LIC ಯೋಜನೆಗಳು ದೇಶದಾದ್ಯಂತ ಹೆಸರುವಾಸಿಯಾಗಿವೆ. LIC ಯಲ್ಲಿ ಹಲವಾರು ಬಗೆಯ ಹೂಡಿಕೆ ಯೋಜನೆಗಳಿದ್ದು ಜನರು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಯೋಜನೆಗಳನ್ನು ಆರಿಸಿಕೊಂಡು ಅವುಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. LICಯಲ್ಲಿ ದೀರ್ಘಾವಧಿ ಯೋಜನೆಗಳು ಮಾತ್ರವಲ್ಲದೇ ಪೆನ್ಷನ್ ರೂಪದಲ್ಲಿ ಹಣ ಪಡೆಯುವಂತಹ ಯೋಜನೆಗಳಲ್ಲಿ ಕೂಡ ಹೂಡಿಕೆ ಮಾಡಬಹುದು. ಇಂತಹ ಯೋಜನೆಗಳಲ್ಲಿ ಒಂದಾದ LIC ನ್ಯೂ ಜೀವನ್ ಶಾಂತಿ ಯೋಜನೆ (858) ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
● LIC ಜೀವನ್ ಶಾಂತಿ ಯೋಜನೆ (850) ಮತ್ತು LIC ನ್ಯೂ ಜೀವನ್ ಶಾಂತಿ ಯೋಜನೆ (858) ಎರಡು ಕೂಡ ಪರಸ್ಪರ ಬೇರೆ ಬೇರೆಯಾದ ಯೋಜನೆಗಳಾಗಿವೆ.
● ಇದು ಸಿಂಗಲ್ ಪ್ರೀಮಿಯಂ ಡಿಫರ್ಡ್ ಆನ್ಯೂವಲ್ ಪ್ಲಾನ್ ಆಗಿದೆ. ಒಂದು ಬಾರಿ ಹಣವನ್ನು ಹೂಡಿಕೆ ಮಾಡಿ ಪೆನ್ಷನ್ ಪಡೆಯುವಂತಹ ಯೋಜನೆ.
● ನೀವು ನಿಮ್ಮ ಪೆನ್ಷನ್ ಅನ್ನು ಮಾಸಿಕವಾಗಿ, ತ್ರೈಮಾಸಿಕವಾಗಿ ಅರ್ಧ ವಾರ್ಷಿಕವಾಗಿ ಅಥವಾ ವಾರ್ಷಿಕವಾಗಿ ಪಡೆದುಕೊಳ್ಳಲು ಆಯ್ಕೆಗಳಿವೆ, ಯೋಜನೆ ಆರಂಭಿಸುವಾಗಲೇ ನೀವು ಇದನ್ನು ಸೆಲೆಕ್ಟ್ ಮಾಡಬೇಕು.
ಈ ದೇವರ ಫೋಟೋ ಮನೆಯಲ್ಲಿ ಇದ್ದರೆ ಕೂಡಲೇ ಬದಲಾಯಿಸಿ, ಇಲ್ಲದಿದ್ರೆ ಕಷ್ಟಗಳು ತಪ್ಪಿದ್ದಲ್ಲ.!
● ಇದರ ಇನ್ನೊಂದು ವಿಶೇಷತೆ ಏನೆಂದರೆ ಇದರಲ್ಲಿ ನೀವು Single life ಅಥವಾ joint life ಎನ್ನುವುದನ್ನು ಆರಿಸಿಕೊಳ್ಳಬೇಕು. Single life ಆರಿಸಿಕೊಂಡಲ್ಲೇ ನೀವು ಇರುವವರೆಗೆ ಮಾತ್ರ ಪೆನ್ಷನ್ ಬರುತ್ತದೆ, ನಿಮ್ಮ ನಂತರ ಹಣ ನಾಮಿನಿಗೆ ಹೋಗುತ್ತದೆ, joint life ಸೆಲೆಕ್ಟ್ ಮಾಡಿದರೆ ನೀವು ನಿಮ್ಮ ಕುಟುಂಬದ ಯಾವುದಾದರೂ ಸದಸ್ಯರನ್ನು ನಿಮ್ಮ ಜೊತೆ ಸೇರಿಸಿಕೊಳ್ಳಬಹುದು. ನಿಮ್ಮ ನಂತರ ಅವರಿಗೆ ಪೆನ್ಷನ್ ಕಂಟಿನ್ಯೂ ಆಗುತ್ತದೆ, ಅವರ ಮ’ರ’ಣ’ದ ನಂತರ ನೀವು ನಾಮಿನಿ (Nominee) ಮಾಡಿದ ಸದಸ್ಯರಿಗೆ ಹೂಡಿಕೆ ಮೊತ್ತ ಸೇರುತ್ತದೆ.
● 30 – 79 ವರ್ಷ ಒಳಗಿನವರು ಮಾತ್ರ ಈ ಯೋಜನೆಗೆ ಅರ್ಹರು.
● ಡಿಫರ್ಮೆಂಟ್ (deferment) ಅವಧಿ 1-12 ವರ್ಷಗಳು ಇರುತ್ತದೆ, ಡಿಫರ್ಮೆಂಟ್ ಎಂದರೆ ನೀವು ಯಾವ ಹೆಸರಿನಿಂದ ನಿಮಗೆ ಪೆನ್ಷನ್ ಬೇಕು ಎನ್ನುವುದನ್ನು ಸೆಲೆಕ್ಟ್ ಮಾಡುವುದು.
● ವೆಸ್ಟಿಂಗ್ ಏಜ್ (Vesting age) 31-80 ವರ್ಷ. ವೆಸ್ಟಿಂಗ್ ಏಜ್ ಅಂದರೆ ಯಾವ ವಯಸ್ಸಿನಿಂದ ಪೆನ್ಷನ್ ಬರುತ್ತದೆ ಅದನ್ನು ವೆಸ್ಟಿಂಗ್ ಅನ್ನುತ್ತಾರೆ.
● ಈ ಯೋಜನೆಯಲ್ಲಿ ಕನಿಷ್ಟ 1,50,000 ಹೂಡಿಕೆ ಮಾಡಬೇಕು, ಗರಿಷ್ಠ ಯಾವುದೇ ಮಿತಿ ಇರುವುದಿಲ್ಲ.
● ನೀವು ಈ ಪಾಲಿಸಿ ತೆಗೆದುಕೊಂಡು ಒಂದು ವರ್ಷ ಮುಗಿದ ಬಳಿಕ ಸಾಲದ ಸೌಲಭ್ಯ ಕೂಡ ಇದೆ.
● ಮಾಸಿಕವಾಗಿ 1,000 ತ್ರೈಮಾಸಿಕವಿಗೆ 3,000 ಅರ್ಧವಾರ್ಷಿಕವಾಗಿ 6,000 ಅಥವಾ ವಾರ್ಷಿಕವಾಗಿ 12,000 ಮಾತ್ರ ಪೆನ್ಷನ್ ಬರುವಂತೆ ನೀವು ಈ ಯೋಜನೆಗೆ ಹಣವನ್ನು ಹೂಡಿಕೆ ಮಾಡಲೇಬೇಕು.
● ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಯೋಜನೆ ಖರೀದಿಸಬಹುದು.
● free look in period ಆಫ್ ಲೈನ್ನಲ್ಲಿ ಖರೀದಿಸುವವರಿಗೆ 15 ದಿನಗಳು ಆನ್ಲೈನಲ್ಲಿ ಖರೀದಿಸುವವರಿಗೆ 30 ದಿನಗಳು ಇರುತ್ತದೆ. ಈ ಅವಧಿ ಒಳಗೆ ಯೋಜನೆಯನ್ನು ರದ್ದು ಮಾಡಬಹುದು.
● ಆದಾಯ ತೆರಿಗೆ ವಿನಾಯಿತಿಗೆ ಒಳಪಡುವುದಿಲ್ಲ.
ಈ ಯೋಜನೆಗೆ ಮೆಚ್ಯುರಿಟಿ ಪಿರಿಯಡ್ ಎನ್ನುವುದು ಇರುವುದಿಲ್ಲ ಜೀವನಪರ್ಯಂತ ನೀವು ಪೆನ್ಷನ್ ಪಡೆಯುತ್ತೀರಿ.
ನಿಮ್ಮ ಮನೆಯಲ್ಲಿ ದೈವ ಶಕ್ತಿ ಇದ್ರೆ ಈ ಸೂಚನೆಗಳು ಕಾಣಿಸುತ್ತವೆ.!
● ಉದಾಹರಣೆಯೊಂದಿಗೆ ಹೇಳುವುದಾದರೆ 35 ವರ್ಷದ ಒಬ್ಬ ವ್ಯಕ್ತಿಯು ಯೋಜನೆಯಡಿ 1,50,000 + GST 2,700ಹೂಡಿಕೆ ಮಾಡಿ ಡಿಫರ್ಮೆಂಟ್ ಪಿರಿಯಡ್ 12 ವರ್ಷ ಸೆಲೆಕ್ಟ್ ಮಾಡಿದರೆ ಅವರಿಗೆ 47 ವರ್ಷ ಆದ ಬಳಿಕ ಅವರು ಮಾಸಿಕವಾಗಿ 1,112 ಅಥವಾ ತ್ರೈಮಾಸಿಕವಾಗಿ 3,372 ಅಥವಾ ಅರ್ಧವಾರ್ಷಿಕವಾಗಿ 6,813 ಅಥವಾ ವಾರ್ಷಿಕವಾಗಿ 13,903ರೂ. ಪಡೆಯಬಹುದು.