60 ಮೇಲೆ ವರ್ಷ ಮೇಲ್ಪಟ್ಟ ಅಪ್ಪ ಹಾಗೂ 50 ವರ್ಷ ಮೇಲ್ಪಟ್ಟ ಅಮ್ಮಂದಿರಿಗಾಗಿ ಕೆಲವು ಸಲಹೆಗಳು.! ನಿಮ್ಮ ಮನೆಯಲ್ಲಿ ಹಿರಿಯರು ಇದ್ದರೆ ತಪ್ಪದೆ ಇದನ್ನು ನೋಡಿ.!

● ಸ್ನಾನ ಮಾಡುವಾಗ ಚಿಲಕ ಹಾಕಿಕೊಳ್ಳಬೇಡಿ ಸುಮ್ಮನೆ ಡೋರ್ ಕ್ಲೋಸ್ ಮಾಡಿಕೊಳ್ಳಿ ಯಾವುದಾದರೂ ಚೇರ್ ಅಥವಾ ಸ್ಟೂಲ್ ಸಹಾಯದಿಂದ ಅದರ ಮೇಲೆ ಕುಳಿತುಕೊಂಡು ಸ್ನಾನ ಮಾಡಿ, ನಿಂತುಕೊಂಡು ಸ್ನಾನ ಮಾಡಬೇಡಿ ನಿಮಗೆ ಯಾವುದೇ ಸಮಯದಲ್ಲಿ ಬೇಕಾದರೂ ಬಹಳ ಸುಸ್ತಾಗಿ ಬಿಡಬಹುದು. ಆದ್ದರಿಂದ ಸ್ನಾನ ಮಾಡಲು ಹೋಗುವಾಗ ಮುಂಜಾಗ್ರತೆ ವಹಿಸಿ.

● Toilet ನಲ್ಲಿ ಕುಳಿತುಕೊಳ್ಳಲು ಹಾಗೂ ನಿಂತುಕೊಳ್ಳಲು ನಿಮಗೆ ಸಾಧ್ಯವಾಗದೇ ಹೋಗಬಹುದು. ನಿಮ್ಮ ಸಪೋರ್ಟ್ ಗೆ ಯಾವುದಾದರು ವಸ್ತುವನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಅಥವಾ ನಿಮಗೆ ಸರಾಗವಾಗಿ ಕೂರಲು ಏಳಲು ಆಗುವಂತಹ ವ್ಯವಸ್ಥೆ ಮಾಡಿಸಿಕೊಂಡರೆ ಒಳ್ಳೆಯದು.
● ವಯಸ್ಸಾದ ಮೇಲೆ ಬಹಳ ಸುಸ್ತಾಗುತ್ತಿರುತ್ತದೆ, ನಿಮಗೆ ಹೆಚ್ಚು ಸಮಯ ನಿಂತುಕೊಳ್ಳಲು ಆಗುವುದಿಲ್ಲ ಹಾಗಾಗಿ ಸಣ್ಣ ಪುಟ್ಟ ಕೆಲಸ ಮಾಡುವಾಗ ನಿಂತುಕೊಂಡು ಸುಸ್ತಾಗಬೇಡಿ.

ನಿಮ್ಮ ಮನೆಯಲ್ಲಿ ದೈವ ಶಕ್ತಿ ಇದ್ರೆ ಈ ಸೂಚನೆಗಳು ಕಾಣಿಸುತ್ತವೆ.!

● ನಿದ್ರೆ ಮಾಡುವಾಗ ತಕ್ಷಣವೇ ಎಚ್ಚರವಾದರೆ ಕೂಡಲೇ ದಢಾರ್ ಎಂದು ಏಳಬಾರದು, ಅದರಲ್ಲೂ ಕೂಡ ರಾತ್ರಿ ಹೊತ್ತು ಮಲಗಿರುವಾಗ ಮಾತ್ರ ವಿಸರ್ಜನೆಗೆ ಅವಸರ ಆಯಿತು ಎಂದು ತಕ್ಷಣ ಏಳಬಾರದು. ಎಚ್ಚರ ಆದರೆ ಕನಿಷ್ಠ ಎರಡು ನಿಮಿಷಗಳವರೆಗೆ ಹೊರಳಾಡಿ ಎದ್ದು ಕುಳಿತುಕೊಂಡು ನಂತರ ತೆರಳಿ ಈ ರೀತಿ ತಪ್ಪಿನಿಂದ ಅನೇಕರು ಅ’ಪಾ’ಯ ಮಾಡಿಕೊಂಡಿದ್ದಾರೆ ಹಾಗಾಗಿ ಈ ವಿಷಯದ ಬಗ್ಗೆ ಬಹಳ ಎಚ್ಚರ ಇರಲಿ.

● ಹೆಚ್ಚು ನೀರು ಇರುವ ಜಾಗದಲ್ಲಿ ಓಡಾಡಬೇಡಿ. ಮನೆಯಲ್ಲಿ ನೀರು ಎಣ್ಣೆ ಚೆಲ್ಲದಂತೆ ಜಾಗ್ರತೆವಹಿಸಿ ಅಥವಾ ಅಂತಹ ಸ್ಥಳಗಳಲ್ಲಿ ನೀವು ಓಡಾಡಲೇಬೇಡಿ.
● ಚೇರ್, ಏಣಿ ಇವುಗಳ ಮೇಲೆ ನಿಂತುಕೊಂಡು ಯಾವುದೇ ಕೆಲಸವನ್ನು ಮಾಡಲು ಹೋಗಲೇಬೇಡಿ.

ಗೃಹಿಣಿ ಈ ರೀತಿ ತಪ್ಪು ಮಾಡುವುದರಿಂದಲೇ ಗಂಡ ಹೆಂಡತಿಯರಲ್ಲಿ ಜಗಳ ಬರುವುದು ಮನೆಗೆ ದಾರಿದ್ರ್ಯ ಬರುವುದು.!

● ವಾಹನಗಳನ್ನು ಓಡಿಸಲು ಒಬ್ಬರೇ ಹೋಗಬೇಡಿ, ಯಾವುದಾದರೂ ಸ್ಥಳಕ್ಕೆ ಹೋಗಬೇಕಿದ್ದರೆ ಜೊತೆಗೆ ಸ್ನೇಹಿತರನ್ನು ಅಥವಾ ಮನೆಯ ಇನ್ಯಾವುದೋ ಸದಸ್ಯರನ್ನು ಕರೆದುಕೊಂಡು ಹೋಗುವುದು ಬಹಳ ಒಳ್ಳೆಯದು.
● ಯಾವುದೇ ಮೆಡಿಸನ್ ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆದು ತೆಗೆದುಕೊಳ್ಳಿ, ಸಣ್ಣ ಪುಟ್ಟ ಸಮಸ್ಯೆಗೂ ಕೂಡ ಮಾತ್ರೆಗಳನ್ನು ತೆಗೆದುಕೊಳ್ಳುವ ಅಭ್ಯಾಸ ಬಿಟ್ಟುಬಿಡಿ.

● ನಿಮಗೆ ಏನು ಅನಿಸುತ್ತದೆ ಆ ರೀತಿ ಬದುಕಿ. ಇನ್ನು ನಿಮಗೆ ಉಳಿದಿರುವುದು ಕೆಲವು ಸಮಯ ಮಾತ್ರ ಆದಷ್ಟು ಅದನ್ನು ಸಂತೋಷಕ್ಕಾಗಿ ಕಳೆಯಿರಿ. ಹಳೆಯ ಸ್ನೇಹಿತರನ್ನು ಭೇಟಿ ಮಾಡುವುದು ಅಥವಾ ಇಷ್ಟದ ಹವ್ಯಾಸಗಳಲ್ಲಿ ತೊಡಗಿಕೊಳ್ಳಲು ಈ ಸಮಯ ವಿನಿಯೋಗಿಸಿ, ಎಲ್ಲರ ಜೊತೆಗೂ ನಗುನಗುತ್ತಾ ಇರಿ, ಆರೋಗ್ಯದ ಬಗ್ಗೆ ನಿಗಾ ಇರಲಿ.

ಯಾವ ರಾಶಿಯವರು, ಯಾವ ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ ಗೊತ್ತಾ.? ಇಲ್ಲಿದೆ ನೋಡಿ 12 ರಾಶಿಗಳ ಯೋಗ.!

● ಮನೇಲಿ ನೀವು ಒಬ್ಬರೇ ಇದ್ದಾಗ ಅಪರಿಚಿತರನ್ನು ಯಾವುದೇ ಕಾರಣಕ್ಕೂ ಒಳಕ್ಕೆ ಬಿಟ್ಟು ಕೊಳ್ಳಬೇಡಿ. ಶಾಸ್ತ್ರ ಹೇಳುವವರು, ಒಡವೆ ಪಾಲಿಶ್ ಮಾಡುವವರು, ಸೇಲ್ಸ್ ಮೆನ್ ಗಳು ಎಂದು ಹೇಳಿಕೊಂಡು ಮೋ’ಸ ಮಾಡಲು ಬರುತ್ತಾರೆ ಹಾಗಾಗಿ ಒಬ್ಬರೇ ಇದ್ದಾಗ ಯಾರನ್ನು ಸೇರಿಸಬೇಡಿ.
● ಹೊರಗೆ ಹೋಗುವಾಗ ತಪ್ಪದೇ ಮನೆಯ ಮುಖ್ಯದ್ವಾರದ ಕೀಲಿಕೈ ತೆಗೆದುಕೊಂಡು ಹೋಗಿ. ಇದು ಮನೆಯ ಎಲ್ಲರ ಬಳಿ ಒಂದೊಂದು ಇದ್ದರೆ ಉತ್ತಮ. ಹಾಗೆ ನಿಮ್ಮ ರೂಮ್ ನಲ್ಲಿ ಒಂದು ಕಾಲಿಂಗ್ ಬೆಲ್ ಇಟ್ಟುಕೊಳ್ಳಿ ಎಮರ್ಜೆನ್ಸಿ ಆದಕ ತಕ್ಷಣ ಕರೆಯುವುದಕ್ಕೆ ಸಹಾಯ ಆಗುತ್ತದೆ.

● ನಿಮ್ಮ ಮನೆಯ ವಿಷಯಗಳನ್ನು ಹೊರಗೆ ಹೇಳಬೇಡಿ. ಹಾಗೆ ನಿಮ್ಮ ವೈಯಕ್ತಿಕ ಮಾಹಿತಿಗಳಾದ ಆಧಾರ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ, ನಿಮ್ಮ ಪಾಸ್ ಬುಕ್ ವಿವರ, OTP ಇವುಗಳನ್ನು ಯಾರ ಜೊತೆಗೂ ಹಂಚಿಕೊಳ್ಳಬೇಡಿ. ನಿಮ್ಮ ಕುಟುಂಬ ಸದಸ್ಯರ ಅನುಪಸ್ಥಿತಿಯಲ್ಲಿ ಯಾವುದೇ ಪತ್ರ ವ್ಯವಹಾರಗಳಿಗೆ ಸಹಿ ಹಾಕಬೇಡಿ
● ನಿಮ್ಮ ಮನೆಯ ವಿಳಾಸ ಹಾಗೂ ಮಕ್ಕಳ ಮತ್ತು ಮೊಮ್ಮಕ್ಕಳ ಮೊಬೈಲ್ ಸಂಖ್ಯೆಗಳನ್ನು ಬರೆದುಕೊಂಡು ಆ ಚೀಟಿಯನ್ನು ಸದಾ ನಿಮ್ಮ ಜೊತೆಗೆ ಇಟ್ಟುಕೊಂಡಿರಿ.
● ಎಲ್ಲಾದರೂ ಪ್ರಯಾಣ ಹೋಗುವಾಗ ಆಗುವ ಖರ್ಚಿನ ಬಗ್ಗೆ ಅಂದಾಜು ಮಾಡಿ. ಹಣ ತೆಗೆದುಕೊಂಡು ಹೋಗಿ, ಪ್ರಯಾಣದಲ್ಲಿ ಅಪರಿಚಿತರು ಕೊಡುವ ಆಹಾರಗಳನ್ನು ಸೇವಿಸಬೇಡಿ.

ಮುತ್ತೈದೆ ಮಹಿಳೆಯರಿಗೆ ಕಿವಿ ಮಾತು, ನಿಮ್ಮ ಈ ಸ್ವಭಾವಗಳನ್ನು ಬದಲಾಯಿಸಿಕೊಂಡರೆ ಸುಖ ಶಾಂತಿ ನೆಮ್ಮದಿ ಜೊತೆ ಲಕ್ಷ್ಮಿ ಕೂಡ ನೆಲೆಸಿರುತ್ತಾಳೆ.!

Leave a Comment