
ಹೃ.ದ.ಯ.ಘಾ.ತದಿಂದ ನಿ.ಧ.ನ.ರಾದ ಹಿರಿಯ ನಟ ಲಕ್ಷ್ಮಣ್ ಅಂತಿಮ ದರ್ಶನಕ್ಕಾಗಿ ಬರುತ್ತಿಲ್ಲ ಯಾವುದೇ ಸ್ಟಾರ್ಸ್, ಚಿತ್ರರಂಗದಲ್ಲೂ ಇದೆಯಾ ತಾರತಮ್ಯ. ನಾವೆಲ್ಲರೂ ಅಂದುಕೊಂಡಿದ್ದೇವೆ ಕಲಾವಿದರೆಲ್ಲ ಒಂದೇ ಎಂದು ಬಣ್ಣ ಹಚ್ಚಿ ನಟಿಸುವಾಗ ಮಾತ್ರ ವೇಷಕ್ಕೆ ತಕ್ಕ ಹಾಗೆ ಪಾತ್ರವಾಗಿರುತ್ತಾರೆ ಹೊರತು ಅದನ್ನು ಹೊರತುಪಡಿಸಿ ಅವರೆಲ್ಲಾ ವೃತ್ತಿಯಲ್ಲಿ ಒಂದೇ ಎಂದು.
ಒಬ್ಬನಿಗೆ ರಾಜನ ಪಾತ್ರ ಸಿಗುತ್ತದೆ, ಮತ್ತೊಬ್ಬನಿಗೆ ಹೀರೋ, ಒಬ್ಬನದು ಖಳ ನಾಯಕನಾದರೆ ಇನ್ನೊಬ್ಬ ಪೊಲೀಸ್ ಇವೆಲ್ಲ ಸಿನಿಮಾಗೆ ಪಾತ್ರಗಳು ಅಷ್ಟೇ ಇವೆಲ್ಲಾ ಇದ್ದಾಗ ಮಾತ್ರ ಒಂದು ಸಿನಿಮಾ ಗೆಲ್ಲುತ್ತದೆ. ಎಂದು ಸಾಮಾನ್ಯರಿಗೆ ಇಷ್ಟು ಅರಿವಿರುವಾಗ ಇಂಡಸ್ಟ್ರಿಯ ಜನರ ಮನಸ್ಥಿತಿ ಕೂಡ ಇದಕ್ಕಿಂತಲೂ ಉತ್ತಮ ಮಟ್ಟದಲ್ಲಿ ಇರುತ್ತದೆ. ಅವರು ಸಹ ನಾವೆಲ್ಲ ಒಂದೇ ಕುಟುಂಬದ ಸದಸ್ಯರು ಎಂದು ಅಂದುಕೊಂಡಿರುತ್ತಾರೆ ಎಂದೇ ಇಲ್ಲಿಯವರೆಗೂ ನಾವು ಭಾವಿಸಿದ್ದೆವು.
ಆದರೆ ಈಗ ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳನ್ನು ಗಮನಿಸಿದರೆ ಜನ ಸಾಮಾನ್ಯರು ತಿಳಿದುಕೊಂಡಿರುವುದು ತಪ್ಪು ಕಲ್ಪನೆ. ಇಂಡಸ್ಟ್ರಿಯಲ್ಲೂ ಕೂಡ ತಾರತಮ್ಯ ಇದೆ ಎನ್ನುವುದು ಅರಿವಿಗೆ ಬರುತ್ತದೆ. ಇಂಡಸ್ಟ್ರಿಯಲ್ಲಿ ಉಳ್ಳವರಿಗೆ ಒಂದು ನ್ಯಾಯ ಸಾಮಾನ್ಯರಿಗೆ ಒಂದು ನ್ಯಾಯ ಹೀರೋ ಆಗಿ ಮೆರೆದವರೆಲ್ಲ ಸ್ಟಾರ್ಗಳು ಆ ಪಾತ್ರದ ಪೋಷಣೆಗಾಗಿ ನಟಿಸಿದ ಖಳನಾಯಕ ಅಥವಾ ಇತರೆ ಸಹಪಾತ್ರಗಳೆಲ್ಲಾ ಉದುರಿದ ಉಲ್ಕೆಗಳಾ ಎನ್ನುವಂತಹ ಪ್ರಶ್ನೆ ಎದುರಾಗುತ್ತಿದೆ.
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹಿರಿಯ ಕಲಾವಿದರುಗಳ ನಿಧನ ನಂತರ ನಡೆದುಕೊಳ್ಳುತ್ತಿರುವ ರೀತಿ ಈ ಪ್ರಶ್ನೆಗಳಿಗೆ ಹಿಡಿದ ಕೈಗನ್ನಡಿ ಅಂತಿದೆ. ಇಂದಿನ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಇಂದು ಹಿರಿಯ ನಟ ಲಕ್ಷ್ಮಣ್ ಅವರು ಹೃ.ದ.ಯಾ.ಘಾ.ತ.ದಿಂದ ತಮ್ಮ ನಿವಾಸದಲ್ಲಿ ಕೊನೆ ಉಸಿರು ಎಳೆದಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಕೆಲವು ಹಿರಿಯ ನಟರುಗಳು ಬಂದು ಅಂತಿಮ ದರ್ಶನ ಪಡೆದು ಹೋಗಿದ್ದಾರೆ.
ಆದರೆ ನಮ್ಮಲ್ಲಿ ಸ್ಟಾರ್ ಹೀರೋಗಳು ಎಂದು ಕರೆಸಿಕೊಂಡ ಯಾವ ಹೀರೋಗಳು ಕೂಡ ಇಂದು ಅವರ ನಿವಾಸಕ್ಕೆ ಭೇಟಿ ಕೊಟ್ಟಿಲ್ಲ ಕುಟುಂಬಸ್ಥರಿಗೆ ಸಮಾಧಾನವನ್ನು ಹೇಳಿಲ್ಲ. ಅದೇ ಒಬ್ಬ ಸೂಪರ್ ಸ್ಟಾರ್ ಗೆ ಈ ರೀತಿ ಆದರೆ ಮಾಡುವ ಎಲ್ಲಾ ಕೆಲಸವನ್ನು ಕ್ಯಾನ್ಸಲ್ ಮಾಡಿಕೊಂಡು ಓಡೋಡಿ ಬರುತ್ತಾರೆ. ಬೇರೆ ಕಲಾವಿದರಿಗೆ ಮಾತ್ರ ಯಾಕೆ ಆ ಗೌರವ ಸಿಗುತ್ತಿಲ್ಲ ಎನ್ನುವ ಬೇಸರ ಈಗ ಸಾರ್ವಜನಿಕರಲ್ಲಿ ಸಹಜವಾಗಿ ಮೂಡುತ್ತಿದೆ.
ಎಲ್ಲಾ ಹೀರೋಗಳು ಬರಲು ಸಾಧ್ಯವಿಲ್ಲ, ಈಗಾಗಲೇ ಅವರ ಶೂಟಿಂಗ್ ಫಿಕ್ಸ್ ಆಗಿರುತ್ತದೆ ಎನ್ನುವುದಾದರೂ ಕೆಲವರಾದರೂ ಗೌರವ ಕೊಡಲು, ಸಂತಾಪ ಸೂಚಿಸುವುದಕ್ಕೆ ಬರಬಹುದಿತ್ತು. ಅವರೇ ಇಂಡಸ್ಟ್ರಿಯನ್ನು ರೆಪ್ರೆಸೆಂಟ್ ಮಾಡಬಹುದಿತ್ತು ಆದರೂ ಕೂಡ ಆ ಲಕ್ಷಣಗಳು ಕಾಣುತ್ತಿಲ್ಲ. ಅಷ್ಟಕ್ಕೂ ಇವರೇನು ಎರಡು-ಮೂರು ಸಿನಿಮಾ ಮಾಡಿ ಕಾಣೆ ಆದವರಲ್ಲ. ಕನ್ನಡ ಚಲನಚಿತ್ರರಂಗದಲ್ಲಿ ರಾಜಕುಮಾರ್, ರಜನಿಕಾಂತ್, ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್ ಅವರ ಕಾಲದಿಂದ ಹಿಡಿದು ಈಗಿನ ಯುವ ಪೀಳಿಗೆಯ ನಟರ ಸಿನಿಮಾಗಳಲ್ಲೂ ಕೂಡ ಅವರಿಗೆ ಸರಿಸಮವಾಗಿ ನಿಂತು ಖಳನಾಯಕನ ಪಾತ್ರ ಮಾಡಿದವರು.
ಅಂಬರೀಶ್ ಅವರು ಮೆಚ್ಚಿ ಕೊಂಡಿದ್ದ ನೆಚ್ಚಿನ ಖಳನಾಯಕ ಇವರು. ಅಂಬರೀಶ್ ಅವರೇ ತಮ್ಮ ಸಿನಿಮಾಗಳಲ್ಲಿ ಇವರನ್ನು ವಿಲನ್ ಆಗಿ ಹಾಕಿಸಿಕೊಳ್ಳುತ್ತಿದ್ದರು. ಅಲ್ಲದೆ ತನ್ನ ಸಿನಿ ಕೆರಿಯರಲ್ಲಿ ಯಾವುದೇ ಕಪ್ಪು ಚುಕ್ಕೆ ಇರದಂತೆ ಎಲ್ಲೂ ವಿವಾದ ಮಾಡಿಕೊಳ್ಳದೆ ಬದುಕಿದ ಸಂಭಾವಿತ ಕಲಾವಿದ. ತನ್ನ ಬದುಕನ್ನು ಸಹ ಆದರ್ಶವಾಗಿ ರೂಪಿಸಿಕೊಂಡು ಇತರ ಕಲಾವಿದರಿಗೆ ಮಾದರಿಯಾಗುವಂತೆ ಜೀವನ ಸಾಗಿಸಿದ ಸಾಧಕ. ಆದರೂ ಕೂಡ ಇಂತಹ ಒಬ್ಬ ಹಿರಿಯರ ಸಾವಿಗೆ ಸಂತಾಪ ಸೂಚಿಸಲು ಒಬ್ಬ ಸ್ಟಾರ್ ಕೂಡ ಸುಳಿಯಲಿಲ್ಲವಲ್ಲ ಎನ್ನುವುದು ಬೇಸರ ತರಿಸುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.