ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಕುಕ್ಕರ್ ಇದ್ದೇ ಇರುತ್ತದೆ. ಅಡುಗೆಮನೆಯಲ್ಲಿ ಕುಕ್ಕರ್ ಇಲ್ಲದೆ ಯಾವುದೇ ಅಡುಗೆ ಕೆಲಸ ನಡೆಯುವುದಿಲ್ಲ ಎಂದು ಹೇಳಬಹುದು. ಅಷ್ಟೊಂದು ಕೆಲಸವನ್ನು ಈ ಒಂದು ಕುಕ್ಕರ್ ನಮಗೆ ಮಾಡಿಕೊಡುತ್ತದೆ.
ಹಾಗಾದರೆ ಈ ದಿನ ನಮ್ಮ ಮನೆಯಲ್ಲಿ ಇರುವಂತಹ ಕುಕ್ಕರ್ ಅನ್ನು ನಾವು ಹೇಗೆಲ್ಲ ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕು ಹಾಗೂ ನಾವು ಅದನ್ನು ಯಾವ ಕೆಲವು ವಿಧಾನಗಳನ್ನು ಅನುಸರಿಸಿ ಅದನ್ನು ಉಪಯೋಗಿಸುವುದರಿಂದ ಅದು ಹೆಚ್ಚು ದಿನಗಳವರೆಗೆ ಬಾಳಿಕೆಗೆ ಬರುತ್ತದೆ. ಹಾಗೂ ಯಾವ ಸಮಸ್ಯೆ ಇದ್ದರೆ ಕುಕ್ಕರನ್ನು ನಾವೇ ನಮ್ಮ ಮನೆಯಲ್ಲಿ ಸುಲಭವಾಗಿ ಹೇಗೆ ರೆಡಿ ಮಾಡಿಕೊಳ್ಳಬಹುದು.
ಹೀಗೆ ಕುಕ್ಕರ್ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ ಮೊದಲೇ ಹೇಳಿದಂತೆ ಅಡುಗೆ ಮನೆಯಲ್ಲಿರುವಂತಹ ಕುಕ್ಕರ್ ಮನೆಯಲ್ಲಿರುವಂತಹ ಗೃಹಿಣಿಗೆ ತುಂಬಾ ಉಪಯುಕ್ತವಾಗಿ ಅವಳಿಗೆ ತುಂಬಾ ಸಹಾಯ ಮಾಡುವಂತಹ ಒಂದು ವಸ್ತು ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಆದರೆ ಈ ಕುಕ್ಕರ್ ಅನ್ನು ನಾವು ಉಪಯೋಗಿಸು ವಂತಹ ಸಂದರ್ಭದಲ್ಲಿ ಕೆಲವೊಂದಷ್ಟು ತಪ್ಪುಗಳನ್ನು ಮಾಡುವುದ ರಿಂದ ಕುಕ್ಕರ್ ಬೇಗನೆ ಹಾಳಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕುಕ್ಕರ್ ಅನ್ನು ಹೇಗೆ ಬಳಸಬೇಕು ಎನ್ನುವಂತಹ ಮಾಹಿತಿಗಳನ್ನು ನಾವು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎಂದು ಈಗ ತಿಳಿಯೋಣ.
* ನಾವು ಕುಕ್ಕರ್ ಅನ್ನು ಪದೇ ಪದೇ ಉಪಯೋಗಿಸುತ್ತಿರುವುದರಿಂದ ಕುಕ್ಕರ್ ಕ್ಯಾಪ್ ಹಾಕುವಂತಹ ಸ್ಥಳದಲ್ಲಿ ಕೆಲವೊಮ್ಮೆ ಕುಕ್ಕರ್ ಒಳಗಿನ ನೀರು ಸೋರುತಿರುತ್ತದೆ, ಹಾಗೂ ಕೆಲವೊಮ್ಮೆ ವಿಶಲ್ ಕೂಗುವುದೇ ಇಲ್ಲ ಇದನ್ನು ಸರಿಪಡಿಸುವುದಕ್ಕೆ ನಾವು ಕುಕ್ಕರ್ ಗ್ಯಾಸ್ಕೆಟ್ ಅನ್ನು ಬದಲಾಯಿಸುತ್ತಿರುತ್ತೇವೆ.
ಆದರೆ ಪ್ರತಿಯೊಬ್ಬರೂ ಕೂಡ ಕುಕ್ಕರ್ ನಲ್ಲಿ ಅಡುಗೆ ಮಾಡಿದ ತಕ್ಷಣ ಕುಕ್ಕರ್ ಅನ್ನು ಸ್ವಚ್ಛ ಮಾಡುತ್ತಾರೆ ಆದರೆ ಕುಕ್ಕರ್ ವಿಷಲ್ ಬಗ್ಗೆ ಯಾರು ಕೂಡ ಹೆಚ್ಚು ಗಮನಹರಿಸುವುದಿಲ್ಲ. ನಾವು ಅಡುಗೆ ಮಾಡುವಂತಹ ಸಂದರ್ಭದಲ್ಲಿ ಅಡುಗೆ ಪದಾರ್ಥಗಳು ಆ ಒಂದು ವಿಶಲ್ ಒಳಗಡೆ ಹೋಗಿ ಸೇರಿಕೊಳ್ಳುತ್ತದೆ.
ಇಂತಹ ಒಂದು ಸಂದರ್ಭದಲ್ಲಿ ಕುಕ್ಕರ್ ವಿಶಲ್ ಕೂಗುವುದಿಲ್ಲ ಹಾಗೂ ನೀರು ಸೋರುತಿರುತ್ತದೆ. ಇದರಿಂದ ನಾವು ಕುಕ್ಕರ್ ವಿಶಲ್ ಬಗ್ಗೆ ತಲೆಕೆಡಿಸಿಕೊಳ್ಳದೆ ಕುಕ್ಕರ್ ಗ್ಯಾಸ್ಕೆಟ್ ಬಗ್ಗೆ ತಲೆಕೆಡಿಸಿಕೊಂಡು ಅದು ಸರಿಯಾಗಿಲ್ಲ ಎಂದು ಹೊಸ ಗ್ಯಾಸ್ಕೆಟ್ ಅನ್ನು ಉಪಯೋಗಿಸುತ್ತೇವೆ. ಆದ್ದರಿಂದ ಇಂತಹ ಸಮಸ್ಯೆ ಬಂದಂತಹ ಸಂದರ್ಭದಲ್ಲಿ ನಾವು ಇಡೀ ಕುಕ್ಕರ್ ಅನ್ನು ಡೀಪ್ ಕ್ಲೀನ್ ಮಾಡಿಕೊಳ್ಳು ವುದು ಬಹಳ ಮುಖ್ಯವಾಗಿರುತ್ತದೆ.
ಇಲ್ಲವಾದರೆ ಕುಕ್ಕರ್ ಬ್ಲಾಸ್ಟ್ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಾವು ನಮ್ಮ ಅಡುಗೆ ಮನೆಯಲ್ಲಿ ಬಳಸುವಂತಹ ಈ ಒಂದು ಕುಕ್ಕರ್ ಅನ್ನು ವಾರಕ್ಕೆ ಒಮ್ಮೆಯಾದರೂ ಹಾಗೂ ಸಾಂಬಾರ್ ಮಾಡಿದಂತಹ ಸಂದರ್ಭದಲ್ಲಿ ಡೀಪ್ ಕ್ಲೀನ್ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಎಲ್ಲಾ ಭಾಗವನ್ನು ಸಂಪೂರ್ಣವಾಗಿ ತೆಗೆದು ಅದರ ಒಳಗಡೆ ನೀರನ್ನು ಹಾಕಿ ಚೆನ್ನಾಗಿ ತೊಳೆಯಬೇಕು ನಾವು ವಿಶಲ್ ಒಳಗಡೆ ನೀರು ಹಾಕಿದರೆ ಆ ಒಂದು ವಿಶಲ್ ಮೂರು ಭಾಗದಿಂದಲೂ ಕೂಡ ನೀರು ಸಲೀಸಾಗಿ ಹೋಗಬೇಕು. ಹೀಗೆ ಮಾಡಿದರೆ ಕುಕ್ಕರ್ ವಿಶಲ್ ಅನ್ನು ನಾವು ಸಂಪೂರ್ಣವಾಗಿ ಸ್ವಚ್ಛ ಮಾಡಿದ ಹಾಗೆ.
ಆನಂತರ ನೀವು ಅದನ್ನು ಉಪಯೋಗಿಸಬಹುದು ಆನಂತರ ಯಾವುದೇ ರೀತಿಯ ನೀರು ಸೋರುವುದಿಲ್ಲ ಹಾಗೂ ಕುಕ್ಕರ್ ವಿಶಲ್ ಸರಿಯಾಗಿ ಕೂಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.