Friday, June 9, 2023
HomeEntertainmentದರ್ಶನ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಕೊನೆಗೂ ಫಿಕ್ಸ್ ಆಯ್ತು ಕ್ರಾಂತಿ ಸಿನಿಮಾ ರಿಲೀಸ್ ಡೇಟ್

ದರ್ಶನ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಕೊನೆಗೂ ಫಿಕ್ಸ್ ಆಯ್ತು ಕ್ರಾಂತಿ ಸಿನಿಮಾ ರಿಲೀಸ್ ಡೇಟ್

ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಸಿನಿಮಾದ ಚಿತ್ರೀಕರಣ ಈಗಾಗಲೇ ಸಂಪೂರ್ಣವಾಗಿ ಮುಗಿದಿದ್ದು ಡಬ್ಬಿಂಗ್ ಕೆಲಸವನ್ನು ಕೂಡ ಮುಗಿಸಿದ್ದಾರೆ. ದರ್ಶನ್ ಅವರು ಡಬ್ಬಿಂಗ್ ಮಾಡುತ್ತಿರುವಂತಹ ವಿಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಇದಾದ ನಂತರ ಮೊನ್ನೆಯಷ್ಟೇ ಕ್ರಾಂತಿ ಸಿನಿಮಾದಲ್ಲಿ ಅತಿಥಿ ಪಾತ್ರ ಒಂದರಲ್ಲಿ ನಟಿಸಿರುವಂತಹ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕೂಡ ಡಬ್ಬಿಂಗ್ ಕೆಲಸದಲ್ಲಿ ನಿರತರಾಗಿದ್ದಾರೆ ಅವರ ಪೋಸ್ಟರ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಡಬ್ಬಿಂಗ್ ಕೆಲಸ ಮುಗಿದರೆ ಶೇಕಡ ನೂರಕ್ಕೆ 99 ರಷ್ಟು ಈ ಸಿನಿಮಾದ ಕೆಲಸ ಸಂಪೂರ್ಣ ಆಗಿದೆ ಅಂತಾನೆ ಅರ್ಥ ಹಾಗಾಗಿ ದರ್ಶನ್ ಅಭಿಮಾನಿಗಳು ಕ್ರಾಂತಿ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂದು ತುದಿಗಳಲ್ಲಿ ನಿಂತಿದ್ದಾರೆ. ಕಳೆದ ಒಂದು ವರ್ಷದಿಂದ ದರ್ಶನ್ ಅಭಿನಯದ ಯಾವ ಸಿನಿಮಾ ಕೂಡ ಥಿಯೇಟರ್ ನಲ್ಲಿ ಬಿಡುಗಡೆಯಾಗಿಲ್ಲ. ಹಾಗಾಗಿ ಒಂದು ವರ್ಷದಿಂದ ದರ್ಶನ್ ಅಭಿಮಾನಿಗಳು ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆಯೋ ಎಂದು ಕಾತುರದಿಂದ ಕಾದಿದ್ದಾರೆ.

ಹಾಗಾಗಿ ಇಂದು ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಒಂದು ಇದೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರ 55ನೇ ಸಿನಿಮಾ ಕ್ರಾಂತಿ ಸಿನಿಮಾ ಬಹುದೊಡ್ಡ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಅದರಲ್ಲೂ ಕೂಡ ಅಕ್ಷರ ಕ್ರಾಂತಿಯನ್ನು ಈ ಸಿನಿಮಾದಲ್ಲಿ ನಾವು ನೋಡಬಹುದಾಗಿದೆ ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಶಾಲೆಯಲ್ಲಿ ನಡೆಯುವಂತಹ ಅಕ್ರಮ ಹಾಗೂ ಇಲ್ಲಿ ಇರುವಂತಹ ಮಕ್ಕಳು ಅನುಭವಿಸುವ ಸ್ಥಿತಿ ಇವೆಲ್ಲವನ್ನು ಕೂಡ ಎಳೆಎಳೆಯಾಗಿ ಈ ಸಿನಿಮಾದಲ್ಲಿ ತೋರಿಸಿ ಕೊಟ್ಟಿದ್ದಾರೆ.

ದರ್ಶನ್ ಅವರು ಈ ಸಿನಿಮಾದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯ ಪಾತ್ರವನ್ನು ನಿವಹಿಸಿದ್ದಾರೆ ಹಾಗಾಗಿ ಅಭಿಮಾನಿಗಳಲ್ಲಿ ಈ ಸಿನಿಮ ಯಾವ ರೀತಿ ಮೂಡಿ ಬರಲಿದೆ ಎಂಬ ಬಹುದೊಡ್ಡ ನಿರೀಕ್ಷೆಯನ್ನೇ ಹುಟ್ಟು ಹಾಕಿದೆ ಕಳೆದ ಗಣೇಶ ಹಬ್ಬದಲ್ಲಿ ಕ್ರಾಂತಿ ಸಿನಿಮಾದ ಪೋಸ್ಟರ್ ಲುಕ್ ಒಂದನ್ನು ಬಿಡುಗಡೆ ಮಾಡಲಾಯಿತು. ಇದಾದ ನಂತರ ಈ ಸಿನಿಮಾದ ಯಾವುದೇ ಅಪ್ಡೇಟ್ಸ್ ಕೂಡ ಬಂದಿರಲಿಲ್ಲ ಆದರೆ ನೆನ್ನೆಯಷ್ಟೇ ಕ್ರಾಂತಿ ಸಿನಿಮಾದ ಅಪ್ಡೇಟ್ಸ್ ಒಂದು ಹೊರ ಬಿದ್ದಿದೆ ಹೌದು ಅದೇನೆಂದರೆ ಕ್ರಾಂತಿ ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಅಂತ.

ಕ್ರಾಂತಿ ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಗಿದಿದ್ದು ಡಬ್ಬಿಂಗ್ ಕೆಲಸವು ಮುಗಿದಿದ್ದು ಕೆಲವು ಸೀನ್ ಗಳನ್ನು ಮಾತ್ರ ರೀ ಶೂಟ್ ಮಾಡಬೇಕಿದೆ. ಆ ಕೆಲಸದಲ್ಲಿ ಚಿತ್ರತಂಡ ಇದೀಗ ಭಾಗಿಯಾಗಿದೆ ಇವೆಲ್ಲವೂ ಕೂಡ ಈ ತಿಂಗಳ ಕೊನೆಯಲ್ಲಿ ಮುಕ್ತಾಯವಾಗಲಿದೆ ನವೆಂಬರ್ ಹಾಗೂ ಡಿಸೆಂಬರ್ 2 ತಿಂಗಳಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಜನವರಿ 26ನೇ ತಾರೀಕು ಅಂದರೆ ಗಣರಾಜ್ಯೋತ್ಸವದ ದಿನದಂದೇ ಕ್ರಾಂತಿ ಸಿನಿಮಾವನ್ನು ಬಿಡುಗಡೆ ಮಾಡಬೇಕು ಅಂತ ನಿರ್ಧಾರ ಮಾಡಿದಯಂತೆ.

ಗಣರಾಜ್ಯೋತ್ಸವ ದಿನದ ಸಲುವಾಗಿ ಈ ಕ್ರಾಂತಿ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂಬುದು ಇವರ ಮೂಲವಾಗಿದೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಕ್ರಾಂತಿ ಸಿನಿಮಾಗೆ ಮಾಧ್ಯಮಗಳಿಂದ ಯಾವುದೇ ರೀತಿಯಾದಂತಹ ಬೆಂಬಲ ಹಾಗೂ ಪ್ರೋತ್ಸಾಹ ಇಲ್ಲ. ಇದರ ನಡುವೆಯೂ ಕೂಡ ಕ್ರಾಂತಿ ಸಿನಿಮಾದ ಪ್ರಮೋಷನ್ ಗಾಗಿ ಅಭಿಮಾನಿಗಳೇ ಮುಂದೆ ನಿಂತು ಈ ಸಿನಿಮಾದ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದಾರೆ. ಹಾಗಾಗಿ ಕ್ರಾಂತಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಯಾವ ರೀತಿಯ ಕಮಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.