ಎಲ್ಲರಿಗೂ ತಿಳಿದಿರುವಂತೆ ಈಗ ಬೆಳಕಿನ ಹಬ್ಬ ದೀಪಾವಳಿ ಹಬ್ಬ ಇರುವುದರಿಂದ ಪ್ರತಿಯೊಬ್ಬರ ಮನೆ ಮುಂದೆಯೂ ಕೂಡ ದೀಪವನ್ನು ಹಚ್ಚುವುದರ ಮೂಲಕ ದೀಪಾವಳಿ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ದೀಪ ಹಚ್ಚುವಂತಹ ಸಮಯದಲ್ಲಿ ಹೆಚ್ಚಾಗಿ ಗಾಳಿ ಬೀಸಿದರೆ ದೀಪ ಉರಿಯುವುದಿಲ್ಲ ಕೆಟ್ಟು ಹೋಗುತ್ತಿರುತ್ತದೆ.
ಅದಕ್ಕಾಗಿ ಕೆಲವೊಂದಷ್ಟು ಜನ ದೀಪ ಹಚ್ಚುವ ಆಸೆಯನ್ನೇ ಬಿಟ್ಟಿರುತ್ತಾರೆ. ಎಷ್ಟೇ ಹಚ್ಚಿದರೂ ಗಾಳಿಯಲ್ಲಿ ದೀಪ ಉರಿಯುವುದಿಲ್ಲ ಎನ್ನುವ ಕಾರಣದಿಂದ ಹೆಚ್ಚು ದೀಪ ಹಚ್ಚಬೇಕು ಎನ್ನುವ ಆಸೆಯನ್ನು ಬಿಟ್ಟಿರುತ್ತಾರೆ. ಆದರೆ ಈಗ ನಾವು ಹೇಳುವ ಈ ವಿಧಾನ ಅನುಸರಿಸಿದರೆ ನೀವು ಯಾವುದೇ ರೀತಿಯ ಚಿಂತೆ ಮಾಡುವ ಅವಶ್ಯಕತೆ ಇಲ್ಲ.
ಅಂದರೆ ಈ ಟ್ರಿಕ್ಸ್ ಉಪಯೋಗಿಸಿ ನೀವು ದೀಪವನ್ನು ಸುಲಭವಾಗಿ ಹಚ್ಚಬಹುದು ಹಾಗೂ ಎಷ್ಟೇ ಗಾಳಿ ಬೀಸಿದರು ಕೂಡ ದೀಪ ಕೆಟ್ಟು ಹೋಗುವುದಿಲ್ಲ ಅಷ್ಟೊಂದು ಸುಲಭವಾದಂತಹ ವಿಧಾನವಾಗಿದ್ದು ಈ ಟ್ರಿಕ್ಸ್ ಮಾಡುವುದಕ್ಕೆ ನಿಮಗೆ ಯಾವುದೇ ರೀತಿಯ ಹೆಚ್ಚಿನ ಹಣಕಾಸಿನ ಅವಶ್ಯಕತೆ ಉಂಟಾಗುವುದಿಲ್ಲ.
ಬದಲಿಗೆ ಮನೆಯಲ್ಲಿ ಬೇಡದೆ ಇರುವ ಪದಾರ್ಥವಾಗಿರುವ ಹಳೆಯ ಪ್ಲಾಸ್ಟಿಕ್ ಬಾಟಲ್ ಇದ್ದರೆ ಸಾಕು ನೀವು ಈ ಒಂದು ವಿಧಾನವನ್ನು ಅನುಸರಿಸಿ ದೀಪ ಕೆಟ್ಟು ಹೋಗದ ಹಾಗೆ ಉಪಯೋಗಿಸಬಹುದು. ಹಾಗಾದರೆ ಅದನ್ನು ಹೇಗೆ ಮಾಡುವುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಒಂದು ಪ್ಲಾಸ್ಟಿಕ್ ಬಾಟಲ್ ತೆಗೆದುಕೊಂಡು ಆ ದೀಪದಿಂದ 2 ರಿಂದ 3 ಇಂಚು ಉದ್ದದಷ್ಟು ಬಾಟಲ್ ಕತ್ತರಿಸಿಕೊಳ್ಳಬೇಕು. ಆನಂತರ ಆ ಬಾಟಲ್ ಸುತ್ತ ಸಣ್ಣ ಸಣ್ಣದಾಗಿ ತೂತುಗಳನ್ನು ಮಾಡಿ ಕೊಳ್ಳಬೇಕು ಹಾಗೂ ದೀಪ ಇಡುವಂತಹ ಮುಂಭಾಗದಲ್ಲಿ ಬಾಟಲ್ ಅನ್ನು ಸ್ವಲ್ಪ ಕತ್ತರಿಸಿಕೊಳ್ಳಬೇಕು.
ಈ ರೀತಿ ಮಾಡಿ ದೀಪ ಇಟ್ಟು ನಂತರ ಈ ಪ್ಲಾಸ್ಟಿಕ್ ಬಾಟಲ್ ಇಡುವುದರಿಂದ ದೀಪ ಯಾವುದೇ ಕಾರಣಕ್ಕೂ ಕೆಟ್ಟುಹೋಗುವುದಿಲ್ಲ. ಕೆಲವೊಂದಷ್ಟು ಜನ ಪ್ಲಾಸ್ಟಿಕ್ ದೀಪದ ಬಿಸಿಗೆ ಕರಗಿ ಹೋಗುತ್ತದೆ ಎಂದು ಹೇಳುತ್ತಿರುತ್ತಾರೆ. ಆದರೆ ನಾವು ಆ ಬಾಟಲ್ ನಲ್ಲಿ ಸಣ್ಣ ಸಣ್ಣದಾಗಿ ತೂತು ಮಾಡಿರುವುದರಿಂದ ಅದರಲ್ಲಿ ಬರುವ ಎಲ್ಲಾ ಬಿಸಿ ಹವೆ ಅದರ ಮೂಲಕ ಆಚೆ ಹೋಗುತ್ತದೆ.
ಆಗ ಯಾವುದೇ ಕಾರಣಕ್ಕೂ ಬಾಟಲ್ ಕರಗುವುದಿಲ್ಲ ಹಾಗಾಗಿ ಇದು ಬಹಳ ಸುಲಭ ವಾಗಿ ವಿಧಾನವಾಗಿದ್ದು ಪ್ರತಿಯೊಬ್ಬರೂ ಕೂಡ ಈ ವಿಧಾನ ಅನುಸರಿಸು ವುದು ತುಂಬಾ ಒಳ್ಳೆಯದು ಹಾಗೂ ತುಂಬಾ ಅನುಕೂಲಕ್ಕು ಬರುತ್ತದೆ ಎಂದು ಹೇಳಬಹುದು. ಹೌದು ಅದರಲ್ಲಂತೂ ಈ ದೀಪಾವಳಿಯ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ದೀಪವನ್ನು ಹಚ್ಚುವುದು ಸರ್ವೇಸಾಮಾನ್ಯ.
ಆದರೆ ದೀಪಕೆಟ್ಟು ಹೋಗುತ್ತದೆ ಎನ್ನುವ ಉದ್ದೇಶದಿಂದ ಕೆಲವೊಂದಷ್ಟು ಜನ ಕಡಿಮೆ ದೀಪ ಹಚ್ಚುತ್ತಿರುತ್ತಾರೆ ಆದರೆ ಈ ಟ್ರಿಕ್ಸ್ ತಿಳಿದ ನಂತರ ಎಷ್ಟು ದೀಪವಿದ್ದರೂ ಸಹ ಈ ವಿಧಾನ ಅನುಸರಿಸಿ ಹೆಚ್ಚಿನ ದೀಪವನ್ನು ಬೆಳಗುವುದರ ಮೂಲಕ ಪ್ರತಿಯೊಬ್ಬರು ಬಹಳ ಸಡಗರ ಸಂಭ್ರಮದಿಂದ ಈ ದೀಪಾವಳಿ ಹಬ್ಬವನ್ನು ಆಚರಿಸುವುದು ತುಂಬಾ ಒಳ್ಳೆಯದು.
ಹಾಗೇನಾದರೂ ಜೋರಾಗಿ ಗಾಳಿ ಬೀಸಿದರೆ ಇದು ಆಚೆ ಬೀಳಬಹುದು ಎಂದು ಕೆಲವೊಂದಷ್ಟು ಜನ ಹೇಳುತ್ತಾರೆ. ಆ ಸಂದರ್ಭದಲ್ಲಿ ಮೂರು ಪ್ಲಾಸ್ಟಿಕ್ ಬಾಟಲ್ ಮುಚ್ಚಳವನ್ನು ತೆಗೆದುಕೊಂಡು ಅದನ್ನು ಆ ಬಾಟಲ್ ಮೂರು ಭಾಗಕ್ಕೆ ಇಟ್ಟು ಫೆವಿಕಾಲ್ ಹಾಕಿ ಅಂಟಿಸಿ ಆನಂತರ ಅದನ್ನು ದೀಪದ ಮೇಲೆ ಇಡುವುದರಿಂದ ಅದು ಸ್ವಲ್ಪ ತೂಕ ಇರುವುದರಿಂದ ಗಾಳಿ ಬೀಸಿದರೆ ಅದು ಬಿದ್ದು ಹೋಗುವುದಿಲ್ಲ.