ಪ್ರತಿಯೊಬ್ಬರ ಜೀವನದಲ್ಲಿ ಕೂಡ ಹಣಕಾಸಿನ ಮುಗ್ಗಟ್ಟು ಇದ್ದೇ ಇರುತ್ತದೆ. ಕೆಲವರು ಚೆನ್ನಾಗಿ ಬದುಕುತ್ತಿದ್ದಾಗಲೇ ಉದ್ಯೋಗ ಕಳೆದುಕೊಳ್ಳೋದು ಅಥವಾ ವ್ಯಾಪಾರಗಳು ಲಾಸ್ ಆಗಿ ಇಂತಹ ಕಾರಣದಿಂದಾಗಿ ಕ’ಷ್ಟಕ್ಕೆ ಸಿಲುಕಿದರೆ ಕೆಲವರು ಒಳ್ಳೇದಾಗುತ್ತದೆ ಎಂದು ಬಹಳ ವರ್ಷದಿಂದ ಕಾಯುತ್ತಿರುತ್ತಾರೆ ಆದರೆ ಪರಿಸ್ಥಿತಿ ಏನು ಬದಲಾಗಿರುವುದಿಲ್ಲ.
ಇನ್ನು ಕೆಲವರು ಚೆನ್ನಾಗಿದ್ದಾಗ ಬೇರೆಯವರಿಗೆ ಹಣ ಕೊಟ್ಟು ಅದನ್ನು ವಾಪಸ್ ಪಡೆದುಕೊಳ್ಳಲಾಗದೇ ಅಥವಾ ತುಂಬಾ ಕಷ್ಟದಲ್ಲಿರುವವರು ಮಾಡಿದ ಸಾಲವನ್ನು ತೀರಿಸಲು ಆಗದೆ ಈ ರೀತಿ ನಾನಾ ಬಗೆಯ ಹಣಕಾಸಿನ ಸಮಸ್ಯೆಯಿಂದ ನರಳುತ್ತಿರುತ್ತಾರೆ. ಹೀಗೆ ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆ ಎಂತಹದೇ ಸಮಸ್ಯೆ ಇದ್ದರೂ ಕೂಡ ಈಗ ನಾವು ಹೇಳುವ ಈ ಉಪಾಯವನ್ನು ಮಾಡುವುದರಿಂದ 21 ದಿನಗಳಲ್ಲಿ ಅದರ ರಿಸಲ್ಟ್ ಪಡೆಯಬಹುದು.
ಮನುಷ್ಯನಿಗೆ ತನ್ನ ಕೈ ಮೀರಿ ಪ್ರಯತ್ನ ಪಟ್ಟರೂ ಪಡೆದುಕೊಳ್ಳಲು ಆಗದೆ ಇರುವುದನ್ನು ದೈವಬಲದಿಂದ ಮಾತ್ರ ಪಡೆಯಲು ಸಾಧ್ಯ. ಈ ರೀತಿ ದೇವರನ್ನು ಒಲಿಸಿಕೊಳ್ಳಬೇಕು ಎಂದರೆ ಆಗಿನ ಕಾಲದಲ್ಲಿ ಕಠಿಣ ತಪಸ್ಸು ಆಚರಿಸಬೇಕಿತ್ತು. ನಾವು ಪುರಾಣ ಕಥೆಗಳನ್ನು ಕೇಳುವಾಗ, ಹಳೆ ಕಾಲದ ಸಿನಿಮಾಗಳನ್ನು ನೋಡುವಾಗ ಭಗವಂತನ ಕೃಪಾಕಟಾಕ್ಷಕ್ಕಾಗಿ ಈ ರೀತಿ ಕಾಡಿನಲ್ಲಿ ಕುಳಿತು ಹುತ್ತ ಬೆಳೆಯುವವರೆಗೂ ತಪಸ್ಸು ಮಾಡುತ್ತಿದ್ದ ಋಷಿಮುನಿಗಳ ಬಗ್ಗೆ ಕೇಳುದ್ದೇವೆ, ಓದಿದ್ದೇವೆ.
ಆದರೆ ಈ ಕಲಿಯುಗದಲ್ಲಿ ಮನಸಾರೆ ಭಕ್ತಿಯಿಂದ ಒಂದು ದಿನ ಪೂಜೆ ಮಾಡಿದರೂ ಕೂಡ ಭಗವಂತ ಒಲಿಯುತ್ತಾನೆ. ಆದರೆ ಇಂದು ಮನುಷ್ಯನಿಗೆ ಆ ಪರಿಯ ಭಯ ಭಕ್ತಿ ಏನೂ ಇರದ ಕಾರಣ ಅವನ ಪೂಜೆಗಳಿಗೆ ಫಲ ಸಿಗುತ್ತಿಲ್ಲ. ಈಗಲೂ ನೀವು ಮನಸಾರೆ ಭಕ್ತಿಯಿಂದ ಎಲ್ಲಾ ಭಾರವನ್ನು ಭಗವಂತನ ಮೇಲೆ ಹಾಕಿ ನೀನೇ ದಾರಿ ಎಂದು ಪೂಜೆ ಮಾಡುವುದರಿಂದ ಖಂಡಿತವಾಗಿಯೂ ಫಲ ಸಿಗುತ್ತದೆ.
ಈಗಿನ ಯಾಂತ್ರಿಕ ಯುಗದಲ್ಲೂ ಕೂಡ ಬಹಳ ವೇಗವಾಗಿ ನಮ್ಮ ಪೂಜೆಗಳಿಗೆ ಫಲ ಪಡೆದುಕೊಳ್ಳುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಶಕ್ತಿಯು ಮಂತ್ರಗಳಿಗೆ ಇವೆ. ಇಂತಹ ಮಂತ್ರಗಳಿಂದ ಆರೋಗ್ಯ ಸಮಸ್ಯೆಗಳು, ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ತೊಡಕುಗಳು, ಹಣಕಾಸಿನ ಸಮಸ್ಯೆಗಳು, ಸಂಸಾರದ ಸಮಸ್ಯೆಗಳು ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು.
ಈ ರೀತಿ ಹಣಕಾಸಿನ ಸಮಸ್ಯೆ ಪರಿಹರಿಸಿಕೊಳ್ಳುವುದಕ್ಕೆ ಕನಕಧಾರ ಸ್ತೋತ್ರವನ್ನು ಪಠಿಸುವುದು ತುಂಬಾ ಒಳ್ಳೆಯ ಫಲ ಕೊಡುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ದಿನಪ್ರತಿ ಬೆಳಗ್ಗೆ ಎದ್ದಾಗನಿಂದ ಮಲಗುವವರೆಗೂ ಕೂಡ ಏನೇನೋ ನೋಡುತ್ತಿರುತ್ತೇವೆ, ಅದರಲ್ಲಿ ಸ್ವಲ್ಪ ಸಮಯವನ್ನು ಸ್ತೋತ್ರ ಕೇಳುವುದಕ್ಕೆ ಉಪಯೋಗಿಸಿದರೂ ಕೂಡ ಈ ಫಲ ಸಿಗುತ್ತದೆ.
ಯಾಕೆಂದರೆ ಎಲ್ಲರಿಗೂ ಕೂಡ ಪಠಣೆ ಮಾಡಲು ಬರುವುದಿಲ್ಲ, ಆರೋಹಣ ಅವರೋಹಣ ಅಕಾರಗಳು ಹಕಾರಗಳು ವ್ಯತ್ಯಾಸವಾಗುವುದರಿಂದ ಇದರ ನಿರೀಕ್ಷಿತ ರಿಸಲ್ಟ್ ಸಿಗದೆ ಹೋಗಬಹುದು. ಈಗಾಗಲೇ ಎಂ.ಎಸ್ ಸುಬ್ಬಲಕ್ಷ್ಮಿ ಧ್ವನಿಯಲ್ಲಿರುವ ಕನಕಧಾರಾ ಸ್ತೋತ್ರವನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.
ಸರಿಯಾಗಿ ಉಚ್ಚಾರಣೆ ಮಾಡಲು ಗೊತ್ತಿಲ್ಲದೇ ಇರುವವರು ಇದನ್ನು ಕೇಳಿದರು ಕೂಡ ಫಲ ಸಿಗುತ್ತದೆ. ಆದರೆ ನೀವು ಭಕ್ತಿಯಿಂದ ಮನಸಾರೆ ಕೇಳಬೇಕು. ಮನೆಯಲ್ಲಿ ತಾಯಿ ಮಹಾಲಕ್ಷ್ಮಿಗೆ ದೀಪ ಹಚ್ಚಿ ಮನೆದೇವರ ಪ್ರಾರ್ಥನೆ ಮಾಡಿ ಈ ಪ್ರಾರ್ಥನೆ ಮಾಡುವ ಸಮಯದಲ್ಲಿ ಕನಕಧಾರ ಸ್ತೋತ್ರ ಕೇಳಬಹುದು ಅಥವಾ ಪ್ರಾರ್ಥನೆ ಮುಗಿಸಿ ದೇವರ ಕೊನೆಯಲ್ಲಿ ಕುಳಿತು 8-9 ನಿಮಿಷ ಇರುವ ಈ ಕನಕಧಾರ ಸ್ತೋತ್ರವನ್ನು ಏಕಾಗ್ರತೆಯಿಂದ ಕೇಳುವುದರಿಂದ ಕೂಡ 21 ದಿನಗಳಲ್ಲಿ ನಿಮಗೆ ಇದರ ಫಲಿತಾಂಶ ಸಿಗುತ್ತದೆ.
ನಿಮ್ಮ ಹಣಕಾಸಿನ ಸಮಸ್ಯೆಗೆ ಯಾವುದಾದರೂ ಒಂದು ಮೂಲದಿಂದ ಪರಿಹಾರ ಸಿಗುತ್ತದೆ. ಇದನ್ನು ನೀವು 21 ದಿನಗಳಾದ ನಂತರ ನಿಲ್ಲಿಸುವ ಅವಶ್ಯಕತೆ ಇಲ್ಲ, ಪ್ರತಿದಿನವೂ ಕೂಡ ಇದನ್ನು ಕೇಳಿ ಬಹಳ ಒಳ್ಳೆಯದಾಗುತ್ತದೆ ಕನಕಧಾರ ಸ್ತೋತ್ರವನ್ನು ಶ್ರೀ ಆದಿಶಂಕರಾಚಾರ್ಯರು ರಚಿಸಿದ್ದಾರೆ.
ಬರಗಾಲದಲ್ಲೂ ಮಳೆ ತರಿಸುವ ಶಕ್ತಿ ಈ ಸ್ತೋತ್ರಕ್ಕೆ ಇದೆ ಎನ್ನುವುದನ್ನು ಅನೇಕ ಉದಾಹರಣೆಗಳನ್ನು ಇತಿಹಾಸ ತಿಳಿಸಿದೆ. ಇಷ್ಟು ಶಕ್ತಿ ಇರುವ ಈ ಮಂತ್ರವನ್ನು ಭಕ್ತಿಯಿಂದ ವಿಚಾರ ಮಾಡುವುದರಿಂದ ಅಥವಾ ಕೇಳುವುದರಿಂದ ಖಂಡಿತವಾಗಿಯೂ ಹಣಕಾಸಿನ ಸಮಸ್ಯೆಗಳು ಮಾತ್ರವಲ್ಲದೇ ಮನುಷ್ಯ ಸಹಜವಾದ ಎಲ್ಲಾ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ.
https://youtu.be/ixsJQMXxwts?si=ZVUVAtBRIxZS_q7K