ಆಧಾರ್ ಕಾರ್ಡ್ (Aadhaar Card) ಪ್ರತಿಯೊಂದೂ ಕೆಲಸಕ್ಕೂ ಬೇಕಾದ ಪ್ರಮುಖ ದಾಖಲೆಯಾಗಿದೆ. ಆಧಾರ್ ಕಾರ್ಡ್ ಇಲ್ಲ ಅಂದ್ರೆ, ನಮ್ಮ ಯಾವುದೇ ಕೆಲಸ ಕಾರ್ಯಗತವಾಗೋದಿಲ್ಲ. ಹೀಗಾಗಿ ದೇಶದಲ್ಲಿ ಆಧಾರ್ ಪ್ರಲುಖ ದಾಖಲೆಗಳಲ್ಲಿ ಪ್ರಮುಖ ಸ್ಥಾನವನ್ನು ಅಲಂಕರಿಸಿದೆ ನಿಮಗೆ ಈಗಾಗಲೇ ತಿಳಿದಿರುವಂತೆ ಭಾರತದಲ್ಲಿ ಆಧಾರ್ ಕಾರ್ಡ್ ಭಾರತೀಯರ ಪ್ರಮುಖ ಗುರುತಿನ ರೂಪವಾಗಿದೆ.
ಅದರಲ್ಲೂ ನಿಮ್ಮ ಬ್ಯಾಂಕ್ ಖಾತೆಗಳು, ಹೆಚ್ಚಿನ ಸರ್ಕಾರಿ ಉಪಕ್ರಮಗಳಲ್ಲಿ ಭಾಗವಹಿಸುವಿಕೆ ಮತ್ತು ಇತರ ಚಟುವಟಿಕೆಗಳಿಗೆ ಆಧಾರ್ ಅಗತ್ಯವಿರುತ್ತದೆ. ನಿಮ್ಮ ಯಾವುದೇ ಸಮಸ್ಯೆಗಳನ್ನು ತಪ್ಪಿಸಲು ಸಮಯಕ್ಕೆ ತಕ್ಕಂತೆ ನಿಮ್ಮ ಆಧಾರ್ ಕಾರ್ಡ್ ಮಾಹಿತಿಗಳನ್ನು ಅಪ್ಡೇಟ್ ಮಾಡಿಡುವುದು ಉತ್ತಮ. ಅದರಲ್ಲೂ ಅತಿ ಮುಖ್ಯವಾಗಿ ನಿಮ್ಮ ಮೊಬೈಲ್ ನಂಬರ್ ಏಕೆಂದರೆ, ನಿಮ್ಮ ದಾಖಲೆಯ ಪ್ರತಿಯೊಂದು ಅಪ್ಡೇಟ್‌ಗಳಿಗಾಗಿ ಅದರಲ್ಲಿ ದಾಖಲಾಗಿರುವ ಮೊಬೈಲ್ ನಂಬರ್ ಅತಿ ಮುಖ್ಯವಾಗಿದೆ.
ನಿಮ್ಮ ಮನೆಗೆ ಇ-ಸ್ವತ್ತು ಮಾಡಿಸೋದು ಹೇಗೆ.? ಬೇಕಾಗುವ ದಾಖಲೆಗಳೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಆಧಾರ್‌ನಲ್ಲಿ ಹೊಸ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವುದು ಹೇಗೆ.?
ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ಕಳೆದುಕೊಂಡಿದ್ದರೆ ಅಥವಾ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಬಯಸಿದರೆ, ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ Aadhaar Enrolment / Correction Update Form ಭರ್ತಿ ಮಾಡಿ ನೀಡುವುದೊಂದೆ ಮಾರ್ಗ. ಇದನ್ನು ಹೊರೆತುಪಡಿಸಿ ಯಾವುದೇ ಆನ್ಲೈನ್ ಮಾರ್ಗಗಳಿಲ್ಲ ಆನ್ಲೈನ್ ಮೂಲಕ ನೀವು ಕೇವಲ ಈ ಸೇವೆಗಾಗಿ ನೇಮಕಾತಿ ಪಡೆಬಹುದಷ್ಟೆ.
ಈ ಲೇಖನವು ಆಧಾರ್ ಕಾರ್ಡ್ ಆನ್ಲೈನ್‌ನಲ್ಲಿ ನಿಮ್ಮ ಹೊಸ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವುದು ಅಥವಾ ಈಗಾಗಲೇ ಹೊಂದಿರುವ ನಂಬರ್ ಹೊಸ ಸಿಮ್ ಪಡೆದರೆ ಅಪ್‌ಡೇಟ್ ಮಾಡಲು ನೇಮಕಾತಿ ಪಡೆಯುವುದು ಹೇಗೆ ಎಂಬುದನ್ನು ತಿಳಿಯಿರಿ.
ಆಧಾರ್ ಕಾರ್ಡ್‌ನ ಮೊಬೈಲ್ ಸಂಖ್ಯೆ ಅಪ್ಡೇಟ್ ಮಾಡಲು ನೇಮಕಾತಿ ಪಡೆಯುವುದು ಹೇಗೆ.?
* ಮೊದಲಿಗೆ ನೀವು ಗೂಗಲ್ ತೆರೆದು UIDAI (uidai.gov.in) ವೆಬ್ ಪೋರ್ಟಲ್ಗೆ ಭೇಟಿ ನೀಡಿ.
* ಇದರ ನಂತರ ನೀವು ಅಪ್ಡೇಟ್ ಮಾಡಲು ಬಯಸುವ ಫೋನ್ ಸಂಖ್ಯೆಯನ್ನು ನಮೂದಿಸಿದ ನಂತರ ಕ್ಯಾಪ್ಚಾವನ್ನು ಟೈಪ್ ಮಾಡಿ.
* ಈಗ ನಿಮ್ಮ ನೋಂದಾಯಿತ ಫೋನ್ ನಂಬರ್ಗೆ ‘Send OTP’ ಆಯ್ಕೆ ಮೇಲೆ ಕ್ಲಿಕ್ ಮಾಡಿ.
* ನಂತರ ನಿಮಗೆ ಬಂದ OTP ನೀಡಿ ಮುಂದುವರೆಸಿ.
* ನಂತರ ಹೊಸ ಪುಟದಲ್ಲಿ ಆನ್‌ಲೈನ್ ಆಧಾರ್ ಸೇವೆಗಳು ಎಂಬ ಡ್ರಾಪ್-ಡೌನ್ ಆಯ್ಕೆಯನ್ನು ಪ್ರದರ್ಶಿಸುತ್ತದೆ.
* ನೀವು ಅಪ್ಡೇಟ್ ಮಾಡಲು ಬಯಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅದರ ನಂತರ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಲು ಆ ಆಯ್ಕೆಯನ್ನು ಆರಿಸಿ.
* ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ ಹೊಸ ಪುಟ ತೆರೆಯುತ್ತದೆ. ನೀವು ಈಗ ಕ್ಯಾಪ್ಚಾವನ್ನು ನಮೂದಿಸಬೇಕು.
* ಇದರ ಪರಿಣಾಮವಾಗಿ ನಿಮ್ಮ ಸಂಖ್ಯೆಯು OTP ಅನ್ನು ಸ್ವೀಕರಿಸುತ್ತದೆ. ನೀವು OTP ಅನ್ನು ದೃಢೀಕರಿಸಿದ ನಂತರ Save and Continue ಮೇಲೆ ಕ್ಲಿಕ್ ಮಾಡಿ.
* ಈಗ ಆನ್‌ಲೈನ್ ಅಪಾಯಿಂಟ್‌ಮೆಂಟ್ ಮಾಡಿ ತಕ್ಕ ಶುಲ್ಕವನ್ನು ಪಾವತಿಸಿ ಇದರ ಪಾರ್ಟಿಯನ್ನು ಪ್ರಿಂಟ್ ಔಟ್ ಪಡೆದು ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಪ್ರಯಾಣಿಸಿ.
* ಈ ನಿಮ್ಮ ಪ್ರಸ್ತುತ ಮೊಬೈಲ್ ಸಂಖ್ಯೆಯೊಂದಿಗಿನ ವಿನಂತಿಯನ್ನು ಡೇಟಾಬೇಸ್ ಒಳಗೆ ಅಪ್ಡೇಟ್ ಆಗಲು 90 ದಿನಗಳಲ್ಲಿ ಅಪ್ಡೇಟ್ ಮಾಡಲಾಗುತ್ತದೆ.