ಜೀ ಕನ್ನಡ ಈಗಾಗಲೇ ಹಲವು ರಿಯಾಲಿಟಿ ಶೋಗಳಿಂದ ಜನರ ಮನ ಗೆದ್ದಿದೆ. ವಾರಪೂರ್ತಿ ಬರುವ ಧಾರಾವಾಹಿಗಳು ಹಾಗೂ ವಾರಾಂತ್ಯದಲ್ಲಿ ಬರುವ ಎಲ್ಲಾ ರಿಯಾಲಿಟಿ ಶೋಗಳು ಕೂಡ ಪ್ರೇಕ್ಷಕ ವರ್ಗದ ಮನಸ್ಸಿಗೆ ಬಹಳ ಹತ್ತಿರವಾಗಿದೆ. ಶೀಘ್ರದಲ್ಲೇ ಇದರ ಮತ್ತೊಂದು ಜನಪ್ರಿಯ ಕಾರ್ಯಕ್ರಮವಾದ ವೀಕೆಂಡ್ ವಿತ್ ರಮೇಶ್ ನ 5ನೇ ಸೀಸನ್ ಕೂಡ ಶುರು ಆಗುತ್ತಿದೆ. ಈಗಾಗಲೇ ಯಶಸ್ವಿಯಾಗಿ ನಾಲ್ಕು ಸೀಸನ್ಗಳನ್ನು ಪೂರ್ಣಗೊಳಿಸಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಐದನೇ ಸೀಸನ್ ಆರಂಭವಾಗಲಿದೆ ಎನ್ನುವ ಪ್ರೋಮೋಗಳು ಜೀ ಕನ್ನಡ ವಾಹಿನಿಯ ಹಾಗೂ ಅದರ ಅಫೀಷಿಯಲ್ ಪೇಜ್ ಗಳಲ್ಲಿ ಹರಿದಾಡುತ್ತಿವೆ.
ಎಂದಿನಂತೆ ಕನ್ನಡದ ಯಂಗ್ ಅಂಡ್ ಎನರ್ಜಿಟಿಕ್ ಹೀರೋ ರಮೇಶ್ ಅರವಿಂದ್ ಅವರೇ ಈ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಮೊದಲ ಅತಿಥಿಯಾಗಿ ರಿಷಭ್ ಶೆಟ್ಟಿ ಅವರು ಬರಲಿದ್ದಾರೆ ಎನ್ನುವ ವಿಷಯ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸುದ್ದಿ ಆಗಿದೆ. ಬಲವಾದ ಮೂಲಗಳಿಂದ ಇದು ನಿಜ ಕೂಡ ಆಗಿದ್ದು ಇದೇ ತಿಂಗಳ 25ನೇ ತಾರೀಕಿನಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9:00 ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ಎರಡನೇ ಅತಿಥಿಯಾಗಿ ಕನ್ನಡದ ಸ್ಟಾರ್ ಕ್ರಿಕೆಟರ್ ಬರಲಿದ್ದಾರೆ ಎನ್ನುವ ಮಾಹಿತಿಯು ಕೂಡ ಇದೆ.
ಕ್ರಿಕೆಟ್ ವಲಯದಲ್ಲಿ ತನ್ನದೇ ಆದ ವಿಭಿನ್ನ ಮಾದರಿಯಲ್ಲಿ ಛಾಪು ಮೂಡಿಸಿರುವ ಕನ್ನಡ ಮೂಲದ ಹೆಮ್ಮೆಯ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್ ಅವರು ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಎರಡನೇ ಅತಿಥಿಯಾಗಿ ಸಾಧಕರ ಸೀಟ್ ಅಲ್ಲಿ ಕುಳಿತು ಅವರ ಜೀವನದ ಸ್ಪೂರ್ತಿದಾಯಕ ಕಥೆಯನ್ನು ಕನ್ನಡಿಗರ ಜೊತೆ ಹಂಚಿಕೊಳ್ಳಲಿದ್ದಾರೆ. ಸದ್ಯಕ್ಕೆ ಕೆಎಲ್ ರಾಹುಲ್ ಅವರು ಟೀಮ್ ಇಂಡಿಯ ತಂಡದಲ್ಲಿ ಬಾರಿ ಬಿಸಿ ಆಗಿದ್ದಾರೆ. ಮುಂಬರುವ IPL-2023ರ ಸರಣಿಯಲ್ಲಿ ಹಪಾಹಪಿಸಲು ಬಾರಿ ತಾಲೀಮು ನಡೆಸುತ್ತಿದ್ದಾರೆ.
ಆಸೀಸ್ ವಿರುದ್ಧ ನಡೆದಿರುವ ಏಕದಿನ ಸರಣಿಗೂ ಕೂಡ ಇವರು ಆಯ್ಕೆ ಆಗುವ ಎಲ್ಲಾ ಸಾಧ್ಯತೆಗಳು ಇವೆ. ಇಷ್ಟೆಲ್ಲ ಬಿಜಿ ಆಗಿರುವ ಕೆಎಲ್ ರಾಹುಲ್ ಅವರು ಇದೆಲ್ಲದರ ನಡುವೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರಲಿದ್ದಾರಾ ಎನ್ನುವ ಅನುಮಾನ ಹಲವರಲ್ಲಿದೆ. ಹಾಗೆಯೇ ಈ ಹೆಮ್ಮೆಯ ಕನ್ನಡಿಗನನ್ನು ಸಾಧಕರ ಸೀಟ್ ಅಲ್ಲಿ ನೋಡಲು ಸಾಕಷ್ಟು ಅಭಿಮಾನಿಗಳು ಆಸೆ ಪಡುತ್ತಿದ್ದಾರೆ. ಸದ್ಯದಲ್ಲೇ ಎಲ್ಲರ ಕುತೂಹಲಕ್ಕೂ ಕೂಡ ತೆರೆ ಬೀಳಲಿದೆ. ಆಗಸ್ಟ್ 2 2014ರಂದು ಪುನೀತ್ ರಾಜಕುಮಾರ್ ಅವರು ಮೊದಲ ಅತಿಥಿಯಾಗಿ ಕಲೆಸಿ ಶುರುಮಾಡಿದ ಈ ಕಾರ್ಯಕ್ರಮ ಈವರೆಗೆ 104 ಎಪಿಸೋಡ್ ಗಳನ್ನು ಯಶಸ್ವಿಯಾಗಿ 5ನೇ ಸೀಸನ್ ಅತ್ತ ಕಾಲಿಡುತ್ತಿದೆ.
ಬೆಂಗಳೂರಿನ ಚಿಕ್ಕ ಕಲ್ಲಸಂದ್ರ ಬಳಿ ಇರುವ ಅಬ್ಬಯ್ಯ ನಾಯ್ಡು ಸ್ಟುಡಿಯೋ ಅಲ್ಲಿ ಈ ಕಾರ್ಯಕ್ರಮ ಚಿತ್ರೀಕರಣ ನಡೆಯಲಿದ್ದು, ವಾರಾಂತ್ಯದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಕಾರ್ಯಕ್ರಮದ ಎಪಿಸೋಡ್ ಗಳು ಪ್ರಸಾರ ಆಗಲಿದೆ. ಇಲ್ಲಿ ಕಾರ್ಯಕ್ರಮವನ್ನು ಮಿಸ್ ಮಾಡಿಕೊಂಡಿರುತ್ತಾರೆ Zee5 ಆಪ್ ಅಲ್ಲಿ ಈ ಕಾರ್ಯಕ್ರಮವನ್ನು ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ನೋಡಬಹುದು. ಈ ವರ್ಷವೂ ಕೂಡ ಕನ್ನಡದ ಹಲವು ಸಾಧಕರನ್ನು ವಿವಿಧ ಕ್ಷೇತ್ರಗಳಿಂದ ಆರಿಸಿಕೊಂಡು ಬಂದು ಕನ್ನಡಿಗರಿಗೆ ಅವರ ಕಥೆಯನ್ನು ಹೇಳಿಸುವ ಪ್ರಯತ್ನವನ್ನು ವಾಹಿನಿ ಮಾಡುತ್ತಿದೆ. ತಂಡಕ್ಕೆ ಶುಭವಾಗಲಿ ಎಂದು ಹರಿಸೋಣ.