ಕೇವಲ 200 ರೂಪಾಯಿಗೆ ಸಿಗಲಿದೆ LPG ಗ್ಯಾಸ್ ಸಿಲಿಂಡರ್. ನಾವು ಹೇಳಿದ ರೀತಿ ಗ್ಯಾಸ್ ಬುಕ್ ಮಾಡಿ ಸಾಕು.

 

ಗ್ಯಾಸ್ ಸಿಲೆಂಡರ್ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಮಧ್ಯಮ ವರ್ಗದ ಜನರು ಹಾಗೂ ಬಡ ಕುಟುಂಬದವರು ಕಂಗಾಲಾಗಿ ಕುಳಿತಿದ್ದಾರೆ. ದಿನನಿತ್ಯದ ಆಹಾರ ಪದಾರ್ಥಗಳ ತಯಾರಿಕೆಗೆ ಅತ್ಯಾವಶ್ಯಕ. ಒಂದು ಗ್ಯಾಸ್ ಸಿಲಿಂಡರ್ ಖಾಲಿಯಾದ ನಂತರ ಮತ್ತೊಂದನ್ನು ಪಡೆಯುವುದು ಅನಿವಾರ್ಯ ಆಗಿದೆ. ಗ್ಯಾಸ್ ಸಿಲಿಂಡರ್ ಮನೆಯಲ್ಲಿ ಖಾಲಿಯಾಗಿದೆ ಎಂದರೆ ಮನೆಯ ಯಜಮಾನರು ಮೊದಲು ಯೋಚಿಸುವುದು ಅದರ ಬೆಲೆಯ ಬಗ್ಗೆ.

ಇನ್ನು ಹೆಚ್ಚಾದ ಬೆಲೆಯ ಕುರಿತು ಅತಿಯಾಗಿ ಯೋಚಿಸುವುದು ಬೇಡ. ನಾವು ತಿಳಿಸಿದಂತೆ ಮಾಡಿದಲ್ಲಿ 200 ರೂಪಾಯಿಗಳವರೆಗೆ ರಿಯಾಯಿತಿ ದೊರೆಯಲಿದೆ. ಒಂದು ಗ್ಯಾಸ್ ಸಿಲಿಂಡರ್ ಮೇಲೆ 200 ರೂಪಾಯಿಗಳಷ್ಟು ರಿಯಾಯಿತಿಯನ್ನು ಪಡೆಯಬೇಕು ಎಂದರೆ ನೀವು ಫ್ಲಿಪ್ಕಾರ್ಟ್ ನಲ್ಲಿ ಸಿಲಿಂಡರ್ ಗ್ಯಾಸ್ ಅನ್ನು ಬುಕ್ ಮಾಡಬೇಕಾಗುತ್ತದೆ. ಫ್ಲಿಪ್ಕಾರ್ಟ್ ಇದು ಈ ಕಾಮರ್ಸ್ ಕಂಪನಿಗಳಲ್ಲಿ ಒಂದಾಗಿದೆ. ಈಗಾಗಲೇ ಬಟ್ಟೆ, ಅಡುಗೆ ಸಾಮಾಗ್ರಿಗಳು, ಎಲೆಕ್ಟ್ರಾನಿಕ್ ಐಟಮ್ಸ್ ಗಳು ಸೇರಿದಂತೆ ಹತ್ತು ಹಲವು ವಸ್ತುಗಳನ್ನು ಫ್ಲಿಪ್ಕಾರ್ಟ್ ನಿಂದ ನೀವು ಪಡೆದಿರಬಹುದು. ಇದೀಗ ಗ್ಯಾಸ್ ಸಿಲಿಂಡರ್ ಅನ್ನು ಕೂಡ ಫ್ಲಿಪ್ಕಾರ್ಟ್ ನಲ್ಲಿ ಬುಕ್ ಮಾಡುವುದರಿಂದ ಲಾಭ ಪಡೆಯಬಹುದು.

ಫ್ಪಿಪ್ ಕಾರ್ಟ್ ನಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಿ 200 ರೂಪಾಯಿಗಳನ್ನು ರಿಯಾಯಿತಿ ಪಡೆಯಲು ಅನುಸರಿಸಬೇಕಾದ ವಿಧಾನ :
* ಮೊದಲು ಫ್ಪಿಪ್ ಕಾರ್ಟ್ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು, ಓಪನ್ ಮಾಡಬೇಕು. ನಿಮ್ಮ ದಿನನಿತ್ಯದ ಅವಶ್ಯಕತೆ ಸಾಮಾನುಗಳನ್ನು ಮೂಲಕ ಪಡೆಯಬಹುದು.
* ಅದರಲ್ಲಿ ಸೂಪರ್ ಕಾಯಿನ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
* ತೆರೆದುಕೊಂಡ ವಿವಿಧ ಆಯ್ಕೆಗಳ ಪಟ್ಟಿಯಲ್ಲಿ ಎಲ್ಪಿಜಿ ಬುಕಿಂಗ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

* ಹೊಸ ಪುಟವನ್ನು ತೆರೆದುಕೊಳ್ಳುತ್ತದೆ. ಅದರಲ್ಲಿ ನೀವು ನಿಮ್ಮ ಗ್ಯಾಸ್ ಸಿಲಿಂಡರ್ ಕಂಪನಿಯನ್ನು ಯಾವುದೆಂದು ಆಯ್ಕೆ ಮಾಡಬೇಕು. ಸಿಲಿಂಡರ್ ಪಡೆಯಲು ನೋಂದಾಯಿಸಿರುವ ಮೊಬೈಲ್ ಸಂತೆಯನ್ನು ನಮೂದಿಸಬೇಕು.
* ಬಳಿಕ ಮೇಕ್ ಪೇಮೆಂಟ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಇದರಲ್ಲಿ ಸಿಲಿಂಡರ್ ಬೆಲೆ ಎಷ್ಟು ಎಂದು ತಿಳಿಯುತ್ತದೆ.
* ಬಳಿಕ ಪಾವತಿ ಎಂಬ ಆಯ್ಕೆಯು ನಿಮ್ಮ ಎದುರಲ್ಲಿ ತೆರೆದುಕೊಳ್ಳಲಿದ್ದು, ಅದರಲ್ಲಿ ನಿಮಗೆ ದೊರಕಲಿರುವ ರಿಯಾಯತಿಯ ಕುರಿತಾದ ಮಾಹಿತಿಯು ಇರುತ್ತದೆ.
* ಬಳಿಕ ಮುಂದುವರಿಯಲು ಕ್ಲಿಕ್ ಮಾಡಬೇಕು. ಅದರಲ್ಲಿ ನೀವು ಎಷ್ಟು ಕಾಯಿನ್ಗಳನ್ನು ಹೊಂದಿದ್ದೀರಿ? ಮತ್ತು ನಿಮಗೆ ಎಷ್ಟು ರಿಯಾಯಿತಿ ದೊರೆಯಲಿದೆ? ಎಂದು ತಿಳಿಯುತ್ತದೆ. ಉದಾಹರಣೆಗೆ ನೀವು 700 ಕಾಯಿನ್ಗಳನ್ನು ಹೊಂದಿದ್ದಲ್ಲಿ 200 ರೂಪಾಯಿಗಳ ರಿಯಾಯಿತಿಯು ದೊರಕಲಿದೆ.

ಇತ್ತೀಚಿನ ದಿನಗಳಲ್ಲಿ ಒಂದು ಗ್ಯಾಸ್ ಸಿಲಿಂಡರ್ ನ ಬೆಲೆಯು 1,150 ರೂಪಾಯಿಗಳು ಆಗಿರುತ್ತದೆ. ನೀವು 200 ರೂಪಾಯಿಗಳ ರಿಯಾಯಿತಿಯನ್ನು ಫ್ಲಿಪ್ಕಾರ್ಟ್ ನಲ್ಲಿ ಬುಕ್ ಮಾಡುವುದರ ಮೂಲಕ ಪಡೆದರೆ ಕೇವಲ 950 ರೂಪಾಯಿಗಳ ಹಣದಲ್ಲಿ ಗ್ಯಾಸ್ ಸಿಲಿಂಡರ್ ನಿಮಗೆ ದೊರಕಿದಂತಾಗುತ್ತದೆ. ಫ್ಲಿಪ್ಕಾರ್ಟ್ ನಲ್ಲಿ ನಿಮ್ಮ ಹೆಸರಲ್ಲಿ ಕಡಿಮೆ ಸೂಪರ್ ಕಾಯಿನ್ಸ್ಗಳಿದ್ದರೆ ನಿಮಗೆ ಕಡಿಮೆ ರಿಯಾಯಿತಿ ದೊರೆಯುತ್ತದೆ.

ಹೆಚ್ಚೆಚ್ಚು ಸೂಪರ್ ಕಾಯಿನ್ಸ್ ಗಳನ್ನು ಪಡೆಯಲು ಫ್ಲಿಪ್ಕಾರ್ಟ್ ನಲ್ಲಿ ನೀವು ಶಾಪಿಂಗ್ ಮಾಡಬೇಕಾಗುತ್ತದೆ. ದಿನನಿತ್ಯದ ಬಳಕೆಗೆ ಬೇಕಾಗುವ ವಸ್ತುಗಳನ್ನು ಫ್ಲಿಪ್ಕಾರ್ಟ್ ನಲ್ಲಿಯೇ ಖರೀದಿಸುವ ಮೂಲಕ ಸೂಪರ್ ಕಾಯಿನ್ ಗಳನ್ನು ಗಳಿಸಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ರಿಯಾಯಿತಿಯನ್ನು ಪಡೆಯಬಹುದು. ಫ್ಲಿಪ್ಕಾರ್ಟ್ ನಲ್ಲಿ ಶಾಪಿಂಗ್ ಮಾಡುವ ಮೂಲಕ ನಿಮ್ಮ ಅಗತ್ಯ ವಸ್ತುಗಳ ಪೂರೈಕೆಯು ಆಗುವುದರ ಜೊತೆಗೆ ಕಡಿಮೆ ಬೆಲೆಯಲ್ಲಿ ಸಿಲಿಂಡರ್ ಕೂಡ ಪಡೆಯಬಹುದು.

Leave a Comment