ಮನೆಯಲ್ಲಿರುವಂತಹ ಮಹಿಳೆಯರು ಮನೆಯ ವಿಚಾರವಾಗಿ ಹಾಗೂ ಆರೋಗ್ಯದ ವಿಚಾರವಾಗಿ ಮನೆಯ ಏಳಿಗೆಯ ವಿಚಾರವಾಗಿ ವ್ಯಾಪಾರ ವ್ಯವಹಾರದ ವಿಚಾರವಾಗಿ ಪ್ರತಿಯೊಂದರ ಬಗ್ಗೆಯೂ ಕೂಡ ಬಹಳಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಮುಖ್ಯವಾಗಿರುತ್ತದೆ.
ಇಲ್ಲವಾದರೆ ಆ ಎಲ್ಲಾ ಕೆಲಸಗಳಲ್ಲಿಯೂ ಸಹ ಕೆಲವೊಂದಷ್ಟು ಸಮಸ್ಯೆ ಗಳು ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮನೆಯಲ್ಲಿ ಏನೇ ವಿಷಯ ನಡೆದರೂ ಅದರ ಬಗ್ಗೆ ಹೆಚ್ಚು ಆಲೋಚನೆ ಯನ್ನು ಮಾಡುವಂತಹ ಹಾಗೂ ಅದರ ಬಗ್ಗೆ ಉತ್ತಮವಾದ ತೀರ್ಮಾನವನ್ನು ತೆಗೆದುಕೊಳ್ಳುವಂತಹ ಜವಾಬ್ದಾರಿ ಮನೆಯ ಮಹಿಳೆಗೂ ಕೂಡ ಇರುತ್ತದೆ.
ಆದರೆ ಕೆಲವೊಂದಷ್ಟು ಜನ ಮಹಿಳೆಯರಿಗೆ ಯಾವುದೇ ವಿಚಾರಗಳನ್ನು ಸಹ ತಿಳಿಸುವುದಿಲ್ಲ ಅದು ತಪ್ಪು. ಮನೆಯಲ್ಲಿ ನಡೆಯುವಂತಹ ಪ್ರತಿಯೊಂದು ಕೆಲಸ ಕಾರ್ಯಗಳನ್ನು ಕೂಡ ಅವಳು ಗಮನಹರಿಸುವುದು ಮುಖ್ಯವಾಗಿರುತ್ತದೆ. ಇಲ್ಲವಾದರೆ ಅವೆಲ್ಲದರಲ್ಲಿಯೂ ಕೂಡ ಕೆಲವೊಮ್ಮೆ ತೊಂದರೆಗಳು ಉಂಟಾಗುತ್ತಿರುತ್ತದೆ.
ಆದ್ದರಿಂದ ಮಹಿಳೆಯರು ಮನೆಯ ವಿಚಾರವಾಗಿ ಗಂಡನ ವಿಚಾರವಾಗಿ ಮಕ್ಕಳ ವಿಚಾರವಾಗಿ ಅವರ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಹಾಗೂ ಮನೆಯ ಸದಾ ಕಾಲ ಸಮೃದ್ಧಿ ಯಿಂದ ಇರಬೇಕು ಎಂದರೆ ಮನೆಯಲ್ಲಿ ಸದಾ ಕಾಲ ಸುಖ ಶಾಂತಿ ನೆಮ್ಮದಿ ನೆಲೆಸಬೇಕು ಎಂದರೆ ಯಾವ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ.
ಹಾಗಾದರೆ ಈ ದಿನ ಮನೆಯಲ್ಲಿರುವಂತಹ ಮಹಿಳೆಯರು ಮನೆಯ ವಿಚಾರವಾಗಿ ಯಾವ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರ ಬೇಕು ಹಾಗು ಆ ವಿಚಾರಗಳನ್ನು ಅವಳು ತಿಳಿದುಕೊಳ್ಳದೆ ಇದ್ದರೆ ಯಾವ ಕೆಲವು ಸಮಸ್ಯೆಗಳು ಉಂಟಾಗುತ್ತದೆ ಎನ್ನುವುದರ ಮಾಹಿತಿಯ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.
* ಬಲಗೈ ಬೆರಳಿಗೆ ಉಗುರು ಬಣ್ಣ ಹಚ್ಚಲೇ ಬೇಡಿ. ಇದು ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯದ ಸಲುವಾಗಿ
* ಕೂದಲು ಬಿಟ್ಟುಕೊಂಡು ಯಾವುದೇ ಕಾರಣಕ್ಕೂ ಅಡುಗೆ ಮಾಡ ಬೇಡಿ. ಇದರಿಂದ ಅಡುಗೆಯಲ್ಲಿ ಕೂದಲು ಸೇರುವ ಸಾಧ್ಯತೆ ಹೆಚ್ಚು. ಶಾಸ್ತ್ರದ ಪ್ರಕಾರ ದರಿದ್ರ ಈ ರೀತಿಯ ಮಾಡುವವರ ಮನೆಯಲ್ಲಿ ನೆಮ್ಮದಿ ನೆಲೆಸುವುದಿಲ್ಲ.
* ಅಡುಗೆ ಮನೆಯಲ್ಲಿ ಯಾವುದೇ ರೀತಿಯ ಔಷಧಿಗಳನ್ನು ಇಡಬೇಡಿ
* ಅಡುಗೆಯನ್ನು ಹೆಚ್ಚಾಗಿ ಮಾಡಿ ತಂಗಳು ತಿನ್ನಬೇಡಿ.
* ಗಡಿಬಿಡಿಯಲ್ಲಿ ಬರಿ ಸ್ಟವ್ ಆಫ್ ಮಾಡಿ ಸಿಲೆಂಡರ್ ನ ರೇಗುಲೇಟರ್ ಆಫ್ ಮಾಡುವುದನ್ನು ಮರಿಬೇಡಿ.
* ಅಡುಗೆ ಮಾಡುವಾಗ ಫೋನನ್ನು ಬಳಸಲೇಬೇಡಿ.
* ಅಡುಗೆ ಮನೆಯಲ್ಲಿ ದೇವರ ಫೋಟೋವನ್ನು ಇಡಲೇಬೇಡಿ.
* ಯಾವುದೇ ಕಾರಣಕ್ಕೂ ಬರ್ನರ್ ಸ್ಟವ್ ಅನ್ನು ಬಳಸಲೇಬೇಡಿ ಇದು ಶಾಸ್ತ್ರದಲ್ಲಿ ನಿಷಿದ್ಧ.
* ಮನೆಯಲ್ಲಿ ಎಷ್ಟೇ ಕೆಲಸ ಇದ್ದರೂ ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡುವುದನ್ನು ಮರೆಯಬೇಡಿ.
* ಅತಿಯಾಗಿ ಮೇಕಪ್ ಮಾಡಿಕೊಳ್ಳುವುದು ಹಾಗೂ ಏನು ಕೇರ್ ಮಾಡದೆ ಇರುವುದು ಎರಡು ತಪ್ಪು. ನ್ಯಾಚುರಲ್ ಆಗಿ ತ್ವಚೆಗೆ ಬೇಕಾದ ಆರೈಕೆಯನ್ನು ಮಾಡಲೇಬೇಕು.
* ಪ್ರತಿದಿನ 7-8 ಗ್ಲಾಸ್ ನೀರು ಕುಡಿಯುವುದನ್ನು ಮರೆಯಬೇಡ.
* ಸಮಯಕ್ಕೆ ಸರಿಯಾಗಿ ತಿಂಡಿ, ಊಟ, ಮಾಡುವುದು ಒಳ್ಳೆಯದು. ನೀವು ಚೆನ್ನಾಗಿದ್ದರೆ ಮಾತ್ರ ನಿಮ್ಮ ಮನೆಯಲ್ಲಿನ ಎಲ್ಲ ಕೆಲಸಗಳು ಸರಾಗವಾಗಿ ನಡೆಯುವುದು.
* ಗಂಡ, ಮಕ್ಕಳಿಗೆ ಯಾವುದೇ ಕಾರಣಕ್ಕೂ ಲಂಚ್ ಬಾಕ್ಸ್ ಅನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಕಟ್ಟಲೇಬೇಡಿ ಇದರಿಂದ ಅನಾರೋಗ್ಯ ಕಟ್ಟಿಟ್ಟ ಬುತ್ತಿ
* ನಿಮಗೆ ಅಂತ ಸ್ವಲ್ಪ ಸಮಯ ಮೀಸಲಿಡಿ. ಇಲ್ಲದಿದ್ದರೆ ಒಂದಲ್ಲ ಒಂದು ದಿನ ನಿಮಗಾಗಿ ನೀವು ಏನು ಮಾಡಿಲ್ಲವೆಂದು ಕೊರತೆ ಕಾಡುತ್ತದೆ.
* ಅಡುಗೆ ಮನೆಗೆ ಚಪ್ಪಲಿ ಹಾಕಿಕೊಂಡು ಹೋಗಬೇಡಿ.