ಇಡೀ ವಿಶ್ವದಲ್ಲಿ ನಮ್ಮ ಭಾರತ ಬಹಳ ಶ್ರೇಷ್ಠ ಎನಿಸಿರುವುದು ತಾನು ಪಾಲಿಸಿಕೊಂಡು ಬಂದಿರುವ ಸಂಪ್ರದಾಯದಿಂದ. ಸಂಪ್ರದಾಯ, ಪದ್ಧತಿ, ಆಚರಣೆಗಳು ಕೇವಲ ತೋರಿಕೆಗಾಗಿ ಅಥವಾ ಆಡಂಭರಕ್ಕಾಗಿ ಅಲ್ಲ. ಈ ಎಲ್ಲಾ ವಿಚಾರಗಳ ಹಿಂದೆ ವೈಜ್ಞಾನಿಕ ಚಿಂತನೆ ಇತ್ತು ಎನ್ನುವುದು ಇತ್ತೀಚೆಗೆ ಬೆಳಕಿಗೆ ಬರುತ್ತದೆ. ಅದೇ ರೀತಿ ತತ್ವಶಾಸ್ತ್ರ ಹಾಗೂ ಮನಶಾಸ್ತ್ರಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನು ನಮ್ಮ ಹಿರಿಯರು ಸಂಸ್ಕಾರ ಎನ್ನುವ ಚೌಕಟ್ಟನ್ನು ಹಾಕಿ ತಿಳಿಸಿಕೊಟ್ಟಿದ್ದರು ಎಂದರೆ ಬಹುಶಃ ಅದು ತಪ್ಪಾಗಲಾರದು ಎನಿಸುತ್ತದೆ.
ಅದರಲ್ಲೂ ಕೂಡ ನಮ್ಮ ದೇಶದಲ್ಲಿ ಮದುವೆ ಆಗಿರುವ ಸ್ತ್ರೀಗೆ ಬಹಳ ಕಟ್ಟುನಿಟ್ಟಾದ ನೀತಿ ನಿಯಮಗಳು ಇದೆ. ಆದರೆ ಇತ್ತೀಚಿಗೆ ಜನರೇಶನ್ ಬದಲಾಗಿದೆ ಈಗಿನ ಕಾಲದಲ್ಲಿ ಹೆಣ್ಣು ಗಂಡಿಗೆ ಯಾವುದರಲ್ಲ ಕಡಿಮೆ ಇಲ್ಲ. ಸರಿ ಸಮಾನವಾಗಿ ದುಡಿಯುತ್ತಿದ್ದಾಳೆ, ವಿದ್ಯಾವಂತೆಯಾಗಿದ್ದಾಳೆ. ಹಾಗೆಂದ ಮಾತ್ರಕ್ಕೆ ನಮ್ಮ ಹಿರಿಯರು ನುಡಿಸಿಕೊಂಡು ಬಂದಿದ್ದನ್ನೆಲ್ಲಾ ಗಾಳಿಗೆ ತೂರಿ ಬಿಡುವುದಲ್ಲ.
ಯಾವ ರಾಶಿಯವರು, ಯಾವ ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ ಗೊತ್ತಾ.? ಇಲ್ಲಿದೆ ನೋಡಿ 12 ರಾಶಿಗಳ ಯೋಗ.!
ಕಾಲಕ್ಕೆ ತಕ್ಕ ಹಾಗೆ ನಡೆಯಬೇಕು ಎನ್ನುವುದು ಎಷ್ಟು ಸತ್ಯವೋ ಹಾಗೆಯೇ ನಾವು ಎತ್ತರಕ್ಕೆ ಇರಬೇಕು ಎಂದರೆ ನಮ್ಮ ಬೇರುಗಳು ಕೂಡ ನೆಲದಲ್ಲಿ ಅಷ್ಟೇ ಗಟ್ಟಿಯಾಗಿರಬೇಕು ಎನ್ನುವುದನ್ನು ಮರೆಯಬಾರದು. ಅದಕ್ಕಾಗಿ ಈ ಅಂಕಣದಲ್ಲಿ ಮದುವೆ ಆಗಿರುವ ಸ್ತ್ರೀಗೆ ಕಿವಿ ಮಾತುಗಳನ್ನು ಹೇಳುತ್ತಿದ್ದೇವೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ನಾವು ಮಾಡುವ ಸಣ್ಣ ತಪ್ಪುಗಳಿಂದ ಅಪಚಾರಗಳಿಂದ ದಾಂಪತ್ಯ ಕಲಹಗಳಾಗಿ ಮದುವೆ ಆದ ತಿಂಗಳಿಗೆ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲು ಏರುವಂತೆ ಆಗಿದೆ.
ಇಲ್ಲವಾದರೆ ಎಷ್ಟು ದುಡಿಯುತ್ತಿದ್ದರೂ ಕೂಡ ಕೈಯಲ್ಲಿ ಹಣ ಉಳಿಯದೆ ದಟ್ಟ ದಾರಿದ್ರ್ಯ ಆವರಿಸಿಕೊಂಡು ಗಂಡ ಹೆಂಡತಿ ಸಾಲದ ಸುಳಿಯಲ್ಲಿ ಮುಳುಗುವಂತೆ ಆಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಶಕ್ತಿ ಆ ಕುಟುಂಬದ ಹೆಣ್ಣು ಮಗಳಿಗೆ ಇರುತ್ತದೆ. ಆದರೆ ಆಕೆ ಅದನ್ನು ಅರ್ಥಮಾಡಿಕೊಳ್ಳಬೇಕು ಅಷ್ಟೇ.
ಸ್ಪಷ್ಟ ಉದಾಹರಣೆಯೊಂದಿಗೆ ಹೇಳುವುದಾದರೆ ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಮಂಗಳಸೂತ್ರವನ್ನು ಫ್ಯಾಶನ್ ಮಾಡಿಕೊಂಡಿದ್ದಾರೆ. ಈ ವಿಚಾರದಲ್ಲಿ ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದೇ ಹೇಳಬಹುದು. ಯಾಕೆಂದರೆ ಮಾಂಗಲ್ಯ ಧಾರಣೆ ಎನ್ನುವುದಕ್ಕೆ ತುಂಬಾ ಪ್ರಾಶಸ್ತ್ಯವಿದೆ. ಶುಭ ಮುಹೂರ್ತವನ್ನು ನೋಡಿ ಗುರುಹಿರಿಯರ ಆಶೀರ್ವಾದದೊಂದಿಗೆ ಅದನ್ನು ಧಾರಣೆ ಮಾಡಿಸಲಾಗಿರುತ್ತದೆ.
ಮದುವೆಗೆ ಮುನ್ನ ಸ್ತ್ರೀ, ಅರಿಶಿನ, ಕುಂಕುಮ, ಹೂ ಬಳೆ ಎಲ್ಲವನ್ನು ಧರಿಸುತ್ತಾರೆ ಆದರೆ ಮದುವೆ ಆದ ಬಳಿಕವೇ ಆಕೆಗೆ ಮಾಂಗಲ್ಯಸೂತ್ರ ಹಾಗೂ ಕಾಲುಂಗುರ ಧರಿಸುವ ಭಾಗ್ಯ ಬರುವುದು. ಇದನ್ನು ಧರಿಸಿದರೆ ಮಹಿಳೆ ಸ್ಥಾನಮಾನವೇ ಬದಲಾಗುತ್ತದೆ, ಕೊಡುವ ಗೌರವ ಹೆಚ್ಚಾಗುತ್ತದೆ. ಇದರಿಂದಾಗಿಯೇ ಇದರ ಬೆಲೆ ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.
ನಿಮ್ಮ ಮನೆಗಳಲ್ಲೂ ಕೂಡ ಕಡಜ ಗೂಡು ಕಟ್ಟುತ್ತಿದೆಯಾ ಹಾಗಾದರೆ ನೀವು ಈ ವಿಚಾರ ತಿಳಿದುಕೊಳ್ಳಲೇಬೇಕು.!
ಹಾಗಾಗಿ ನೀವು ಯಾವುದೇ ವಿಷಯದಲ್ಲಿ ಫ್ಯಾಶನ್ ಮಾಡಿದರು ಕೂಡ ಮಂಗಳಸೂತ್ರ ಹಾಗೂ ಕಾಲುಂಗುರದ ವಿಷಯದಲ್ಲಿ ಎಂದು ಕೂಡ ಪದೇ ಪದೇ ಬದಲಾಯಿಸುವುದು ಅಥವಾ ಬೇಕಾದಾಗ ಹಾಕಿಕೊಳ್ಳುವುದು ಬೇಡವಾದಾಗ ತೆಗೆಯುವುದು, ನೀವು ಹಾಕಿರುವ ಬಟ್ಟೆಗೆ ಮ್ಯಾಚಿಂಗ್ ಆಗಿಲ್ಲ ಎಂದು ಧರಿಸದೆ ಇರುವುದು ಈ ರೀತಿ ಮಾಡಬೇಡಿ.
ಯಾಕೆಂದರೆ ಇದೇ ಒಂದು ತಪ್ಪಿನಿಂದಾಗಿ ನಿಮ್ಮ ದಾಂಪತ್ಯದಲ್ಲಿ ವೈಮನಸ್ಸು ಮೂಡುತ್ತದೆ. ಗಂಡನ ಆರೋಗ್ಯ ,ಆಯಸ್ಸು ಹಾಗೂ ಹಣಕಾಸಿನ ಕ್ಷೀಣತೆಗೆ ನಿಮ್ಮ ಈ ತಪ್ಪು ಕಾರಣವಾಗುತ್ತದೆ. ಕುಟುಂಬಕ್ಕೆ ಇದರಿಂದ ದಟ್ಟದಾರಿದ್ರ್ಯ ತಟ್ಟುತ್ತದೆ. ಹಾಗಾಗಿ ನೀವು ಎಷ್ಟೇ ಮುಂದುವರಿದರೂ ಹಿರಿಯರು ಹಾಕಿದ್ದ ಈ ಗೆರೆಯನ್ನು ದಾಟದೇ ಇರುವುದೇ ಎಲ್ಲಾ ಕಾಲಕ್ಕೂ ಒಳ್ಳೆಯದು.