Friday, June 9, 2023
HomeEntertainmentಕ್ರಾಂತಿ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆ ಆಗುವುದಕ್ಕಿಂತ ಮುಂಚೆಯೇ ಓ.ಟಿ.ಟಿ ದಿನಾಂಕ ಘೋಷಣೆ. ಬ್ಯಾನ್ ಬಯಕೆ...

ಕ್ರಾಂತಿ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆ ಆಗುವುದಕ್ಕಿಂತ ಮುಂಚೆಯೇ ಓ.ಟಿ.ಟಿ ದಿನಾಂಕ ಘೋಷಣೆ. ಬ್ಯಾನ್ ಬಯಕೆ ಹೆದರಿ ಈ ರೀತಿ ಮಾಡ್ತಿದ್ದಾರ‌.?

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ರಿಲೀಸ್ ಗೆ ದಿನಗಣನೆ ಶುರುವಾಗಿದೆ ಬಹುಕೋಟಿ ವೆಚ್ಚದಲ್ಲಿ ಈ ಮಾಸ್ ಎಂಟಟೈನರ್ ಸಿನಿಮಾ ನಿರ್ಮಾಣವಾಗಿದೆ ಈಗಾಗಲೇ ಈ ಚಿತ್ರದ ಹಾಡುಗಳು ರಿಲೀಸ್ ಆಗಿ ಸಿನಿಮಾದ ಮೇಲೆ ಇರುವಂತಹ ನಿರೀಕ್ಷೆಯನ್ನು ಜಾಸ್ತಿ ಮಾಡಿದೆ ಈಗ ಸಿನಿಮಾ OTT ಸ್ಕ್ರಿಮಿಂಗ್ ಬಗ್ಗೆ ಕೂಡ ಸುಳಿವು ಸಿಕ್ಕಿದೆ.

ಮೊದಲೆಲ್ಲಾ ಸಿನಿಮಾಗಳು ಥಿಯೇಟರ್ ನಲ್ಲಿ ಒಳ್ಳೆಯ ಪ್ರದರ್ಶನವನ್ನು ನೀಡಿದ ಮೇಲೆ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಈಗ ಟಿವಿಗೂ ಮುಂಚೆ ಡಿಜಿಟಲ್ ಪ್ಲಾಂಟ್ ಫಾರ್ಮ್ ಗಳಲ್ಲಿ ಎಂಟ್ರಿ ಕೊಡುತ್ತದೆ OTT ಚಂದಾದಾರರು ತಮಗೆ ಇಷ್ಟವಾದ ಸಮಯದಲ್ಲಿ ಸಿನಿಮಾವನ್ನು ನೋಡಬಹುದು ಯಾವುದೇ ಸಿನಿಮಾಗಲಿ ಒಂದುವರೆ ತಿಂಗಳು ಕಳೆದ ನಂತರ OTT ಗೆ ಬರುತ್ತದೆ.

ಕ್ರಾಂತಿ ಸಿನಿಮಾ ಎಲ್ಲಿ ಸ್ಟ್ರೀಮಿಂಗ್ ಆಗುತ್ತದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ ರಾಬರ್ಟ್ ಸಿನಿಮಾದ ನಂತರ ದರ್ಶನ್ ನಟನೆ ಮಾಡಿರುವ ಮತ್ತೊಂದು ಫ್ಯಾಮಿಲಿ ಎಂಟ ಟೈನರ್ ಸಿನಿಮಾ ಕ್ರಾಂತಿ ರಚಿತಾರಾಮ್ ಉಮಾಶ್ರೀ ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯಮಂತ್ರಿ ಚಂದ್ರು ಸೇರಿದ ಹಾಗೆ ಬಾರಿ ತಾರಾ ಗಣ ಈ ಚಿತ್ರದಲ್ಲಿ ಇದೆ ಕ್ರಾಂತಿ ಸಿನಿಮಾದ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುವ ಸುಳಿವು ಸಿಗುತ್ತಿದೆ.

ಈಗಾಗಲೇ ಭಾರಿ ಮೊತ್ತಕ್ಕೆ ಡಿಜಿಟಲ್ ರೈಟ್ಸ್ ಮಾರಾಟವಾಗಿದೆ ಎನ್ನಲಾಗುತ್ತಿದೆ ಐದು ಭಾಷೆಗಳಲ್ಲಿ ಈ ಸಿನೆಮಾ ತೆರೆ ಮೇಲೆ ಬರುತ್ತಿದ್ದು ಈ ಹಿಂದೆ ಯಜಮಾನ ಸಿನಿಮಾವನ್ನು ನಿರ್ಮಿಸಿದಂತಹ ಅದೇ ತಂಡ ಈ ಚಿತ್ರಕ್ಕೂ ಕೂಡ ಕೆಲಸ ಮಾಡಿದೆ ಆ ಸಿನಿಮಾ ಕೂಡ ಪ್ರೈಮ್ ನಲ್ಲಿ ಪ್ರಸಾರವಾಗಿತ್ತು ಒಂದಷ್ಟು ಷರತ್ತುಗಳನ್ನು ವಿಧಿಸಿ OTT ಸಂಸ್ಥೆಗಳು.

ಸಿನಿಮಾ ಸ್ಟ್ರೀಮಿಂಗ್ ಕೊಂಡುಕೊಳ್ಳುತ್ತಾರೆ ಅದಲ್ಲದೆ ಮೊದಲೇ ಈ ಚಿತ್ರ ಯಾವ ಸಮಯದಲ್ಲಿ ಹಾಕಬೇಕು ಎನ್ನುವುದು ಮೊದಲೇ ಒಪ್ಪಂದವಾಗಿರುತ್ತದೆ ಸಾಮಾನ್ಯವಾಗಿ ಎಲ್ಲ ಚಿತ್ರಗಳು ಥಿಯೇಟರ್ ನಲ್ಲಿ ತೆರೆಕಂಡು ಏಳು ತಿಂಗಳ ನಂತರ OTT ಗೆ ಬರುತ್ತದೆ ಇತ್ತೀಚೆಗೆ ಕಾಂತಾರ ಸಿನಿಮಾ 50 ದಿನಗಳ ನಂತರವೂ ಭರ್ಜರಿ ಪ್ರದರ್ಶನವನ್ನು ಕಂಡಿತ್ತು.

ಕ್ರಾಂತಿ ಸಿನಿಮಾ ಮಾರ್ಚ್ ಕೊನೆಯ ವಾರದ ವೇಳೆಗೆ ವೀಕ್ಷಣೆಗೆ ಸಿಗುತ್ತದೆ ರಾಜ್ಯದ ಮೂರು ಜಿಲ್ಲೆಗಳಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಕ್ರಾಂತಿ ಚಿತ್ರದ 3 ಹಾಡುಗಳನ್ನು ಅಭಿಮಾನಿಗಳಿಂದಲೇ ರಿಲೀಸ್ ಮಾಡಿಸಲಾಗಿತ್ತು ಮೈಸೂರಿನಲ್ಲಿ ಚಿತ್ರದ ಥೀಮ್ ಸಾಂಗ್ ಧರಣಿ ಬಿಡುಗಡೆಯಾಗಿತ್ತು ಹೊಸಪೇಟೆಯಲ್ಲಿ ಬೊಂಬೆ ಬೊಂಬೆ ಮೆಲೋಡಿ ಸಾಂಗ್ ಲೋಕಾರ್ಪಣೆಯಾಗಿದ್ದರೆ

ಇನ್ನು ಹುಬ್ಬಳ್ಳಿಯಲ್ಲಿ ಐಟಂ ಸಾಂಗ್ ಪದ್ಮಾವತಿ ಸೌಂಡ್ ಮಾಡಿತ್ತು ಇದೇ ಶನಿವಾರ ಬೆಂಗಳೂರಿನಲ್ಲಿ ದೊಡ್ಡ ಇವೆಂಟ್ ನಲ್ಲಿ ಕ್ರಾಂತಿ ಆಕ್ಷನ್ ಫ್ಯಾಕ್ಟ್ ಟ್ರೈಲರ್ ರಿಲೀಸ್ ಆಗಲಿದೆ ಜನವರಿ 26 ನೇ ತಾರೀಖು ಕ್ರಾಂತಿ ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದೆ ದರ್ಶನ್ ಅವರು ಈ ಸಿನಿಮಾದಲ್ಲಿ ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟು ಐದು ಭಾಷೆಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ ಶೈಲಜಾ ನಾಗ್ ಸುರೇಶ್ ಈ ಚಿತ್ರದ ನಿರ್ಮಾಣ ಕಾರ್ಯವನ್ನು ಮಾಡಿದ್ದಾರೆ ವಿ ಹರಿಕೃಷ್ಣ ಅವರ ಸಂಗೀತವಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೋಸ್ಟ್ ಎಸ್ಪೆಕ್ಟೆಡ್ ಸಿನಿಮಾ ಇದು ಅಂತಾನೇ ಹೇಳಬಹುದು. ಏಕೆಂದರೆ ಈ ಸಿನಿಮಾ ಬಿಡುಗಡೆಗೆ ಸಾಕಷ್ಟು ಅಡೆತಡೆಗಳು ನಿರ್ಮಾಣವಾಗಿದೆ. ಅವೆಲ್ಲವನ್ನು ದಾಟಿ ಚಿತ್ರರಂಗದಲ್ಲಿ ಸಿನಿಮಾ ಯಾವ ರೀತಿ ಪ್ರಸಾರವಾಗಲಿದೆ ಹಾಗೂ ಪ್ರೇಕ್ಷಕರು ಈ ಸಿನಿಮಾವನ್ನು ಯಾವ ರೀತಿ ಕೈಗೆತ್ತಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಸಿನಿಮಾ ಚೆನ್ನಾಗಿ ಮೂಡಿ ಬಂದರೆ ಥಿಯೇಟರ್ ನಲ್ಲಿ ಓಡುತ್ತದೆ ಇಲ್ಲವಾದರೆ ಸಿನಿಮಾ ಬಿಡುಗಡೆಯಾದ ಕೇವಲ ಒಂದೇ ತಿಂಗಳಿಗೆ ಓಟಿಟಿಗೆ ಬರುವುದಂತೂ ಖಚಿತ.