ದೇವಸ್ಥಾನಕ್ಕೆ ಬರುವ ಎಲ್ಲಾ ಭಕ್ತರಿಗೆ ದುಡ್ಡು ಕೊಡುವ ಭಾರತದ ಏಕೈಕ ದೇವಸ್ಥಾನ ಇದು.! ಈ ದೇವಾಲಯದ ವಿಶೇಷತೆ ಏನು ಗೊತ್ತಾ.?

 

ಭಾರತ ದೇಶದಲ್ಲಿ ಇರುವಷ್ಟು ಹಿಂದೂ ದೇವಾಲಯಗಳು ಪ್ರಪಂಚದ ಯಾವ ದೇಶದಲ್ಲೂ ಕೂಡ ಇರಲಾರದು. ಅತಿ ಹೆಚ್ಚು ಪುರಾತನ ದೇವಾಲಯಗಳನ್ನು ಹೊಂದಿರುವ ಖ್ಯಾತಿಗೆ ಒಳಗಾಗಿರುವ ಭಾರತ ದೇಶದಲ್ಲಿ ಒಂದೊಂದು ದೇವಾಲಯಗಳಲ್ಲಿ ಒಂದೊಂದು ರೀತಿಯ ವಿಶೇಷತೆ ಇರುವುದನ್ನು ಗಮನಿಸಬಹುದು. ನಮ್ಮ ದೇಶದಲ್ಲಿ ಹೆಜ್ಜೆ ಹೆಜ್ಜೆಗೂ ದೇವಾಲಯಗಳು ಸಿಗುತ್ತವೆ.

ನಮ್ಮ ಹಿಂದೂ ಧರ್ಮದವರ ನಂಬಿಕೆಗಳ ಪ್ರಕಾರ 300 ಕೋಟಿ ದೇವತೆಗಳೆಂದು ನಾವು ಹೇಳುವುದರಿಂದ ಆ ದೇವರು ಹಾಗೂ ದೇವತೆಗಳಿಗೆಲ್ಲ ದೇವಾಲಯ ಇದೆ. ಅದರಲ್ಲಿ ಕೆಲವು ದೇವಾಲಯಗಳು ತನ್ನ ಪ್ರಭಾವ ಹಾಗೂ ಶಕ್ತಿಯಿಂದ ದೇಶದಾದ್ಯಂತ ಎಲ್ಲರ ಗಮನವನ್ನು ಸೆಳೆಯುತ್ತವೆ ಅಂತ ವಿಶೇಷತೆ ಹೊಂದಿರುವ ದೇವಾಲಯ ಮಹಾರಾಷ್ಟ್ರದ ರತಲಂ ಸಮೀಪ ಮನಕ್ ಚೌಕ್ ಅಲ್ಲಿರುವ ಮಹಾಲಕ್ಷ್ಮಿಯ ದೇವಾಲಯ.

ಈ ದೇವಸ್ಥಾನಕ್ಕೆ ಸುಮಾರು 2000 ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸ ಇದೆ. ಈ ದೇವಾಲಯದಲ್ಲಿ ಬಂಗಾರ, ಬೆಳ್ಳಿ ಹಾಗೂ ಸಾಲಿಗ್ರಾಮ ಮಾಡಿದ ಲಕ್ಷ್ಮಿಯ ವಿಗ್ರಹವಿದೆ. ಸಾಕ್ಷಾತ್ ಮಹಾಲಕ್ಷ್ಮಿ ತಾಯಿಯೇ ಇಲ್ಲಿ ನೆಲೆಸಿದ್ದಾರೆ ಎಂದು ಭಕ್ತರ ನಂಬಿಕೆ. ಈ ದೇವಾಲಯಕ್ಕೆ ಬಂದು ಭೇಟಿ ಕೊಟ್ಟು ಭಕ್ತಿಯಿಂದ ಏನೆನ್ನೇ ಬೇಡಿಕೊಂಡಿರು ಹರಕೆ ಕಟ್ಟಿಕೊಂಡರು ಅದು ನೆರವೇರುತ್ತದೆ.

ಆದರೆ ನೆರವೇರಿದ 30 ದಿನಗಳ ಒಳಗೆ ಬಂದು ಭಕ್ತರು ತಮ್ಮ ಹರಕೆ ತೀರಿಸಬೇಕು ಎನ್ನುವುದು ಇಲ್ಲಿನ ತಾಯಿ ಲಕ್ಷ್ಮಿಯ ಆಜ್ಞೆ ಜಾತಿ ಧರ್ಮ ಮತ ಇದ್ಯಾವುದರ ಭೇದ ಇಲ್ಲದೆ ದಿನಕ್ಕೆ ಸುಮಾರು 20 ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಇಲ್ಲಿಗೆ ಭೇಟಿ ಕೊಡುತ್ತಾರೆ. ಇಲ್ಲಿಗೆ ಮುಸ್ಲಿಮರು ಕೂಡ ಬಂದು ಪೂಜೆ ಮಾಡಿಸುವುದು ಈ ತಾಯಿಯ ಸಾಕ್ಷಾತ್ಕಾರಕ್ಕೆ ಇರುವ ಸಾಕ್ಷಿ.

ಶ್ರೀಮಂತ ದೇವಾಲಯಗಳ ಪೈಕಿ 21ನೇ ಸ್ಥಾನನಲ್ಲಿರುವ ಈ ಮಹಾಲಕ್ಷ್ಮಿಯ ದೇವಾಲಯದಲ್ಲಿ ಮತ್ತೊಂದು ವಿಶೇಷತೆ ಇದೆ. ಅದೇನೆಂದರೆ ಎಲ್ಲರೂ ಸಹ ದೇವಾಲಯಗಳಿಗೆ ಹೋಗುವಾಗ ಕಾಣಿಕೆಗಳನ್ನು ತೆಗೆದುಕೊಂಡು ಹೋಗುತ್ತಾರೆ ಅಥವಾ ಹರಕೆ ಏನಾದರೂ ಇದ್ದರೆ ಅದನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಈ ದೇವಾಲಯದಲ್ಲಿ ಒಂದು ವಿಶೇಷ ಸಂದರ್ಭದಲ್ಲಿ ದೇವಾಲಯದಲ್ಲಿ ಭಕ್ತರಿಗೆ ಕಾಣಿಕೆ ಕೊಟ್ಟು ಕಳುಹಿಸಲಾಗುತ್ತದೆ.

ಮಹಾಲಕ್ಷ್ಮಿಗೆ ದೀಪಾವಳಿ ಬಹಳ ವಿಶೇಷ ಅಂದು ಎಲ್ಲರೂ ಮನೆ ಮತ್ತು ಅಂದ ಆಸ್ಪತ್ರೆಗಳಲ್ಲಿ ಹಾಗೂ ಮಹಾಲಕ್ಷ್ಮಿಯನ್ನು ಕೂರಿಸಿ ಪೂಜೆ ಮಾಡುತ್ತಾರೆ ಆ ಸಮಯದಲ್ಲಿ ಮಾತ್ರ ಐದು ದಿನಗಳ ವರೆಗೆ ದಿನದ 24 ತಾಸು ಕೂಡ ಮಹಾಲಕ್ಷ್ಮಿ ದೇವಸ್ಥಾನ ತೆರೆದಿರುತ್ತದೆ. ಅಂತಹ ಸಮಯದಲ್ಲಿ ತಾಯಿಯನ್ನು ಕಾಣಲು ದರ್ಶನಕ್ಕೆ ಬರುವ ಭಕ್ತಾದಿಗಳು ಯಾರು ಬರೀ ಕೈಯಲ್ಲಿ ವಾಪಸ್ಸು ಹೋಗುವುದಿಲ್ಲ ಯಾಕೆಂದರೆ ಲಕ್ಷ್ಮಿ ತಾಯಿಯು ವರಪ್ರಸಾದವಾಗಿ ಅವರಿಗೆ ಉಡುಗೊರೆ ಕೊಡುತ್ತಾರೆ.

ಅರ್ಥ ಏನು ಎಂದರೆ ಆ ಐದು ದಿನಗಳ ದೇವಾಲಯಕ್ಕೆ ಭೇಟಿ ಕೊಡುವವರಿಗೆ ಏನಾದರೂ ವಿಶೇಷ ಕಾಣಿಸಿಕೊಟ್ಟು ಅಥವಾ ದೇವಾಲಯದಲ್ಲಿ ಸಂಗ್ರಹ ಆಗುವ ಹಣ ಬೆಳ್ಳಿ ಬಂಗಾರ ಈ ರೀತಿ ಯಾವುದನ್ನಾದರೂ ಕೊಟ್ಟು ಭಕ್ತರಿಗೆ ಕಳುಹಿಸುತ್ತಾರೆ. ಇದು ಹಿಂದಿನಿಂದ ನಡೆದುಕೊಂಡು ಬಂದಿರೋ ವಾಡಿಕೆ ಆಗಿದೆ ಅದನ್ನು ಹೊರತುಪಡಿಸಿ ಇನ್ನು 96% ಆದಾಯವನ್ನು ದೇವಸ್ಥಾನದ ಏಳಿಗೆಗಾಗಿ ದೇವಸ್ಥಾನದ ಮಂಡಳಿ ಬಳಸಿಕೊಳ್ಳುತ್ತದೆ‌ ಈ ದೇವಾಲಯದಲ್ಲಿ ತಂದೆ ತಾಯಿ ಇಲ್ಲದ ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಸಾಗುತ್ತಾರೆ. ಇಂದು ಅಲ್ಲಿ ಬೆಳೆದ ಅನೇಕ ಮಕ್ಕಳುಗಳು ಜೀವನದಲ್ಲಿ ಉನ್ನತ ಸ್ಥಾನ ತಲುಪಿದ್ದಾರೆ.

Leave a Comment