Friday, June 9, 2023
HomeViral Newsನನ್ನ ಜೀವನದಲ್ಲಿ ಏನಾಗಾತ್ತಿದೆ, ಅರ್ಪಿತ & ನನ್ನ ನಡುವೆ ಹುಳಿಹಿಂಡಿದ್ದು ಯಾರು.? ನಾನು ಯಾಕೆ ಸಾ-ಯೋ...

ನನ್ನ ಜೀವನದಲ್ಲಿ ಏನಾಗಾತ್ತಿದೆ, ಅರ್ಪಿತ & ನನ್ನ ನಡುವೆ ಹುಳಿಹಿಂಡಿದ್ದು ಯಾರು.? ನಾನು ಯಾಕೆ ಸಾ-ಯೋ ನಿರ್ಧಾರ ಮಾಡಿದ್ದು ಯಾಕೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ ನೋಡಿ.!

 

ಕಿರಿಕ್ ಕೀರ್ತಿ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಕಳೆದ ಕೆಲವು ದಿನಗಳಿಂದ ಸಾಕಷ್ಟು ಚರ್ಚೆ ಆಗುತ್ತಿದೆ. ಮುಖ್ಯವಾಗಿ ಅವರ ವೈಯಕ್ತಿಕ ವಿಷಯದ ಬಗ್ಗೆ ಈ ಬಾರಿ ಜನ ಹೆಚ್ಚು ಮಾತನಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಆಗಿದ್ದು ಕೀರ್ತಿ ಮಾಡಿದ ಒಂದು ಪೋಸ್ಟ್. ಸಾ.ಯು.ವ ನಿರ್ಧಾರ ಮಾಡಿದ್ದೆ ಆದರೆ ಈಗ ಬದುಕಬೇಕೆನ್ನುವ ಛಲ ಬಂದಿದೆ, ಚೇತರಿಸಿಕೊಂಡಿದ್ದೇನೆ. ಎಂಬ ಅರ್ಥದಲ್ಲಿ ಒಂದಷ್ಟು ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದರು ಅಲ್ಲಿಂದ ಶುರುವಾದ ಇದು ನಂತರ ಅವರ ಜೀವನದಲ್ಲಿ ಏನಾಗಿರಬಹುದು ಎಂದು ಎಲ್ಲರೂ ಕೆದಕುವಂತೆ ಮಾಡಿತ್ತು.

ನಂತರ ನಿಧಾನವಾಗಿ ಅವರಿಬ್ಬರ ದಾಂಪತ್ಯದಲ್ಲಿ ಬಿರುಕಾಗಿದೆ ಎನ್ನುವ ಅನುಮಾನಕ್ಕೆ ಪೂರಕವಾಗಿ ಕಿರಿಕ್ ಕೀರ್ತಿ ಹಾಗೂ ಅವರ ಪತ್ನಿ ಹಾಕುತ್ತಿದ್ದ ಪೋಸ್ಟ್ ಗಳು ಸಾಕ್ಷಿ ಆಗಿದ್ದವು. ಒಬ್ಬನೊಬ್ಬರು ಟಾಂಗ್ ಮಾಡುವ ರೀತಿ ಪೋಸ್ಟ್ ಗಳು ಜೊತೆಗೆ ಇಬ್ಬರು ಸಹ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಇವರಿಬ್ಬರು ಒಟ್ಟಿಗೆ ಇದ್ದ ಫೋಟೋ ವಿಡಿಯೋಗಳನ್ನು ಡಿಲೀಟ್ ಮಾಡಿದ್ದು ಇವರ ಸಂಬಂಧ ಹಳಸಿದೆ ಎನ್ನುವುದಕ್ಕೆ ಸ್ಪಷ್ಟಣೆ ನೀಡಿತ್ತು.

ನಂತರ ಕಿರಿಕ್ ಕೀರ್ತಿ ಅವರನ್ನು ಕುರಿತು ಸಾಕಷ್ಟು ನೆಗೆಟಿವ್ ಕಾಮೆಂಟ್ಗಳು ಬರಲು ಶುರು ಮಾಡಿದವು.ಅದನ್ನೆಲ್ಲ ನೋಡಿದ ಕೀರ್ತಿಯವರು ಮತ್ತೊಮ್ಮೆ ಲೈವ್ ಅಲ್ಲಿ ಬಂದು ನೆಗೆಟಿವ್ ಆಗಿ ಕಾಮೆಂಟ್ ಮಾಡುವವರಿಗೆ ಚಳಿ ಬಿಡಿಸಿದ್ದರು. ಈಗ ಮತ್ತೊಮ್ಮೆ youtube ಚಾನಲ್ ಒಂದು ಅವರ ಸಂದರ್ಶನ ಮಾಡಿದೆ. ಕಿರಿಕ್ ಕೀರ್ತಿ ಅವರು ಅವರ ಜೀವನದಲ್ಲಿ ಏನಾಯ್ತು ಎನ್ನುವ ಕೆಲ ವಿಷಯಗಳ ಬಗ್ಗೆ ಇಲ್ಲಿ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಎಲ್ಲರೂ ಕೆಲವು ಮೊದಲ ಪ್ರಶ್ನೆ ಇವರಿಬ್ಬರ ದಾಂಪತ್ಯದಲ್ಲಿ ಏನಾಯ್ತು ಎಂದು ಅದಕ್ಕೆ ಕಿರಿಕ್ ಕೀರ್ತಿ ಕೊಟ್ಟ ಉತ್ತರ ಈ ರೀತಿ ಇತ್ತು ಎಲ್ಲರ ಜೀವನದಲ್ಲೂ ಕೂಡ ಅಪ್ ಆಂಡ್ ಡೌನ್ಸ್ ಇರುತ್ತದೆ. ಸೆಲೆಬ್ರಿಟಿಗಳಾಗಿ ಬೇಕಾದರೂ ಇರಬಹುದು, ಕಾಮನ್ ಮ್ಯಾನ್ ಆಗಿ ಬೇಕಾದರೂ ಬದುಕಬಹುದು. ಆದರೆ ಪಾಪುಲರ್ ಆಗಿ ಮಾತ್ರ ಇರಬಾರದು. ನಮ್ಮನ್ನು ಸ್ಕ್ರೀನ್ ಮೇಲೆ ನೋಡಿ ಇದೇ ನನ್ನ ವ್ಯಕ್ತಿತ್ವ ಎಂದು ಜನ ಭಾವಿಸಿಕೊಂಡಿರುತ್ತಾರೆ.

ನಮ್ಮ ಜೀವನ ಗಾಜಿನ ಮನೆ ಇದ್ದ ಹಾಗೆ ನಮ್ಮ ಲೈಫಲ್ಲಿ ಏನಾಯ್ತು ಎಂದು ನಮ್ಮ ಕುಟುಂಬದವರೇ ಗೊಂದಲದಲ್ಲಿದ್ದೇವೆ. ಆದರೆ ನನಗೆ ಮತ್ತು ಅವಳಿಗೆ ಅದರ ಬಗ್ಗೆ ಕ್ಲಾರಿಟಿ ಇದೆ, ಅಷ್ಟು ಸಾಕು. ಅದನ್ನು ಹೇಳಬೇಕಾದ ಸಂದರ್ಭ ಬಂದರೆ ನೋಡೋಣ, ಅದಕ್ಕೂ ಮುನ್ನ ನಿಮ್ಮಿಷ್ಟದ ಹಾಗೆ ಊಹಪೋಹ ಮಾಡಿಕೊಂಡು ನೀವು ಇಷ್ಟ ಬಂದ ಹಾಗೆ ಚರ್ಚೆ ಮಾಡಿದರೆ ಅದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ನನ್ನ ಜೀವನದಲ್ಲಿ ಆಗಿರುವ ಘಟನೆ ಬೇರೆಯವರ ಜೀವನದಲ್ಲಿ ಆಗಿದ್ದರೆ ಇಷ್ಟೊತ್ತಿಗೆ ಅವನು ಸ್ಮ.ಶಾನದಲ್ಲಿ ಇರುತ್ತಿದ್ದರು ಅಥವಾ ಜೈ.ಲಿನಲ್ಲಿ ಇರುತ್ತಿದ್ದನು.

ನಾನಿನ್ನು ಬದುಕಿದ್ದೇನೆ ಎಂದರೆ ನಾನು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಅರ್ಥ. ನಾವು ಹೊರಗಡೆ ಹೀಗೆ ಕಂಡ ಮಾತ್ರಕ್ಕೆ ನಮಗೇನು ಕಷ್ಟ ಇಲ್ಲ ಎಂದು ಅರ್ಥ ಅಲ್ಲ. ಕೆಲವೊಂದು ಕನಸುಗಳನ್ನು ನಾವು ಭಾವನೆ, ಬಾಂಧವ್ಯ ಹಾಗೂ ಸಂಬಂಧಗಳಿಂದ ಕಟ್ಟಿ ಕೊಳ್ಳುತ್ತಿರುತ್ತೇವೆ. ಆ ಕೋಟೆ ಹೊಡೆದಾಗ ಯಾವುದರ ಮೇಲು ಕೂಡ ನಮಗೆ ಆಸಕ್ತಿ ಬರುವುದಿಲ್ಲ, ಅದನ್ನು ನಾವು ನಿರೀಕ್ಷಿಸಿಯೇ ಇರುವುದಿಲ್ಲ ಅಂತಹದು ನಡೆದಾಗ ಖಂಡಿತ ಎಲ್ಲರೂ ಕುಗ್ಗುತ್ತಾರೆ.

ಯಾರಾದರೂ ಕುಗ್ಗಿದಾಗ ಮೇಲೆತ್ತಲು ಆಗದಿದ್ದರೂ ಹೂತಾಕುವ ಪ್ರಯತ್ನ ಮಾಡಬಾರದು. ಇನ್ನಷ್ಟು ಅದರ ಮೇಲೆ ನೋವು ಕೊಡುತ್ತಾ ಹೋದಾಗ ಇಷ್ಟೇ ನಮ್ಮ ಬದುಕು ಇಲ್ಲಿಗೆ ಮುಗಿಸಿ ಬಿಡೋಣ ಎನಿಸುವುದು ಸಹಜ ಆದರೆ ದೇವರ ದಯೆಯಿಂದ ಚೇತರಿಸಿಕೊಂಡಿದ್ದೇನೆ. ಇಷ್ಟಕ್ಕೂ ನಮ್ಮ ಬಗ್ಗೆ ಬಂದು ಹುಳಿ ಹಿಡಿದವರು ಯಾರು ಅನ್ನುವುದು ಈಗ ನಮ್ಮ ಪರಿಸ್ಥಿತಿ ನೋಡಿದವರಿಗೆ ಅರ್ಥ ಆಗಿರುತ್ತದೆ. ಅಷ್ಟೇ ಸಾಕು ಸದ್ಯಕ್ಕೆ ನಾನೇನು ಹೇಳುವುದಿಲ್ಲ ಎಂದು ಇಂಟರ್ವ್ಯೂ ಅಲ್ಲಿ ಹೇಳಿದ್ದಾರೆ.