Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಪ್ಪು ಹೆಸರಲ್ಲಿ ಮತ್ತೊಂದು ಒಳ್ಳೆಯ ಕೆಲಸಕ್ಕೆ ಕೈ ಹಾಕಿದ ಅಶ್ವಿನಿ ಈ ಆಹ್ವಾನ ಪತ್ರಿಕೆ ಒಮ್ಮೆ ನೋಡಿ.

Posted on July 22, 2022 By Kannada Trend News No Comments on ಅಪ್ಪು ಹೆಸರಲ್ಲಿ ಮತ್ತೊಂದು ಒಳ್ಳೆಯ ಕೆಲಸಕ್ಕೆ ಕೈ ಹಾಕಿದ ಅಶ್ವಿನಿ ಈ ಆಹ್ವಾನ ಪತ್ರಿಕೆ ಒಮ್ಮೆ ನೋಡಿ.

ಅಪ್ಪು ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎಂಬ ಮಾದರಿಯಲ್ಲಿ ಅಪ್ಪು ಅವರು ನಮ್ಮನ್ನು ಅ.ಗ.ಲಿ 9 ತಿಂಗಳು ಕಳೆದಿದೆ ಆದರೂ ಕೂಡ ಅಪ್ಪು ಅವರ ಹೆಸರಿನಲ್ಲಿ ಒಂದಲ್ಲ ಒಂದು ಶುಭ ಕೆಲಸಗಳು ಪ್ರಾರಂಭವಾಗುತ್ತಲೇ ಇದೆ. ಅದರಂತೆ ಇದೀಗ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮತ್ತೊಂದು ಶುಭ ಕೆಲಸಕ್ಕೆ ಕೈ ಹಾಕಿದ್ದಾರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಪ್ರತಿ ವರ್ಷವೂ ಕೂಡ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಪುಷ್ಪ ಪ್ರದರ್ಶನವನ್ನು ಕೈಗೊಳ್ಳಲಾಗುತ್ತದೆ ಈ ಬಾರಿಯ ಪುಷ್ಪ ಪ್ರದರ್ಶನ ಬಹಳ ವಿಶಿಷ್ಟ ಮತ್ತು ವೈಭವ ಏಕೆಂದರೆ ಪ್ರತಿ ವರ್ಷವೂ ಕೂಡ ಭಾರತದಲ್ಲಿ ಇರುವಂತಹ ಪ್ರಸಿದ್ಧ ಸ್ಥಳಗಳ ಮಾದರಿಯಲ್ಲಿಯೇ ಪುಷ್ಪಗಳನ್ನು ಅಲಂಕರಿಸಲಾಗುತ್ತಿತ್ತು.

ಈ ಪುಷ್ಪ ಪ್ರದರ್ಶನವನ್ನು ನೋಡಲು ದೇಶದ ನಾನಾ ಭಾಗದಿಂದ ಸಾವಿರಾರು ಸಂಖ್ಯೆಯ ಜನರು ಬರುತ್ತಿದ್ದರು ಆದರೆ ಈ ಬಾರಿ ಈ ಒಂದು ಪುಷ್ಪ ಪ್ರದರ್ಶನವನ್ನು ಬಹಳ ವಿಶೇಷವಾಗಿ ಆಚರಿಸಬೇಕು ಅಂತ ಕರ್ನಾಟಕ ಸರ್ಕಾರ ತೀರ್ಮಾನ ಮಾಡಿದ್ದು. ಈ ವಿಚಾರದ ಬಗ್ಗೆ ಮುನಿರತ್ನಂ ಅವರು ಕೂಡ ಕಳೆದ ವಾರವಷ್ಟೇ ಪತ್ರಿಕಾಗೋಷ್ಠಿಯನ್ನು ಮಾಡಿದ್ದರು ಅದರಂತೆ ಇದೀಗ ಈ ಬಾರಿ ನಡೆಯುವಂತಹ ಪುಷ್ಪ ಪ್ರದರ್ಶನದಲ್ಲಿ ಅಪ್ಪು ಅವರಿಗೆ ಸಂಬಂಧಪಟ್ಟಂತಹ ಕೆಲವು ಕಾರ್ಯಗಳನ್ನು ಪುಷ್ಪಲಂಕಾರ ಮಾಡಿ ಪ್ರದರ್ಶನ ಮಾಡಲಾಗುತ್ತದೆ. ಗಾಜನೂರಿನಲ್ಲಿ ಅವರು ಇದ್ದಂತಹ ಮನೆ ಹಾಗೂ ಅಪ್ಪು ಅವರ ಮಾದರಿಯಲ್ಲೇ ಇರುವಂತಹ ಭಾವಚಿತ್ರಗಳನ್ನು ಸಂಪೂರ್ಣವಾಗಿ ಹೂವಿನಿಂದ ಅಲಂಕರಿಸಲಾಗುತ್ತಿದೆ ವಿಶೇಷತೆ ಏನೆಂದರೆ ಈ ಬಾರಿ ಈ ಪ್ರದರ್ಶನಕ್ಕೆ ಅಪ್ಪು ಅವರ ಹೆಸರನ್ನೇ ಇಡಲಾಗುತ್ತಿದೆ.

ಈ ವಿಚಾರ ಹೊರ ಬರುತ್ತಿದ್ದ ಹಾಗೆ ಸಾಕಷ್ಟು ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದರು ಅಪ್ಪು ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ. ಆದರೆ ಈ ವಿಚಾರ ಊಹಾಪೋಹಗಳಿರಬಹುದು ಅಂತ ಕೆಲವು ನೆಟ್ಟಗರು ಅಭಿಪ್ರಾಯ ಪಟ್ಟಿದ್ದರು ಆದರೆ ಆ ಎಲ್ಲ ವಿಚಾರಗಳಿಗೂ ತೆರೆ ಹೇಳಿರುವಂತಹ ಸಂದರ್ಭ ಈಗ ಬಂದಿದೆ ಹೌದು ಅದೇನೆಂದರೆ ಕರ್ನಾಟಕ ರಾಜ್ಯ ಸರ್ಕಾರದಿಂದ ಇದೀಗ ಅಧಿಕೃತವಾಗಿ ಲಾಲ್ಬಾಗ್ನಲ್ಲಿ ನಡೆಯುವಂತಹ ಪುಷ್ಪ ಪ್ರದರ್ಶನಕ್ಕೆ ಅಪ್ಪು ಅವರ ಹೆಸರನ್ನೇ ಇಡುವುದಾಗಿ ಹಾಗೂ ಅವರಿಗೆ ಸಂಬಂಧಪಟ್ಟಂತಹ ಚಿತ್ರಗಳನ್ನು ಚಿತ್ರಿಸುವುದಾಗಿ ಆದೇಶ ಹೊರಡಿಸಿದೆ. ಅದಕ್ಕೆ ಸಂಬಂಧಪಟ್ಟಂತಹ ಕೆಲವು ಅಧಿಕಾರಿಗಳು ಅಶ್ವಿನಿ ಅವರ ಮನೆಗೆ ಹೋಗಿ ಆಹ್ವಾನ ಪತ್ರಿಕೆಯನ್ನು ಸಲ್ಲಿಸಿ ಬಂದಿದ್ದಾರೆ. ಕೇವಲ ಅಶ್ವಿನಿ ಮನೆಗೆ ಮಾತ್ರವಲ್ಲದೆ ಡಾಕ್ಟರ್ ಶಿವರಾಜಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಅವರ ನಿವಾಸಕ್ಕೂ ಕೂಡ ಭೇಟಿ ನೀಡಿ ಅವರಿಗೂ ಕೂಡ ಆಹ್ವಾನ ಪತ್ರಿಕೆಯನ್ನು ಸಲ್ಲಿಸಿ ಬಂದಿದ್ದಾರೆ.

ಕನ್ನಡದ ವರನಟ ಡಾ. ರಾಜ್ ಕುಮಾರ್ ಹಾಗೂ ಪವರ್ ಸ್ಟಾರ್ ಡಾ. ಪುನೀತ್‍ರಾಜ್ ಕುಮಾರ್ ಹೆಸರಿನಲ್ಲಿ ಈ ಬಾರಿ ಪ್ರದರ್ಶನ ಆಯೋಜಿಸಲಾಗುವು. ತೋಟಗಾರಿಕೆ ಸಚಿವ ಮುನಿರತ್ನ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ ಅದರಂತೆ ಇದೀಗ ಆಗಸ್ಟ್ 5ರಂದು ಫಲಪುಷ್ಪ ಪ್ರದರ್ಶನವು ಉದ್ಘಾಟನೆಗೊಳ್ಳಲಿದ್ದು ಖ್ಯಾತ ಚಿತ್ರನಟರಾದ  ರಾಘವೇಂದ್ರ ರಾಜ್ ಕುಮಾರ್ ಹಾಗೂ ನಟ ಹ್ಯಾಟ್ರಿಕ್ ಹೀರೋ‌ ಶಿವರಾಜ್ ಕುಮಾರ್ ಮತ್ತು ಡಾ. ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿ ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರನ್ನು ಫಲಪುಷ್ಪ ಪ್ರದರ್ಶನಕ್ಕೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಲು ಕರ್ನಾಟಕ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದ ವತಿಯಿಂದ ಆತ್ಮೀಯವಾಗಿ  ಆಹ್ವಾನಿಸಲಾಗಿದೆ.

ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ರಾಘಣ್ಣ ಶಿವಣ್ಣ ಹಾಗೂ ಅಪ್ಪು ಅವರ ಪತ್ನಿ ಅಶ್ವಿನಿ ಅವರಿಗೆ ನೀಡಿದಂತಹ ಆಹ್ವಾನಿ ಪತ್ರಿಕೆ ವೈರಲ್ ಆಗುತ್ತಿದ್ದು ಇದನ್ನು ನೋಡಿದಂತಹ ಅಭಿಮಾನಿಗಳು ಬಹಳ ಉತ್ಸುಕರಾಗಿದ್ದಾರೆ. ಅಪ್ಪು ಅವರ ಹೂಗಳಿಂದ ಯಾವ ರೀತಿ ಅರಳಿ ಬರುತ್ತಾರೆ ಎಂಬುದನ್ನು ನೋಡುವುದೇ ಒಂದು ಸೋಜಿಗ ಈ ಒಂದು ಆನಂದಮಯ ಕ್ಷಣವನ್ನು ಸವಿಯುವುದಕ್ಕಾಗಿ ಸಹಸ್ರರು ಅಭಿಮಾನಿಗಳು ಕಾದು ಕುಳಿತಿರುವುದಂತೂ ಸತ್ಯ. ಅಪ್ಪು ಇಲ್ಲದೆ ಇದ್ದರೂ ಕೂಡ ಒಂದಲ್ಲ ಒಂದು ವಿಚಾರಕ್ಕಾಗಿ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿಭಿನ್ನವಾಗಿ ಅವರನ್ನು ವೈಭವೀಕರಿಸುತ್ತಿರುವುದನ್ನು ನೋಡಿದರೆ ನಿಜಕ್ಕೂ ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎಂಬುದು ಸತ್ಯ ಅನಿಸುತ್ತದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ನಮಗೆ ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡಿ

 

Entertainment Tags:Appu, Appu flower show in lalbagh, Ashwini, Raganna, Shivanna
WhatsApp Group Join Now
Telegram Group Join Now

Post navigation

Previous Post: ಕೇವಲ 7 ಲಕ್ಷದ ಬಜೆಟ್ ನಲ್ಲಿ ಕಟ್ಟಿರುವ ಈ ಸುಂದರ ಮನೆ ಒಮ್ಮೆ ನೋಡಿ ನಿಜಕ್ಕೂ ಅಚ್ಚರಿಯಾಗುತ್ತದೆ. ಇಷ್ಟು ಕಡಿಮೆ ದುಡ್ಡಿನಲ್ಲೂ ಇಂತಹ ಒಳ್ಳೆಯ ಮನೆ ಕಟ್ಟಬಹುದಾ ಅಂತ.
Next Post: ರಶ್ಮಿಕಾ ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್ ಅಪ್ ಮಾಡಿಕೊಳ್ಳಲು ಈ ಸ್ವಾಮೀಜಿಯೇ ಕಾರಣ. ಅಷ್ಟಕ್ಕೂ ಈತ ಹೇಳಿದ ಭವಿಷ್ಯವೇನೂ ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore