರಿ ಮಟ್ಟದಲ್ಲಿ ಹಿಟ್ ಆಗಿರುವ ವಿಷಯ ನಿಮ್ಮೆಲ್ಲರಿಗೂ ತಿಳಿದೆ ಇದೆ. ಕನ್ನಡ ಸೇರಿದಂತೆ ತೆಲುಗು ತಮಿಳು ಮಲಯಾಳಂ ಹಿಂದಿ ಹೀಗೆ ಸುಮಾರು ಐದು ಭಾಷೆಯಲ್ಲಿ ಡಬ್ಬಿಂಗ್ ಆಗಿತ್ತು. ನಮ್ಮ ಕನ್ನಡ ಭಾಷೆಗಿಂತಲೂ ಕೂಡ ಪರಭಾಷೆಯಲ್ಲಿ ಹೆಚ್ಚು ಸದ್ದು ಮಾಡಿತ್ತು ಒಂದು ರೀತಿಯಲ್ಲಿ ಹೇಳುವುದಾದರೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಹಿಂದೆಂದೂ ಮಾಡಿರೋದಂತಹ ದಾಖಲೆಯನ್ನು ಮಾಡಿತು ಏಕೆಂದರೆ ರಾರಾ ಕ್ರಮ ಹಾಡು ವರ್ಲ್ಡ್ ವೈಡ್ ಫೇಮಸ್ ಆಯಿತು. ಕಿಚ್ಚ ಸುದೀಪ್ ಅವರು ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡರು ಕೆಲವು ಸಿನಿ ರಸಿಕರು ಈ ಸಿನಿಮಾ ನೋಡಿ ರಂಗಿತರಂಗದ ಮುಂದುವರಿದ ಭಾಗದಂತಿದೆ ಅಂತ ಹೇಳಿದರು.
ಆದರೆ ಇದ್ಯಾವುದಕ್ಕೂ ಕೂಡ ಕಿಚ್ಚ ಸುದೀಪ್ ಅವರು ತಲೆ ಕೆಡಿಸಿಕೊಳ್ಳಲಿಲ್ಲ ಯಾವಾಗಲೂ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುವುದು ಎಷ್ಟು ಸರಿ ಕೆಲವೊಮ್ಮೆ ವಿಭಿನ್ನ ಪಾತ್ರಗಳನ್ನು ಕೂಡ ಮಾಡಬೇಕಾಗುತ್ತದೆ. ಹಾಗಾಗಿ ಪಾತ್ರವನ್ನು ನಾನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ತಮ್ಮ ಅಭಿಮಾನಿಗಳಿಗೆ ಹೇಳಿದರು. ವಿಕ್ರಾಂತ್ ರೋಣ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು ಮಾತ್ರವಲ್ಲದೆ ಬಾಕ್ಸ್ ಆಫೀಸ್ ನಲ್ಲಿಯೂ ಕೂಡ ಒಳ್ಳೆ ಕಲೆಕ್ಷನ್ ಅನ್ನು ಪಡೆದಿತ್ತು. ಈ ಒಂದು ಸಿನಿಮಾದ ಸಕ್ಸಸ್ ನಲ್ಲಿ ಇರುವಾಗಲೇ ಕಿಚ್ಚ ಸುದೀಪ್ ಅಭಿಮಾನಿಗಳು ಮತ್ತೆ ಸಂತಸ ಪಡುವಂತಹ ವಿಚಾರ ಒಂದು ಇದೆ. ಹೌದು ಕಿಚ್ಚ ಸುದೀಪ್ ಅವರು ವಿಕ್ರಂತ್ ರೋಣ ಸಿನಿಮಾಗಾಗಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು ಆದರೆ ಇದ್ದಕ್ಕಿದ್ದ ಹಾಗೆ ಅವರ ಲುಕ್ಕನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ.
ಹೌದು ಸುದೀಪ್ ಹೊಸ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ ಸಂಪೂರ್ಣವಾಗಿ ದಾಡಿ ಮತ್ತು ಮೀಸೆ ತೆಗೆದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಈ ಲುಕ್ ಯಾವ ಸಿನಿಮಾಗೆ ಎನ್ನುವ ಕುತೂಹಲ ಮತ್ತಷ್ಟು ಹೆಚ್ಚಿಸಿದೆ ಕಿಚ್ಚ ಸೈಲೆಂಟ್ ಆಗಿ ಮುಂದಿನ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಅಭಿಮಾನಿ ಜೊತೆ ಸುದೀಪ್ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋ ಎಲ್ಲಾ ಕಡೆ ಹರಿದಾಡುತ್ತಿದ ಅಂದ ಹಾಗೆ ಕಿಚ್ಚನ ಈ ಲುಕ್ ಕಬ್ಜ ಸಿನಿಮಾಗಾಗಿ ಎನ್ನಲಾಗುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾದಲ್ಲಿ ಸುದೀಪ್ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಈಗಾಗಲೇ ಕಿಚ್ಚನ ಫಸ್ಟ್ ಲುಕ್ ರಿಲೀಸ್ ಆಗಿತ್ತು ಭಾರ್ಗವ ಭಕ್ಷಿ ಎನ್ನುವ ಪಾತ್ರದಲ್ಲಿ ಕಿಚ್ಚ ನಟಿಸುತ್ತಿದ್ದಾರೆ.
ರೆಟ್ರೋ ಶೈಲಿಯಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಕಿಚ್ಚ ಲುಕ್ ಕೂಡ ಅಷ್ಟೆ ಇಂಪ್ರೆಸಿವ್ ಆಗಿದೆ ಫಸ್ಟ್ ಲುಕ್ ಬಳಿಕ ಕಿಚ್ಚನ ಭಾಗದ ಚಿತ್ರೀಕರಣ ಸಂಪೂರ್ಣವಾಗಿರಲಿಲ್ಲ. ವಿಕ್ರಾಂತ್ ರೋಣ ಚತ್ರದಲ್ಲಿ ಬ್ಯುಸಿಯಾಗಿದ್ದ ಕಿಚ್ಚ ಇದೀಗ ಮತ್ತೆ ಕಬ್ಜ ಸೆಟ್ ಗೆ ಎಂಟ್ರಿ ಕೊಟ್ಟಿದ್ದಾರೆ. ಕಬ್ಜ ಸಿನಿಮಾದಿಂದ ಸುದೀಪ್ ಹೊರ ಬಂದಿದ್ದಾರೆ ಎನ್ನುವ ಸುದ್ದಿ ಸಹ ವೈರಲ್ ಆಗಿತ್ತು ಆದರೀಗ ಮತ್ತೆ ಶೂಟಿಂಗ್ ಗೆ ಹಾಜರಾಗುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಈ ಸಿನಿಮಾ ಬಳಿಕ ಸುದೀಪ್ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕುಚೂಹಲ ಮೂಡಿಸಿದೆ.
ಬಿಲ್ಲಾ ರಂಗ ಭಾಷ ಪ್ರಾರಂಭ ಮಾಡುತ್ತಾರಾ ಅಥವಾ ಬೇರೆ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುತ್ತಾರಾ ಕಾದುನೋಡಬೇಕು. ಸದ್ಯಕ್ಕೆ ಕಿಚ್ಚ ಸುದೀಪ್ ಅವರು ಓ ಟಿ ಟಿ ಯಲ್ಲಿ ಪ್ರಸಾರವಾಗುತ್ತಿರುವಂತಹ ಮಿನಿ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಅಭಿಮಾನಿಗಳಂತೂ ಕಿಚ್ಚ ಸುದೀಪ್ ಅವರು ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡಬಹುದು ಅದಕ್ಕಾಗಿ ಈ ರೀತಿಯಾದಂತಹ ಲುಕ್ ಅನ್ನು ಬದಲಾಯಿಸಿಕೊಂಡಿದ್ದಾರೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.