Sunday, May 28, 2023
HomeEntertainmentದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಾರು ಸೀರಿಯಲ್ ನಟ ಶರತ್, ಮದುವೆಗೆ ಯಾವೆಲ್ಲಾ ಸೆಲೆಬ್ರಿಟಿಗಳು ಬಂದಿದ್ರು ನೋಡಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಾರು ಸೀರಿಯಲ್ ನಟ ಶರತ್, ಮದುವೆಗೆ ಯಾವೆಲ್ಲಾ ಸೆಲೆಬ್ರಿಟಿಗಳು ಬಂದಿದ್ರು ನೋಡಿ

ಕಳೆದ ವರ್ಷ ನಮ್ಮ ಸ್ಯಾಂಡಲ್ ವುಡ್ ನ ಅನೇಕ ತಾರೆಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅದರಲ್ಲಿ ಹೆಚ್ಚಿನ ಮಂದಿ ತಮ್ಮ ಕೆರಿಯರ್ ಅಲ್ಲಿ ಇರುವವರನ್ನೇ ಆರಿಸಿಕೊಂಡು ಬಾಳ ಸಂಗಾತಿ ಮಾಡಿಕೊಂಡರು. ಹಿರಿತೆರೆ ಮಾತ್ರವಲ್ಲದೆ ಕಿರುತೆರೆಯ ಅನೇಕ ತಾರೆಗಳು ಬ್ಯಾಚುಲರ್ ಲೈಫ್ ಗೆ ಗುಡ್ ಬೈ ಹೇಳಿ ಮದುವೆ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲಿ ಅನೇಕ ಜೋಡಿಗಳು ಈಗಾಗಲೇ ನಿಶ್ಚಿತಾರ್ಥ ಕೂಡ ಮಾಡಿಕೊಂಡಿವೆ.

ಈ ಸಾಲಿನಲ್ಲಿ ಒಬ್ಬರಾಗಿ ಪಾರು ಧಾರವಾಹಿ ಖ್ಯಾತಿಯ ನಾಯಕ ನಟ ಶರತ್ ಪದ್ಮನಾಭ್(Paaru Serial Actor Adhu Wedding) ಅವರು ಎಂಗೇಜ್ಮೆಂಟ್ ಆಗಿದ್ದರು. ಅವರ ನಿಶ್ಚಿತಾರ್ಥ ಅನೇಕರಿಗೆ ಶಾಕ್ ನೀಡಿತ್ತು ಏಕೆಂದರೆ ಅನೇಕ ಹುಡುಗಿಯರ ಪಾಲಿಗೆ ಡ್ರೀಮ್ ಬಾಯ್ ಆಗಿದ್ದ ಇವರು ಗುಟ್ಟಾಗಿ ನಿಶ್ಚಿತಾರ್ಥ ಮಾಡ್ಕೊಂಡಿದ್ದು ಎಲ್ಲರಿಗೂ ಒಂದು ರೀತಿ ಶಾಕ್ ನೀಡಿತ್ತು. ಇಂದು ಅದ್ದೂರಿಯಾಗಿ ಅವರ ಮದುವೆ ಕಾರ್ಯ ಕೂಡ ವಿಜೃಂಭಣೆಯಿಂದ ಜರುಗುತ್ತಿದೆ.

ಕೆಲವು ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಶರತ್(Sharath Wedding Photos) ಪದ್ಮನಾಭನ್ ಅವರು ತಮ್ಮ ಸ್ನೇಹಿತೆಯ ಕೈ ಹಿಡಿಯುತ್ತಿದ್ದಾರೆ. ಅವರು ಮದುವೆ ಆಗುತ್ತಿರುವ ಹುಡುಗಿಯ ಹೆಸರು ದಿವ್ಯಶ್ರೀ ಇವರು ಇಂಜಿನಿಯರಿಂಗ್ ಪದವೀಧರೆ ಆಗಿದ್ದು ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರದು ಲವ್ ಮ್ಯಾರೇಜ್ ಆಗಿದ್ದು ಕುಟುಂಬಸ್ಥರ ಸಮ್ಮತಿಯೊಂದಿಗೆ ಗುರುಹಿರಿಯರು ಹಾಗೂ ಬಂಧು ಬಾಂಧವರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮದುವೆ ಆಗುತ್ತಿದ್ದಾರೆ.

ಸದ್ಯಕ್ಕೀಗ ಪಾರು ಧಾರವಾಹಿ ಆದಿ(Adhu Marriage Photos) ಎಂದೆ ಫೇಮಸ್ ಆಗಿರುವ ಇವರು ಈ ಮುಂಚೆ ಪುಟ್ಮಲ್ಲಿ ಎನ್ನುವ ಧಾರಾವಾಹಿಯಲ್ಲಿ ನಟಿಸಿದ್ದರು. ಕನ್ನಡದ ನಟ ಆಗಿರುವ ದಿಲೀಪ್ ರಾಜ್ ಅವರ ಪ್ರೊಡಕ್ಷನ್ ಹೌಸ್ ಅಲ್ಲಿ ಆ ಧಾರವಾಹಿ ಮೂಡಿ ಬಂದಿತ್ತು. ಮೊದಲ ಬಾರಿ ಆ ಧಾರವಾಹಿಗೆ ಶರತ್ ಅವರನ್ನು ಆಯ್ಕೆ ಮಾಡಿದಾಗ ಅವರಿಗೆ ಅಭಿನಯದ ಗಂಧ ಗಾಳಿಯು ಕೂಡ ಗೊತ್ತಿರಲಿಲ್ಲವಂತೆ. ಬಹಳ ದಿನಗಳ ವರ್ಕ್ ಶಾಪ್ ನೀಡಿ ನಂತರ ಧಾರಾವಾಹಿಗೆ ಹಾಕಿಕೊಂಡು ದಿಲೀಪ್ ರಾಜ್ ಅವರು ಪಳಗಿಸಿದರಂತೆ.

ಈ ಬಗ್ಗೆ ಶರತ್ ಅವರು ನನ್ನ ಹೆಮ್ಮೆಯ ಗುರು ನನ್ನ ಪಾಲಿಗೆ ಎಲ್ಲವೂ ಅವರೇ ಎಂದು ದಿಲೀಪ್ ರಾಜ್ ಅವರನ್ನು ಹೊಗಳುತ್ತಾ ಇರುತ್ತಾರೆ. ದಿಲೀಪ್ ಅವರು ಸಹ ನನ್ನ ಜೀವನದಲ್ಲಿ ಕಂಡ ನನ್ನ ಕುಟುಂಬಕ್ಕೆ ಅತ್ಯಂತ ಆತ್ಮೀಯವಾದ ನನ್ನ ಮಗನಿಗೆ ಸಮವಾದ ವ್ಯಕ್ತಿ ಶರತ್ ಎಂದು ಹೊಗಳಿದ್ದಾರೆ. ಸದ್ಯಕ್ಕೆ ಇವರ ಮದುವೆಯ ಬಗ್ಗೆ ಹೊರಬಿದ್ದಿರುವ ಫೋಟೋಗಳಲ್ಲಿ ದಿಲೀಪ್ ರಾಜ್ ಅವರ ಕುಟುಂಬ, ಗಟ್ಟಿಮೇಳ ಧಾರಾವಾಹಿಯ ನಾಯಕ ರಕ್ಷ್ ನಟ ಅನಿರುದ್ ಮುಂತಾದವರು ಇದ್ದಾರೆ.

ಪಾರು ಧಾರಾವಾಹಿಯ ಹೀರೋಗಳಿಗೆ ಈ ವರ್ಷ ಕಂಕಣ ಭಾಗ್ಯ ಕೂಡಿ ಬಂದ ರೀತಿ ಇದೆ. ಯಾಕೆಂದರೆ ಕಳೆದ ವರ್ಷ ಇತರ ಧಾರಾವಾಹಿಯಲ್ಲಿ ಆದಿ ತಮ್ಮನ ಪಾತ್ರ ಮಾಡುತ್ತಿರುವ ಪ್ರೀತು ಅಲಿಯಾಸ್ ಸಿದ್ಧಾರ್ಥ್ ಮೂಲಿಮನಿ ಅವರೂ ಸಹ ಗಟ್ಟಿಮೇಳ ಧಾರಾವಾಹಿಯ ನಟಿ ಅಲಿಯಾಸ್ ಪೂಜಾ ಜೆ ಆಚಾರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಜೋಡಿ ಸಹ ಮುಂದಿನ ತಿಂಗಳೇ ಹಸಮಣೆ ಇರಲು ನಿರ್ಧಾರ ಮಾಡಿದ್ದಾರೆ.

ಅದಕ್ಕಾಗಿ ಈಗಾಗಲೇ ಪ್ರಿ ವೆಡ್ಡಿಂಗ್ ಶೀಟ್ ಮುಂತಾದ ಕೆಲಸಗಳಲ್ಲಿ ತೊಡಗಿಸಿಕೊಂಡು ಅದಕ್ಕೆ ಸಂಬಂಧಪಟ್ಟ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಶರತ್ ಅವರು ಸಿನಿಮಾಗಳಲ್ಲಿ ಅಭಿನಯಿಸಲು ಸಹಾ ಆಸಕ್ತಿ ಹೊಂದಿದ್ದು ಈಗಾಗಲೇ ನೀವು ಕರೆ ಮಾಡುತ್ತಿರುವ ಚಂದಾದಾರರು ಸಿನಿಮಾದ ಮೂಲಕ ಬೆಳ್ಳಿತೆರೆಗೂ ಎಂಟ್ರಿ ಕೊಟ್ಟಿದ್ದಾರೆ. ಅವರ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ, ಮದುವೆ ಜೊತೆಗೆ ಕೆರಿಯರಲ್ಲೂ ಸಹ ಅವರು ಏಳಿಗೆ ಕಾಣಲಿ ಎಂದು ಹರಸೋಣ.