ಮಹಿಳೆಯರೇ, ಐಬ್ರೋ ಮಾಡಿಸುವಾಗ ಇದನ್ನು ಪಾಲಿಸಿ.!

 

ಐಬ್ರೋ ಮಾಡುವಂತಹ ಸಮಯದಲ್ಲಿ ಪ್ರತಿಯೊಬ್ಬ ಮಹಿಳೆಯರು ಕೂಡ ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ಅದು ಅವರ ಸೌಂದರ್ಯದ ಮೇಲೆ ಕೆಲವೊಂದಷ್ಟು ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಇಂತಹ ಕೆಲವೊಂದು ಸಂದರ್ಭದಲ್ಲಿ ಆದಷ್ಟು ಎಚ್ಚರಿಕೆ ಯನ್ನು ವಹಿಸುವುದು ಬಹಳ ಮುಖ್ಯವಾಗಿರುತ್ತದೆ.

ಇಲ್ಲದಿದ್ದರೆ ಆ ಸಮಯದಲ್ಲಿ ಆದಂತಹ ತಪ್ಪಿನಿಂದ ಹೆಚ್ಚಿನ ದಿನದ ವರೆಗೆ ನೀವು ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ ಹೌದು. ಆದ್ದರಿಂದ ಕೆಲ ವೊಂದಷ್ಟು ನಿಯಮಗಳನ್ನು ಪಾಲಿಸುವುದು ಉತ್ತಮ. ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಮೊಬೈಲ್ ನೋಡುವುದರ ಮೂಲಕ ಅಲ್ಲಿ ತೋರಿಸುವ ರೀತಿ ನಾನೇ ಮಾಡಿಕೊಳ್ಳಬಹುದು ಎನ್ನುವ ಉದ್ದೇಶದಿಂದ ಐಬ್ರೋ ಅವರೇ ಮಾಡಿಕೊಳ್ಳುತ್ತಿರುತ್ತಾರೆ.

ಆದರೆ ಈ ರೀತಿಯ ತಪ್ಪುಗಳನ್ನು ಮಾಡಬೇಡಿ ಯಾರೇ ಆಗಲಿ ಯಾವುದೇ ಕೆಲಸವನ್ನು ಕಲಿಯದೆ ಮಾಡುವುದು ತಪ್ಪು ಹೌದು ನಾವು ಆ ಕೆಲಸದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡು. ಅದರಲ್ಲಿ ನಾವು ಉತ್ತಮವಾದ ಪ್ರಗತಿಯನ್ನು ಕಂಡ ನಂತರ ಆ ಕೆಲಸವನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಇಲ್ಲವಾದರೆ ಅದರಿಂದ ಹಲವಾರು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಹಾಗಾಗಿ ಇಂತಹ ಕೆಲವೊಂದು ವಿಚಾರದ ಬಗ್ಗೆ ಅದರಲ್ಲೂ ಹೆಣ್ಣು ಮಕ್ಕಳ ಸೌಂದರ್ಯದ ವಿಚಾರದ ಬಗ್ಗೆ ನಾವು ಯಾವ ಕೆಲವು ನಿಯಮಗಳನ್ನು ಅನುಸರಿಸಬೇಕೋ ಅದನ್ನು ಅನುಸರಿಸುವುದು ಬಹಳ ಒಳ್ಳೆಯದು.

ಇಲ್ಲವಾದರೆ ಅದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಐಬ್ರೋ ಮೇಲೆ ನೀವು ಪ್ರತ್ಯೇಕವಾದ ಕಾಳಜಿ ವಹಿಸಬೇಕು. ಕಣ್ಣಿನ ಉಬ್ಬುಗಳ ಮೇಲೆ ಅಗಲವಾಗಿ ಬೆಳೆದು ಸೌಂದರ್ಯವನ್ನು ಕಡಿಮೆ ಮಾಡುತ್ತದೆ. ಮೊದಲ ಬಾರಿಗೆ ಐಬ್ರೋ ಮಾಡಿಸುವುದಕ್ಕೆ ಹೋಗುವಾಗ ಬ್ಯೂಟಿಷಿಯನ್ಸ್ ಕೈಯಿಂದ ಮಾಡಿಸಿಕೊಳ್ಳುವುದು ಒಳ್ಳೆಯದು. ನಂತರ ನಿಮ್ಮಷ್ಟಕ್ಕೆ ನೀವೇ ಮಾಡಿಕೊಳ್ಳಬಹುದು.

* ವಾರಕ್ಕೆ ಎರಡು ಸಲ ಐಬ್ರೋ ಆಕಾರ ಮಾಡಿಕೊಳ್ಳುವುದು ಒಳ್ಳೆ ಯದು. ಹೌದು ಹೆಚ್ಚು ದಿನಗಳವರೆಗೆ ಬಿಟ್ಟರೆ ಅದು ನಿಮ್ಮ ಸೌಂದರ್ಯ ವನ್ನು ಕಡಿಮೆ ಮಾಡುತ್ತದೆ ಎಂದು ಹೇಳಬಹುದು.
* ನಾವು ಕುಂಕುಮ ಇಡುವ ಜಾಗದಲ್ಲಿ ಕೂದಲನ್ನು ಕೀಳಬೇಕು. ನಂತರ ಕಣ್ಣಿನ ಬೊಂಬೆಯ ಕೆಳಗೆ ಮೇಲೆ ಮಾಡಿ. ಆಗ ನಿಮಗೆ ಸರಿಯಾದಂತಹ ವಿಧಾನ ತಿಳಿಯುತ್ತದೆ ಇಲ್ಲವಾದರೆ ಒಂದೊಂದು ಒಂದೊಂದು ಆಕಾರ ವನ್ನು ಹೊಂದುತ್ತದೆ.

* ಒಂದು ಸಲ ಒಂದು ಕೂದಲನ್ನು ಮಾತ್ರ ಕೀಳಬೇಕು. ಹೆಚ್ಚು ಕೂದಲನ್ನು ಕಿತ್ತರೆ ಐಬ್ರೋ ಸರಿಯಾದ ಆಕಾರದಲ್ಲಿ ಬರುವುದಿಲ್ಲ ಆಗ ಅದರಿಂದ ನಾವು ನಮ್ಮ ಸೌಂದರ್ಯವನ್ನು ಸಹ ಕಡಿಮೆ ಮಾಡಿಕೊಂಡಂತೆ ಆಗುತ್ತದೆ. ಆದ್ದರಿಂದ ಸರಿಯಾಗಿ ಎಲ್ಲವನ್ನು ಗಮನಿಸಿ ಆನಂತರ ಐಬ್ರೋ ಮಾಡಿಕೊಳ್ಳುವುದು ಒಳ್ಳೆಯದು.

* ನಿಮ್ಮ ಕಣ್ಣು ಹುಬ್ಬುಗಳು ಕಣ್ಣಿಗಿಂತ ಉದ್ದವಾಗಿರುವ ರೀತಿಯಾಗಿ ಐಬ್ರೋ ಆಕಾರ ಮಾಡಿಕೊಂಡರೆ ತುಂಬಾ ಸೌಂದರ್ಯವಾಗಿ ಕಾಣಿಸುತ್ತದೆ. ಅಂದಾರೆ ಐಬ್ರೋ ಎಷ್ಟು ಉದ್ದವಾಗಿ ಇರುತ್ತದೆಯೋ ಅಷ್ಟು ಉದ್ದವಾಗಿ ಐಬ್ರೋ ಮಾಡಿಸಿಕೊಳ್ಳುವುದು ಉತ್ತಮ. ಕೆಲವೊಂದಷ್ಟು ಜನ ಇದನ್ನು ಗಮನಿಸುವುದಿಲ್ಲ. ಆದ್ದರಿಂದ ಮುಖ್ಯವಾಗಿ ಇದನ್ನು ಗಮನಿಸಿ ಐಬ್ರೋ ಮಾಡಿಸುವುದು ಒಳ್ಳೆಯದು.

* ಕಣ್ಣು ಬೊಂಬೆಯ ಮೇಲೆ ಬೇಕಾಗಿಲ್ಲದ ಕೂದಲನ್ನು ಸ್ನಾನ ಮಾಡಿದ ತಕ್ಷಣವೇ ಕಿತ್ತರೆ ಒಳ್ಳೆಯದು. ಆ ಸಮಯದಲ್ಲಿ ನೀರು ಆ ಸ್ಥಳದಲ್ಲಿ ಬಿದ್ದಿರುತ್ತದೆ ಆಗ ಕೂದಲು ಸುಲಭವಾಗಿ ಬರುತ್ತದೆ.
* ಐಬ್ರೋ ಕೂದಲನ್ನು ಕಿತ್ತಿದ ತಕ್ಷಣ ಆ ಜಾಗದಲ್ಲಿ ಸ್ಕಿನ್ ಲೋಷನ್ ಆಗಲಿ ವ್ಯಾಸಲಿನ್ ಆಗಲಿ ಹಚ್ಚಿದರೆ ಊದಿಕೊಳ್ಳದೇ ಕೆಂಪಗಾಗದೇ ಇರುತ್ತದೆ. ಅದು ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಆದರೆ ಕೆಲವೊಂದಷ್ಟು ಜನರಿಗೆ ಇದು ಹೊಂದಾಣಿಕೆಯಾಗುವುದಿಲ್ಲ ಅಂಥವರು ಮನೆಗೆ ಬಂದು ಸ್ವಚ್ಛವಾಗಿ ಮುಖ ತೊಳೆಯುವುದು ಉತ್ತಮ.

Leave a Comment

WhatsApp Group Join Now
Telegram Group Join Now