Sunday, June 4, 2023
HomeViral Newsನೆನ್ನೆಯಷ್ಟೇ ಡೆ-ತ್ ನೋಟ್ ಬರೆದಿಟ್ಟು ಆ-ತ್ಮ-ಹ-ತ್ಯೆ ಮಾಡಿಕೊಳ್ಳುತ್ತೆನೆ ಅಂತ ಪೋಸ್ಟ್ ಹಾಕಿದ್ದ ಕೀರ್ತಿ, ಇಂದು ಇದ್ದಕ್ಕಿದ್ದ...

ನೆನ್ನೆಯಷ್ಟೇ ಡೆ-ತ್ ನೋಟ್ ಬರೆದಿಟ್ಟು ಆ-ತ್ಮ-ಹ-ತ್ಯೆ ಮಾಡಿಕೊಳ್ಳುತ್ತೆನೆ ಅಂತ ಪೋಸ್ಟ್ ಹಾಕಿದ್ದ ಕೀರ್ತಿ, ಇಂದು ಇದ್ದಕ್ಕಿದ್ದ ಹಾಗೇ ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ ಏನದು ಗೊತ್ತ.?

 

ಕಿರುತೆರೆ ನಿರೂಪಕ, ನ್ಯೂಸ್ ಚಾನೆಲ್ ಆಂಕರ್ ಕನ್ನಡ ಸಿನಿಮಾ ನಾಯಕನಾಗಿ ಕೂಡ ಅದೃಷ್ಟ ಪರೀಕ್ಷಿಸಿಕೊಂಡಿದ್ದ ಕಿರಿಕ್ ಕೀರ್ತಿಯವರು (Kirik keerthy) ಇದ್ದಕ್ಕಿದ್ದಂತೆ ನೆನ್ನೆ ಅಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಆ.ತ್ಮ.ಹ.ತ್ಯೆ ಮಾಡಿಕೊಳ್ಳುವುದರ ಬಗ್ಗೆ, ಡೆ.ತ್ ನೋಟ್ (Death note) ಬಗ್ಗೆ ಕೆಲವು ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದರು. ಇವರು ಮಾಡಿದ್ದ ಆ ಪೋಸ್ಟ್ ಅಲ್ಲಿ ಹೀಗಿತ್ತು ನಿರ್ಧಾರ ಮಾಡಿದ್ದೆ ಈ ಜಗತ್ತನ್ನೇ ಬಿಟ್ಟು ಹೋಗಿಬಿಡಬೇಕು ಎಂದು ಇದಕ್ಕೆ ಹಲವಾರು ಕಾರಣಗಳು ಇವೆ.

ವೈಯಕ್ತಿಕ ಜೀವನದಲ್ಲಿ ಆದ ಕೆಲವು ಕಹಿ ಘಟನೆಗಳು ನನ್ನನ್ನು ಇನ್ನಿಲ್ಲವಾದಂತೆ ಕುಗ್ಗಿಸಿದೆ ಅದರಿಂದ ಹೊರಬರಲಾಗದೆ ಒದ್ದಾಡುತ್ತಿದ್ದೇನೆ. ಜೊತೆಗೆ ನನ್ನ ಯಾವ ಪ್ರಯತ್ನಗಳು ಕೂಡ ಕೈಗೂಡದೆ ಇರುವುದರಿಂದ ಬದುಕಿನ ಬಗ್ಗೆ ಒಂದು ರೀತಿಯ ಬೇಸರ ಮೂಡಿದೆ. ಹಾಗಾಗಿ ಯಾವುದರಲ್ಲೂ ಆಸಕ್ತಿಗೆ ಇಲ್ಲದೆ ಹೋಗಿದ್ದೇನೆ. ಜಿಹಾದಿಗಳಿಂದ ಕೂಡ ಕುಟುಂಬಕ್ಕೆ ಬೆ’ದ’ರಿ’ಕೆ ಕರೆಗಳು ಬರುತ್ತಿದ್ದು ಇದು ಇನ್ನಷ್ಟು ಕುಟುಂಬದ ಪರಿಸ್ಥಿತಿಯನ್ನು ಹದಗೆಡಿಸಿದೆ.

ಈ ಎಲ್ಲ ಸಮಸ್ಯೆಯಿಂದ ಮಾನಸಿಕವಾಗಿ ಖಿ’ನ್ನ’ತೆ’ಗೆ ಜಾರಿ ಸೋಶಿಯಲ್ ಮೀಡಿಯದಿಂದಲೂ ಸಹ ದೂರ ಉಳಿದುಕೊಂಡಿದ್ದೆ. ಆದರೆ ಈಗ ಅನಿಸುತ್ತಿದೆ ನಾನು ಈ ರೀತಿ ಹೆದರಿ ಎಲ್ಲೋ ಅಡಗಿ ಕುಳಿತುಕೊಂಡು ಬಿಟ್ಟರೆ ನನ್ನನ್ನು ಈ ಪರಿಸ್ಥಿತಿಗೆ ತಂದವರಿಗೆ ಉತ್ತರ ಹೇಳುವವರು ಯಾರು ಎಂದು. ನನ್ನನ್ನು ನಂಬಿ ನನ್ನ ಮೇಲೆ ಇನ್ವೆಸ್ಟ್ ಮಾಡಿರುವವರಿಗೆಲ್ಲ ನ್ಯಾಯ ಕೊಡುವವರು ಯಾರು ಎಂದು, ಜೊತೆಗೆ ನನ್ನ ಮಗನ ಭವಿಷ್ಯವನ್ನು ನಿರ್ವಹಿಸುವವರು ಯಾರು ಎಂದು ನನಗೆ ಪ್ರಶ್ನೆ ಮೂಡುತ್ತಿದೆ.

ಹಾಗಾಗಿ ಇದೆಲ್ಲವನ್ನು ಯೋಚಿಸುತ್ತಾ 10 ನಿಮಿಷ ಧ್ಯಾನ ಮಾಡುತ್ತಾ ಕುಳಿತು ಬಿಟ್ಟೆ ತಡವಾದರೂ ಪರವಾಗಿಲ್ಲ ನನ್ನ ಮೇಲೆ ನಂಬಿಕೆ ಇಟ್ಟಿರುವವರ ನಂಬಿಕೆ ಉಳಿಸಿಕೊಳ್ಳಬೇಕು ಎನಿಸುತ್ತಿದೆ. ಅದಕ್ಕಾಗಿ ಆದರೂ ಏನಾದರೂ ಸಾಧನೆ ಮಾಡಲೇಬೇಕು ಎನಿಸುತ್ತಿದೆ ಟೈಪ್ ಮಾಡಿದ್ದ ಆ ಡೆ’ತ್ ನೋಟ್ ಅನ್ನು ಡಿಲೀಟ್ ಮಾಡಿದೆ. ಜೀವನದಲ್ಲಿ ಎಲ್ಲವನ್ನು ಸರಿ ಮಾಡಲು ಆಗದಿದ್ದರೂ ಕೆಲವನ್ನಾದರೂ ಮತ್ತೆ ಟ್ರ್ಯಾಕಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.

ನಿಮ್ಮ ಬೆಂಬಲ ನನಗಿರಲಿ ಡಿ’ಪ್ರೆ’ಷ’ನಿಂದ ಹೊರ ಬಂದು ಮತ್ತೆ ನನ್ನ ಮುಖದಲ್ಲಿ ಮೊದಲ ನಗು ಬರುವ ತನಕ ನನಗೆ ಸಹಕರಿಸಿ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ವೈರಲಾಗುತ್ತಿದ್ದಂತೆ ಸಾಕಷ್ಟು ಜನ ಕಮೆಂಟ್ ಮಾಡಿ ನಿಮ್ಮೊಂದಿಗೆ ನಾವಿದ್ದೇವೆ ಏನಾದರೂ ಧೈರ್ಯದಿಂದ ಇರಿ ಎಂದು ಸಪೋರ್ಟ್ ಮಾಡುತ್ತಿದ್ದರೆ. ಅದಕ್ಕಿಂತಲೂ ಹೆಚ್ಚಿನ ಮಂದಿ ಇವರನ್ನು ಟ್ರೋಲ್ ಮಾಡಿದ್ದರು, ನೆಗೆಟಿವ್ ಆಗಿ ಕಮೆಂಟ್ ಮಾಡಿದ್ದರು ಅದಕ್ಕೆ ಈಗ ತಿರುಗೇಟು ಕೊಡಲು ಕೀರ್ತಿಯವರು ಮತ್ತೊಂದು ಪೋಸ್ಟ್ ಮಾಡಿದ್ದಾರೆ.

ಅದೆಷ್ಟೋ ಸಾವಿರ ಮೆಸೇಜ್ ಗಳು ನನ್ನ ಆತ್ಮವಿಶ್ವಾಸ ಹೆಚ್ಚಿಸಿದೆ. ಕೆಲವರು ನನ್ನನ್ನು ಇನ್ನಷ್ಟು ಕುಗ್ಗಿಸುವ ಪ್ರಯತ್ನ ಮಾಡಿದರೂ ಸಹ ಅದು ಈಗ ಉಪಯೋಗಕ್ಕೆ ಬಾರದು. ಯಾವ ನೆಗೆಟಿವಿಟಿ ಮತ್ತು ಟ್ರೋಲುಗಳು ನನ್ನ ಆತ್ಮವಿಶ್ವಾಸ ಕುಗ್ಗಿಸಲಾರವು. ಯಾಕೆಂದರೆ ನಾನೀಗ ಬಿದ್ದು ನೊಂದು ಬೇಸತ್ತು ಎಲ್ಲವನ್ನು ಮರೆತು ಗೆದ್ದು ಬರಲು ತೀರ್ಮಾನ ಮಾಡಿದವನು. ಮತ್ತೆ ಸೋಲುವ ಭಯವಿಲ್ಲ, ಗೆಲ್ಲುವ ಛಲವಷ್ಟೇ ಇರುವುದು.

ಪ್ರೀತಿ ಹಾರೈಕೆ ಆಶೀರ್ವಾದ ಕೊಟ್ಟು ನನ್ನ ಹಠಕ್ಕೆ ಸಾತ್ ಕೊಟ್ಟ ಎಲ್ಲರಿಗೂ ಕೋಟಿ ಕೋಟಿ ಧನ್ಯವಾದಗಳು. ನೀವು ಇಟ್ಟ ನಂಬಿಕೆ ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಮತ್ತೆ ಪೋಸ್ಟ್ ಹಾಕುವ ಮೂಲಕ ತಾವೀಗ ನಿಜವಾಗಿಯೂ ಸರಿಯೋಗುತ್ತಿರುವುದರ ಸೂಚನೆ ನೀಡಿದ್ದಾರೆ. ಮೊನ್ನೆ ಸಾ.ಯು.ತ್ತೇ.ನೆ ಅಂದಿದ್ದ ವ್ಯಕ್ತಿ ಇಂದು ಬದುಕುತ್ತೇನೆ ಎನ್ನುತ್ತಿದ್ದಾರೆ ಕೀರ್ತಿ ಅವರ ಈ ನಿಲುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.