ಸರ್ಕಾರಿ ಉದ್ಯೋಗ (Government jobs) ಪಡೆಯಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಇದಕ್ಕಾಗಿ ಶಾಲಾ ದಿನಗಳಿಂದ ಕೂಡ ಕನಸು ಕಟ್ಟಿಕೊಂಡು ಬೆಳೆದಿರುತ್ತಾರೆ. ಜೀವನವನ್ನೇ ತಪಸ್ಸಿನಂತೆ ಆಚರಿಸಿ ಆಕಾಂಕ್ಷಿಗಳು (Aspirants) ಅಧ್ಯಯನದಲ್ಲಿ ತೊಡಗಿಕೊಂಡಿರುತ್ತಾರೆ.
ಪದವಿ ಮುಗಿದರೂ ಕೂಡ ಸರ್ಕಾರಿ ಹುದ್ದೆಯನ್ನೇ ಪಡೆಯಬೇಕು ಎನ್ನುವ ಹಂಬಲದಿಂದ ಬೇರೆ ಹುದ್ದೆ ಮಾಡದೆ ಕೋಚಿಂಗ್ ಸೆಂಟರ್ ಗಳನ್ನು ಸೇರಿಕೊಂಡು ತಮ್ಮ ಡ್ರೀಮ್ ಜಾಬ್ ಪಡೆದುಕೊಳ್ಳಲು ಸರ್ವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಪ್ರತಿ ಬಾರಿ ಕೂಡ ರಾಜ್ಯ ಸರ್ಕಾರದಿಂದ ಅಥವಾ ಕೇಂದ್ರ ಸರ್ಕಾರದಿಂದ ಸರ್ಕಾರಿ ಹುದ್ದೆಗಳ ಬಗ್ಗೆ ಅಪ್ಡೇಟ್ ಹೊರ ಬಿದ್ದಾಗ ಆ ಕನಸು ಮತ್ತೆ ಗರಿಗೆದರುತ್ತದೆ.
ತಮ್ಮ ಆಸೆ ಕೈಗೂಡುವ ಕಾಲ ಹತ್ತಿರ ಬಂತು ಎಂದು ಸಂತೋಷ (good news) ಇಮ್ಮಡಿಯಾಗುತ್ತದೆ. ಈಗ ಕರ್ನಾಟಕ ರಾಜ್ಯದ ಯುವಕ ಯುವತಿಯರ ಪಾಲಿಗೆ ಆ ಸುಸಮಯ. ಯಾಕೆಂದರೆ ಸರ್ಕಾರ ಒಮ್ಮೆಲೇ 13,000ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ದುಕೊಳ್ಳುವ ಬಗ್ಗೆ ಸೂಚನೆ ನೀಡಿ ಯುವಕರ ಬದುಕಿಗೆ ಭರವಸೆ ನೀಡಿದೆ.
ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (C.M Siddaramaih) ಅವರೇ ಸದನದಲ್ಲಿ (Assembly) ಈ ವಿಷಯ ಮಾತನಾಡುವ ಮೂಲಕ ಇದು ಗಾಳಿ ಸುದ್ದಿ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಮೊದಲಿಗೆ ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ (Guarantee Scheme) ಬಗ್ಗೆ ಪ್ರಶಂಸಿಕೊಂಡಿದ್ದ ಮುಖ್ಯಮಂತ್ರಿಗಳು ತಮ್ಮ ಸರ್ಕಾರ ಜಾರಿಗೆ ತಂದ ಈ ಯೋಜನೆಗಳ ಸಾಧಕ ಬಾದಕಗಳ ಬಗ್ಗೆ ಚರ್ಚೆ ಮಾಡುತ್ತಾ ಶಕ್ತಿ ಯೋಜನೆ ಬಗ್ಗೆ ವಿಷಯ ಬಂದಾಗ ಈ ರೀತಿಯ ಪ್ರಸ್ತಾಪ ಮಾಡಿದ್ದಾರೆ.
SBI ಬ್ಯಾಂಕ್ ನಲ್ಲಿ ಖಾತೆ ಇದ್ದವರಿಗೆ ಇಂದಿನಿಂದ 5 ಹೊಸ ರೂಲ್ಸ್ ಜಾರಿ.!
ಸರ್ಕಾರದ ಗ್ಯಾರಂಟಿ ಕಾರ್ಡ್ ಯೋಜನೆ ಭಾಗವಾಗಿ ಸಾರಿಗೆ ಇಲಾಖೆ (transport department) ಕೂಡ ಸೇರಿದೆ, ಶಕ್ತಿ ಯೋಜನೆಯಿಂದ ಕರ್ನಾಟಕ ರಾಜ್ಯದ ಮಹಿಳೆಯರು ಕರ್ನಾಟಕ ರಾಜ್ಯ ಸಾರಿಗೆ ನಿಗಮ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಈ ಯೋಜನೆ ವಿಷಯವಾಗಿ ಮಾತನಾಡಿದ ಮುಖ್ಯಮಂತ್ರಿಗಳು ಪ್ರತಿಪಕ್ಷಗಳು ಶಕ್ತಿಯೋಜನೆಯಿಂದ ಸಾರಿಗೆ ಇಲಾಖೆ ಮುಳುಗುತ್ತದೆ ಎಂದು ಆರೋಪ ಮಾಡಿದ್ದರು.
ಸದ್ಯಕ್ಕೆ ಇರುವ ಅಂಕಿ ಅಂಶಗಳ ಪ್ರಕಾರ ಸಾರಿಗೆ ಇಲಾಖೆಗೆ 28.94 ಕೋಟಿ ಆದಾಯವಾಗಿದೆ. ಪ್ರತಿದಿನ ಆದಾಯ 4.74 ಕೋಟಿ ಇದೆ. ಸಾರಿಗೆ ಇಲಾಖೆ ಈಗ ಸರ್ಕಾರದ ಅನುದಾನ ಕಾಯದೆ ತನ್ನ ಖರ್ಚು ವೆಚ್ಚಗಳನ್ನು ತೂಗಿಸಿಕೊಯಂಡು ಹೋಗುವಷ್ಟು ಸದೃಢವಾಗಿದೆ. ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆ ನ’ಷ್ಟವಾಗಿಲ್ಲ. ಈ ಶಕ್ತಿ ಯೋಜನೆಗೆ ಇನ್ನಷ್ಟು ಶಕ್ತಿ ತುಂಬುವ ಸಲುವಾಗಿ ಹೊಸದಾಗಿ 4000 ಬಸ್ ಗಳನ್ನು ಖರೀದಿಸುವ ಚಿಂತನೆಯನ್ನು ಮಾಡಿದ್ದೇವೆ.
ಇನ್ಮುಂದೆ ವಾಹನ, ಚಿನ್ನ, ಹಣ ಏನೇ ಕಳುವಾದ್ರೆ ಮೊಬೈಲ್‌ನಲ್ಲೇ ಪೊಲೀಸರಿಗೆ ದೂರು ನೀಡಬಹುದು ಹೇಗೆ ಅಂತ ನೋಡಿ.!
ಇದಕ್ಕಾಗಿ ಸಿಬ್ಬಂದಿಯ ಅಗತ್ಯ ಕೂಡ ಬೀಳುತ್ತದೆ. ಹಾಗಾಗಿ 13,000 ಕ್ಕೂ ಹೆಚ್ಚು ಸಾರಿಗೆ ಸಿಬ್ಬಂದಿ ಅವಶ್ಯಕತೆ ಬರುತ್ತದೆ. ಈ ಚಾಲಕ ಕಮ್ ನಿರ್ವಾಹಕ ಮೆಕಾನಿಕ್ ಮುಂತಾದ ಹುದ್ದೆಗಳಿಗೆ (Transport department recruitments) ಅಭ್ಯರ್ಥಿಗಳನ್ನು ಶೀಘ್ರವೇ ನೇಮಕ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳೇ ಈ ರೀತಿಯ ಭರವಸೆ ನೀಡಿರುವ ಕಾರಣ ಜೊತೆಗೆ ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೂ ಹೊಸ ಚೈತನ್ಯ ಬಂದಿರುವ ಕಾರಣ ಇದು ನಂಬಲು ಅರ್ಹವಾದ ವಿಷಯ ಎಂದು ಪರಿಗಣಿಸಬಹುದಾಗಿದೆ.
ಹಾಗಾಗಿ ಈ ಹುದ್ದೆಗಳಿಗೆ ನೇಮಕ ಆಗಬೇಕು ಎಂದು ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಈ ಕುರಿತು ತಮ್ಮ ತಯಾರಿಯನ್ನು ಚುರುಕು ಮಾಡಿಕೊಂಡರೆ ಸರ್ಕಾರ ಅಪ್ಡೇಟ್ ಹೊರಬಿದ್ದ ಕೂಡಲೇ ಅರ್ಜಿ ಸಲ್ಲಿಸಿ, ಪರೀಕ್ಷೆಗಳಲ್ಲಿ ಪಾಸಾಗಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು. ನೀವು ತಯಾರಾಗಿ ಮತ್ತು ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.