ಅಕ್ಷಯ ತೃತೀಯವನ್ನು ಮೇ 10 ರಂದು ಆಚರಿಸಲಾಗುವುದು. ಈ ದಿನ ಚಿನ್ನ, ವಾಹನಗಳು, ಗ್ಯಾಜೆಟ್ ಗಳಲ್ಲದೆ ಕೆಲವು ವಿಶೇಷ ವಸ್ತುಗಳನ್ನು ಸಹ ಖರೀದಿಸಬಹುದು ಇದು ಲಕ್ಷ್ಮಿ ದೇವಿಯನ್ನು ಸಂತೋಷ ಪಡಿಸುತ್ತದೆ. ರಾಶಿ ಚಿಹ್ನೆಯ ಪ್ರಕಾರ ಅಕ್ಷಯ ತೃತೀಯದಂದು ಏನನ್ನು ಖರೀದಿಸಬೇಕು ಎಂದು ಇಲ್ಲಿ ತಿಳಿಯಿರಿ ಅಕ್ಷಯ ತೃತೀಯ ತುಂಬಾ ಮಂಗಳಕರವಾದ ದಿನವಾಗಿದೆ.
ಈ ದಿನ ಖರೀದಿಸಿದ ವಸ್ತುವು ಶಾಶ್ವತ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ಚಿನ್ನ ಅಥವಾ ಬೆಳ್ಳಿಯಿಂದ ತಯಾರಿಸಿದ ಆಭರಣಗಳನ್ನು ತೆಗೆದು ಕೊಂಡು ಮನೆಗೆ ಲಕ್ಷ್ಮಿ ಬರುತ್ತಾಳೆ ಎಂಬ ನಂಬಿಕೆ ಇದೆ. ಅಕ್ಷಯ ತೃತೀಯದಂದು ಖರೀದಿಸುವ ಮೂಲಕ ಹೆಚ್ಚಿನ ಶುಭ ಫಲಿತಾಂಶಗಳನ್ನು ಪಡೆಯಬಹುದಾದ ಕೆಲವು ವಿಷಯಗಳಿವೆ. ಅಕ್ಷಯ ತೃತೀಯದಂದು ರಾಶಿ ಚಿಹ್ನೆಯ ಪ್ರಕಾರ ನೀವು ಏನನ್ನು ಖರೀದಿಸಬಹುದು ಎಂದು ತಿಳಿಯಿರಿ.
* ಮೇಷ ರಾಶಿ :- ಅಕ್ಷಯ ತೃತೀಯ ದಿನದಂದು ಮೇಷ ರಾಶಿಗೆ ಸೇರಿದ ಜನರು ಬಾರ್ಲಿ, ಚಿನ್ನ, ತಾಮ್ರದ ಪಾತ್ರೆ ಅಥವಾ ತಾಮ್ರದಿಂದ ಮಾಡಿದ ಪಾತ್ರೆಗಳನ್ನು ಖರೀದಿಸಬೇಕು. ಇವುಗಳನ್ನು ಈ ದಿನ ಖರೀದಿಸುವುದ ರಿಂದ ನಿಮಗೆ ಒಳಿತಾಗುವುದು.
* ವೃಷಭ ರಾಶಿ :- ವೃಷಭ ರಾಶಿಯವರು ಅಕ್ಷಯ ತೃತೀಯದಂದು ಅಕ್ಕಿ, ಬೆಳ್ಳಿ, ರಾಗಿ, ಕವಡೆಯನ್ನು ಖರೀದಿಸಬೇಕು. ಅಕ್ಷಯ ತೃತೀಯದಂದು ಈ ವಸ್ತುಗಳನ್ನು ಮನೆಗೆ ತರುವುದರಿಂದ ನಿಮಗೆ ಶುಭವಾಗಲಿದೆ.
* ಮಿಥುನ ರಾಶಿ :- ಅಕ್ಷಯ ತೃತೀಯದಂದು ಮಿಥುನ ರಾಶಿಯವರು ಹಸಿರು ಬಟ್ಟೆಗಳನ್ನು ಖರೀದಿಸಬಹುದು. ಇದು ಮಿಥುನ ರಾಶಿಗೆ ಸೇರಿದ ಜನರ ಅದೃಷ್ಟವನ್ನು ಹೆಚ್ಚಿಸುತ್ತದೆ.
* ಕಟಕ ರಾಶಿ :- ಅಕ್ಷಯ ತೃತೀಯದ ದಿನದಂದು ಕರ್ಕಾಟಕ ರಾಶಿ ಯವರು ಗೋಮತಿ ಚಕ್ರ, ಬೆಳ್ಳಿ ಖರೀದಿಸಿದರೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ಶುಭ ದಿನದಂದು ತಪ್ಪದೇ ಇವುಗಳನ್ನು ಖರೀದಿಸಿ.
* ಸಿಂಹ ರಾಶಿ : – ಅಕ್ಷಯ ತೃತೀಯದ ದಿನದಂದು ಸಿಂಹ ರಾಶಿಯ ಜನರು ಯಾವುದೇ ತಾಮ್ರದ ವಸ್ತುವನ್ನು ಖರೀದಿಸಬಹುದು ಶ್ರೀ ಯಂತ್ರವನ್ನು ಖರೀದಿಸುವುದು ಸಹ ಶುಭವಾಗಿರುತ್ತದೆ. ಇದರಿಂದಾಗಿ ಲಕ್ಷ್ಮಿ ಮನೆಯಲ್ಲಿ ಶಾಶ್ವತವಾಗಿ ವಾಸಿಸುತ್ತಾಳೆ ಎಂದು ಹೇಳಲಾಗುತ್ತದೆ.
* ಕನ್ಯಾ ರಾಶಿ :- ಕನ್ಯಾ ರಾಶಿಗೆ ಸೇರಿದ ಜನರು ಅಕ್ಷಯ ತೃತೀಯದಂದು ತುಳಸಿ ಗಿಡವನ್ನು ಮನೆಗೆ ತರಬೇಕು. ಈ ಅಕ್ಷಯ ತೃತೀಯದಂದು ನೀವು ತುಳಸಿ ಗಿಡವನ್ನು ಮನೆಗೆ ತಂದರೆ ನಿಮ್ಮ ಹಣಕಾಸಿನ ತೊಂದರೆಗಳು ದೂರ ಉಳಿಯುತ್ತದೆ.
* ತುಲಾ ರಾಶಿ :- ಅಕ್ಷಯ ತೃತೀಯದ ಶುಭ ದಿನದಂದು ತುಲಾ ರಾಶಿ ಯವರು ಶಂಖ, ಗ್ಯಾಜೆಟ್ ಗಳು, ಚಿನ್ನವನ್ನು ಖರೀದಿಸುವುದು ನಿಮಗೆ ಶುಭವನ್ನುಂಟು ಮಾಡಲಿದೆ. ಹಾಗಾಗಿ ನೀವು ತುಲಾ ರಾಶಿಯವರಾಗಿದ್ದರೆ ತಪ್ಪದೇ ಇವುಗಳನ್ನು ಖರೀದಿಸಿ.
* ವೃಶ್ಚಿಕ ರಾಶಿ : – ನೀವು ವೃಶ್ಚಿಕ ರಾಶಿಗೆ ಸೇರಿದವರಾಗಿದ್ದರೆ ಅಕ್ಷಯ ತೃತೀಯದ ದಿನ ನೀವು ಬೆಲ್ಲ, ಚಿನ್ನ, ಬಾರ್ಲಿಯನ್ನು ಖರೀದಿಸಿದರೆ ನಿಮ್ಮ ಸಂಪತ್ತು ಬಹಳಷ್ಟು ಹೆಚ್ಚಾಗಲಿದೆ. ಜೊತೆಗೆ ನಿಮ್ಮ ಮನೆ ಯಾವಾಗಲೂ ಹಣದಿಂದ ತುಂಬಿರುತ್ತದೆ.
* ಧನು ರಾಶಿ :- ಅಕ್ಷಯ ತೃತೀಯದಂದು ಧನು ರಾಶಿಗೆ ಸೇರಿದ ಆ ಜನರು ಹಿತ್ತಾಳೆ ಅಥವಾ ಹಿತ್ತಾಳೆಯಿಂದ ತಯಾರಿಸಿದ ಪಾತ್ರೆಗಳು ಶ್ರೀ ಕೃಷ್ಣನ ಮೂರ್ತಿಯನ್ನು ಮನೆಗೆ ತರಬೇಕು. ಹೀಗೆ ಮಾಡುವುದರಿಂದ ನಿಮ್ಮ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
* ಮಕರ ಮತ್ತು ಕುಂಭ ರಾಶಿ :- ಅಕ್ಷಯ ತೃತೀಯ ದಿನದಂದು ಮಕರ ರಾಶಿ ಮತ್ತು ಕುಂಭ ರಾಶಿಗೆ ಸೇರಿದ ಜನರು ಬೆಳ್ಳಿ, ಬೆಳ್ಳಿ ಆಭರಣಗಳು, ಕಪ್ಪು ಎಳ್ಳನ್ನು ಖರೀದಿಸುವುದು ಶುಭಕರವಾಗಿರುತ್ತದೆ. ನೀವು ಈ ರಾಶಿಯವರಾಗಿದ್ದರೆ ಈ ಶುಭ ದಿನದಂದು ಈ ವಸ್ತುಗಳನ್ನು ಖರೀದಿಸಿ.
* ಮೀನ ರಾಶಿ :- ಅಕ್ಷಯ ತೃತೀಯದಂದು ನೀವು ಬಾರ್ಲಿ, ಚಿನ್ನ, ಅರಿಶಿನ ಮತ್ತು ಬೇಳೆ ಕಾಳುಗಳನ್ನು ಮನೆಗೆ ತರಬಹುದು. ಇದು ಗುರುವಿನ ಆಶೀರ್ವಾದವನ್ನು ಪಡೆಯುವಂತೆ ಮಾಡುತ್ತದೆ ಎಂದು ನಂಬಲಾಗಿದೆ. ಇದರಿಂದಾಗಿ ಲಕ್ಷ್ಮೀದೇವಿಯು ಪ್ರಸನ್ನಳಾಗುತ್ತಾಳೆ ಎಂದು ಹೇಳಲಾಗುತ್ತದೆ.