Thursday, April 24, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಕನಸಿನ ರಾಣಿ ಮಾಲಾಶ್ರೀ ವಿಷ್ಣು ದಾದ ಜೊತೆ ಒಂದು ಸಿನಿಮಾ ಕೂಡ ಮಾಡದೆ ಇರೋಕೆ ನಿಜವಾದ...

ಕನಸಿನ ರಾಣಿ ಮಾಲಾಶ್ರೀ ವಿಷ್ಣು ದಾದ ಜೊತೆ ಒಂದು ಸಿನಿಮಾ ಕೂಡ ಮಾಡದೆ ಇರೋಕೆ ನಿಜವಾದ ಕಾರಣವೇನು ಎಂಬ ಸತ್ಯ ಕೊನೆಗೂ ಬಹಿರಂಗವಾಯ್ತು..!

 

ಸಾಹಸಸಿಂಹ ವಿಷ್ಣುವರ್ಧನ್ ಚಂದನವನ ಕಂಡಂತಹ ಪ್ರತಿಭಾನ್ವಿತ ಕಲಾವಿದರು. ಮಾಲಾಶ್ರೀ ಕೂಡ ಕನ್ನಡ ಚಿತ್ರರಂಗದ ಹಿರಿಯ ತಾರಾಮಣಿ. ಇವರಿಬ್ಬರ ಚಿತ್ರರಂಗದ ವೃತ್ತಿ ಜೀವನವನ್ನು ಗಮನಿಸಿದರೆ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದವರು. ಆದರೂ ಇಬ್ಬರು ಒಟ್ಟಾಗಿ ಯಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿಲ್ಲ. ಅದಕ್ಕಾಗಿಯೇ ಅಭಿಮಾನಿಗಳಲ್ಲಿ, ‘ಮಾಲಾಶ್ರೀ ಅವರು ಅಷ್ಟೊಂದು ಸ್ಟಾರ್ ನಟರ ಜೊತೆಗೆ ನಟಿಸಿದ್ದಾರೆ..

ಆದರೆ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜೊತೆಯಾಗಿ ನಟಿಸಲಿಲ್ಲವೇಕೆ?’ ಎಂಬ ಪ್ರಶ್ನೆಯು ಕಾಡುತ್ತಿತ್ತು. ‘ಇವರಿಬ್ಬರ ಮಧ್ಯೆ ಏನಾದರೂ ಮಾತಿನ ಚಕಮಕಿ ನಡೆದಿದೆಯೇ?’ ಎಂದು ಯೋಚಿಸುತ್ತಿದ್ದರು. ಆದರೆ ಇವೆಲ್ಲ ಯೋಚನೆಗಳಿಗೂ ಉತ್ತರವಾಗಿ ಮಾಲಾಶ್ರೀ ಅವರು ಹೇಳಿಕೆಯೊಂದನ್ನು ನೀಡಿದ್ದಾರೆ. ಅದೇನು ಎಂದು ತಿಳಿದುಕೊಳ್ಳಬೇಕಾದರೆ ಈ ಬರಹವನ್ನು ಸಂಪೂರ್ಣವಾಗಿ ಓದಿ.

ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದಲ್ಲಿ ಪ್ರಧಾನವಾಗಿ ಕೆಲಸ ಮಾಡಿರುವುದು ಅಷ್ಟೇ ಅಲ್ಲದೆ ತಮಿಳು, ತೆಲುಗು, ಹಿಂದಿ, ಮಲಿಯಾಳಂ ಭಾಷೆಗಳ ಚಿತ್ರಗಳಲ್ಲಿಯೂ ಕಾಣಿಸಿಕೊಂಡು ಬಹುಭಾಷಾ ನಟ ಎನಿಸಿಕೊಂಡಿದ್ದಾರೆ. 220ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ, ನಾಲ್ಕು ದಶಕಗಳ ಸಮೃದ್ಧವಾದ ವೃತ್ತಿ ಜೀವನವನ್ನು ನಡೆಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಡಾಕ್ಟರ್ ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಮಾಲಾಶ್ರೀ ಅವರು ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಕರ್ನಾಟಕದ ಮನೆ ಮನೆಗೆ ಪರಿಚಿತರಾದರು. ಕನಸಿನ ರಾಣಿ, ರಾಣಿ ಮಹಾರಾಣಿ, ಹೃದಯ ಹಾಡಿತು, ಸೋಲಿಲ್ಲದ ಸರದಾರ ಹೀಗೆ ಅನೇಕ ಹಿಟ್ ಚಿತ್ರಗಳ ಒಡತಿ. ಫಿಲಂ ಫೇರ್ ಅವಾರ್ಡ್, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದ ಹೆಗ್ಗಳಿಕೆ ಇವರದ್ದು. ವಿಷ್ಣುವರ್ಧನ್ ಅವರು ನಾಯಕರಾಗಿ ನಟಿಸಿರುವ ಚಿತ್ರಗಳಲ್ಲಿ ಮಾಲಾಶ್ರೀ ಅವರು ನಾಯಕಿಯಾಗಿ ಕಾಣಿಸಿಕೊಂಡಿಲ್ಲ ಯಾಕೆ?’ ಎಂಬ ಪ್ರಶ್ನೆಯು ಇತ್ತೀಚಿನದಲ್ಲ.

ಈ ಹಿಂದೆಯೇ ಆ ಪ್ರಶ್ನೆಯನ್ನು ಮಾಲಾಶ್ರೀ ಅವರ ಎದುರಲ್ಲಿ ಇಟ್ಟಾಗಿತ್ತು. ಸಂದರ್ಶನ ಒಂದರಲ್ಲಿ ಮಾಲಾಶ್ರೀ ಅವರು ಹೇಳಿರುವ ಹಾಗೆ, ಅವರಿಗೂ ಕನ್ನಡ ಚಿತ್ರರಂಗದ ಆಂಗ್ರಿ ಯಂಗ್ ವಿಷ್ಣುವರ್ಧನ್ ಅವರ ಜೊತೆಗೂಡಿ ಸಿನಿಮಾ ಮಾಡುವ ಆಸೆಯು ಇತ್ತಂತೆ. ಬೆಳ್ಳಿ ಪರದೆಯ ಮೇಲೆ ವಿಷ್ಣು ದಾದಾ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುವ ಹಂಬಲ ಇತ್ತಂತೆ. ಆದರೂ ನಟಿಸಲು ಸಾಧ್ಯವಾಗದೆ ಇರಲು ಕಾರಣಗಳು ಏನೇನು ಎಂದು ಹೇಳಿದ್ದಾರೆ.

ಅಂದಿನ ಕಾಲದಲ್ಲಿ ವಿಷ್ಣುವರ್ಧನ್ ಹಾಗೂ ಮಾಲಾಶ್ರೀ ಇಬ್ಬರೂ ಬಹು ಬೇಡಿಕೆಯ ಕಲಾವಿದರಾಗಿದ್ದರು. ಹಾಡು, ನೃತ್ಯ, ಹಾವಭಾವಗಳನ್ನು ವ್ಯಕ್ತಪಡಿಸುವ ಕಲೆ, ಎಲ್ಲಾ ಪಾತ್ರಗಳಿಗೂ ಒಪ್ಪುವ ಮೈಕಟ್ಟು, ಪಾತ್ರಕ್ಕೆ ತಕ್ಕನಾದ ಅಭಿನಯ ಹೀಗೆ ಚಿತ್ರದ ನಾಯಕ ಅಥವಾ ನಾಯಕಿಯಾಗಲು ಬೇಕಾದ ಎಲ್ಲಾ ಗುಣಗಳನ್ನು ಹೊಂದಿರುವ ಕಾರಣವಾಗಿ ಡಾಕ್ಟರ್ ವಿಷ್ಣುವರ್ಧನ್ ಹಾಗೂ ಮಾಲಾಶ್ರೀ ಇಬ್ಬರಿಗೂ ಸಾಕಷ್ಟು ಅವಕಾಶಗಳು ದೊರೆಯುತ್ತಿದ್ದವಂತೆ.

ಮಾಲಾಶ್ರೀ ಅವರು ಹೇಳಿರುವ ಹಾಗೆ ಇಬ್ಬರು ಜನಪ್ರಿಯ ಸೂಪರ್ ಸ್ಟಾರ್ ನಟರಾದ ಕಾರಣದಿಂದಾಗಿ ಕೆಲವೊಮ್ಮೆ ನಿರ್ದೇಶಕರು ಹಾಗೂ ನಿರ್ಮಾಪಕರು ಚಿತ್ರಕ್ಕಾಗಿ ಇವರಿಬ್ಬರನ್ನು ಯೋಚಿಸಿದರೆ ಚಿತ್ರಕಥೆ ಹೊಂದಾಣಿಕೆ ಆಗುತ್ತಿರಲಿಲ್ಲವಂತೆ. ಕೆಲವೊಮ್ಮೆ ಕಥೆಯು ಇಬ್ಬರಿಗೂ ಒಪ್ಪಿಗೆಯಾದಾಗ ನಿರ್ದೇಶಕರು ಇಲ್ಲವೇ ನಿರ್ಮಾಪಕರು ಚಿತ್ರದಿಂದ ಹಿಂಸರಿಯುತ್ತಿದ್ದರಂತೆ. ಇನ್ನು ಇಬ್ಬರಿಗೂ ಹಲವಾರು ಚಿತ್ರಗಳಲ್ಲಿ ನಟಿಸುವ ಅವಕಾಶ ದೊರೆತು ಚಿತ್ರಿಕರಣಗಳಲ್ಲಿ ಬ್ಯುಸಿ ಆಗಿ ಇರುತ್ತಿದ್ದರಿಂದ.

ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳಲು ಡೇಟ್ಸ್ ಗಳನ್ನು ಅಂದರೆ ಸಮಯದ ಹೊಂದಾಣಿಕೆಯು ಆಗುತ್ತಿರಲಿಲ್ಲವಂತೆ. ವಿಷ್ಣುವರ್ಧನ್ ಹಾಗೂ ಮಾಲಾಶ್ರೀ ಅವರು ಉತ್ತಮ ಬಾಂಧವ್ಯವನ್ನು ಹೊಂದಿದ್ದರಂತೆ. ಹೀಗೆ ಅನೇಕ ಅಡೆತಡೆಗಳಿಂದಾಗಿ ಒಟ್ಟಾಗಿ ಒಂದೇ ಸಿನಿಮದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗಲಿಲ್ಲವೆಂದು ಮಾಲಾಶ್ರೀ ಅವರು ಹೇಳಿದ್ದಾರೆ.